CM Basavaraj Bommai: 1983 ವಿಶ್ವಕಪ್ ವಿಕೆಟ್ ಕೀಪರ್ ಜೊತೆ 83 ಚಿತ್ರ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ
TV9 Web | Updated By: ಝಾಹಿರ್ ಯೂಸುಫ್
Updated on:
Dec 26, 2021 | 8:02 PM
ಡಿಸೆಂಬರ್ 24 ರಂದು ಕನ್ನಡ ಸೇರಿದಂತೆ ಪಂಚಭಾಷೆಯಲ್ಲಿ ತೆರೆಕಂಡಿರುವ 83 ಚಿತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದಲೂ ಬಹುಪರಾಕ್ ಕೇಳಿ ಬರುತ್ತಿದೆ.
1 / 7
1983 ರ ವಿಶ್ವಕಪ್ ಐತಿಹಾಸಿಕ ಗೆಲುವಿನ ಹಿಂದಿರುವ ರಿಯಲ್ ಕಹಾನಿಯನ್ನು ತಿಳಿಸುವ "83" ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಜರಂಗಿ ಭಾಯಿಜಾನ್ ಖ್ಯಾತಿಯ ನಿರ್ದೇಶಕ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ದಿ ಲೆಜೆಂಡ್ ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.
2 / 7
ಇನ್ನು 1983 ರ ಟೀಮ್ ಇಂಡಿಯಾ ವಿಕೆಟ್ ಕೀಪರ್ ಸೈಯದ್ ಮುಜ್ತಬಾ ಹುಸೈನ್ ಕಿರ್ಮಾನಿ (ಸೈಯದ್ ಕಿರ್ಮಾನಿ) ಪಾತ್ರದಲ್ಲಿ ಬಾಲಿವುಡ್ ನಟ ಸಾಹಿಲ್ ಕಟ್ಟರ್ ಅಭಿನಯಿಸಿದ್ದಾರೆ.
3 / 7
ಬೆಂಗಳೂರು ಮೂಲದವರಾದ ಕಿರ್ಮಾನಿ ಅವರೊಂದಿಗೆ ಇಂದು (ಡಿ.26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋರಮಂಗಲದ ಫೋರಂ ಮಾಲ್ನಲ್ಲಿರುವ ಪಿ.ವಿ.ಆರ್. ಚಿತ್ರಮಂದಿರದಲ್ಲಿ 83 ಚಿತ್ರವನ್ನು ವೀಕ್ಷಿಸಿದರು. ಇದೇ ವೇಳೆ ಕಂದಾಯ ಸಚಿವ ಆರ್. ಅಶೋಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
4 / 7
ಇನ್ನು ಚಿತ್ರ ಪ್ರಾರಂಭವಾಗುವುದಕ್ಕೂ ಮುನ್ನ ದಿವಂಗತ ಮಾಜಿ ಕ್ರಿಕೆಟಿಗ ಯಶ್ ಪಾಲ್ ಶರ್ಮಾ ಅವರ ಸ್ಮರಣಾರ್ಥ ಒಂದು ನಿಮೀಷದ ಮೌನಾಚರಣೆ ಮಾಡಲಾಯಿತು.
5 / 7
ಡಿಸೆಂಬರ್ 24 ರಂದು ಕನ್ನಡ ಸೇರಿದಂತೆ ಪಂಚಭಾಷೆಯಲ್ಲಿ ತೆರೆಕಂಡಿರುವ 83 ಚಿತ್ರಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು, ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದಲೂ ಬಹುಪರಾಕ್ ಕೇಳಿ ಬರುತ್ತಿದೆ.
6 / 7
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸೈಯದ್ ಕಿರ್ಮಾನಿ
7 / 7
ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಸೈಯದ್ ಕಿರ್ಮಾನಿ ಕುಟುಂಬಸ್ಥರು