ಸೋಲು ಸನಿಹವಾಗುತ್ತಿದ್ದಂತೆ ಕ್ರೀಡಾಸ್ಫೂರ್ತಿ ಮರೆತ ವೇಡ್! ಛೀಮಾರಿ ಹಾಕಿದ ನೆಟ್ಟಿಗರು; ವಿಡಿಯೋ ನೋಡಿ
AUS vs ENG: ಒಂದು ವೇಳೆ ಇಂಗ್ಲೆಂಡ್ ಈ ಕ್ರಮಕ್ಕೆ ಮುಂದಾಗಿದ್ದರೆ, ವೇಡ್ ಖಂಡಿತವಾಗಿಯೂ ಔಟಾಗಿ ಪೆವಿಲಿಯನ್ಗೆ ಸೇರುತ್ತಿದ್ದರು. ಆದರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಾಗೆ ಮಾಡದೆ ವೇಡ್ಗೆ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಿದರು.
ಟಿ20 ವಿಶ್ವಕಪ್‌ಗೂ (T20 World Cup) ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Australia and England) ನಡುವೆ ಟಿ20 ಸರಣಿ ನಡೆಯುತ್ತಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿಯೇ ಭಾರಿ ರೋಚಕತೆ ಕಂಡುಬಂದಿದ್ದು, ಅಂತಿಮವಾಗಿ ಇಂಗ್ಲೆಂಡ್ ತಂಡ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೆಲ್ಲದರ ನಡುವೆ ನಡೆದ ಅದೊಂದು ಘಟನೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.ಇದರಿಂದಾಗಿ ಆಸ್ಟ್ರೇಲಿಯದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ಗೆ (Matthew Wade) ಇಡೀ ಕ್ರಿಕೆಟ್ ಜಗತ್ತೆ ಛೀಮಾರಿ ಹಾಕುತ್ತಿದೆ. ಪಂದ್ಯವನ್ನು ಗೆಲ್ಲುವ ಪ್ರಯತ್ನದಲ್ಲಿ, ಮ್ಯಾಥ್ಯೂ ವೇಡ್ ಇಂಗ್ಲೆಂಡ್ ಬೌಲರ್ ಕ್ಯಾಚ್ ತೆಗೆದುಕೊಳ್ಳುವ ಪ್ರಯತ್ನಕ್ಕೆ ಕಲ್ಲುಹಾಕಿದ್ದಾರೆ. ವೇಡ್ ಮಾಡಿದ ಕೆಲಸದಿಂದ ವಾರ್ನರ್ ಔಟಾಗುವುದರಿಂದ ಬಚಾವ್ ಆದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಎರಡು ತಂಡಗಳ ನಡುವಿನ ಈ ಮೊದಲ ಟಿ20 ಪಂದ್ಯವು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಭಾನುವಾರ ಅಕ್ಟೋಬರ್ 9 ರಂದು ನಡೆಯಿತು. ಈ ಪಂದ್ಯದಲ್ಲಿ 209 ರನ್‌ಗಳ ಗುರಿ ಬೆನ್ನತ್ತಿ ಆತಿಥೇಯ ಆಸ್ಟ್ರೇಲಿಯಾ ತಂಡ ಕೊನೆಯ ಹಂತದವರೆಗೂ ಗೆಲುವಿಗಾಗಿ ಪ್ರಯತ್ನಿಸಿತು. ಈ ವೇಳೆ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲ್ಲಿಸಲು ಹರಸಾಹಸ ಪಡುತ್ತಿದ್ದ ಡೇವಿಡ್ ವಾರ್ನರ್ಗೆ ಮ್ಯಾಥ್ಯೂ ವೇಡ್ ಸಾಥ್ ಕೊಡಲು ಆರಂಭಿಸಿದರು. ಈ ಇಬ್ಬರ ಜೊತೆಯಾಟದ ನಡುವೆ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ ನಡೆದ ಘಟನೆಯೊಂದು ಆಸೀಸ್ ಆಟಗಾರನ ಮೇಲೆ ಕ್ರಿಕೆಟ್ ಅಭಿಮಾನಿಗಳು ಕೋಪಗೊಳ್ಳುವಂತೆ ಮಾಡಿತು.
ಬೌಲರ್ ಕ್ಯಾಚ್ ಹಿಡಿಯದಂತೆ ತಡೆದ ವೇಡ್
ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಎಸೆದ 17ನೇ ಓವರ್‌ನ ಮೂರನೇ ಎಸೆತ ಬೌನ್ಸರ್ ಆಗಿದ್ದು, ವಾರ್ನರ್ಗೆ ಸರಿಯಾಗಿ ಆಡಲು ಸಾಧ್ಯವಾಗಲಿಲ್ಲ. ಚೆಂಡು ಅವರ ಬ್ಯಾಟ್‌ಗೆ ತಾಗಿ ಬಳಿಕ ಹೆಲ್ಮೆಟ್‌ಗೆ ಬಡಿದು ಮೇಲಕ್ಕೆ ಗಾಳಿಯಲ್ಲಿ ಹಾರಿತು. ಅದನ್ನು ಹಿಡಿಯುವ ಯತ್ನದಲ್ಲಿ ಮಾರ್ಕ್ವುಡ್, ಚೆಂಡನ್ನು ನೋಡುತ್ತಾ ನಾನ್ಸ್ಟ್ರೈಕ್ ಕಡೆ ಓಡಲು ಆರಂಭಿಸಿದರು. ಅಷ್ಟರಲ್ಲಾಗಲೇ ಓಡಲು ಆರಂಭಿಸಿದ ಮ್ಯಾಥ್ಯೂ ವೇಡ್, ಪುನಃ ನಾನ್ ಸ್ಟ್ರೇಕ್ ಕಡೆಗೆ ಹಿಂದಿರುಗಲು ಯತ್ನಿಸಿದರು. ಈ ವೇಳೆ ಕ್ಯಾಚ್ ಹಿಡಿಯಲು ಬರುತ್ತಿದ್ದ ಆಂಗ್ಲ ಬೌಲರ್ ವುಡ್ಗೆ ತನ್ನ ಕೈಯನ್ನು ಅಡ್ಡತಂದು ಕ್ಯಾಚ್ ಹಿಡಿಯದಂತೆ ಮಾಡಿದರು.
The CEO of Sportsman Spirit, M Wade, stopping M Wood from catching the ball!!The OZs@azkhawaja1 pic.twitter.com/zAsJl6gpqz
— WaQas Ahmad (@waqasaAhmad8) October 9, 2022
The cheap australian tactic
— Ammar BUTT (@ButtMcom) October 9, 2022
Dirty cheat
— luke smith (@lukeduke145) October 9, 2022
ವೇಡ್ ಮಾಡಿದ ಈ ಕೃತ್ಯದಿಂದಾಗಿ ವುಡ್ಗೆ ಕ್ಯಾಚ್ ಹಿಡಿಯಲು ಸಾಧ್ಯವಾಗಲಿಲ್ಲ. ಇದರಿಂದ ವಾರ್ನರ್ ಔಟಾಗುವುದರಿಂದ ಪಾರಾದರು. ಈ ವೇಳೆ ವೇಡ್, ‘ಫೀಲ್ಡ್‌ಗೆ ಅಡ್ಡಿಪಡಿಸಿದ್ದಕ್ಕಾಗಿ’ ಮೇಲ್ಮನವಿ ಸಲ್ಲಿಸಲು ಇಂಗ್ಲೆಂಡ್‌ಗೆ ಅವಕಾಶವಿತ್ತು. ಒಂದು ವೇಳೆ ಇಂಗ್ಲೆಂಡ್ ಈ ಕ್ರಮಕ್ಕೆ ಮುಂದಾಗಿದ್ದರೆ, ವೇಡ್ ಖಂಡಿತವಾಗಿಯೂ ಔಟಾಗಿ ಪೆವಿಲಿಯನ್ಗೆ ಸೇರುತ್ತಿದ್ದರು. ಆದರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹಾಗೆ ಮಾಡದೆ ವೇಡ್ಗೆ ಬ್ಯಾಟಿಂಗ್ ಮುಂದುವರೆಸಲು ಅವಕಾಶ ನೀಡಿದರು. ಆದಾಗ್ಯೂ, ಅದೇ ಓವರ್‌ನ ಕೊನೆಯ ಎಸೆತದಲ್ಲಿ ವಾರ್ನರ್ ಔಟಾದರು. ಅಂತಿಮವಾಗಿ ವೇಡ್ಗೂ ಕೂಡ ಆಸ್ಟ್ರೇಲಿಯಾಕ್ಕೆ ಗಲುವು ತಂದುಕೊಡಲು ಸಾಧ್ಯವಾಗಲಿಲ್ಲ.