CPL 2022: ಕಿಂಗ್ ಸಿಡಿಲಬ್ಬರ: ಜಮೈಕಾ ಚಾಂಪಿಯನ್

| Updated By: ಝಾಹಿರ್ ಯೂಸುಫ್

Updated on: Oct 01, 2022 | 12:36 PM

CPL 2022 final: ಈ ಗೆಲುವಿನೊಂದಿಗೆ ಜಮೈಕಾ ತಲ್ಲವಾಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

CPL 2022: ಕಿಂಗ್ ಸಿಡಿಲಬ್ಬರ: ಜಮೈಕಾ ಚಾಂಪಿಯನ್
Jamaica Tallawahs
Follow us on

CPL 2022 final:  ಕೆರಿಬಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಜಮೈಕಾ ತಲ್ಲವಾಸ್ (Jamaica Tallawahs) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ (Barbados Royals) ತಂಡದ ನಾಯಕ ಕೈಲ್ ಮೇಯರ್ಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಬಿರುಸಿನ ಆರಂಭ ಪಡೆದ ಬಾರ್ಬಡೋಸ್ ರಾಯಲ್ಸ್ ಪವರ್​ಪ್ಲೇನಲ್ಲಿ 63 ರನ್ ಕಲೆಹಾಕಿತು. ಆದರೆ ಆರಂಭಿಕರಾದ ಕಾರ್ನ್​ವಾಲ್ (36) ಹಾಗೂ ಕೈಲ್ ಮೇಯರ್ಸ್ (29) ನಿರ್ಗಮನದೊಂದಿಗೆ ಜಮೈಕಾ ಬೌಲರ್​ಗಳು ಮೇಲುಗೈ ಸಾಧಿಸಿದರು. ಇತ್ತ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಜಂ ಖಾನ್ ಅವರ ನಿಧಾನಗತಿಯ ಬ್ಯಾಟಿಂಗ್ ಕೂಡ ಜಮೈಕಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.

40 ಎಸೆತಗಳನ್ನು ಎದುರಿಸಿದ ಆಜಂ ಖಾನ್ 51 ರನ್​ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಸನ್ ಹೋಲ್ಡರ್ 17 ರನ್​ಗಳಿಸಿ ನಿರ್ಗಮಿಸಿದರು. ಇನ್ನು ಅಂತಿಮ ಹಂತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಜಮೈಕಾ ವೇಗಿಗಳು ಬಾರ್ಬಡೋಸ್ ರಾಯಲ್ಸ್ ಮೊತ್ತವನ್ನು 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್​ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ
2007ರ ಟಿ20 ವಿಶ್ವಕಪ್ ಫೈನಲ್‌ ಪಂದ್ಯದ ಹೀರೋಗಳು ಈಗ ಏನ್ಮಾಡ್ತಿದ್ದಾರೆ ಗೊತ್ತಾ?
Team India New Jersey: 25 ಕ್ಕೂ ಹೆಚ್ಚು ಬಾರಿ ಜೆರ್ಸಿ ಬದಲಿಸಿದ ಟೀಮ್ ಇಂಡಿಯಾ: ಇಲ್ಲಿದೆ ಫೋಟೋಸ್
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

162 ರನ್​ಗಳ ಸಾಧಾರಣ ಗುರಿ ಪಡೆದ ಜಮೈಕಾ ತಲ್ಲವಾಸ್ ಪರ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಅಕ್ಷರಶಃ ಅಬ್ಬರಿಸಿದರು. ಆರಂಭದಿಂದಲೇ ಬಾರ್ಬಡೋಸ್ ಬೌಲರ್​ಗಳ ಬೆಂಡೆತ್ತಿದ ಬ್ರೆಂಡನ್ ಕಿಂಗ್ 2 ಸಿಕ್ಸ್ ಹಾಗೂ 13 ಫೋರ್​ನೊಂದಿಗೆ 50 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿದರು. ಮತ್ತೊಂದೆಡೆ ಕಿಂಗ್​ಗೆ ಉತ್ತಮ ಸಾಥ್ ನೀಡಿದ ಶಮ್ರಾ ಬ್ರೂಕ್ಸ್ 33 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಬೌಂಡರಿಯೊಂದಿಗೆ 47 ರನ್​ ಸಿಡಿಸಿದರು. ಪರಿಣಾಮ 16.1 ಓವರ್​ಗಳಲ್ಲಿ ಜಮೈಕಾ ತಲ್ಲವಾಸ್ ತಂಡವು 2 ವಿಕೆಟ್ ನಷ್ಟಕ್ಕೆ 162 ರನ್​ಗಳಿಸಿ ಗೆಲುವಿನ ನಗೆ ಬೀರಿತು.

ಈ ಗೆಲುವಿನೊಂದಿಗೆ ಜಮೈಕಾ ತಲ್ಲವಾಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2013 ಮತ್ತು 2016 ರಲ್ಲಿ ಜಮೈಕಾ ತಲ್ಲವಾಸ್ ಸಿಪಿಎಲ್​ನಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ರೋವ್​ಮನ್ ಪೊವೆಲ್ ನಾಯಕತ್ವದಲ್ಲಿ ಜಮೈಕಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.