Rishabh Pant: ಬಾಲಿವುಡ್ ನಟಿಯೊಂದಿಗೆ ಪಂತ್ ಲವ್ವಿಡವ್ವಿ! ಪ್ರೇಯಸಿಗಾಗಿ ಬರೋಬ್ಬರಿ 16 ಗಂಟೆ ಕಾಯ್ದಿದ್ದ ರಿಷಭ್

| Updated By: ಪೃಥ್ವಿಶಂಕರ

Updated on: Mar 20, 2022 | 1:56 PM

Rishabh Pant: ಇವರಿಬ್ಬರು ಜೊತೆಯಾಗಿರುವ ಒಂದೇ ಒಂದು ಫೋಟೋ ಕೂಡ ಇದುವರೆಗೆ ಹೊರಬಿದ್ದಿಲ್ಲ. ಇದರೊಂದಿಗೆ ಊರ್ವಶಿ ಮತ್ತು ರಿಷಬ್ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದರಾ, ಇಲ್ಲವಾ ಎಂದು ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ.

Rishabh Pant: ಬಾಲಿವುಡ್ ನಟಿಯೊಂದಿಗೆ ಪಂತ್ ಲವ್ವಿಡವ್ವಿ! ಪ್ರೇಯಸಿಗಾಗಿ ಬರೋಬ್ಬರಿ 16 ಗಂಟೆ ಕಾಯ್ದಿದ್ದ ರಿಷಭ್
ರಿಷಭ್ ಪಂತ್
Follow us on

ನಮ್ಮ ದೇಶದಲ್ಲಿ ಕ್ರಿಕೆಟ್‌ಗೂ ಚಿತ್ರರಂಗಕ್ಕೂ ಅವಿನಾಭಾವ ಸಂಬಂಧವಿದೆ. ಅನೇಕ ಸ್ಟಾರ್ ಕ್ರಿಕೆಟಿಗರು ಬಾಲಿವುಡ್ ನಟಿಯರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಯಕಿಯರ ಜೊತೆ ಜೀವನ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ – ವಿರಾಟ್ ಕೊಹ್ಲಿ (Anushka Sharma – Virat Kohli), ಹಾರ್ದಿಕ್ ಪಾಂಡ್ಯ – ನತಾಶಾ ಸ್ಟಾಂಕೋವಿಕ್, ಸಂಗೀತಾ ಬಿಜಲಾನಿ – ಅಜರುದ್ದೀನ್, ಜಹೀರ್ ಖಾನ್ – ಸಾಗರಿಕಾ, ಯುವರಾಜ್ ಸಿಂಗ್ – ಹೇಜಲ್ ಕೀಚ್, ಹರ್ಭಜನ್ – ಗೀತಾ ಬಾಸ್ರಾ ಸೇರಿದಂತೆ ಕೆಲವು ಕ್ರಿಕೆಟಿಗರು ಸಿನಿಮಾ ನಾಯಕಿಯರೊಂದಿಗೆ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಈಗ ಈ ಪಟ್ಟಿಗೆ ಮತ್ತೊಂದು ಜೋಡಿ ಸೇರಿಕೊಂಡಿದೆ. ಆ ಜೋಡಿ ಯಾವುದೆಂದರೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಷಬ್ ಪಂತ್ (Rishabh Pant)- ಬಾಲಿವುಡ್ ಹಾಟ್ ಬ್ಯೂಟಿ ಊರ್ವಶಿ ರೌಟೇಲಾ (Urvashi Rautela). ಕಳೆದ ಕೆಲ ದಿನಗಳಿಂದ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ರಿಷಬ್ ಪಂತ್ ಅಥವಾ ಊರ್ವಶಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಏತನ್ಮಧ್ಯೆ, ಈ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದ ಇತ್ತೀಚಿನ ವಿಷಯವು ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಅದೇನೆಂದರೆ.. ಊರ್ವಶಿಯನ್ನು ಭೇಟಿಯಾಗಲು ರಿಷಬ್ ಪಂತ್ ಸುಮಾರು 16 ಗಂಟೆಗಳ ಕಾಲ ಕಾದಿದ್ದರು ಎಂಬುದು.

16-17 ಗಂಟೆಗಳ ಕಾಲ ಕಾದಿದ್ದರಂತೆ
ವರದಿಗಳ ಪ್ರಕಾರ, ಊರ್ವಶಿ ಸದ್ಯ ತಮ್ಮ ಸಿನಿಮಾ ಶೂಟಿಂಗ್‌ಗಾಗಿ ವಾರಣಾಸಿಯಲ್ಲಿದ್ದಾರೆ. ಅವರ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಅವರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನರಿತ ರಿಷಭ್ ಅವನರನ್ನು ಭೇಟಿಯಾಗಲು ಸೀದಾ ವಾರಣಾಸಿಗೆ ಹೋಗಿದ್ದರಂತೆ. ಇಷ್ಟು ದೂರ ಹೋದ ಪಂತ್, ಊರ್ವಶಿಯನ್ನು ಭೇಟಿ ಮಾಡಲು ಸುಮಾರು 16-17 ಗಂಟೆಗಳ ಕಾಲ ಕಾದಿದ್ದರಂತೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಇವರಿಬ್ಬರು ಜೊತೆಯಾಗಿರುವ ಒಂದೇ ಒಂದು ಫೋಟೋ ಕೂಡ ಇದುವರೆಗೆ ಹೊರಬಿದ್ದಿಲ್ಲ. ಇದರೊಂದಿಗೆ ಊರ್ವಶಿ ಮತ್ತು ರಿಷಬ್ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದರಾ, ಇಲ್ಲವಾ ಎಂದು ಕೆಲವರು ಪ್ರಶ್ನೆ ಎತ್ತುತ್ತಿದ್ದಾರೆ. ಈ ಹಿಂದೆ ರಿಷಬ್ ಮತ್ತು ಊರ್ವಶಿ ಮುಂಬೈನ ಜುಹುದಲ್ಲಿರುವ ಹೋಟೆಲ್‌ಗೆ ಊಟಕ್ಕೆ ಹೋಗಿದ್ದರು ಎಂದು ವರದಿಯಾಗಿತ್ತು. ಇವರಿಬ್ಬರ ಫೋಟೋಗಳು ರಿಲೇಶನ್ ಶಿಪ್ ನಲ್ಲಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಈ ಎಲ್ಲದರ ನಡುವೆ ಮುಂಬರುವ ಐಪಿಎಲ್ ಸೀಸನ್‌ಗಾಗಿ ರಿಷಬ್ ಪಂತ್ ಸಜ್ಜಾಗುತ್ತಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ತಂಡಕ್ಕೆ ಟ್ರೋಫಿ ನೀಡಲು ಸಿದ್ಧರಾಗಿದ್ದಾರೆ. ಇನ್ನು ಊರ್ವಶಿ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಟಾಲಿವುಡ್ ಕೂಡ ಬ್ಲ್ಯಾಕ್ ರೋಸ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಲಿದೆ.

Published On - 1:54 pm, Sun, 20 March 22