AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 5 ತಿಂಗಳುಗಳಿಂದ ಅನ್​ಫಿಟ್ ಆಗಿದ್ದ ಮಾರಕ ವೇಗಿ ಐಪಿಎಲ್​ಗಾಗಿ ಮುಂಬೈನಲ್ಲಿ ಪ್ರತ್ಯಕ್ಷ

ಐಪಿಎಲ್ 2022 ಟೂರ್ನಿ ಆರಂಭಕ್ಕೆ ಒಂದು ವಾರ ಇರುವಾಗ ದಿಢೀರ್ ಎಂದು ವಿದೇಶಿ ಆಟಗಾರರು ಭಾರತಕ್ಕೆ ಆಗಮನಿಸುತ್ತಿದ್ದಾರೆ. ಇದರಲ್ಲಿ ಅಚ್ಚರಿ ಎಂಬಂತೆ ಕಳೆದ 5 ತಿಂಗಳುಗಳಿಂದ ಫಿಟ್ನೆಸ್ ತೊಂದರೆಯಿಂದ ರಾಷ್ಟ್ರೀಯ ತಂಡದಿಂದ ಹೊರಬಿದ್ದ ಅನ್ರಿಚ್ ನಾರ್ಟ್ಜೆ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ.

IPL 2022: 5 ತಿಂಗಳುಗಳಿಂದ ಅನ್​ಫಿಟ್ ಆಗಿದ್ದ ಮಾರಕ ವೇಗಿ ಐಪಿಎಲ್​ಗಾಗಿ ಮುಂಬೈನಲ್ಲಿ ಪ್ರತ್ಯಕ್ಷ
Anrich Nortje IPL 2022
TV9 Web
| Edited By: |

Updated on: Mar 20, 2022 | 11:42 AM

Share

ಐಪಿಎಲ್ 2022 (IPL 2022) ಟೂರ್ನಿ ಹತ್ತಿರವಾಗುತ್ತಿದ್ದಂತೆ ಎಲ್ಲ ಆಟಗಾರರು ಒಬ್ಬೊಬ್ಬರಾಗಿ ಫ್ರಾಂಚೈಸಿ ಸೇರಿಕೊಳ್ಳುತ್ತಿದ್ದಾರೆ. ಬಯೋ ಬಬಲ್​ನಿಂದ ನೇರವಾಗಿ ಆಗಮಿಸುವ ಆಟಗಾರರಿಗೆ ಎರಡು ದಿನಗಳ ಕ್ವಾರಂಟೈನ್ ನಿಯಮವಿದ್ದರೆ, ಹೊಸದಾಗಿ ತಂಡ ಸೇರಿಕೊಳ್ಳುವ ಪ್ಲೇಯರ್ಸ್​ ಕಡ್ಡಾಯ ಒಂದು ವಾರಗಳ ಕ್ವಾರಂಟೈನ್​ನಲ್ಲಿ ಇರಬೇಕಾಗಿದೆ. ಇದೀಗ ಟೂರ್ನಿ ಆರಂಭಕ್ಕೆ ಒಂದು ವಾರ ಇರುವಾಗ ದಿಢೀರ್ ಎಂದು ವಿದೇಶಿ ಆಟಗಾರರು ಭಾರತಕ್ಕೆ ಆಗಮನಿಸುತ್ತಿದ್ದಾರೆ. ಇದರಲ್ಲಿ ಅಚ್ಚರಿ ಎಂಬಂತೆ ಕಳೆದ ಐದು ತಿಂಗಳುಗಳಿಂದ ಫಿಟ್ನೆಸ್ ತೊಂದರೆ ಅನುಭವಿಸಿ ತನ್ನ ರಾಷ್ಟ್ರೀಯ ತಂಡದಿಂದ ಹೊರಬಿದ್ದ ಆಟಗಾರ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ. ಹೌದು, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಅನ್ರಿಚ್ ನಾರ್ಟ್ಜೆ (Anrich Nortje) 15ನೇ ಆವೃತ್ತಿಯ ಐಪಿಎಲ್​ಗಾಗಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸೇರಿಕೊಳ್ಳಲು ಮುಂಬೈಗೆ ತಲುಪಿದ್ದಾರೆ. ಐಪಿಎಲ್​​ನಿಂದ ಹೊರ ನಡೆದಿದ್ದಾರೆ ಎಂದು ಹೇಳಲಾಗಿದ್ದ ಅನ್ರಿಚ್ ಇದೀಗ ದಿಢೀರ್ ಆಗಿ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದ್ದಾರೆ.

ಅನ್ರಿಚ್ ನಾರ್ಟ್ಜೆ ಅವರು ಕಳೆದ ಭಾರತ ವಿರುದ್ಧದ ಪ್ರವಾಸಕ್ಕೂ ಮುನ್ನ ಇಂಜುರಿಗೆ ತುತ್ತಾದರು. ಸೊಂಟದ ಗಾಯದಿಂದಾಗಿ ಅವರು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಆಗಿರಲಿಲ್ಲ. ಅಲ್ಲದೆ ಸದ್ಯ ಸಾಗುತ್ತಿರುವ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದಲೂ ಹೊರಗುಳಿದಿದ್ದಾರೆ. ಹೀಗೆ ಕಳೆದ ಐದು ತಿಂಗಳುಗಳಿಂದ ಕ್ರಿಕೆಟ್ ಅಂಗಳಕ್ಕೆ ಕಾಲಿಡದ ನಾರ್ಟ್ಜೆ ಇದೀಗ ಐಪಿಎಲ್​ಗಾಗಿ ಭಾರತಕ್ಕೆ ಆಗಮಿಸಿದ್ದು ಅಚ್ಚರಿ ಮೂಡಿಸಿದೆ. ಇತ್ತ ಡೆಲ್ಲಿ ತಂಡಕ್ಕೆ ಇವರ ಕಮ್​ಬ್ಯಾಕ್ ಆನೆಬಲ ಬಂದಂತಾಗಿದೆ.

ಮೆಗಾ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ ಇವರನ್ನು 6.5 ಕೋಟಿ ರೂ. ಗೆ ತನ್ನಲ್ಲೇ ಉಳಿಸಿಕೊಂಡಿತ್ತು. ಯಾಕೆಂದರೆ ಅನ್ರಿಚ್ ನಾರ್ಟ್ಜೆ ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿದ್ದರು ಮತ್ತು ತಂಡದ ಯಶಸ್ಸಿನಲ್ಲಿ ಪ್ರಮುಖ ಅಂಶವಾಗಿದ್ದರು. ಆದರೆ ಈ ಋತುವಿನಲ್ಲಿ ಅವರು ಇಂಜುರಿಯಿಂದಾಗಿ ಆಡುವುದಿಲ್ಲ. ಡೆಲ್ಲಿ ಈಗ ಹೊಸ ವೇಗಿಯನ್ನು ಹುಡುಕುವತ್ತ ಗಮನ ಹರಿಸುತ್ತಿದೆ ಎಂದು ವರದಿಯಾಗಿತ್ತು. ಆದರೀಗ ಅನ್ರಿಚ್ ಅವರು ಶಾರ್ದೂಲ್ ಠಾಕೂರ್ ಮತ್ತು ಖಲೀಲ್ ಅಹ್ಮದ್ ಜೊತೆ ಬೆಂಕಿಯ ಚೆಂಡು ಉಗುಳಲು ತಯಾರಾಗಿದ್ದಾರೆ.

ರಾಷ್ಟ್ರೀಯ ತಂಡದಿಂದ 5 ಆಟಗಾರರು ಔಟ್:

ಬಾಂಗ್ಲಾದೇಶ ವಿರುದ್ಧ ಮಾರ್ಚ್ 31ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟವಾಗಿದ್ದು ಐಪಿಎಲ್​ನಲ್ಲಿ ಆಡಲಿರುವ ಆಟಗಾರರನ್ನು ಕೈಬಿಡಲಾಗಿದೆ. ಹರಿಣಗಳ ತಂಡದ ಪ್ರಮುಖ ವೇಗದ ಬೌಲರ್ ಗಳಾದ ಕಗಿಸೋ ರಬಾಡ, ಲುಂಗಿ ಎನ್ ಗಿಡಿ ಮತ್ತು ಮಾಕ್ರೋ ಜೆನ್ಸನ್ ಗೆ ಟೆಸ್ಟ್ ತಂಡದಲ್ಲಿ ಜಾಗ ನೀಡಲಾಗಿಲ್ಲ. ಐಪಿಎಲ್ ನಲ್ಲಿ ಆಡುವ ಆ್ಯಡನ್ ಮಾಕ್ರಮ್ ಮತ್ತು ರಸ್ಸಿ ವ್ಯಾನ್ ಡರ್ ಡ್ಯುಸನ್ ಕೂಡಾ ಬಾಂಗ್ಲಾ ಸರಣಿಗೆ ಆಯ್ಕೆಯಾಗಿಲ್ಲ. ಐಪಿಎಲ್‌ ನಲ್ಲಿ ಆಡಬೇಕೆ ಅಥವಾ ದೇಶದ ಸರಣಿಯಲ್ಲಿ ಆಡಬೇಕೆ ಎಂಬ ನಿರ್ಧಾರವನ್ನು ಆಟಗಾರರಿಗೆ ಬಿಡಲಾಗಿತ್ತು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ.

ಸಿಎಸ್​ಕೆಗೆ ಡಬಲ್ ಶಾಕ್:

ಐಪಿಎಲ್ 2022 ಆರಂಭಕ್ಕೂ ಮುನ್ನ ಚೆನ್ನೈ ಸೂಪರ್‌ಕಿಂಗ್ಸ್​ಗೆ ಡಬಲ್ ಶಾಕ್ ಉಂಟಾಗಿದೆ. ತಂಡದ ಇಬ್ಬರು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಇನ್ನೂ ಹೊರಬಂದಿಲ್ಲ. 6 ಕೋಟಿ ರೂ.ಗೆ ರಿಟೇನ್ ಆಗಿದ್ದ ಆರಂಭಿಕ ಋತುರಾಜ್ ಗಾಯಕ್ವಾಡ್ ಜತೆಗೆ ಮೆಗಾ ಹರಾಜಿನಲ್ಲಿ ಬರೋಬ್ಬರಿ 14 ಕೋಟಿ ರೂ. ಗೆ ತಂಡಕ್ಕೆ ಮರಳಿರುವ ಆಲ್ರೌಂಡರ್ ದೀಪಕ್ ಚಹರ್ ಫಿಟ್ನೆಸ್ ಕೂಡ ತಲೆನೋವು ತಂದಿದೆ. ಕೈ ನೋವಿನಿಂದ ಬಳಲುತ್ತಿದ್ದ ಋತುರಾಜ್ ಸಿಎಸ್‌ಕೆ ಶಿಬಿರ ಕೂಡಿಕೊಂಡಿದ್ದರೂ, ಆರಂಭಿಕ ಕೆಲ ಪಂದ್ಯಕ್ಕೆ ಅಲಭ್ಯರಾಗುವ ಭೀತಿ ಇದೆ. ಇದರ ನಡುವೆ ಗಂಭೀರವಾದ ಸ್ನಾಯು ಸೆಳೆತದಿಂದ ಬಳಲುತ್ತಿರುವ ದೀಪಕ್ ಚಹರ್ ಇನ್ನೂ ತಂಡ ಸೇರಿಕೊಂಡಿಲ್ಲ ಹೀಗಾಗಿ ಟೂರ್ನಿಯಿಂದಲೇ ಹೊರಬಿದ್ದರೆ ಧೋನಿ ಪಡೆಗೆ ದೊಡ್ಡ ಹಿನ್ನಡೆಯಾಗಲಿದೆ.

Virat Kohli: ಕೊಹ್ಲಿ ಅಲ್ಲ: ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಗೊತ್ತೇ?

Lakshya Sen: ಫೈನಲ್ ಹಾದಿ ಸುಗಮವಾಗಿರಲಿಲ್ಲ; ಒಲಂಪಿಕ್, ವಿಶ್ವ ಚಾಂಪಿಯನ್​ಗಳಿಗೆ ಮಣ್ಣು ಮುಕ್ಕಿಸಿದ ಲಕ್ಷ್ಯ ಸೇನ್!

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್