Shreyas Iyer: ಇನ್ನೂ ಕ್ಯಾಪ್ಟನ್ ಆಗದ ಈ ಆಟಗಾರ ಶ್ರೇಯಸ್ ಅಯ್ಯರ್​ಗೆ ಫೇವರಿಟ್ ನಾಯಕನಂತೆ

Shreyas Iyer: ಇನ್ನೂ ಕ್ಯಾಪ್ಟನ್ ಆಗದ ಈ ಆಟಗಾರ ಶ್ರೇಯಸ್ ಅಯ್ಯರ್​ಗೆ ಫೇವರಿಟ್ ನಾಯಕನಂತೆ
KL Rahul and Shreyas Iyer

KL Rahul: ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ನಾಯಕತ್ವದಡಿಯಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇವರು ಫೇವರಿಟ್ ಕ್ಯಾಪ್ಟನ್ ಇವರಿಬ್ಬರೂ ಅಲ್ವಂತೆ. ಮತ್ಯಾರು ಗೊತ್ತೇ?

TV9kannada Web Team

| Edited By: Vinay Bhat

Mar 20, 2022 | 12:51 PM

ಶ್ರೇಯಸ್ ಅಯ್ಯರ್ (Shreyas Iyer) ಸದ್ಯ ಟೀಮ್ ಇಂಡಿಯಾದ ಮೂರೂ ಮಾದರಿಯ ಕ್ರಿಕೆಟ್​​ನಲ್ಲಿ ಮಿಂಚುತ್ತಿರುವ ಸ್ಟಾರ್ ಆಟಗಾರ. ಭಾರತ ಪರ 2017 ರಲ್ಲಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಒಂದು ತಿಂಗಳಲ್ಲೇ ಏಕದಿನ ಕ್ರಿಕೆಟ್​ಗೂ ಕಾಲಿಟ್ಟರು. ಸಾಕಷ್ಟು ಸಮಯದಿಂದ ಭಾರತ ಮಧ್ಯಮ ಕ್ರಮಾಂಕದಲ್ಲಿ ಅನುಭವಿಸುತ್ತಿದ್ದ ತೊಂದರೆಗೆ ಅಯ್ಯರ್ ಪರಿಹಾರ ನೀಡಿದರು. ಸೀಮಿತ ಓವರ್​ಗಳ ಕ್ರಿಕೆಟ್​​ನಲ್ಲಿ ಅನೇಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಅಯ್ಯರ್​ಗೆ ಭಾರತ ಟೆಸ್ಟ್​ ತಂಡದಲ್ಲಿ ಪದಾರ್ಪಣೆ ಮಾಡಲು ಐದು ವರ್ಷಗಳು ಕಾಯಬೇಕಾಯಿತು. ಈ ವರ್ಷದ ಆರಂಭದಲ್ಲಿ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದು ಕಣಕ್ಕಿಳಿದ ಅಯ್ಯರ್ ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದರು. ಟೆಸ್ಟ್​​ನಲ್ಲೂ ಅಯ್ಯರ್ ಈಗ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ. ಇದೀಗ ಐಪಿಎಲ್ 2022 (IPL 2022) ರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ಆಗಿ ಮುನ್ನಡೆಸಲಿದ್ದಾರೆ.

ಶ್ರೇಯಸ್ ಅಯ್ಯರ್ ಅವರು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ನಾಯಕತ್ವದಡಿಯಲ್ಲಿ ಅನೇಕ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಇವರು ಫೇವರಿಟ್ ಕ್ಯಾಪ್ಟನ್ ಇವರಿಬ್ಬರೂ ಅಲ್ವಂತೆ. ಈ ಬಗ್ಗೆ ಅಯ್ಯರ್ ಮಾತನಾಡಿದ್ದು ನನ್ನ ಮೆಚ್ಚಿನ ನಾಯಕ ಕೆಎಲ್ ರಾಹುಲ್ ಎಂದು ಹೇಳಿದ್ದಾರೆ. ರಾಹುಲ್ ಇದುವರೆಗೆ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕನಾಗಿ ಆಯ್ಕೆ ಆಗಲಿಲ್ಲ. ಆದರೆ, ಕೆಲ ಪಂದ್ಯಗಳಲ್ಲಿ ಇವರು ಭಾರತವನ್ನು ಮುನ್ನಡೆಸಿದ್ದಾರೆ. ಈ ವಿಚಾರದ ಬಗ್ಗೆ ಅಯ್ಯರ್ ಮೆಲುಕು ಹಾಕಿದ್ದಾರೆ.

ರಾಹುಲ್ ಅವರ ನಾಯಕತ್ವದಡಿಯಲ್ಲಿ ಅಯ್ಯರ್ ಮೂರು ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲೂ ಈ ವರ್ಷ ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರವಾಸದ ವೇಳೆ ರಾಹುಲ್ ಅವರ ನಾಯಕತ್ವ ಇವರಿಗೆ ತುಂಬಾ ಇಷ್ಟವಾಯಿತಂತೆ. ವಿಶೇಷ ಎಂಬಂತೆ ಇಲ್ಲಿ ಅಯ್ಯರ್ ಒಂದು ಪಂದ್ಯದಲ್ಲಿ 3.1 ಓವರ್ ಬೌಲಿಂಗ್ ಮಾಡಿದ್ದರು. ವಿಕೆಟ್ ಪಡೆಯದೆ 22 ರನ್​ಗಳನ್ನಷ್ಟೆ ನೀಡಿದ್ದರು. ಬೇರೆ ನಾಯಕರು ನನಗೆ ಒಂದು ಪಂದ್ಯದಲ್ಲಿ ಇಷ್ಟು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ. ಆದರೆ, ರಾಹುಲ್ ನನಗೆ ಬೌಲಿಂಗ್ ಮಾಡಲು ಅವಕಾಶ ನೀಡಿದ್ದರು. ಅವರಿಗೆ ಧನ್ಯವಾದ ಎಂದು ಹೇಳಿದ್ದಾರೆ.

“ರಾಹುಲ್ ಕ್ಯಾಪ್ಟನ್ಸಿ ಅಂಡರ್​​ನಲ್ಲಿ ಆಡಿರುವುದು ತುಂಬಾ ಸಂತಸ ನೀಡಿತು. ಅವನೊಬ್ಬ ಅದ್ಭುತ ಆಟಗಾರ. ಫೀಲ್ಡ್​ನಲ್ಲಿ ಆತನ ಆತ್ಮವಿಶ್ವಾಸ, ಟೀಮ್ ಮೀಟಿಂಗ್​ನಲ್ಲಿ ಅವರ ನಡತೆ, ಆಟಗಾರರಿಗೆ ಅವರು ನೀಡುವ ಪ್ರೋತ್ಸಾಹ ಉತ್ತಮವಾಗಿತ್ತು. ಫೀಲ್ಡ್​ನಲ್ಲಿ ಇರುವಾಗ ರಾಹುಲ್ ತೆಗೆದುಕೊಳ್ಳುವ ಕೆಲ ನಿರ್ಧಾರಗಳು ಅತ್ಯುತ್ತಮವಾಗಿತ್ತು. ಅವರ ನಾಯಕತ್ವದಡಿಯಲ್ಲಿ ಆಡುವುದು ಖುಷಿ ನೀಡಿದೆ. ಅಲ್ಲದೆ ನನಗೆ ಮೂರು ಓವರ್ ಬೌಲಿಂಗ್ ಮಾಡಲು ಅವಕಾಶ ನೀಡಿದ್ದರು. ಇದುವರೆಗೆ ಬೇರ ಯಾವ ನಾಯಕರು ಕೂಡ ನನಗೆ ಬೌಲಿಂಗ್ ಮಾಡಲು ಅಷ್ಟೊಂದು ಅವಕಾಶ ನೀಡಲಿಲ್ಲ. ಹೀಗಾಗಿ ರಾಹುಲ್ ನನ್ನ ಫೆವರಿಟ್ ನಾಯಕ”, ಎಂದು ಅಯ್ಯರ್ ಹೇಳಿದ್ದಾರೆ.

ಇನ್ನು ಐಪಿಎಲ್​ನಲ್ಲಿ ಕೆಕೆಆರ್ ತಂಡದ ನಾಯಕನಾಗಿರುವ ಬಗ್ಗೆ ಮಾತನಾಡಿರುವ ಅಯ್ಯರ್ ನಾನು ಯಾವುದೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಸಿದ್ಧವಿದ್ದೇನೆ ಎಂದು ಹೇಳಿದ್ದಾರೆ. “ತಂಡದಲ್ಲಿ ಜವಾಬ್ದಾರಿಯನ್ನು ಕೇವಲ ನಾಯಕ ಮಾತ್ರ ತೆಗೆದುಕೊಳ್ಳುವುದಲ್ಲ, ಪ್ರತಿಯೊಬ್ಬ ಆಟಗಾರ ಕೂಡ ತೆಗೆದುಕೊಳ್ಳಬೇಕು. ಆಗ ಗೆಲುವು ಸಾಧಿಸಲು ಸಾಧ್ಯ, ಪೈಪೋಟಿ ನೀಡಲು ಸಾಧ್ಯ. ವೈಯಕ್ತಿಕವಾಗಿ ನನಗೆ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಇಷ್ಟ. ನಾನು ಅನೇಕ ಸ್ಥಾನದಲ್ಲಿ ಕಣಕ್ಕಿಳಿದಿದ್ದೇನೆ. ತಂಡಕ್ಕೆ ನಾನು ಎಲ್ಲಿ ಆಡಬೇಕು ಎಂಬ ಅವಶ್ಯಕತೆಯಿದೆಯೋ ಅಲ್ಲಿ ಬ್ಯಾಟಿಂಗ್ ಮಾಡುತ್ತೇನೆ”, ಎಂದು ಹೇಳಿದ್ದಾರೆ.

IPL 2022: 5 ತಿಂಗಳುಗಳಿಂದ ಅನ್​ಫಿಟ್ ಆಗಿದ್ದ ಮಾರಕ ವೇಗಿ ಐಪಿಎಲ್​ಗಾಗಿ ಮುಂಬೈನಲ್ಲಿ ಪ್ರತ್ಯಕ್ಷ

Virat Kohli: ಕೊಹ್ಲಿ ಅಲ್ಲ: ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್ ಜೊತೆ ಇನ್ನಿಂಗ್ಸ್ ಆರಂಭಿಸುವುದು ಯಾರು ಗೊತ್ತೇ?

Follow us on

Related Stories

Most Read Stories

Click on your DTH Provider to Add TV9 Kannada