NZ vs ENG: ಕೇವಲ 11 ಎಸೆತಗಳಲ್ಲಿ 4 ವಿಕೆಟ್​ ಪತನ! ಆದರೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋತ ಕಿವೀಸ್

NZ vs ENG, Women's World Cup 2022: ಇಂಗ್ಲೆಂಡ್ ಪರ ಬಿದ್ದ 9 ವಿಕೆಟ್​ಗಳ ಪೈಕಿ ಕೊನೆಯ 4 ವಿಕೆಟ್​ಗಳು ಕೇವಲ 11 ಎಸೆತಗಳಲ್ಲಿ ಪತನವಾಗಿದ್ದು, ಪಂದ್ಯಕ್ಕೆ ರೋಚಕತೆ ತುಂಬುವ ಕೆಲಸ ಮಾಡಿತು. ಅರ್ಧಶತಕ ಗಳಿಸಿ ಔಟಾದ ನೇಟ್ ಸೀವರ್ ಅವರ ವಿಕೆಟ್ ನಂತರ ಇದು ಕಂಡುಬಂದಿತು.

NZ vs ENG: ಕೇವಲ 11 ಎಸೆತಗಳಲ್ಲಿ 4 ವಿಕೆಟ್​ ಪತನ! ಆದರೂ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸೋತ ಕಿವೀಸ್
ಇಂಗ್ಲೆಂಡ್ ವನಿತಾ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on:Mar 20, 2022 | 11:07 AM

ನಾವು ಮುಳುಗುತ್ತೇವೆ, ಜೊತೆಗೆ ನಿಮ್ಮನ್ನೂ ಮುಳುಗಿಸುತ್ತೇವೆ. ಐಸಿಸಿ ಮಹಿಳಾ ವಿಶ್ವಕಪ್ 2022 (ICC Women’s World Cup 2022)ರ ಪಿಚ್‌ನಲ್ಲಿ ಇಂಗ್ಲೆಂಡ್ (England ) ತಂಡವು ಇದೀಗ ಇದೇ ರೀತಿಯ ಕತೆಯನ್ನು ಬರೆಯುತ್ತಿದೆ. ಮೊದಲ 3 ಪಂದ್ಯಗಳಲ್ಲಿ ಸೋತ ನಂತರ, ಈಗ ಪ್ರತಿ ಪಂದ್ಯವೂ ಅವರಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಅಂದರೆ, ಪ್ರತಿ ಪಂದ್ಯವನ್ನು ಗೆಲ್ಲುವುದು ಅವಶ್ಯಕ. ಈ ಉದ್ದೇಶದ ಯಶಸ್ಸಿಗೆ, ಇಂಗ್ಲೆಂಡ್ ತಂಡವು ಇತರ ತಂಡಗಳ ಲೆಕ್ಕಾಚಾರವನ್ನೇ ಹಾಳು ಮಾಡಲು ಪ್ರಯತ್ನಿಸುತ್ತಿದೆ. ಇದರ ಇತ್ತೀಚಿನ ಬಲಿಪಶು ನ್ಯೂಜಿಲೆಂಡ್ (New Zealand) ತಂಡವಾಗಿದ್ದು, ಇಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವನಿತಾ ತಂಡ 1 ವಿಕೆಟ್‌ನಿಂದ ಜಯ ಸಾಧಿಸಿತು. ಟೂರ್ನಿಯಲ್ಲಿ ಇಂಗ್ಲೆಂಡ್‌ಗೆ ಇದು ಎರಡನೇ ಗೆಲುವು. ಮತ್ತೊಂದೆಡೆ, ಸೋಲಿನಿಂದ ಆತಿಥೇಯ ನ್ಯೂಜಿಲೆಂಡ್‌ನ ಸಮಸ್ಯೆಗಳು ಮತ್ತಷ್ಟು ಹೆಚ್ಚಿವೆ. ಏಕೆಂದರೆ, ನಡೆದಿರುವ 6 ಪಂದ್ಯಗಳಲ್ಲಿಇದು ಕಿವೀಸ್​ನ ನಾಲ್ಕನೇ ಸೋಲು.

ಪಂದ್ಯದಲ್ಲಿ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. 48.5 ಓವರ್‌ಗಳಲ್ಲಿ 203 ರನ್ ಗಳಿಸಿ ಆಲ್​ಔಟ್ ಆಯಿತು. ಇದಕ್ಕುತ್ತರವಾಗಿ 204 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ 47.2 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಆದರೆ, ಕೊನೆ ಕ್ಷಣದಲ್ಲಿ ಈ ಪಂದ್ಯ ರೋಚಕವಾಗಿ ಪರಿಣಮಿಸಿದ್ದು, ಗೆಲುವು ಯಾವ ಕಡೆಯದು ಎಂದು ಹೇಳುವುದು ಕಷ್ಟವಾಗಿತ್ತು.

11 ಎಸೆತಗಳಲ್ಲಿ 4 ವಿಕೆಟ್‌ ಪತನ ಇಂಗ್ಲೆಂಡ್ ಪರ ಬಿದ್ದ 9 ವಿಕೆಟ್​ಗಳ ಪೈಕಿ ಕೊನೆಯ 4 ವಿಕೆಟ್​ಗಳು ಕೇವಲ 11 ಎಸೆತಗಳಲ್ಲಿ ಪತನವಾಗಿದ್ದು, ಪಂದ್ಯಕ್ಕೆ ರೋಚಕತೆ ತುಂಬುವ ಕೆಲಸ ಮಾಡಿತು. ಅರ್ಧಶತಕ ಗಳಿಸಿ ಔಟಾದ ನೇಟ್ ಸೀವರ್ ಅವರ ವಿಕೆಟ್ ನಂತರ ಇದು ಕಂಡುಬಂದಿತು. ಇಂಗ್ಲೆಂಡ್​ನ ಆರನೇ ವಿಕೆಟ್ ಆಗಿ 44ನೇ ಓವರ್​ನ ಎರಡನೇ ಎಸೆತದಲ್ಲಿ ನೇಟ್ ವಿಕೆಟ್ ಪತನವಾಯಿತು. ಈ ವೇಳೆ ತಂಡದ ಸ್ಕೋರ್ 187 ರನ್ ಆಗಿತ್ತು. ಇದಾದ ಬಳಿಕ ಮುಂದಿನ 10 ಎಸೆತಗಳಲ್ಲಿ 3 ವಿಕೆಟ್‌ಗಳು ಪತನಗೊಂಡಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಉಸಿರು ಬಿಗಿ ಹಿಡಿಯುವಂತೆ ಮಾಡಿತು.

ನೇಟ್ ಸೀವರ್ ಅರ್ಧಶತಕ ಇಂಗ್ಲೆಂಡ್‌ನ ಗೆಲುವಿನಲ್ಲಿ, ಬ್ಯಾಟರ್ ನೇಟ್ ಸೀವರ್ 108 ಎಸೆತಗಳಲ್ಲಿ 61 ರನ್ ಗಳಿಸಿದರು, ಇದು ಅವರ ನಿಧಾನಗತಿಯ ಅರ್ಧಶತಕವಾಗಿತ್ತು. ಅವರನ್ನು ಹೊರತುಪಡಿಸಿ ಕ್ಯಾಪ್ಟನ್ ನೈಟ್ 42 ರನ್ ಗಳಿಸಿದರೆ, ಡಂಕ್ಲಿ 33 ರನ್ ಗಳಿಸಿದರು.

ಇದಕ್ಕೂ ಮುನ್ನ ನ್ಯೂಜಿಲೆಂಡ್ ಪರ ಮ್ಯಾಡಿ ಗ್ರೀನ್ 52 ರನ್ ಗಳಿಸಿದ್ದರು. ಅದೇ ಸಮಯದಲ್ಲಿ, ತಂಡದ ನಾಯಕಿ ಸೋಫಿ ಡಿವೈನ್ 41 ರನ್ ಗಳಿಸುವ ಮೂಲಕ ತಂಡದ ಎರಡನೇ ಟಾಪ್ ಸ್ಕೋರರ್ ಆಗಿದ್ದರು.

ಇದನ್ನೂ ಓದಿ:IND W VS ENG W: ಆಂಗ್ಲರ ಮುಂದೆ ಮಂಡಿಯೂರಿದ ಭಾರತ! ಮಹಿಳಾ ವಿಶ್ವಕಪ್​ನಲ್ಲಿ 2ನೇ ಸೋಲು

Published On - 11:03 am, Sun, 20 March 22

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ