Women’s World Cup: ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಭಾರತ- ಆಸೀಸ್ ಆಟಗಾರ್ತಿಯರು!

ICC Women's World Cup: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಈ ಪಂದ್ಯದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ.

ಪೃಥ್ವಿಶಂಕರ
|

Updated on:Mar 19, 2022 | 3:27 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಪಂದ್ಯ ಹಲವು ರೀತಿಯಲ್ಲಿ ವಿಶೇಷವಾಗಿತ್ತು. ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಈ ಪಂದ್ಯದಲ್ಲಿ ಒಂದು ವಿಶಿಷ್ಟ ಘಟನೆ ನಡೆದಿದೆ. ವಾಸ್ತವವಾಗಿ, ಭಾರತ-ಆಸ್ಟ್ರೇಲಿಯಾ ಪಂದ್ಯದಲ್ಲಿ 3 ಶತಕಗಳ ಜೊತೆಯಾಟ ಕಂಡುಬಂದಿದೆ. ಮಹಿಳಾ ವಿಶ್ವಕಪ್‌ನಲ್ಲಿ ಈ ಹಿಂದೆ ಯಾವ ಪಂದ್ಯದಲ್ಲೂ ಹೀಗಾಗಿರಲಿಲ್ಲ.

1 / 4
ಮೊದಲು ಪಾಲುದಾರಿಕೆ ಬಗ್ಗೆ ಮಾತನಾಡುವುದಾದರೆ, ಆಸ್ಟ್ರೇಲಿಯಾದ ಗೆಲುವಿಗೆ ಅಡಿಪಾಯ ಹಾಕಿದ ಶತಕದ ಜೊತೆಯಾಟವು ರಾಚೆಲ್ ಹೈನ್ಸ್ ಮತ್ತು ಅಲಿಸ್ಸಾ ಹೀಲಿ ನಡುವೆ ಇತ್ತು. ಇವರಿಬ್ಬರ ನಡುವೆ 117 ಎಸೆತಗಳಲ್ಲಿ 121 ರನ್‌ಗಳ ಜೊತೆಯಾಟವಿತ್ತು.

2 / 4
Women’s World Cup: ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಭಾರತ- ಆಸೀಸ್ ಆಟಗಾರ್ತಿಯರು!

ಗೆಲುವಿನ ಎತ್ತರದ ಕಟ್ಟಡವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಅಡಿಪಾಯದ ಪಾಲುದಾರಿಕೆಯು ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಮತ್ತು ಎಲ್ಲಿಸ್ ಪೆರ್ರಿ ನಡುವೆ ಇತ್ತು. ಇವರಿಬ್ಬರು ಮೂರನೇ ವಿಕೆಟ್‌ಗೆ 123 ಎಸೆತಗಳಲ್ಲಿ 103 ರನ್ ಸೇರಿಸಿದರು.

3 / 4
Women’s World Cup: ಮಹಿಳಾ ವಿಶ್ವಕಪ್ ಇತಿಹಾಸದಲ್ಲೇ ಅಪರೂಪದ ದಾಖಲೆ ಬರೆದ ಭಾರತ- ಆಸೀಸ್ ಆಟಗಾರ್ತಿಯರು!

ಈ ಪಂದ್ಯದಲ್ಲಿ ಭಾರತದಿಂದಲೂ ಶತಕದ ಜೊತೆಯಾಟ ಮೂಡಿಬಂತು. ಆದರೆ, ಆ ಜೊತೆಯಾಟ ಗೆಲುವಿಗೆ ಸಾಕ್ಷಿಯಾಗಲಿಲ್ಲ. ಆದರೆ ಭಾರತದ ಸ್ಕೋರ್ ಬೋರ್ಡ್ ಅನ್ನು 277 ರನ್‌ಗಳಿಗೆ ಕೊಂಡೊಯ್ಯಲೂ ಸಹಾಯ ಮಾಡಿತು. ಆದರೆ, ಆಸ್ಟ್ರೇಲಿಯಾ ಈ ಗುರಿಯನ್ನು ಬೆನ್ನಟ್ಟಿತು. ಭಾರತಕ್ಕೆ ಈ ಜೊತೆಯಾಟ ಮಿಥಾಲಿ ರಾಜ್ ಮತ್ತು ಯಾಸ್ತಿಕಾ ಭಾಟಿಯಾ ನಡುವೆ ಮೂರನೇ ವಿಕೆಟ್‌ಗೆ ಸೇರಿತ್ತು. ಇವರಿಬ್ಬರು 154 ಎಸೆತಗಳಲ್ಲಿ 130 ರನ್ ಸೇರಿಸಿದರು.

4 / 4

Published On - 3:13 pm, Sat, 19 March 22

Follow us