AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs PAK: ಕ್ರಿಕೆಟ್ ಪ್ರಿಯರಿಗೆ ರಸದೌತಣ; 4 ತಿಂಗಳಲ್ಲಿ 4 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕಿಸ್ತಾನ!

IND vs PAK: ಭಾರತ-ಪಾಕಿಸ್ತಾನ 4 ತಿಂಗಳಲ್ಲಿ 4 ಬಾರಿ ಹೇಗೆ ಮುಖಾಮುಖಿಯಾಗುತ್ತವೆ ಎಂದು ಈಗ ನೀವು ಯೋಚಿಸುತ್ತಿರಬೇಕು. ಹಾಗಾಗಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಇದು ಸಾಧ್ಯವಾಗಲಿದೆ.

IND vs PAK: ಕ್ರಿಕೆಟ್ ಪ್ರಿಯರಿಗೆ ರಸದೌತಣ; 4 ತಿಂಗಳಲ್ಲಿ 4 ಬಾರಿ ಮುಖಾಮುಖಿಯಾಗಲಿವೆ ಭಾರತ- ಪಾಕಿಸ್ತಾನ!
ರೋಹಿತ್- ಬಾಬರ್
TV9 Web
| Updated By: ಪೃಥ್ವಿಶಂಕರ|

Updated on: Mar 20, 2022 | 8:56 AM

Share

ಯಾವಾಗ ಭಾರತ ಮತ್ತು ಪಾಕಿಸ್ತಾನ ((India vs Pakistan))ದ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತದೆಯೋ, ಆಗ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಇಡೀ ಜಗತ್ತೆ ಕಣ್ತೆರದು ಕುಳಿತಿರುತ್ತದೆ. ಮೈದಾನದ ಹೊರಗಿನಿಂದ ಮೈದಾನದ ಒಳಗಿನವರೆಗೂ ವಾತಾವರಣವು ಬಿಸಿಯಾಗಿರುತ್ತದೆ. ಈ ಎರಡು ದೇಶಗಳ ಸಂಬಂಧ ಹದಗೆಟ್ಟಿರುವುದರಿಂದ ಉಭಯ ದೇಶಗಳು ಕ್ರಿಕೆಟ್ ಆಡುವುದಿಲ್ಲ. ಆದರೆ ಐಸಿಸಿ ನಡೆಸಿಕೊಡುವ ಪಂದ್ಯಾವಳಿಯಲ್ಲಿ ಎರಡು ತಂಡಗಳು ಪರಸ್ಪರ ಸ್ಪರ್ಧಿಸುತ್ತಾರೆ. ಈಗ ಅದೇ ಇಂಡೋ-ಪಾಕ್ 4 ತಿಂಗಳೊಳಗೆ 4 ಬಾರಿ ಮುಖಾಮುಖಿಯಾಗುವುದನ್ನು ನೋಡಲು ಕ್ರಿಕೆಟ್ ಜಗತ್ತು ಕಾಯುತ್ತಿದೆ. ಪ್ರತಿ ಬಾರಿಯೂ ಉಭಯ ದೇಶಗಳು ಮುಖಾಮುಖಿಯಾದಾಗ ಭಾರತ-ಪಾಕಿಸ್ತಾನದ ರಸ್ತೆಗಳಲ್ಲಿ ಮೌನ ಗೋಚರಿಸುತ್ತದೆ. ಉಭಯ ದೇಶಗಳ ಜನರ ದೇಶಭಕ್ತಿಯ ಪರಾಕಾಷ್ಠೆ ಉತ್ತುಂಗಕ್ಕೇರಿಬಿಡುತ್ತದೆ. ಇಂತಹ ಆಸಕ್ತಿದಾಯಕ ದೃಶ್ಯಕ್ಕೆ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ಸಾಕ್ಷಿಯಾಗಲಿದೆ.

ಭಾರತ-ಪಾಕಿಸ್ತಾನ 4 ತಿಂಗಳಲ್ಲಿ 4 ಬಾರಿ ಹೇಗೆ ಮುಖಾಮುಖಿಯಾಗುತ್ತವೆ ಎಂದು ಈಗ ನೀವು ಯೋಚಿಸುತ್ತಿರಬೇಕು. ಹಾಗಾಗಿ ಶ್ರೀಲಂಕಾದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ಇದು ಸಾಧ್ಯವಾಗಲಿದೆ. ಈ ಸರಣಿಯ ಆರಂಭ ಈ ವರ್ಷದ ಆಗಸ್ಟ್‌ನಿಂದ ಪ್ರಾರಂಭವಾಗಿ ನವೆಂಬರ್‌ನಲ್ಲಿ ಅಂತ್ಯವಾಗುವುದನ್ನು ಕಾಣಬಹುದು.

ಏಷ್ಯಾಕಪ್‌ನಲ್ಲಿ ಎರಡು ಬಾರಿ ಕಣಕ್ಕಿಳಿಯಬಹುದು ಈ ವರ್ಷದ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾದಲ್ಲಿ ಏಷ್ಯಾಕಪ್ ನಡೆಯಲಿದೆ. ಪಂದ್ಯಾವಳಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗುವುದನ್ನು ಕಾಣಬಹುದು. ಒಂದು, ಪಂದ್ಯಾವಳಿಯ ಆರಂಭಿಕ ಹಂತದಲ್ಲಿ ಉಭಯ ತಂಡಗಳು ಖಂಡಿತವಾಗಿಯೂ ಪರಸ್ಪರ ವಿರುದ್ಧವಾಗಿ ಕಣಕ್ಕಿಳಿಯಲಿವೆ. ನಂತರ ಉಭಯ ತಂಡಗಳು ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶಣ ತೋರಿ ಫೈನಲ್ ತಲುಪಿದರೆ ಆಗ ಎರಡನೇ ಬಾರಿಗೆ ಮುಖಾಮುಖಿಯಾಗುವುದನ್ನು ನಾವು ಕಾಣಬಹುದು. ಅಂದರೆ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರ ನಡುವೆ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಿಚ್‌ನಲ್ಲಿ ಎರಡು ಮುಖಾಮುಖಿಯನ್ನು ನಾವು ಕಾಣಬಹುದು.

ಟಿ20 ವಿಶ್ವಕಪ್‌ನಲ್ಲೂ ಇದು ಸಾಧ್ಯ ಏಷ್ಯಾಕಪ್ ಮುಗಿದ ಬಳಿಕ, ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ T20 ವಿಶ್ವಕಪ್ ಅನ್ನು ಆಯೋಜಿಸಲಾಗುತ್ತಿದೆ. ಐಸಿಸಿಯ ಈ ದೊಡ್ಡ ಕ್ರೀಡಾಕೂಟದಲ್ಲಿ, ಅಕ್ಟೋಬರ್ 23 ರಂದು ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಇದನ್ನು ಐಸಿಸಿ ತನ್ನ ವೇಳಾಪಟ್ಟಿಯಲ್ಲಿ ಧೃಡಪಡಿಸಿದೆ. ಆಸ್ಟ್ರೇಲಿಯಾದ ಅತಿದೊಡ್ಡ ಮೈದಾನವಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಈ ಘರ್ಷಣೆ ನಡೆಯಲಿದೆ. ಈ ಪಂದ್ಯದ ನಂತರ ಉಭಯ ತಂಡಗಳು ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮತ್ತೊಮ್ಮೆ ನವೆಂಬರ್ 13 ರಂದು ನಡೆಯುವ ಫೈನಲ್​ನಲ್ಲಿ ಎದುರುಬದುರಾಗುವುದನ್ನು ನಾವು ಕಾಣಬಹುದಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅದ್ಭುತ ಪ್ರದರ್ಶನ ತೋರಿದರೆ ಮಾತ್ರ ಇದು ಸಾಧ್ಯವಾಗಲಿದೆ.

ಇದನ್ನೂ ಓದಿ:IPL 2022: ಇನ್ನೂ ಚೆನ್ನೈ ತಂಡ ಸೇರಿಕೊಳ್ಳದ 8 ಕೋಟಿಯ ಪ್ಲೇಯರ್! ಧೋನಿ ಪಡೆಗೆ ಹೆಚ್ಚಾಯ್ತು ಟೆನ್ಷನ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ