IPL 2022: ಇನ್ನೂ ಚೆನ್ನೈ ತಂಡ ಸೇರಿಕೊಳ್ಳದ 8 ಕೋಟಿಯ ಪ್ಲೇಯರ್! ಧೋನಿ ಪಡೆಗೆ ಹೆಚ್ಚಾಯ್ತು ಟೆನ್ಷನ್

IPL 2022: ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಮೊಯಿನ್​ಗೆ ಇನ್ನೂ ವೀಸಾ ಸಿಗದಿರುವುದು ಚೆನ್ನೈನ ಚಿಂತೆಗೆ ಕಾರಣವಾಗಿದೆ.

IPL 2022: ಇನ್ನೂ ಚೆನ್ನೈ ತಂಡ ಸೇರಿಕೊಳ್ಳದ 8 ಕೋಟಿಯ ಪ್ಲೇಯರ್! ಧೋನಿ ಪಡೆಗೆ ಹೆಚ್ಚಾಯ್ತು ಟೆನ್ಷನ್
ಚೆನ್ನೈ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Mar 20, 2022 | 7:45 AM

IPL 2022 ರ ಆರಂಭಿಕ ಪಂದ್ಯಗಳಿಗೆ ಅನೇಕ ವಿದೇಶಿ ಆಟಗಾರರು ಲಭ್ಯವಿಲ್ಲದಿರುವುದು ಐಪಿಎಲ್​ ವೈಭವದ ಆರಂಭಕ್ಕೆ ಕಡಿವಾಣ ಹಾಕಿದೆ. ವಿವಿಧ ತಂಡಗಳಿಗೆ ಸೇರಿದ ಈ ಆಟಗಾರರು ತಮ್ಮ ತಮ್ಮ ದೇಶಗಳ ಪರ ಸರಣಿಯಲ್ಲಿ ನಿರತರಾಗಿದ್ದಾರೆ, ಇದರಿಂದಾಗಿ ಅವರು ಕೆಲವು ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ (CSK) ಈ ವಿಷಯದಲ್ಲಿ ಹೆಚ್ಚಿನ ಸಮಸ್ಯೆ ಎದುರಿಸುತ್ತಿಲ್ಲ. ಆದರೆ ಎಂಎಸ್ ಧೋನಿ (MS Dhoni) ಪಡೆಗೆ ಮತ್ತೊಂದು ಕಾರಣದಿಂದ ತಲೆನೋವು ಹೆಚ್ಚಾಗಿದೆ. ಇದು ತಂಡದ ಸ್ಟಾರ್ ಆಲ್‌ರೌಂಡರ್ ಮೊಯಿನ್ ಅಲಿ (Moeen Ali) ಇನ್ನೂ ತಂಡವನ್ನು ಸೇರಿಕೊಳ್ಳದಿರುವುದಾಗಿದೆ. ಕಳೆದ 20 ದಿನಗಳಿಂದ ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಭಾರತಕ್ಕೆ ಬರಲು ವೀಸಾ ಸಿಗದಿರುವುದು ಸಿಎಸ್‌ಕೆ ಟೆನ್ಷನ್ ಹೆಚ್ಚಿಸಿದೆ.

ಸರಿಯಾಗಿ ಒಂದು ವಾರದ ನಂತರ ಅಂದರೆ ಮಾರ್ಚ್ 26 ರಿಂದ ಮುಂಬೈನಲ್ಲಿ ಐಪಿಎಲ್ 15 ನೇ ಸೀಸನ್ ಆರಂಭವಾಗುತ್ತಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಕಳೆದ ಆವೃತ್ತಿಯ ರನ್ನರ್ ಅಪ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಹೀಗಿರುವಾಗ ಮೊಯಿನ್​ಗೆ ಇನ್ನೂ ವೀಸಾ ಸಿಗದಿರುವುದು ಚೆನ್ನೈನ ಚಿಂತೆಗೆ ಕಾರಣವಾಗಿದೆ. ನಿರಂತರವಾಗಿ ಭಾರತಕ್ಕೆ ಪ್ರಯಾಣ ಬೆಳೆಸುವುದರ ನಡುವೆಯೂ ಮೊಯಿನ್​ಗೆ ವೀಸಾ ವಿಳಂಬವಾಗುತ್ತಿರುವುದು ಫ್ರಾಂಚೈಸಿಗೂ ಆಶ್ಚರ್ಯ ಉಂಟು ಮಾಡಿದೆ.

ಫೆಬ್ರವರಿ 28 ರಂದೆ ಅರ್ಜಿ ಸಲ್ಲಿಸಲಾಗಿದೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥ್ ಅವರು ಮಾರ್ಚ್ 19 ರ ಶನಿವಾರದಂದು ಈ ಬಗ್ಗೆ ಮಾಹಿತಿ ನೀಡಿದ್ದು, ಪಂದ್ಯಾವಳಿ ಪ್ರಾರಂಭವಾಗುವ ಮೊದಲು ಅಲಿ ಮುಂಬೈನಲ್ಲಿ ತಂಡವನ್ನು ಸೇರಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಅಲಿ ಫೆಬ್ರವರಿ 28 ರಂದು ವೀಸಾಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸಿ 20 ದಿನಗಳು ಕಳೆದಿವೆ. ಅವರು ನಿರಂತರವಾಗಿ ಭಾರತಕ್ಕೆ ಪ್ರಯಾಣ ಬೆಳೆಸುತ್ತಿರುತ್ತಾರೆ ಆದರೂ ಅವರು ಇನ್ನೂ ಪ್ರಯಾಣಿದ ಅನುಮತಿ ಪಡೆದಿಲ್ಲ. ಅವರು ಶೀಘ್ರದಲ್ಲೇ ತಂಡವನ್ನು ಸೇರುತ್ತಾರೆ ಎಂಬ ಭರವಸೆ ನಮಗಿದೆ.

ಈ ವಿಚಾರದಲ್ಲಿ ಬಿಸಿಸಿಐ ಕೂಡ ಪ್ರಯತ್ನ ನಡೆಸಿದ್ದು, ಸೋಮವಾರದೊಳಗೆ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ ಎಂದು ವಿಶ್ವನಾಥ್ ಹೇಳಿದ್ದಾರೆ. ಪ್ರಯಾಣದ ದಾಖಲೆಗಳನ್ನು (ವೀಸಾ) ಪಡೆದ ತಕ್ಷಣ ಮುಂದಿನ ವಿಮಾನದಲ್ಲಿ ಭಾರತಕ್ಕೆ ಹೊರಡುವುದಾಗಿ ಮೊಯಿನ್ ನಮಗೆ ತಿಳಿಸಿದ್ದಾರೆ. ಈ ವಿಚಾರದಲ್ಲಿ ಬಿಸಿಸಿಐ ಕೂಡ ನಮಗೆ ಸಹಾಯ ಹಸ್ತ ಚಾಚಿದೆ. ಸೋಮವಾರದೊಳಗೆ (ಮಾರ್ಚ್ 21) ಅನುಮತಿ ಸಿಗುತ್ತದೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

8 ಕೋಟಿಗೆ ಖರೀದಿ ಕಳೆದ ವರ್ಷದ ಹರಾಜಿನಲ್ಲಿ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಅದರ ನಂತರ, ಎಡಗೈ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್ ಸ್ಪಿನ್ನರ್ ಮೊಯಿನ್ ಅಲಿ ತಮ್ಮ ಆಲ್‌ರೌಂಡ್ ಪ್ರದರ್ಶನದೊಂದಿಗೆ ಚೆನ್ನೈ ನಾಲ್ಕನೇ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರ ಪ್ರದರ್ಶನದಿಂದಾಗಿ, ಫ್ರಾಂಚೈಸಿ ಕಳೆದ ಆವೃತ್ತಿ ನಂತರ ಈ ಇಂಗ್ಲೆಂಡ್ ಆಲ್ರೌಂಡರ್ ಅನ್ನು ರೂ 8 ಕೋಟಿಗೆ ತನ್ನಲ್ಲೇ ಉಳಿಸಿಕೊಂಡಿತ್ತು.

ಇದನ್ನೂ ಓದಿ:IPL 2022: ಕಳ್ಳಾಟ, ಶಾರುಖ್​ ರಾದ್ಧಾಂತ, ಕಪಾಳ ಮೋಕ್ಷ, ಅಜೀವ ನಿಷೇಧ! ಇವಿಷ್ಟು ಐಪಿಎಲ್​ನ ಪ್ರಮುಖ ವಿವಾದಗಳು

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ