AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mark Wood Ruled Out: ಲಕ್ನೋ ಸೂಪರ್‌ಜೈಂಟ್ಸ್‌ಗೆ ಬಿಗ್ ಶಾಕ್! ಐಪಿಎಲ್​ನಿಂದ ಹೊರಬಿದ್ದ ಪ್ರಮುಖ ಬೌಲರ್

IPL 2022: ಮಾರ್ಕ್ ವುಡ್, ಲಕ್ನೋ ಸೂಪರ್ ಜೈಂಟ್ಸ್ ರೂಪಿಸಿದ್ದ ತಂತ್ರದ ಪ್ರಮುಖ ಭಾಗವಾಗಿದ್ದರು. ವುಡ್ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಅದೇ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬಲ್ಲರು, ಅದು ಅವರ ವಿಶೇಷತೆ.

Mark Wood Ruled Out: ಲಕ್ನೋ ಸೂಪರ್‌ಜೈಂಟ್ಸ್‌ಗೆ ಬಿಗ್ ಶಾಕ್! ಐಪಿಎಲ್​ನಿಂದ ಹೊರಬಿದ್ದ ಪ್ರಮುಖ ಬೌಲರ್
ಮಾರ್ಕ್ ವುಡ್
TV9 Web
| Updated By: ಪೃಥ್ವಿಶಂಕರ|

Updated on:Mar 18, 2022 | 3:20 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆಯೇ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಭಾರೀ ಹಿನ್ನಡೆ ಅನುಭವಿಸಿದೆ. ಲಕ್ನೋ ತಂಡದ ವೇಗದ ಬೌಲರ್ ಮತ್ತು ಮ್ಯಾಚ್ ವಿನ್ನರ್ ಮಾರ್ಕ್ ವುಡ್ ಈ ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಮಾರ್ಕ್ ವುಡ್ ಗಾಯದ ಸಮಸ್ಯೆಯಿಂದ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ. ಕಳೆದ ಕೆಲವು ದಿನಗಳಿಂದ ಮಾರ್ಕ್ ವುಡ್ ಐಪಿಎಲ್ ನಿಂದ ಹಿಂದೆ ಸರಿಯಬಹುದು ಎಂಬ ಮಾತು ಕೇಳಿ ಬರುತ್ತಿತ್ತು. ಕೊನೆಗೂ ಅದು ನಿಜವಾಯಿತು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ಟೆಸ್ಟ್ ಸರಣಿ ನಡೆಯುತ್ತಿದೆ. ಟೆಸ್ಟ್ ಸರಣಿಯ ವೇಳೆ ಮಾರ್ಕ್ ವುಡ್ ಗಾಯಗೊಂಡಿದ್ದರು. ಅಂದಿನಿಂದ ಮಾರ್ಕ್ ವುಡ್ ಐಪಿಎಲ್ ನಲ್ಲಿ ಆಡುವುದಿಲ್ಲ ಎಂಬ ಮಾತು ಕೇಳಿಬರುತ್ತಿತ್ತು. ಐಪಿಎಲ್‌ನಿಂದ ಮಾರ್ಕ್ ವುಡ್ ಹಿಂದೆ ಸರಿದಿರುವುದು ಲಕ್ನೋ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಗಂಟೆಗೆ 145 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಮಾರ್ಕ್ ವುಡ್, ಲಕ್ನೋ ಸೂಪರ್ ಜೈಂಟ್ಸ್ ರೂಪಿಸಿದ್ದ ತಂತ್ರದ ಪ್ರಮುಖ ಭಾಗವಾಗಿದ್ದರು. ವುಡ್ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಜೊತೆಗೆ ಅದೇ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಬಲ್ಲರು, ಅದು ಅವರ ವಿಶೇಷತೆ. ಹಾಗಾಗಿ ಈ ಬೌಲರ್ ನನ್ನು ಲಕ್ನೋ ತಂಡ 7.5 ಕೋಟಿಗೆ ಖರೀದಿಸಿತ್ತು. ಆದರೆ ಈಗ ವುಡ್ ಆಡದಿರುವುದು ಲಕ್ನೋ ಸೂಪರ್ ಜೈಂಟ್ಸ್‌ಗೆ ದೊಡ್ಡ ಹೊಡೆತವಾಗಿದೆ.

ಲಕ್ನೋ ತಂಡದ ಬ್ಯಾಟಿಂಗ್ ವಿಭಾಗ ಹೀಗಿದೆ ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ ಲಕ್ನೋ ಪರ ಇನ್ನಿಂಗ್ಸ್ ಆರಂಭಿಸಲಿದ್ದಾರೆ, ಬಹುಶಃ ಇದರಲ್ಲಿ ಯಾವುದೇ ಅನುಮಾನವಿಲ್ಲ. ಮನೀಶ್ ಪಾಂಡೆ 3 ಮತ್ತು ಮಾರ್ಕಸ್ ಸ್ಟೊಯಿನಿಸ್ 4 ನೇ ಸ್ಥಾನದಲ್ಲಿ ಆಡಬಹುದು. ಇದಲ್ಲದೆ, ದೀಪಕ್ ಹೂಡಾ ಕೂಡ ಈ ತಂಡದೊಂದಿಗೆ ಫಿನಿಶರ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು.

ಆಲ್ ರೌಂಡರ್ ವಿಭಾಗ ಲಕ್ನೋದಲ್ಲಿ ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಅವರಂತಹ ಇಬ್ಬರು ಅತ್ಯುತ್ತಮ ಆಲ್‌ರೌಂಡರ್‌ಗಳಿದ್ದಾರೆ. ಇವರೊಂದಿಗೆ ಮಾರ್ಕಸ್ ಸ್ಟೊಯಿನಿಸ್ ಕೂಡ ಉತ್ತಮವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಲಕ್ನೋ ಬೌಲಿಂಗ್ ಲಕ್ನೋ 2 ಸ್ಪೆಷಲಿಸ್ಟ್ ಸ್ಪಿನ್ನರ್‌ಗಳೊಂದಿಗೆ ಆಡುವ XI ಅನ್ನು ಕಟ್ಟಬಹುದು. ಇದರಲ್ಲಿ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಎಡಗೈ ಸ್ಪಿನ್ನರ್ ಶಹಬಾಜ್ ನದೀಮ್ ಕೂಡ ಇರಬಹುದಾಗಿದೆ. ಇವರ ಹೊರತಾಗಿ ಅವೇಶ್ ಖಾನ್ ವೇಗದ ಬೌಲಿಂಗ್​ನಲ್ಲಿ ಈ ತಂಡದ ಅಟ್ಟಹಾಸ ಹೆಚ್ಚಿಸಲಿದ್ದಾರೆ.

IPL 2022 ಲಕ್ನೋ ಸೂಪರ್‌ಜೈಂಟ್ಸ್ ವೇಳಾಪಟ್ಟಿ ಮಾರ್ಚ್ 28 – ಗುಜರಾತ್ ಟೈಟಾನ್ಸ್ ವಿರುದ್ಧ ( 7.30 PM)

ಮಾರ್ಚ್ 31- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ( 7.30 PM)

ಏಪ್ರಿಲ್ 4 – ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ( 7.30 PM)

ಏಪ್ರಿಲ್ 7- ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ (ಸಂಜೆ 7.30)

10 ಏಪ್ರಿಲ್- ರಾಜಸ್ಥಾನ್ ರಾಯಲ್ಸ್ ವಿರುದ್ಧ (7.30 PM)

16 ಏಪ್ರಿಲ್- ಮುಂಬೈ ಇಂಡಿಯನ್ಸ್ ವಿರುದ್ಧ (ಮಧ್ಯಾಹ್ನ 3.30)

19 ಏಪ್ರಿಲ್- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ (7.30 PM)

24 ಏಪ್ರಿಲ್- ಮುಂಬೈ ಇಂಡಿಯನ್ಸ್ ವಿರುದ್ಧ (ಸಂಜೆ 7.30)

29 ಏಪ್ರಿಲ್- ಪಂಜಾಬ್ ಕಿಂಗ್ಸ್ ವಿರುದ್ಧ (7.30 PM)

ಮೇ 1- ದೆಹಲಿ ಕ್ಯಾಪಿಟಲ್ಸ್ ವಿರುದ್ಧ (ಮಧ್ಯಾಹ್ನ 3.30)

ಮೇ 7- ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ( 7.30 PM)

ಮೇ 10- ಗುಜರಾತ್ ಟೈಟಾನ್ಸ್ ವಿರುದ್ಧ (7.30 PM)

ಮೇ 15- ರಾಜಸ್ಥಾನ್ ರಾಯಲ್ಸ್ ವಿರುದ್ಧ (7.30 PM)

ಮೇ 18- ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ( 7.30 PM)

ಇದನ್ನೂ ಓದಿ: IPL 2022: ಕಳ್ಳಾಟ, ಶಾರುಖ್​ ರಾದ್ಧಾಂತ, ಕಪಾಳ ಮೋಕ್ಷ, ಅಜೀವ ನಿಷೇಧ! ಇವಿಷ್ಟು ಐಪಿಎಲ್​ನ ಪ್ರಮುಖ ವಿವಾದಗಳು

Published On - 3:16 pm, Fri, 18 March 22