IPL 2022: ಸುರೇಶ್ ರೈನಾ ಹರಾಜಾಗದ ಕಾರಣ ತಿಳಿಸಿದ ಸಂಗಾಕ್ಕರ

IPL 2022: ಸುರೇಶ್ ರೈನಾ ಇದುವರೆಗೆ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5528 ರನ್ ಗಳಿಸಿದ್ದಾರೆ. ಈ ವೇಳೆ ರೈನಾ 39 ಅರ್ಧಶತಕಗಳನ್ನು ಹಾಗೂ ಒಂದು ಶತಕವನ್ನು ಗಳಿಸಿದ್ದಾರೆ.

IPL 2022: ಸುರೇಶ್ ರೈನಾ ಹರಾಜಾಗದ ಕಾರಣ ತಿಳಿಸಿದ ಸಂಗಾಕ್ಕರ
Suresh Raina
Follow us
TV9 Web
| Updated By: ಝಾಹಿರ್ ಯೂಸುಫ್

Updated on:Mar 20, 2022 | 2:33 PM

IPL ಸೀಸನ್ 15 ಮಾರ್ಚ್ 26 ರಿಂದ ಶುರುವಾಗಲಿದೆ. ಇದಕ್ಕಾಗಿ ಎಲ್ಲ ತಂಡಗಳು ಭರ್ಜರಿ ಸಿದ್ಧತೆಯಲ್ಲಿದೆ. ಫೆಬ್ರವರಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ಆಯ್ಕೆ ಮಾಡಿಕೊಂಡವು. ಇದರಲ್ಲಿ ಹಲವು ಯುವ ಆಟಗಾರರ ಅದೃಷ್ಟ ಖುಲಾಯಿಸಿದರೆ, ಇನ್ನು ಹಲವು ಆಟಗಾರರು ಬಿಕರಿಯಾಗಲಿಲ್ಲ. ಇದರಲ್ಲಿ ಅನೇಕ ಅನುಭವಿ ಆಟಗಾರರಿದ್ದರು ಎಂಬುದು ವಿಶೇಷ. ಅವರಲ್ಲಿ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಕೂಡ ಒಬ್ಬರು. ರೈನಾ ಹರಾಜಾಗದೇ ಉಳಿದಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕುಮಾರ ಸಂಗಕ್ಕಾರ ರೈನಾ ಏಕೆ ಬಿಕರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ನ ಆರಂಭದಿಂದಲೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಸುರೇಶ್ ರೈನಾ ಇದ್ದರು. ಆದರೆ ಈ ಬಾರಿ ಸಿಎಸ್‌ಕೆ ಅವರನ್ನು ಖರೀದಿಸಲಿಲ್ಲ. ಚೆನ್ನೈಗೆ ಎರಡು ವರ್ಷ ನಿಷೇಧ ಹೇರಿದಾಗ ರೈನಾ ಗುಜರಾತ್ ಲಯನ್ಸ್ ತಂಡದ ನಾಯಕರಾಗಿದ್ದರು. ಆದರೆ ಈ ಬಾರಿ ಸಿಎಸ್​ಕೆ ಅವರನ್ನು ಉಳಿಸಿಕೊಂಡಿಲ್ಲ. ಅಲ್ಲದೆ ಫ್ರಾಂಚೈಸಿ ಅವರನ್ನು ಬಿಡ್ ಮಾಡಲಿಲ್ಲ.

ಈ ಬಗ್ಗೆ ಮಾತನಾಡಿದ ಕುಮಾರ ಸಂಗಾಕ್ಕರ, ”ಇದಕ್ಕೆ ಹಲವು ಕಾರಣಗಳಿವೆ. ವರ್ಷಗಳು ಕಳೆದಂತೆ, ಆಟಗಾರರು ಬದಲಾಗುತ್ತಾರೆ. ಸುರೇಶ್ ರೈನಾ ಅವರು ಐಪಿಎಲ್‌ನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಅವರೊಬ್ಬ ಶ್ರೇಷ್ಠ ಆಟಗಾರ. ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಪ್ರತಿ ಸೀಸನ್​ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.

ಆದರೆ ಕೆಲ ಸೀಸನ್​ಗಳಿಗೆ ವಿಭಿನ್ನ ಪ್ಲ್ಯಾನ್​ಗಳನ್ನು ರೂಪಿಸಲಾಗಿರುತ್ತದೆ. ಹೀಗಾಗಿ ಈ ಸೀಸನ್​ಗೆ ರೈನಾ ಅವರಿಗೆ ಸರಿಹೊಂದುವುದಿಲ್ಲ ಅನಿಸಿರಬಹುದು. ಇದರಿಂದ ಆಟಗಾರನ ಹಿರಿಮೆ ಕಡಿಮೆಯಾಗುವುದಿಲ್ಲ. ಇದು ತರಬೇತುದಾರರು ಮತ್ತು ತಂಡದ ಮಾಲೀಕರು ಮನಸ್ಸಿನಲ್ಲಿಟ್ಟುಕೊಳ್ಳುವ ವಿಷಯವಾಗಿದೆ. ಈ ಕಾರಣದಿಂದಾಗಿ ರೈನಾ ಅವರ ಖರೀದಿಗೆ ಯಾವುದೇ ತಂಡ ಮುಂದಾಗಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕುಮಾರ್ ಸಂಗಾಕ್ಕರ ಅಭಿಪ್ರಾಯಪಟ್ಟಿದ್ದಾರೆ.

ರೈನಾ ಅಧ್ಭುತ ಪ್ರದರ್ಶನ: ಸುರೇಶ್ ರೈನಾ ಇದುವರೆಗೆ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು, 5528 ರನ್ ಗಳಿಸಿದ್ದಾರೆ. ಈ ವೇಳೆ ರೈನಾ 39 ಅರ್ಧಶತಕಗಳನ್ನು ಹಾಗೂ ಒಂದು ಶತಕವನ್ನು ಗಳಿಸಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲೂ 25 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಅಂದಹಾಗೆ ಐಪಿಎಲ್‌ನಲ್ಲಿ ರೈನಾ ಅವರ ಗರಿಷ್ಠ ಸ್ಕೋರ್ ಅಜೇಯ 100 ರನ್.

Published On - 2:33 pm, Sun, 20 March 22