Shoaib Malik: ಶೊಯೆಬ್ ಮಲಿಕ್ ಸನಾಗೂ ವಿಚ್ಛೇದನ ನೀಡ್ತಾರೆ: ತಸ್ಲೀಮಾ ನಸ್ರೀನ್
Shoaib Malik: 41 ವರ್ಷದ ಪಾಕಿಸ್ತಾನ್ ಕ್ರಿಕೆಟಿಗ ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002 ರಲ್ಲಿ ಮಲಿಕ್ ಮೊದಲ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಬಳಿಕ 2010 ರಲ್ಲಿ ಸಾನಿಯಾ ಮಿರ್ಝಾ ಅವರನ್ನು ವರಿಸಿದ್ದರು.
ಪಾಕಿಸ್ತಾನ್ ತಂಡದ ಸ್ಟಾರ್ ಆಟಗಾರ ಶೊಯೆಬ್ ಮಲಿಕ್ (Shoaib Malik) ತನ್ನ ಮೂರನೇ ಪತ್ನಿ ಸನಾ ಜಾವೇದ್‌ಗೂ ವಿಚ್ಛೇದನ ನೀಡಲಿದ್ದಾರೆ. ಹೀಗಂದಿರುವುದು ಮತ್ಯಾರೂ ಅಲ್ಲ, ವಿವಾದಿತ ಲೇಖಕಿ ಎಂದೇ ಗುರುತಿಸಿಕೊಂಡಿರುವ ತಸ್ಲೀಮಾ ನಸ್ರೀನ್. ಈಗಾಗಲೇ 3 ಮದುವೆಯಾಗಿರುವ ಮಲಿಕ್ ಮತ್ತೊಬ್ಬಳ್ಳನ್ನು ವರಿಸಲು ಸನಾಗೂ ಡೈವೋರ್ಸ್ ನೀಡಲಿದ್ದಾರೆ ಎಂದು ಬಾಂಗ್ಲಾ ಲೇಖಕಿ ಭವಿಷ್ಯ ನುಡಿದಿದ್ದಾರೆ.
ಶೊಯೆಬ್ ಮಲಿಕ್ ಹಾಗೂ ಸನಾ ಜಾವೇದ್ ಅವರ ವಿವಾಹದ ಬಗ್ಗೆ ಪ್ರತಿಕ್ರಿಯಿಸಿದ ತಸ್ಲೀಮಾ ನಸ್ರೀನ್, ಅವರಿಬ್ಬರು (ಶೋಯೆಬ್ ಮಲಿಕ್-ಸಾನಿಯಾ ಮಿರ್ಯಾ) ಅನೋನ್ಯವಾಗಿರುವ ದಂಪತಿಗಳು ಎಂದು ನಾನು ಭಾವಿಸಿದ್ದೆ. ಆದರೆ ನನ್ನ ಅನಿಸಿಕೆ ತಪ್ಪಾಗಿದೆ. ಬುದ್ದಿವಂತಳಾಗಿರುವ ಸಾನಿಯಾ ಮಿರ್ಝಾ ಇಷ್ಟು ಕೆಟ್ಟ ಹುಡುಗನನ್ನು ಹೇಗೆ ಮದುವೆಯಾದಳು! ಎಂಬುದೇ ಈಗ ಪ್ರಶ್ನೆ.
ನನ್ನ ಪ್ರಕಾರ ಶೊಯೆಬ್ ಮಲಿಕ್ ಸನಾ ಜಾವೇದ್‌ಗೂ ವಿಚ್ಛೇದನ ನೀಡುತ್ತಾನೆ. ಅಲ್ಲದೆ ಬೇರೊಬ್ಬಳನ್ನು ಮದುವೆಯಾಗುತ್ತಾನೆ. ಆ ಬಳಿಕ ಅವಳಿಗೂ ಡೈವೋರ್ಸ್ ನೀಡಿ ಇನ್ನೊಬ್ಬಳನ್ನು ವಿವಾಹವಾಗುತ್ತಾನೆ. ಇದು ಹೀಗೆ ಮುಂದುವರೆಯಲಿದೆ ಎಂದು ತಸ್ಲೀನ್ ನಸ್ರೀನ್ ಹೇಳಿದರು.
ಶೊಯೆಬ್ ಮಲಿಕ್ಗೆ ಇಸ್ಲಾಂನಲ್ಲಿ ನಂಬಿಕೆಯಿದ್ದರೆ ವಿಚ್ಛೇದನ ನೀಡುವ ಅಗತ್ಯವಿಲ್ಲ. ಆತನಿಗೆ 4 ಹೆಂಡತಿಯರನ್ನು ಹೊಂದಬಹುದು ಎಂದು ಇದೇ ವೇಳೆ ತಸ್ಲೀಮಾ ನಸ್ರೀನ್ ಮಲಿಕ್ ಅವರ ಡೈವೊರ್ಸ್ ಅನ್ನು ವ್ಯಂಗ್ಯವಾಡಿದರು.
ಸಾನಿಯಾ ಡೈವೋರ್ಸ್:
ಶೊಯೆಬ್ ಮಲಿಕ್ ತಮ್ಮ ಮೂರನೇ ವಿವಾಹವನ್ನು ಘೋಷಿಸಿದ ಬೆನ್ನಲ್ಲೇ ಇತ್ತ ಸಾನಿಯಾ ಮಿರ್ಝಾ ವಿಚ್ಛೇದನ ನೀಡಿಲ್ಲ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಅವರ ತಂದೆ ಇಮ್ರಾನ್ ಮಿರ್ಝಾ ಸ್ಪಷ್ಟನೆ ನೀಡಿದ್ದು, ಶೊಯೆಬ್ ಹಾಗೂ ಸಾನಿಯಾ ಕೆಲ ತಿಂಗಳುಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ. ಹೀಗಾಗಿಯೇ ಪಾಕ್ ಆಟಗಾರ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಹೊಸ ಜೀವನಕ್ಕೆ ಶುಭವಾಗಲಿ ಎಂದು ತಿಳಿಸಿದ್ದಾರೆ.
ಶೊಯೆಬ್ ಮೂರನೇ ಮದುವೆ:
ಶೊಯೆಬ್ ಮಲಿಕ್ ಇದುವರೆಗೆ ಮೂರು ಮದುವೆಯಾಗಿದ್ದಾರೆ. 2002 ರಲ್ಲಿ ಆಯೇಷಾ ಸಿದ್ದಿಕಿ ಎಂಬವರೊಂದಿಗೆ ವಿವಾಹವಾಗಿದ್ದ ಮಲಿಕ್ 2010 ರಲ್ಲಿ ಸಾನಿಯಾ ಮಿರ್ಝಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾನಿಯಾಗೂ ವಿಚ್ಛೇದನ ನೀಡಿ ಪಾಕ್ ನಟಿ ಸನಾ ಜಾವೇದ್ ಅವರನ್ನು ವರಿಸಿದ್ದಾರೆ. ಇನ್ನು ಶೊಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಝಾ ದಂಪತಿಗಳಿಗೆ ಐದು ವರ್ಷದ ಇಝಾನ್ ಎಂಬ ಮಗನಿದ್ದಾನೆ.
ಇದನ್ನೂ ಓದಿ: KL Rahul: ಮೈದಾನಕ್ಕಿಳಿಯುತ್ತಿದ್ದಂತೆ ವಿಶೇಷ ದಾಖಲೆ ಬರೆದ ಕೆಎಲ್ ರಾಹುಲ್
BPL ನಲ್ಲಿ ಮಲಿಕ್:
41 ವರ್ಷದ ಶೊಯೆಬ್ ಮಲಿಕ್ ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿಲ್ಲ. ಅಲ್ಲದೆ ವಿಶ್ವದ ಪ್ರಮುಖ ಲೀಗ್ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಆಡುತ್ತಿರುವ ಮಲಿಕ್ ಮುಂಬರುವ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
Published On - 10:48 am, Thu, 25 January 24