Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಂಗರ್​ ಶುಭ್​ ಮಾಡಿದ ಪೋಸ್ಟಿಗೆ ಕೆರಳಿದ ಕಿಂಗ್​ ಕೊಹ್ಲಿ; ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ

Virat Kohli: ಪಂಜಾಬಿ ಱಪರ್ ಶುಭ್,​ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಈ ಪೋಸ್ಟ್​ನಲ್ಲಿ ಭಾರತದ ನಕ್ಷೆಯನ್ನು ವಿಕೃತಿಗೊಳಿಸಲಾಗಿತ್ತು. ಈ ಪೋಸ್ಟ್​ ಜೊತೆಗೆ ಶುಭ್​, ಪ್ರೇ ಫಾರ್ ಪಂಜಾಬ್​ ಅಂತ ಬರೆದುಕೊಂಡಿದ್ದರು. ಅಂದರೆ ಈ ಪೋಸ್ಟ್​, ಖಲಿಸ್ತಾನಿಗಳಿಗೆ ಬೆಂಬಲಿಸುವ ರೀತಿಯಲ್ಲಿತ್ತು. ಇದೇ ಕಾರಣಕ್ಕೆ ಕೊಹ್ಲಿ, ಶುಭ್​ ಅವರನ್ನು ಇನ್​ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದಾರೆ.

ಸಿಂಗರ್​ ಶುಭ್​ ಮಾಡಿದ ಪೋಸ್ಟಿಗೆ ಕೆರಳಿದ ಕಿಂಗ್​ ಕೊಹ್ಲಿ; ಇನ್​ಸ್ಟಾಗ್ರಾಮ್​ನಲ್ಲಿ ಅನ್​ಫಾಲೋ
ವಿರಾಟ್ ಕೊಹ್ಲಿ, ಸಿಂಗರ್ ಶುಭ್
Follow us
Digi Tech Desk
| Updated By: ಪೃಥ್ವಿಶಂಕರ

Updated on:Sep 20, 2023 | 10:10 AM

ವಿಶ್ವದಲ್ಲಿ ಅತೀ ಹೆಚ್ಚು ಇನ್​ಸ್ಟಾಗ್ರಾಮ್ (Instagram)​ ಫಾಲೋವರ್ಸ್ ಹೊಂದಿರುವ ಸ್ಟಾರ್ ಅಥ್ಲೀಟ್​ಗಳಲ್ಲಿ ಕೊಹ್ಲಿ (Virat Kohli) ಕೂಡ ಒಬ್ಬರು. ರನ್ ಮಷೀನ್​ ಕೊಹ್ಲಿಗೆ ಇನ್​ಸ್ಟಾಗ್ರಾಮ್​ನಲ್ಲಿ ಬರೋಬ್ಬರಿ 259 ಮಿಲಿಯನ್ ಫಾಲೋವರ್ಸ್​ ಇದ್ದಾರೆ. ಆದರೆ ಕೊಹ್ಲಿ ಫಾಲೋ ಮಾಡುತ್ತಿರುವುದು ಬರೀ 287 ಮಂದಿ ಮಾತ್ರ. ಕೊಹ್ಲಿ ಫಾಲೋ ಮಾಡುತ್ತಿರುವ ವ್ಯಕ್ತಿಗಳ ಪಟ್ಟಿಯಲ್ಲಿ ಕೆನಡಾ ಮೂಲದ ಪಂಜಾಬಿ ಸಿಂಗರ್, ಶುಭ್ (Canadian singer Shubh)​ ಎಂದೇ ವಿಶ್ವಖ್ಯಾತರಾಗಿದ್ದ ಸುಭ್​ನೀತ್​ ಸಿಂಗ್ ಕೂಡ ಒಬ್ಬರು. ಆದರೆ ಇತ್ತೀಚೆಗೆ ಕೊಹ್ಲಿ, ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಶುಭ್​ ಅವರನ್ನು ಅನ್​ಫಾಲೋ ಮಾಡಿದ್ದಾರೆ.

ಸಿಂಗರ್​ ಶುಭ್​ ಮಾಡಿದ ಪೋಸ್ಟಿಗೆ ಕೆರಳಿದ ಕಿಂಗ್​ ಕೊಹ್ಲಿ

ಕೆನಡಾ ಮೂಲದ ಪಂಜಾಬಿ ಸಿಂಗರ್ ಶುಭ್​ಗೆ ಯೂಟ್ಯೂಬ್​ನಲ್ಲಿ ಭರ್ಜರಿ 3.24 ಮಿಲಿಯನ್ ಫಾಲೋವರ್ಸ್​ ಇದ್ದಾರೆ. ಎಲಿವೇಟೆಟ್, ಒಗ್, ಚೆಕ್ಸ್​ ಹೆಸರಿನಲ್ಲಿ ಸಾಂಗ್​ ಬಿಡುಗಡೆ ಮಾಡಿದ್ದ ಶುಭ್​, ಭಾರತದಲ್ಲಷ್ಟೇ ಅಲ್ಲ, ಹೊರ ದೇಶಗಳಲ್ಲೂ ಖ್ಯಾತಿ ಗಳಿಸಿದ್ದಾರೆ. ಸೊಗಸಾದ ಹಾಡುಗಳು ಶುಭ್​ರಿಂದ ಬಂದಿದ್ದರಿಂದ ಕೊಹ್ಲಿಗೂ ಶುಭ್​ ಫೇವರಿಟ್ ಸಿಂಗರ್. ಹೀಗಾಗಿ ಕೊಹ್ಲಿ, ಇನ್​ಸ್ಟಾಗ್ರಾಮ್​ನಲ್ಲಿ ಶುಭ್​ ಅವರನ್ನು ಫಾಲೋ ಮಾಡುತ್ತಿದ್ದರು. ಆದರೆ, ಶುಭ್​ ಮಾಡಿದ ಒಂದು ಇನ್​ಸ್ಟಾ ಪೋಸ್ಟ್​ ಕೊಹ್ಲಿಯನ್ನು ಕೆರಳಿಸಿದೆ. ಇದರ ಬೆನ್ನಲ್ಲೇ ಕೊಹ್ಲಿ ಶುಭ್​ರನ್ನು ಇನ್​ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದಾರೆ.

ಮೋದಿ ಸರ್ಕಾರಕ್ಕೆ ಸಂಕಷ್ಟ ತಂದ ಕಿಂಗ್ ಕೊಹ್ಲಿ ವಿಡಿಯೋ; ನೋಟಿಸ್ ಜಾರಿ ಮಾಡಿದ ಹೈಕೋರ್ಟ್

ಕೆನಡಾದಲ್ಲಿ ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್​ ಸಿಂಗ್​ನ ಹತ್ಯೆಯ ಬಳಿಕ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಚೆನ್ನಾಗಿಲ್ಲ. ಈ ಮಧ್ಯೆ, ಪಂಜಾಬಿ ಱಪರ್ ಶುಭ್,​ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಹಾಕಿದ್ದರು. ಈ ಪೋಸ್ಟ್​ನಲ್ಲಿ ಭಾರತದ ನಕ್ಷೆಯನ್ನು ವಿಕೃತಿಗೊಳಿಸಲಾಗಿತ್ತು. ಈ ಪೋಸ್ಟ್​ ಜೊತೆಗೆ ಶುಭ್​, ಪ್ರೇ ಫಾರ್ ಪಂಜಾಬ್​ ಅಂತ ಬರೆದುಕೊಂಡಿದ್ದರು. ಅಂದರೆ ಈ ಪೋಸ್ಟ್​, ಖಲಿಸ್ತಾನಿಗಳಿಗೆ ಬೆಂಬಲಿಸುವ ರೀತಿಯಲ್ಲಿತ್ತು. ಇದೇ ಕಾರಣಕ್ಕೆ ಕೊಹ್ಲಿ, ಶುಭ್​ ಅವರನ್ನು ಇನ್​ಸ್ಟಾದಲ್ಲಿ ಅನ್​ಫಾಲೋ ಮಾಡಿದ್ದಾರೆ.

ಶುಭ್​ ಮೆಚ್ಚಿ ಹಿಂದೊಮ್ಮೆ ಪೋಸ್ಟ್​ ಹಾಕಿದ್ದ ಕೊಹ್ಲಿ

ಶುಭ್​ ಸಾಂಗ್​ಗಳಿಗೆ ಮಾರುಹೋಗಿದ್ದ ಕೊಹ್ಲಿ, ಹಿಂದೊಮ್ಮೆ ಶುಭ್​ ಮೆಚ್ಚಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಾಕಿದ್ದರು. ಇದರಲ್ಲಿ, ಶುಭ್​ ತನ್ನ ಫೇವರಿಟ್ ಕಲಾವಿದರಲ್ಲಿ ಒಬ್ಬರು ಅಂತ ಕೊಹ್ಲಿ ಬರೆದುಕೊಂಡಿದ್ದರು. ಇದಕ್ಕೆ ಶುಭ್​ ಕೂಡ, ಥ್ಯಾಂಕ್ಯೂ ಸೋ ಮಚ್ ಭಾಜಿ ಅಂತ ಕಾಮೆಂಟ್ ಮಾಡಿದ್ದರು. ಆದರೆ, ಸದ್ಯ ಕೊಹ್ಲಿಯ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಲಿಸ್ಟ್​ನಲ್ಲಿ ಶುಭ್​ ಹೆಸರಿಲ್ಲ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 am, Wed, 20 September 23