CSA T20 League: ಹೊಸ ಟಿ20 ಲೀಗ್​: ಇದು ಮಿನಿ IPL

| Updated By: ಝಾಹಿರ್ ಯೂಸುಫ್

Updated on: Jul 19, 2022 | 11:54 AM

CSA T20 League: ಈ ತಿಂಗಳಾಂತ್ಯದಲ್ಲಿ ಫ್ರಾಂಚೈಸಿಗಳ ವಿಜೇತರನ್ನು ಘೋಷಿಸಲಾಗುತ್ತಿದ್ದು, ಅದಕ್ಕೂ ಮುನ್ನ ಯಶಸ್ವಿ ಬಿಡ್‌ದಾರರಿಗೆ ಅವರ ತಂಡಗಳ ನಗರಗಳನ್ನು ಆಯ್ಕೆ ಮಾಡುವಂತೆ ತಿಳಿಸಲಾಗಿದೆ.

CSA T20 League: ಹೊಸ ಟಿ20 ಲೀಗ್​: ಇದು ಮಿನಿ IPL
CSA T20-IPL
Follow us on

ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಶಸ್ಸಿನ ಬೆನ್ನಲ್ಲೇ ಹಲವು ಲೀಗ್​ಗಳು ಶುರುವಾಗಿದ್ದವು. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್, ವೆಸ್ಟ್ ಇಂಡೀಸ್​ ನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಇಂಗ್ಲೆಂಡ್​ ನಲ್ಲಿ 100 ಲೀಗ್, ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್, ಶ್ರೀಲಂಕಾದಲ್ಲಿ ಲಂಕಾ ಪ್ರೀಮಿಯರ್ ಲೀಗ್, ನ್ಯೂಜಿಲೆಂಡ್​ ನಲ್ಲಿ ಸೂಪರ್ ಸ್ಮ್ಯಾಶ್, ಬಾಂಗ್ಲಾದೇಶದಲ್ಲಿ ಬಾಂಗ್ಲಾ ಪ್ರೀಮಿಯರ್ ಲೀಗ್…ಹೀಗೆ ಲೀಗ್​ ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಪಟ್ಟಿಗೆ ಹೊಸ ಸೇರ್ಪಡೆಯೆಂದರೆ ಯುಎಇ ಟಿ20 ಲೀಗ್ ಹಾಗೂ ಸೌತ್ ಆಫ್ರಿಕಾ ಸಿಎಸ್​ಎ ಟಿ20 ಲೀಗ್. ಇಲ್ಲಿ ವಿಶೇಷ ಎಂದರೆ ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್​ ಆಯೋಜಿಸಲಿರುವ ಟಿ20 ಲೀಗ್​​ನ ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿದೆ.

ಈ ಹೊಸ ಲೀಗ್​ನಲ್ಲಿ ಒಟ್ಟು 6 ತಂಡಗಳಿದ್ದು, ಈ ಎಲ್ಲಾ ತಂಡಗಳನ್ನು ಐಪಿಎಲ್​ನಲ್ಲಿ ತಂಡಗಳ ಮಾಲೀಕತ್ವವನ್ನು ಹೊಂದಿರುವ ಫ್ರಾಂಚೈಸಿಗಳೇ ಖರೀದಿಸಿರುವುದು ವಿಶೇಷ. ವರದಿಗಳ ಪ್ರಕಾರ ಐಪಿಎಲ್ ಫ್ರಾಂಚೈಸಿಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಸೌತ್ ಆಫ್ರಿಕಾ ಟಿ20 ಲೀಗ್​ನ ತಂಡಗಳ ಮಾಲೀಕತ್ವವನ್ನು ಪಡೆದುಕೊಂಡಿವೆ.

ಮುಖೇಶ್ ಅಂಬಾನಿ (MI), ಎನ್ ಶ್ರೀನಿವಾಸನ್ (CSK), ಪಾರ್ಥ್ ಜಿಂದಾಲ್ (DC), ದಿ ಮಾರನ್ ಕುಟುಂಬ (SRH), ಸಂಜೀವ್ ಗೋಯೆಂಕಾ (LSG) ಮತ್ತು ಮನೋಜ್ ಬದಾಲೆ (RR) ಅವರು ಸಿಎಸ್​ಎ ತಂಡಗಳ ಹರಾಜಿನಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಲೀಗ್ ಆಯೋಜಕರು ತಂಡಗಳ ಮಾಲೀಕರು ಯಾರು ಎಂಬುದನ್ನು ಇನ್ನೂ ಕೂಡ ಅಧಿಕೃತವಾಗಿ ಘೋಷಿಸಿಲ್ಲ. ಇದಾಗ್ಯೂ ಕೆಲ ಮೂಲಗಳು ಐಪಿಎಲ್ ಫ್ರಾಂಚೈಸಿಗಳ ಮಾಲೀಕತ್ವನ್ನು ದೃಢಪಡಿಸಿದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಈ ತಿಂಗಳಾಂತ್ಯದಲ್ಲಿ ಫ್ರಾಂಚೈಸಿಗಳ ವಿಜೇತರನ್ನು ಘೋಷಿಸಲಾಗುತ್ತಿದ್ದು, ಅದಕ್ಕೂ ಮುನ್ನ ಯಶಸ್ವಿ ಬಿಡ್‌ದಾರರಿಗೆ ಅವರ ತಂಡಗಳ ನಗರಗಳನ್ನು ಆಯ್ಕೆ ಮಾಡುವಂತೆ ತಿಳಿಸಲಾಗಿದೆ. ಇನ್ನು ಈ ಬಿಡ್ಡಿಂಗ್​ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ 250 ಕೋಟಿಗಳ ಸಮೀಪದಲ್ಲಿ ಅತಿ ದೊಡ್ಡ ಬಿಡ್‌ಗಳನ್ನು ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮತ್ತೊಂದೆಡೆ ಯುಎಇ ಟಿ20 ಲೀಗ್ ಕೂಡ ಶೀಘ್ರದಲ್ಲೇ ಶುರುವಾಗಲಿದ್ದು, ಹೀಗಾಗಿ ಹೊಸ ಎರಡು ಲೀಗ್​ಗಳ ನಡುವೆ ಪೈಪೋಟಿ ಕಂಡು ಬರಲಿದೆ. ಏಕೆಂದರೆ ಯುಎಇ ಟಿ 20 ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಖರೀದಿಸಿದೆ. ಇದೀಗ ಸೌತ್ ಆಫ್ರಿಕಾ ಲೀಗ್ ನ 6 ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳೇ ಖರೀದಿಸಿರುವುದರಿಂದ ಹೊಸ ಲೀಗ್ ಅನ್ನು ಮಿನಿ ಐಪಿಎಲ್ ಎಂದು ಕರೆಯಲಾಗುತ್ತಿದೆ. ಒಟ್ಟಿನಲ್ಲಿ ಐಪಿಎಲ್​ ಮೂಲಕ ಕ್ರಿಕೆಟ್ ಪ್ರೇಮಿಯರಿಗೆ ಮನರಂಜನೆಯ ರಸದೌತಣ ಒದಗಿಸಿದ್ದ ಫ್ರಾಂಚೈಸಿಗಳು ಸೌತ್ ಆಫ್ರಿಕಾ ಹಾಗೂ ಯುಎಇ ಟಿ20 ಲೀಗ್​ ಮೋಡಿ ಮಾಡಲಿದೆಯಾ ಕಾದು ನೋಡಬೇಕಿದೆ.