IPL 2023: ಐಪಿಎಲ್​ಗೆ CSK ಮಹಿಳಾ ತಂಡ..!

| Updated By: ಝಾಹಿರ್ ಯೂಸುಫ್

Updated on: Jul 05, 2022 | 9:25 PM

IPL 2023: ಐಪಿಎಲ್​ ಮಾದರಿಯಲ್ಲೇ ಮಹಿಳಾ ಟಿ20 ಲೀಗ್ ಅನ್ನು ಆಯೋಜಿಸಲು ಬಿಸಿಸಿಐ ಬಯಸಿದ್ದು, ಈ ಲೀಗ್​ನ ತಂಡಗಳನ್ನು ಪ್ರಸ್ತುತ ಇರುವ ಐಪಿಎಲ್​ ಫ್ರಾಂಚೈಸಿಗಳೇ ಖರೀದಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

IPL 2023: ಐಪಿಎಲ್​ಗೆ CSK ಮಹಿಳಾ ತಂಡ..!
ಸಾಂದರ್ಭಿಕ ಚಿತ್ರ
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಹಿಳಾ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಸಜ್ಜಾಗಿದೆ. ಅದರಂತೆ 2023 ರಿಂದ ಮಹಿಳಾ ಐಪಿಎಲ್​ಗೆ ಚಾಲನೆ ನೀಡಲು ಈಗಾಗಲೇ ಮಾತುಕತೆ ಕೂಡ ನಡೆದಿದೆ. ಇದರ ಬೆನ್ನಲ್ಲೇ ಮಹಿಳಾ ಐಪಿಎಲ್​ನಲ್ಲಿ ತಂಡವೊಂದನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಮುಂದಾಗಿದೆ. ಈ ಬಗ್ಗೆ ಮಾತನಾಡಿರುವ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್, ಮಹಿಳಾ ಐಪಿಎಲ್‌ಗಾಗಿ ತಂಡವನ್ನು ಖರೀದಿಸಲು ನಮ್ಮ ಫ್ರಾಂಚೈಸಿ ಆಸಕ್ತಿ ಹೊಂದಿದೆ ಎಂದು ತಿಳಿಸಿದ್ದಾರೆ. ಅಂದರೆ ಮಹಿಳಾ ಐಪಿಎಲ್ ತಂಡಗಳ​ ಹರಾಜು ನಡೆದರೆ, ಸಿಎಸ್​ಕೆ ಕೂಡ ತಂಡಕ್ಕಾಗಿ ಬಿಡ್ಡಿಂಗ್ ನಡೆಸುವುದು ಬಹುತೇಕ ಖಚಿತವಾಗಿದೆ.

ಬಿಸಿಸಿಐ 2018 ರಿಂದ ಮಹಿಳಾ T20 ಚಾಲೆಂಜ್ ಪಂದ್ಯಾವಳಿಯನ್ನು ಆಯೋಜಿಸಿದೆ. ಮೂರು ತಂಡಗಳು ಮಾತ್ರ ಭಾಗವಹಿಸಿದ್ದ ಈ ಟೂರ್ನಿಯು ಗಮನಾರ್ಹ ಪ್ರಮಾಣದ ವೀಕ್ಷಕರನ್ನು ಪಡೆದುಕೊಂಡಿದೆ. ಹೀಗಾಗಿ ಐಪಿಎಲ್ ಮಾದರಿಯಲ್ಲೇ ಮಹಿಳಾ ಐಪಿಎಲ್ ತಂಡಗಳನ್ನು ರೂಪಿಸಲು ಬಿಸಿಸಿಐ ಆಸಕ್ತಿವಹಿಸಿದೆ. ಅದರಂತೆ 2023 ರಿಂದ ವುಮೆನ್ಸ್ ಐಪಿಎಲ್​ಗೆ ಚಾಲನೆ ನೀಡುವ ಬಗ್ಗೆ ಬಿಸಿಸಿಐ ಚರ್ಚಿಸಿದೆ.

ಇದೀಗ ಮಹಿಳಾ ಐಪಿಎಲ್​ ತಂಡದ ಖರೀದಿಗೂ ಸಿಎಸ್​ಕೆ ಫ್ರಾಂಚೈಸಿ ಆಸಕ್ತಿವಹಿಸಿದ್ದು, ಹೀಗಾಗಿ ಬಿಸಿಸಿಐ ಯೋಜನೆ ಯಶಸ್ವಿಯಾಗುವ ಸೂಚನೆ ಸಿಕ್ಕಂತಾಗಿದೆ. ಈ ಬಗ್ಗೆ ಮಾತನಾಡಿರುವ ಸಿಎಸ್​ಕೆ ಸಿಇಒ ಕಾಶಿ ವಿಶ್ವನಾಥನ್, ನಮಗೆ ತಂಡದ ಖರೀದಿಸಬೇಕೆಂಬ ಆಸಕ್ತಿ ಇದೆ. ಈ ಬಗ್ಗೆ ಬಿಸಿಸಿಐ ಮೊದಲು ನಿರ್ಧರಿಸಲಿ. ಇಲ್ಲಿಯವರೆಗೆ, ಅದರ ಬಗ್ಗೆ ಯಾವುದೇ ಸಂವಹನ ನಡೆದಿಲ್ಲ. ಕಳೆದ ತಿಂಗಳ ಆರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಡಳಿಯು ಮುಂದಿನ ವರ್ಷ ಪೂರ್ಣ ಪ್ರಮಾಣದ ಮಹಿಳಾ ಐಪಿಎಲ್ ಅನ್ನು ನಡೆಸುವ ಬಗ್ಗೆ ಉಲ್ಲೇಖಿಸಿದ್ದಾರೆ. ಇದು ಭಾರತದಲ್ಲಿ ಮಹಿಳಾ ಕ್ರಿಕೆಟ್ ಹೊಸ ಎತ್ತರವನ್ನು ತಲುಪಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
IND vs ENG: ಟೀಮ್ ಇಂಡಿಯಾ ಆಟಗಾರರು ವಿಶೇಷ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದು ಯಾಕೆ ಗೊತ್ತಾ?
6,6,6,6,6: ಒಂದೇ ಓವರ್​ನಲ್ಲಿ ಸಿಕ್ಸ್​ಗಳ ಸುರಿಮಳೆ: ಟಿ20 ಬ್ಲಾಸ್ಟ್​ನಲ್ಲಿ ಹೊಸ ದಾಖಲೆ
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!
Test Cricket Records: ಟೆಸ್ಟ್​ನಲ್ಲಿ ಅತೀ ವೇಗದ ಶತಕ ಬಾರಿಸಿದ್ದು ಯಾರು ಗೊತ್ತಾ?

ದೇಶದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಗರಿಷ್ಠ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ 2023 ರಲ್ಲಿ ಮಹಿಳಾ IPL ಅನ್ನು ಪ್ರಾರಂಭಿಸಲು BCCI ಬದ್ಧವಾಗಿದೆ ಎಂದು ಈ ಹಿಂದೆ ಬಿಸಿಸಿಐ ಅಧ್ಯಕ್ಷ ಎಂದು ಗಂಗೂಲಿ ಹೇಳಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ, ಮಹಿಳಾ ಐಪಿಎಲ್ ಮಹಿಳಾ ಕ್ರಿಕೆಟ್‌ನ ಅತಿದೊಡ್ಡ ಟಿ20 ಲೀಗ್‌ಗಳಲ್ಲಿ ಒಂದಾಗಲಿದೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಬಿಗ್ ಬ್ಯಾಷ್ ಲೀಗ್ ಪ್ರಸ್ತುತ ವಿಶ್ವದ ಅತ್ಯಂತ ಜನಪ್ರಿಯ ಮಹಿಳಾ ಕ್ರಿಕೆಟ್ ಲೀಗ್ ಆಗಿ ಗುರುತಿಸಿಕೊಂಡಿದೆ.

ಮಹಿಳಾ ಬಿಗ್ ಬ್ಯಾಷ್​ ಲೀಗ್​ನಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರಾದ ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರೊಡ್ರಿಗಸ್ ಅವರು ವಿವಿಧ ತಂಡಗಳಿಗಾಗಿ ಆಡಿದ್ದಾರೆ. ಏತನ್ಮಧ್ಯೆ, 2022 ರ ಮಹಿಳಾ ಟಿ 20 ಚಾಲೆಂಜ್‌ನಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್, ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ನಾಯಕತ್ವದ ಮೂರು ತಂಡಗಳನ್ನು ಕಣಕ್ಕಿಳಿಸಲಾಗಿತ್ತು. ಈ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ನೇತೃತ್ವದ ಸೂಪರ್‌ನೋವಾಸ್ ತಂಡವು ನಾಲ್ಕು ರನ್‌ಗಳಿಂದ ವೆಲೋಸಿಟಿಯನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಇದೀಗ ಐಪಿಎಲ್​ ಮಾದರಿಯಲ್ಲೇ ಮಹಿಳಾ ಟಿ20 ಲೀಗ್ ಅನ್ನು ಆಯೋಜಿಸಲು ಬಿಸಿಸಿಐ ಬಯಸಿದ್ದು, ಈ ಲೀಗ್​ನ ತಂಡಗಳನ್ನು ಪ್ರಸ್ತುತ ಇರುವ ಐಪಿಎಲ್​ ಫ್ರಾಂಚೈಸಿಗಳೇ ಖರೀದಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಏಕೆಂದರೆ ಈಗಾಗಲೇ ಸಿಎಸ್​ಕೆ ಆಸಕ್ತಿ ಹೊಂದಿದ್ದು, ಅಲ್ಲದೆ ಮುಂಬೈ ಇಂಡಿಯನ್ಸ್ ಕೂಡ ಮಹಿಳಾ ಐಪಿಎಲ್ ತಂಡವನ್ನು ಖರೀದಿಸಲಿದೆ ಎನ್ನಲಾಗಿದೆ. ಹೀಗಾಗಿ ಪ್ರಸ್ತುತ ಇರುವ ಐಪಿಎಲ್ ತಂಡಗಳ ಹೆಸರಿನಲ್ಲೇ ಮಹಿಳಾ ತಂಡಗಳು ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.