CSK vs KKR, IPL 2021 Final: ಚೆನ್ನೈ ಸೂಪರ್ ಕಿಂಗ್ಸ್​ ಹೊಸ ಚಾಂಪಿಯನ್

TV9 Web
| Updated By: ಝಾಹಿರ್ ಯೂಸುಫ್

Updated on:Oct 16, 2021 | 12:05 AM

Chennai Super Kings vs Kolkata Knight Riders: ಉಭಯ ತಂಡಗಳು ಇದುವರೆಗೆ 25 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 17 ಬಾರಿ ಗೆದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 8 ಪಂದ್ಯಗಳನ್ನು ಗೆದ್ದುಕೊಂಡಿದೆ.

CSK vs KKR, IPL 2021 Final: ಚೆನ್ನೈ ಸೂಪರ್ ಕಿಂಗ್ಸ್​ ಹೊಸ ಚಾಂಪಿಯನ್
CSK vs KKR Final

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ಸೀಸನ್​ 14ನಲ್ಲಿ ಎಂ. ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 27 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸಿಎಸ್​ಕೆ 4ನೇ ಬಾರಿ ಟ್ರೋಫಿಗೆ ಮುತ್ತಿಕ್ಕಿತು. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್​  ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸಿಎಸ್​ಕೆ ತಂಡವು ಡುಪ್ಲೆಸಿಸ್ (86) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 192 ರನ್​ಗಳನ್ನು ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ ತಂಡವು ನಿಗದಿತ 20 ಓವರ್​ನಲ್ಲಿ 9 ವಿಕೆಟ್​ ಕಳೆದುಕೊಂಡು 165 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ 27 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಭರ್ಜರಿ ಜಯದೊಂದಿಗೆ ಧೋನಿ ನಾಯಕತ್ವದಲ್ಲಿ ಸಿಎಸ್​ಕೆ ತಂಡವು 4ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯಾನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

LIVE NEWS & UPDATES

The liveblog has ended.
  • 15 Oct 2021 11:24 PM (IST)

    ಭರ್ಜರಿ ಸಿಕ್ಸ್

    ಶಾರ್ದೂಲ್ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ಫರ್ಗುಸನ್

    KKR 162/8 (19)

      

  • 15 Oct 2021 11:21 PM (IST)

    ನೋಬಾಲ್-ಫೋರ್

    ಶಾರ್ದೂಲ್ ಠಾಕೂರ್ ನೋಬಾಲ್ ಎಸೆತಕ್ಕೆ ಬೌಂಡರಿ ಬಾರಿಸಿದ ಫರ್ಗುಸನ್

  • 15 Oct 2021 11:14 PM (IST)

    ವೆಲ್ಕಂ ಬೌಂಡರಿ

    ಬ್ರಾವೊ ಎಸೆತದಲ್ಲಿ ಫೋರ್ ಹಾಗೂ ಭರ್ಜರಿ ಸಿಕ್ಸ್ ಬಾರಿಸಿದ ಶಿವಂ ಮಾವಿ

  • 15 Oct 2021 11:11 PM (IST)

    KKR 127/8 (17)

    ಕ್ರೀಸ್​ನಲ್ಲಿ ಲಾಕಿ ಫರ್ಗುಸನ್ ಹಾಗೂ ಶಿವಂ ಮಾವಿ ಬ್ಯಾಟಿಂಗ್

  • 15 Oct 2021 11:07 PM (IST)

    ಮೊರ್ಗನ್ ಔಟ್

    ಹ್ಯಾಝಲ್​ವುಡ್ ಎಸೆತದಲ್ಲಿ ಮೊರ್ಗನ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ದೀಪಕ್ ಚಹರ್ ಅದ್ಭುತ ಕ್ಯಾಚ್

    KKR 125/8 (16.3)

      

  • 15 Oct 2021 11:04 PM (IST)

    ರಾಹುಲ್ ತ್ರಿಪಾಠಿ ಔಟ್

    KKR 123/7 (15.4)

      

    ಶಾರ್ದೂಲ್ ಠಾಕೂರ್​ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದ ರಾಹುಲ್ ತ್ರಿಪಾಠಿ (2)

  • 15 Oct 2021 10:59 PM (IST)

    ಜಡೇಜಾ ಬ್ಯಾಕ್ ಟು ಬ್ಯಾಕ್ ವಿಕೆಟ್

    KKR 120/6 (15)

    ಜಡೇಜಾ ಓವರ್​ನಲ್ಲಿ ದಿನೇಶ್ ಕಾರ್ತಿಕ್, ಶಕೀಬ್ ಅಲ್ ಹಸನ್ ಔಟ್

  • 15 Oct 2021 10:46 PM (IST)

    KKR 108/4 (13.2)

    ದೀಪಕ್ ಚಹರ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆದ ಶುಭ್​ಮನ್ ಗಿಲ್ (51)

    KKR 108/4 (13.2)

      

  • 15 Oct 2021 10:36 PM (IST)

    ನರೈನ್ ಔಟ್

    ಹ್ಯಾಝಲ್​ವುಡ್ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದ ಸುನಿಲ್ ನರೈನ್ (2)

    KKR 97/3 (11.3)

      

  • 15 Oct 2021 10:31 PM (IST)

    ಬ್ಯಾಕ್ ಟು ಬ್ಯಾಕ್ ವಿಕೆಟ್

    ಶಾರ್ದೂಲ್ ಠಾಕೂರ್​ ಓವರ್​ನಲ್ಲಿ ಮತ್ತೊಂದು ವಿಕೆಟ್​…ಸುಲಭ ಕ್ಯಾಚ್ ನೀಡಿ ಹೊರನಡೆದ ನಿತೀಶ್ ರಾಣಾ (0)

    KKR 93/2 (11)

      

  • 15 Oct 2021 10:29 PM (IST)

    ವೆಂಟಕೇಶ್ ಅಯ್ಯರ್ ಔಟ್

    ಅರ್ಧಶತಕ ಬಾರಿಸಿ ಶಾರ್ದೂಲ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದ ಅಯ್ಯರ್…ಭರ್ಜರಿ ಹೊಡೆತಕ್ಕೆ ಮುಂದಾಗಿ ಜಡೇಜಾಗೆ ಕ್ಯಾಚ್

    KKR 91/1 (10.4)

      

  • 15 Oct 2021 10:25 PM (IST)

    16 ರನ್

    ಜಡೇಜಾ ಒಂದೇ ಓವರ್​ನಲ್ಲಿ 16 ರನ್

    ಸಿಕ್ಸರ್ ಸಿಡಿಸಿದ ಅಯ್ಯರ್, ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    KKR 88/0 (10)

      

  • 15 Oct 2021 10:07 PM (IST)

    7 ಓವರ್ ಮುಕ್ತಾಯ

    KKR 59/0 (7)

      

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Oct 2021 10:01 PM (IST)

    ಪವರ್​ಪ್ಲೇ ಮುಕ್ತಾಯ

    KKR 55/0 (6)

      

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Oct 2021 10:00 PM (IST)

    ಗಿಲ್ ಶಾಟ್

    ದೀಪಕ್ ಚಹರ್​ ಎಸೆತದಲ್ಲಿ ಆಫ್​ ಸೈಡ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಶುಭ್​ಮನ್ ಗಿಲ್

    KKR 53/0 (5.4)

      

  • 15 Oct 2021 09:56 PM (IST)

    ಅಯ್ಯರ್ ಅಬ್ಬರ

    ಶಾರ್ದೂಲ್ ಠಾಕೂರ್​ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಅಯ್ಯರ್

    KKR 47/0 (5)

      

  • 15 Oct 2021 09:50 PM (IST)

    ಗಿಲ್-ಅಯ್ಯರ್ ಭರ್ಜರಿ ಬ್ಯಾಟಿಂಗ್

    ಹ್ಯಾಝಲ್​ವುಡ್​ ಓವರ್​ನಲ್ಲಿ ಎರಡು ಬೌಂಡರಿ ಬಾರಿಸಿದ ಕೆಕೆಆರ್ ಓಪನರ್​ಗಳು

    KKR 36/0 (4)

      

  • 15 Oct 2021 09:48 PM (IST)

    3 ಓವರ್ ಮುಕ್ತಾಯ

    KKR 24/0 (3)

      

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಬ್ಯಾಟಿಂಗ್

  • 15 Oct 2021 09:43 PM (IST)

    ವೆಂಕಿ ಫೋರ್

    ದೀಪಕ್ ಚಹರ್ ಎಸೆತದಲ್ಲಿ ಆಕರ್ಷಕ ಬೌಂಡರಿ ಬಾರಿಸಿದ ವೆಂಕಟೇಶ್ ಅಯ್ಯರ್

    KKR 20/0 (2.4)

      

  • 15 Oct 2021 09:39 PM (IST)

    ಅಯ್ಯರ್ ಅಬ್ಬರ ಶುರು

    ಜೋಶ್ ಹ್ಯಾಝಲ್​ವುಡ್​ ಎಸೆತಕ್ಕೆ ಭರ್ಜರಿ ಪ್ರತ್ಯುತ್ತರ…ವೆಂಕಟೇಶ್ ಅಯ್ಯರ್​ ಬ್ಯಾಟ್​ನಿಂದ ಭರ್ಜರಿ ಸಿಕ್ಸ್

  • 15 Oct 2021 09:35 PM (IST)

    ಶುಭ್​ಮನ್ ಶುಭಾರಂಭ

    ದೀಪಕ್ ಚಹರ್ ಎಸೆತದಲ್ಲಿ ಭರ್ಜರಿ ಬೌಂಡರಿಯೊಂದಿಗೆ ರನ್ ಖಾತೆ ತೆರೆದ ಶುಭ್​ಮನ್ ಗಿಲ್

    KKR 6/0 (1)

      

  • 15 Oct 2021 09:33 PM (IST)

    ಮೊದಲ ಓವರ್

    ಬೌಲಿಂಗ್: ದೀಪಕ್ ಚಹರ್

    ಆರಂಭಿಕರು: ಶುಭ್​ಮನ್ ಗಿಲ್, ವೆಂಕಟೇಶ್ ಅಯ್ಯರ್

  • 15 Oct 2021 09:22 PM (IST)

    ಟಾರ್ಗೆಟ್-193

  • 15 Oct 2021 09:15 PM (IST)

    ಸಿಎಸ್​ಕೆ ಇನಿಂಗ್ಸ್ ಅಂತ್ಯ

    CSK 192/3 (20)

      

  • 15 Oct 2021 09:09 PM (IST)

    ಕೊನೆಯ ಓವರ್ ಬಾಕಿ

    CSK 185/2 (19)

    ಕ್ರೀಸ್​ನಲ್ಲಿ ಮೊಯೀನ್ ಅಲಿ-ಡುಪ್ಲೆಸಿಸ್​ ಬ್ಯಾಟಿಂಗ್

  • 15 Oct 2021 09:08 PM (IST)

    ಅಲಿ ಆರ್ಭಟ

    ಚಕ್ರವರ್ತಿ ಎಸೆತಕ್ಕೆ ಭರ್ಜರಿ ಸ್ಟ್ರೈಟ್ ಹಿಟ್ ಸಿಕ್ಸ್​ ಸಿಡಿಸಿದ ಮೊಯೀನ್ ಅಲಿ

  • 15 Oct 2021 09:07 PM (IST)

    ಅಲಿ ಅಬ್ಬರ

    ವರುಣ್ ಚಕ್ರವರ್ತಿ ಎಸೆತದಲ್ಲಿ ಭರ್ಜರಿ ಬೌಂಡರಿ ಬಾರಿಸಿದ ಮೊಯೀನ್ ಅಲಿ

    CSK 177/2 (18.3)

      

  • 15 Oct 2021 09:04 PM (IST)

    ಡುಪ್ಲೆ-ಸಿಕ್ಸ್

    ಫರ್ಗುಸನ್ ಎಸೆತದಲ್ಲಿ ಕವರ್ಸ್​ನತ್ತ ಭರ್ಜರಿ ಸಿಕ್ಸ್​ ಸಿಡಿಸಿದ ಡುಪ್ಲೆಸಿಸ್

    ಕೊನೆಯ ಎಸೆತದಲ್ಲಿ ಮತ್ತೊಂದು ಫೋರ್

    CSK 172/2 (18)

      

  • 15 Oct 2021 08:59 PM (IST)

    ವಾಟ್ ಎ ಶಾಟ್

    ಮಾವಿ ಎಸೆತದಲ್ಲಿ ಸ್ಟ್ರೈಟ್ ಹಿಟ್ ಭರ್ಜರಿ ಸಿಕ್ಸ್ ಸಿಡಿಸಿದ ಮೊಯೀನ್ ಅಲಿ

    CSK 153/2 (17)

      

  • 15 Oct 2021 08:54 PM (IST)

    ಮೋಯಿನ್ ಅಲಿ ಮ್ಯಾಜಿಕ್

    ಶಿವಂ ಮಾವಿ ಎಸೆತದಲ್ಲಿ ಮೊಯೀನ್ ಅಲಿ ಭರ್ಜರಿ ಹೊಡೆತ…ಚೆಂಡು ಸ್ಟೇಡಿಯಂನತ್ತ…ಸಿಕ್ಸ್

    CSK 145/2 (16.2)

      

  • 15 Oct 2021 08:46 PM (IST)

    15 ಓವರ್​ ಮುಕ್ತಾಯ

    CSK 131/2 (15)

      

    ಕ್ರೀಸ್​ನಲ್ಲಿ ಡುಪ್ಲೆಸಿಸ್​-ಮೊಯೀನ್ ಅಲಿ ಬ್ಯಾಟಿಂಗ್

  • 15 Oct 2021 08:37 PM (IST)

    ರಾಬಿನ್ ಉತ್ತಪ್ಪ ಔಟ್

    ಸುನೀಲ್ ನರೈನ್ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಆಗಿ ಹೊರ ನಡೆದ ರಾಬಿನ್ ಉತ್ತಪ್ಪ (31)

    CSK 124/2 (13.3)

      

  • 15 Oct 2021 08:35 PM (IST)

    ರಾ-ಬಿಗ್ ಉತ್ತಪ್ಪ

    ಸುನೀಲ್ ನರೈನ್ ಎಸೆತದಲ್ಲಿ ಭರ್ಜರಿ ಸಿಕ್ಸ್​ ಸಿಡಿಸಿದ ಉತ್ತಪ್ಪ…ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರೆಸಿದ ರಾಬಿನ್ ಉತ್ತಪ್ಪ

    CSK 124/1 (13.2)

      

  • 15 Oct 2021 08:30 PM (IST)

    ಬಿಗ್ ಉತ್ತಪ್ಪ

    ವರುಣ್ ಚಕ್ರವರ್ತಿ ಎಸೆತಕ್ಕೆ ಭರ್ಜರಿ ಸಿಕ್ಸ್​ ಸಿಡಿಸಿದ ರಾಬಿನ್ ಉತ್ತಪ್ಪ

    CSK 112/1 (12.2)

      

  • 15 Oct 2021 08:28 PM (IST)

    CSK 104/1 (12)

    ಕ್ರೀಸ್​ನಲ್ಲಿ ಡುಪ್ಲೆಸಿಸ್​-ರಾಬಿನ್ ಉತ್ತಪ್ಪ ಬ್ಯಾಟಿಂಗ್

  • 15 Oct 2021 08:25 PM (IST)

    ಅರ್ಧಶತಕ ಪೂರೈಸಿದ ಡುಪ್ಲೆಸಿಸ್

    ಅರ್ಧಶತಕ ಪೂರೈಸಿದ ಡುಪ್ಲೆಸಿಸ್

    35 ಎಸೆತಗಳಲ್ಲಿ ಹಾಫ್​ ಸೆಂಚುರಿ ಬಾರಿಸಿದ ಡುಪ್ಲೆಸಿಸ್

    CSK 99/1 (11.1)

     

  • 15 Oct 2021 08:21 PM (IST)

    ಡುಪ್ಲೆಸಿಸ್ ಆರ್ಭಟ

    ಫರ್ಗುಸನ್ ಎಸೆತಕ್ಕೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದ ಡುಪ್ಲೆಸಿಸ್

    CSK 88/1 (10.3)

     

  • 15 Oct 2021 08:18 PM (IST)

    ಬಿಗ್ ಹಿಟ್

    ಶಕೀಬ್ ಓವರ್​ನಲ್ಲಿ ಎರಡು ಸಿಕ್ಸ್

    ಮೊದಲ ಸಿಕ್ಸ್​ ಡುಪ್ಲೆಸಿಸ್​ ಬ್ಯಾಟ್​ನಿಂದ, 2ನೇ ಸಿಕ್ಸ್​ ರಾಬಿನ್ ಉತ್ತಪ್ಪ ಬ್ಯಾಟ್​ನಿಂದ

    CSK 80/1 (10)

     

  • 15 Oct 2021 08:11 PM (IST)

    ರುತುರಾಜ್ ಗಾಯಕ್ವಾಡ್ ಔಟ್

    ಸುನೀಲ್ ನರೈನ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ನೀಡಿದ ರುತುರಾಜ್ (32)

    CSK 61/1 (8.1)

     

  • 15 Oct 2021 08:06 PM (IST)

    CSK 61/0 (8)

    ಕ್ರೀಸ್​ನಲ್ಲಿ ರುತುರಾಜ್ ಗಾಯಕ್ವಾಡ್-ಫಾಫ್ ಡುಪ್ಲೆಸಿಸ್​ ಬ್ಯಾಟಿಂಗ್

  • 15 Oct 2021 07:59 PM (IST)

    ಪವರ್​ಪ್ಲೇ ಮುಕ್ತಾಯ

    CSK 50/0 (6)

      

    ಕ್ರೀಸ್​ನಲ್ಲಿ ಡುಪ್ಲೆಸಿಸ್​-ರುತುರಾಜ್ ಬ್ಯಾಟಿಂಗ್

  • 15 Oct 2021 07:58 PM (IST)

    ಫ್ರೀಹಿಟ್​

    ವರುಣ್ ಚಕ್ರವರ್ತಿ ಲೈನ್ ನೋಬಾಲ್… ಫ್ರೀಹಿಟ್ ಎಸೆತಕ್ಕೆ ಬೌಂಡರಿ ಬಾರಿಸಿದ ಡುಪ್ಲೆಸಿಸ್​

  • 15 Oct 2021 07:54 PM (IST)

    ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್

    ಶಿವಂ ಮಾವಿ ಎಸೆತಕ್ಕೆ ಭರ್ಜರಿ ಬೌಂಡರಿ ಸಿಡಿಸಿದ ಡುಪ್ಲೆಸಿಸ್​

    CSK 42/0 (5)

      

  • 15 Oct 2021 07:49 PM (IST)

    ಡುಪ್ಲೆಸಿಸ್​ ಟಾಪ್ ಶಾಟ್

    ಫರ್ಗುಸನ್ ಎಸೆತದಲ್ಲಿ ಕವರ್ಸ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ಡುಪ್ಲೆಸಿಸ್

    CSK 34/0 (4)

      

  • 15 Oct 2021 07:47 PM (IST)

    ಬ್ಯೂಟಿಫುಲ್ ಶಾಟ್

    ಫರ್ಗುಸನ್ ಎಸೆತದಲ್ಲಿ ಡೀಪ್ ಬ್ಯಾಕ್​ವರ್ಡ್​ ಪಾಯಿಂಟ್​ನತ್ತ ಆಕರ್ಷಕ ಬೌಂಡರಿ ಬಾರಿಸಿದ ರುತುರಾಜ್

  • 15 Oct 2021 07:44 PM (IST)

    3 ಓವರ್ ಮುಕ್ತಾಯ

    CSK 22/0 (3)

    ಕ್ರೀಸ್​ನಲ್ಲಿ ರುತುರಾಜ್-ಡುಪ್ಲೆಸಿಸ್​ ಬ್ಯಾಟಿಂಗ್

      

  • 15 Oct 2021 07:43 PM (IST)

    ಸಿಸಿಸಿಸಿಸಿಕ್ಸ್​

    ಶಕೀಬ್ ಎಸೆತದಲ್ಲಿ ಡೀಪ್ ಮಿಡ್​ ವಿಕೆಟ್​ನತ್ತ ಭರ್ಜರಿಯಾಗಿ ಬಾರಿಸಿದ ರುತುರಾಜ್…ಸಿಕ್ಸ್

    CSK 20/0 (2.4)

      

  • 15 Oct 2021 07:42 PM (IST)

    ರುತುರಾಜ್ ಸೂಪರ್ ಶಾಟ್

    ಶಕೀಬ್ ಎಸೆತವನ್ನು ಸ್ಕ್ವೇರ್​ ಲೆಗ್​ನತ್ತ ಬಾರಿಸಿ ಬೌಂಡರಿಗಿಟ್ಟಿಸಿಕೊಂಡ ರುತುರಾಜ್

  • 15 Oct 2021 07:41 PM (IST)

    2 ಓವರ್ ಮುಕ್ತಾಯ

    CSK 9/0 (2)

      

  • 15 Oct 2021 07:34 PM (IST)

    ಮೊದಲ ಬೌಂಡರಿ

    ಶಕೀಬ್ ಎಸೆತಕ್ಕೆ ಲೆಗ್​ ಸೈಡ್​ನತ್ತ ಬೌಂಡರಿ ಬಾರಿಸಿದ ರುತುರಾಜ್

    CSK 6/0 (1)

     

  • 15 Oct 2021 07:32 PM (IST)

    ಮೊದಲ ಓವರ್

    ಬೌಲಿಂಗ್: ಶಕೀಬ್ ಅಲ್ ಹಸನ್

    ಆರಂಭಿಕರು: ರುತುರಾಜ್ ಗಾಯಕ್ವಾಡ್-ಡುಪ್ಲೆಸಿಸ್​

  • 15 Oct 2021 07:15 PM (IST)

    ಕಣಕ್ಕಿಳಿಯುವ ಕಲಿಗಳು

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯಾನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 15 Oct 2021 07:13 PM (IST)

    ಟಾಸ್ ವಿಡಿಯೋ

  • 15 Oct 2021 07:05 PM (IST)

    ಸಿಎಸ್​ಕೆ ಪ್ಲೇಯಿಂಗ್ 11

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಅಂಬಟಿ ರಾಯುಡು, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಡ್ವೇನ್ ಬ್ರಾವೋ, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

  • 15 Oct 2021 07:04 PM (IST)

    ಕೆಕೆಆರ್​ ಪ್ಲೇಯಿಂಗ್ 11

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಇಯಾನ್ ಮೊರ್ಗನ್ (ನಾಯಕ), ಶಕೀಬ್ ಅಲ್ ಹಸನ್, ಸುನಿಲ್ ನರೈನ್, ಲಾಕಿ ಫರ್ಗುಸನ್, ಶಿವಂ ಮಾವಿ, ವರುಣ್ ಚಕ್ರವರ್ತಿ

  • 15 Oct 2021 07:03 PM (IST)

    ಟಾಸ್ ಗೆದ್ದ ಕೆಕೆಆರ್​: ಬೌಲಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್ ನಾಯಕ ಇಯಾನ್ ಮೊರ್ಗನ್​  ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

  • 15 Oct 2021 06:58 PM (IST)

    ಉಭಯ ತಂಡಗಳ ಮುಖಾಮುಖಿ ಅಂಕಿ ಅಂಶಗಳು

  • Published On - Oct 15,2021 6:52 PM

    Follow us
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    ‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
    ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?