CSK vs KKR Highlights IPL 2023: ರಿಂಕು- ರಾಣಾ ಅರ್ಧಶತಕ; ಚೆನ್ನೈಗೆ ಮಣ್ಣು ಮುಕ್ಕಿಸಿದ ಕೆಕೆಆರ್
Chennai Super Kings vs Kolkata Knight Riders IPL 2023 Highlights in Kannada: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿದೆ. ಇದರೊಂದಿಗೆ ಚೆನ್ನೈ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಿಗಧಿತ 20 ಓವರ್‌ಗಳ ಅಂತ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕೆಕೆಆರ್ ರಿಂಕು ಹಾಗೂ ರಾಣಾ ಅವರ ಅರ್ಧಶತಕದ ನೆರವಿನಿಂದ ಚೆನ್ನೈ ವಿರುದ್ಧ ಸುಲಭ ಜಯ ದಾಖಲಿಸಿತು.
LIVE NEWS & UPDATES
-
ಕೋಲ್ಕತ್ತಾಗೆ ಗೆಲುವು
ಕೋಲ್ಕತ್ತಾ ತಂಡ ಚೆನ್ನೈ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಕೋಲ್ಕತ್ತಾ ತಂಡ 18.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 145 ರನ್ ಗಳಿಸಿತ್ತು. ಕೋಲ್ಕತ್ತಾ ಪರ ರಿಂಕು ಸಿಂಗ್ 54 ಮತ್ತು ನಾಯಕ ನಿತೀಶ್ ರಾಣಾ ಅಜೇಯ 57 ರನ್ ಗಳಿಸಿ ತಂಡವನ್ನು ಗೆಲ್ಲಿಸಿದರು.
-
ರಿಂಕು ಸಿಂಗ್ ಔಟ್
ರಿಂಕು ಸಿಂಗ್ ಔಟಾಗಿದ್ದಾರೆ. 18ನೇ ಓವರ್‌ನ ಮೊದಲ ಎಸೆತದಲ್ಲಿ, ಮೊಯಿನ್ ಅಲಿ ನೇರ ಎಸೆತದಲ್ಲಿ ರಿಂಕು ಅವರನ್ನು ರನೌಟ್ ಮಾಡಿದರು ಆದರೆ ಅವರು ಔಟಾಗುವ ಮೊದಲು ತಮ್ಮ ಕೆಲಸವನ್ನು ಮಾಡಿದ್ದರು.
ರಿಂಕು ಸಿಂಗ್ – 54 ರನ್, 43 ಎಸೆತಗಳು 4×4 3×6
-
ರಿಂಕು ಅರ್ಧಶತಕ
16ನೇ ಓವರ್ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ರಿಂಕು ತಮ್ಮ ಅರ್ಧಶತಕ ಪೂರೈಸಿದರು.
ರಾಣಾ ಫೋರ್
ತೀಕ್ಷಣ ಬೌಲ್ ಮಾಡಿದ 15ನೇ ಓವರ್‌ನ ಮೊದಲ 2 ಎಸೆತಗಳನ್ನು ರಾಣಾ ಬೌಂಡರಿಗಟ್ಟಿದರು
15 ಓವರ್ ಅಂತ್ಯಕ್ಕೆ 117/3
ಕೆಕೆಆರ್ ಶತಕ ಪೂರ್ಣ
14ನೇ ಓವರ್ನ ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದ ರಿಂಕು ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಅಲಿ ದುಬಾರಿ
13ನೇ ಓವರ್ ಬೌಲ್ ಮಾಡಿದ ಅಲಿ ಈ ಓವರ್ನಲ್ಲಿ 12 ರನ್ ಬಿಟ್ಟುಕೊಟ್ಟರು
ಈ ಓವರ್ನ 2 ಮತ್ತು 3ನೇ ಎಸೆತವನ್ನು ರಾಣಾ ಬೌಂಡರಿಗಟ್ಟಿದ್ದರು.
ಕೆಕೆಆರ್ 96/3
ರಾಣಾ ಬೌಂಡರಿ
11ನೇ ಓವರ್‌ನ ಮೊದಲ ಎಸೆತದಲ್ಲಿ ರಾಣಾ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು.
ಕೆಕೆಆರ್ 75/3
ರಿಂಕು 2 ಬೌಂಡರಿ
ಅಲಿ ಬೌಲ್ ಮಾಡಿದ 9ನೇ ಓವರ್ನಲ್ಲಿ ರಿಂಕು 2 ಬೌಂಡರಿ ಬಾರಿಸಿದರು.
9 ಓವರ್ ಅಂತ್ಯಕ್ಕೆ ಕೆಕೆಆರ್ 63/3
ಕೆಕೆಆರ್ ಅರ್ಧಶತಕ ಪೂರ್ಣ
8ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದ ರಾಣಾ ಕೆಕೆಆರ್ ತಂಡವನ್ನು 50ರ ಗಡಿ ದಾಟಿಸಿದರು.
8 ಓವರ್ ಅಂತ್ಯಕ್ಕೆ 53/3
ರಿಂಕು ಸಿಕ್ಸ್
ಪವರ್ ಪ್ಲೇಯ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ರಿಂಕು ಲಾಂಗ್ ಆಫ್ನಲ್ಲಿ ಸಿಕ್ಸರ್ ಬಾರಿಸಿದರು.
ರಾಯ್ ಸಿಕ್ಸರ್, ಔಟ್
ಚಹರ್ ಬೌಲ್ ಮಾಡಿದ 5ನೇ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್ಗಟ್ಟಿದ ರಾಯ್, ಆ ಬಳಿಕ 3ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು.
ಕೆಕೆಆರ್ 3ನೇ ವಿಕೆಟ್ ಪತನ, 33/3
ಅಯ್ಯರ್ ಔಟ್
ದೀಪಕ್ 2ನೇ ವಿಕೆಟ್ ಉರುಳಿಸಿದ್ದಾರೆ.
3ನೇ ಓವರ್ನಲ್ಲಿ 2 ಬೌಂಡರಿ ಬಾರಿಸಿದ ಅಯ್ಯರ್, ಅದೇ ಓವರ್ನಲ್ಲಿ ಕ್ಯಾಚಿತ್ತು ಔಟಾದರು.
ಕೆಕೆಆರ್ 21/2
ಅಯ್ಯರ್ ಫೋರ್
ಚಹರ್ ಬೌಲ್ ಮಾಡಿದ 3ನೇ ಓವರ್ನಲ್ಲಿ ಅಯ್ಯರ್ 2 ಬೌಂಡರಿ ಬಾರಿಸಿದರು.
ರಾಯ್ ಬೌಂಡರಿ
ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್ನ 2ನೇ ಎಸೆತವನ್ನು ರಾಯ್ ಮಿಡ್ ವಿಕೆ್ಟ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದರು.
ಗುರ್ಬಾಜ್ ಔಟ್
ಮೊದಲ ಓವರ್ನಲ್ಲೇ ಕೆಕೆಆರ್ ವಿಕೆಟ್ ಕಳೆದುಕೊಂಡಿದೆ
ಚಹರ್ ಬೌಲ್ ಮಾಡಿದ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಗುರ್ಬಾಜ್ ಕ್ಯಾಚಿತ್ತು ಔಟಾದರು.
ಕೆಕೆಆರ್ 4/1
144 ರನ್ ಟಾರ್ಗೆಟ್
ಕೆಕೆಆರ್ ಬಿಗಿ ಬೌಲಿಂಗ್ ಮುಂದೆ ಮಂಕಾದ ಚೆನ್ನೈ 144 ರನ್ ಟಾರ್ಗೆಟ್ ಸೆಟ್ ಮಾಡಿದೆ. ತಂಡದ ಪರ ದುಬೆ ಅಜೇಯ 48 ರನ್ ಬಾರಿಸಿದರು.
ದುಬೆ ಸಿಕ್ಸ್
ವರುಣ್ ಬೌಲ್ ಮಾಡಿದ 18ನೇ ಓವರ್ನ 3ನೇ ಎಸೆತದಲ್ಲಿ ದುಬೆ ಮಿಡ್ ವಿಕೆಟ್ ಮೇಲೆ ಸಿಕ್ಸರ್ ಬಾರಿಸಿದರು.
ಶತಕ ಪೂರ್ಣ
ಸುಯೇಶ್ ಬೌಲ್ ಮಾಡಿದ 17ನೇ ಓವರ್‌ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದ ದುಬೆ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.
ಅಲ್ಲದೆ ಈ ಓವರ್ನಲ್ಲಿ 2 ಸಿಕ್ಸರ್ ಕೂಡ ಬಂತು
17ನೇ ಓವರ್ ಅಂತ್ಯಕ್ಕೆ 116/5
ದುಬೆ ಬೌಂಡರಿ
ಶಾರ್ದೂಲ್ ಬೌಲ್ ಮಾಡಿದ 15ನೇ ಓವರ್‌ನ ಮೊದಲ ಎಸೆತವನ್ನು ದುಬೆ ಫೈನ್ ಲೆಗ್ನಲ್ಲಿ ಬೌಂಡರಿ ಬಾರಿಸಿದರು.
15 ಓವರ್ ಅಂತ್ಯ
ಚೆನ್ನೈ ಬ್ಯಾಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ
ಬೌಂಡರಿಗಳು ತೀರ ವಿರಳವಾಗಿವೆ
15 ಓವರ್ ಅಂತ್ಯಕ್ಕೆ ಚೆನ್ನೈ 92/5
ದುಬೆ ಸಿಕ್ಸ್
ಸುಯೇಶ್ ಬೌಲ್ ಮಾಡಿದ 12ನೇ ಓವರ್ನ 5ನೇ ಎಸೆತವನ್ನು ದುಬೆ ಡೀಪ್ ಕವರ್ನಲ್ಲಿ ಸಿಕ್ಸರ್ ಬಾರಿಸಿದರು.
ಅಲಿ ಕೂಡ ಔಟ್
11ನೇ ಓವರ್ನಲ್ಲೇ ಮತ್ತೊಂದು ವಿಕೆಟ್ ಪತನವಾಗಿದೆ
ರಾಯಡು ವಿಕೆಟ್ ಬಳಿಕ ಬಂದಿದ್ದ ಅಲಿ ಕೂಡ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರು.
ಚೆನ್ನೈ 72/5
ಚೆನ್ನೈ 4ನೇ ವಿಕೆಟ್ ಪತನ
ನರೈನ್ ಬೌಲ್ ಮಾಡಿದ 11ನೇ ಓವರ್‌ನ ಮೊದಲ ಎಸೆತದಲ್ಲೇ ರಾಯುಡು ಕ್ಲೀನ್ ಬೌಲ್ಡ್ ಆದರು.
ಚೆನ್ನೈ 68/4
ಕಾನ್ವೇ ಔಟ್
10ನೇ ಓವರ್ನಲ್ಲಿ ಚೆನ್ನೈ 3ನೇ ವಿಕೆಟ್ ಕಳೆದುಕೊಂಡಿದೆ
ಶಾರ್ದೂಲ್ ಬೌಲ್ ಮಾಡಿದ 10ನೇ ಓವರ್ನ 3ನೇ ಎಸೆತದಲ್ಲಿ ಕಾನ್ವೇ ಕ್ಯಾಚಿತ್ತು ಔಟಾದರು.
ಚೆನ್ನೈ 66/3
ರಹಾನೆ ಔಟ್
ವರುಣ್ ಬೌಲ್ ಮಾಡಿದ 8ನೇ ಓವರ್ನ ಕೊನೆಯ ಎಸೆತದಲ್ಲಿ ರಹಾನೆ ಲಾಂಗ್ ಆಫ್ನಲ್ಲಿ ಕ್ಯಾಚಿತ್ತು ಔಟಾದರು
ಚೆನ್ನೈ 61/2
ಚೆನ್ನೈ ಅರ್ಧಶತಕ ಪೂರ್ಣ
6ನೇ ಓವರ್ನ 2ನೇ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ಕಾನ್ವೇ ಚೆನ್ನೈ ತಂಡವನ್ನು 50ರ ಗಡಿ ದಾಟಿಸಿದರು.
ರಹಾನೆ ಸಿಕ್ಸ್
ರುತುರಾಜ್ ವಿಕೆಟ್ ಬಳಿಕ ಬಂದ ರಹಾನೆ, ರಾಣಾ ಬೌಲ್ ಮಾಡಿದ 5ನೇ ಓವರ್ನ 4ನೇ ಎಸೆತವನ್ನು ಬೌಂಡರಿಗಟ್ಟಿದರೆ, ಕೊನೆಯ ಎಸೆತವನ್ನು ಸಿಕ್ಸರ್ಗಟ್ಟಿದರು.
ಮೊದಲ ವಿಕೆಟ್ ಪತನ
ಚೆನ್ನೈನ ಮೊದಲ ವಿಕೆಟ್ ಪತನಗೊಂಡಿದೆ. ರುತುರಾಜ್ ಗಾಯಕ್ವಾಡ್ ಔಟಾಗಿದ್ದಾರೆ. 3ನೇ ಓವರ್ನ ಮೂರನೇ ಎಸೆತದಲ್ಲಿ ವರುಣ್ ಚಕ್ರವರ್ತಿ ಎಸೆತದಲ್ಲಿ ವೈಭವ್ ಅರೋರಾಗೆ ಕ್ಯಾಚಿತ್ತು ನಿರ್ಗಮಿಸಿದರು.
ಕಾನ್ವೇ ಫೋರ್
ರಾಣಾ ಬೌಲ್ ಮಾಡಿದ 2ನೇ ಓವರ್ನ 3ನೇ ಎಸೆತವನ್ನು ಕಾನ್ವೇ ಡೀಪ್ ಕವರ್ ಪಾಯಿಂಟ್ನಲ್ಲಿ ಬೌಂಡರಿಗಟ್ಟಿದರು.
ಚೆನ್ನೈ ಬ್ಯಾಟಿಂಗ್ ಆರಂಭ
ಅರೋರಾ ಬೌಲ್ ಮಾಡಿದ ಮೊದಲ ಓವರ್ನ 4ನೇ ಎಸೆತವನ್ನು ರುತುರಾಜ್ ಬೌಂಡರಿಗಟ್ಟಿದರು.
ಕೋಲ್ಕತ್ತಾದ ಪ್ಲೇಯಿಂಗ್-11
ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಜ್, ಜೇಸನ್ ರಾಯ್, ಆಂಡ್ರೆ ರಸೆಲ್, ರಿಂಕು ಸಿಂಗ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ವೈಭವ್ ಅರೋರಾ, ಹರ್ಷಿತ್ ರಾಣಾ, ಸುಯಶ್ ಶರ್ಮಾ, ವರುಣ್ ಚಕ್ರವರ್ತಿ
ಚೆನ್ನೈನ ಪ್ಲೇಯಿಂಗ್-11
ಎಂಎಸ್ ಧೋನಿ (ನಾಯಕ/ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಹಿಷ್ ತೀಕ್ಷಣ
ಈ ಪಂದ್ಯದ ಫಲಿತಾಂಶ ಬಹಳ ಮುಖ್ಯ
ಚೆಪಾಕ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸುತ್ತಿದೆ. ಒಂದು ಗೆಲುವು ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ಲೇಆಫ್ ಅನ್ನು ಖಚಿತಪಡಿಸುತ್ತದೆ. ಅದೇ ರೀತಿ ಈ ಸೋಲು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಪ್ಲೇಆಫ್‌ನ ಬಾಗಿಲು ಮುಚ್ಚಲಿದೆ.
ಟಾಸ್ ಗೆದ್ದ ಚೆನ್ನೈ
ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
Published On - May 14,2023 7:01 PM