- Kannada News Photo gallery Cricket photos IPL 2023: Virat Kohli Breaks Kieron Pollard's Most Catches in IPL
IPL 2023: ಫೀಲ್ಡಿಂಗ್ ಮೂಲಕವೇ ದಾಖಲೆ ಬರೆದ ವಿರಾಟ್ ಕೊಹ್ಲಿ
Virat Kohli Records: ವಿಶೇಷ ಎಂದರೆ ಈ ಮೂವರನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಫೀಲ್ಡರ್ ಐಪಿಎಲ್ನಲ್ಲಿ 100 ಕ್ಯಾಚ್ಗಳನ್ನು ಹಿಡಿದಿಲ್ಲ.
Updated on: May 14, 2023 | 6:21 PM

IPL 2023: ಜೈಪುರದ ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ವಿಫಲರಾದರೂ, ಫೀಲ್ಡಿಂಗ್ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.

ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಹೊಡೆತಕ್ಕೆ ಯತ್ನಿಸಿದ್ದರು. ಆದರೆ ಮಿಡ್ಆಫ್ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಅತ್ಯುತ್ತವಾಗಿ ಕ್ಯಾಚ್ ಹಿಡಿಯುವ ಮೂಲಕ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಅದು ಕೂಡ ಪೊಲಾರ್ಡ್ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಹೌದು, ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಫೀಲ್ಡರ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ ದ್ವಿತೀಯ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದರು.

ಮುಂಬೈ ಇಂಡಿಯನ್ಸ್ ಪರ ಆಡಿದ್ದ ಕೀರನ್ ಪೊಲಾರ್ಡ್ ಒಟ್ಟು 103 ಕ್ಯಾಚ್ಗಳನ್ನು ಹಿಡಿದಿದ್ದರು. ಇದೀಗ ಈ ದಾಖಲೆಯನ್ನು ಮುರಿದು ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ.

ಕಿಂಗ್ ಕೊಹ್ಲಿ ಒಟ್ಟು 104 ಕ್ಯಾಚ್ಗಳನ್ನು ಹಿಡಿಯುವ ಮೂಲಕ ಆರ್ಸಿಬಿ ಪರ ಅತ್ಯಧಿಕ ಕ್ಯಾಚ್ ಹಿಡಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಅತೀ ಹೆಚ್ಚು ಕ್ಯಾಚ್ ಹಿಡಿದ 2ನೇ ಫೀಲ್ಡರ್ ಎಂಬ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

ಅಂದರೆ ಐಪಿಎಲ್ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. 204 ಇನಿಂಗ್ಸ್ಗಳಲ್ಲಿ ರೈನಾ ಒಟ್ಟು 109 ಕ್ಯಾಚ್ಗಳನ್ನು ಹಿಡಿದು ಇತಿಹಾಸ ನಿರ್ಮಿಸಿಟ್ಟಿದ್ದಾರೆ.

ಇದೀಗ 233 ಇನಿಂಗ್ಸ್ಗಳಲ್ಲಿ 104 ಕ್ಯಾಚ್ಗಳನ್ನು ಹಿಡಿಯುವ ಮೂಲಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ 2ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಹಾಗೆಯೇ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕೀರನ್ ಪೊಲಾರ್ಡ್ ಇದ್ದು, ವಿಂಡೀಸ್ ಆಟಗಾರ 189 ಐಪಿಎಲ್ ಇನಿಂಗ್ಸ್ಗಳಲ್ಲಿ 103 ಕ್ಯಾಚ್ಗಳನ್ನು ಹಿಡಿದಿದ್ದಾರೆ.

ವಿಶೇಷ ಎಂದರೆ ಈ ಮೂವರನ್ನು ಹೊರತುಪಡಿಸಿದರೆ, ಬೇರೆ ಯಾವುದೇ ಫೀಲ್ಡರ್ ಐಪಿಎಲ್ನಲ್ಲಿ 100 ಕ್ಯಾಚ್ಗಳನ್ನು ಹಿಡಿದಿಲ್ಲ. ಹೀಗಾಗಿಯೇ ಸುರೇಶ್ ರೈನಾ, ವಿರಾಟ್ ಕೊಹ್ಲಿ ಹಾಗೂ ಕೀರನ್ ಪೊಲಾರ್ಡ್ರನ್ನು ಐಪಿಎಲ್ನ ಅತ್ಯುತ್ತಮ ಕ್ಷೇತ್ರರಕ್ಷಕರೆಂದು ಬಣ್ಣಿಸಲಾಗುತ್ತದೆ.
