IPL 2024 Auction: ಬೆನ್ ಸ್ಟೋಕ್ಸ್ ಬದಲಿಯಾಗಿ ಈ ಇಬ್ಬರು ಆಟಗಾರರ ಮೇಲೆ ಕಣ್ಣಿಟ್ಟದೆ ಸಿಎಸ್​ಕೆ

IPL 2024 Auction: ಎಲ್ಲಾ ತಂಡಗಳಂತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಮಿನಿ ಹರಾಜಿನಲ್ಲಿ ತನ್ನ ತಂಡವನ್ನು ಬಲಪಡಿಸಲು ಪ್ರಯತ್ನಿಸಲ್ಲಿದೆ. ತಂಡಕ್ಕೆ ಬೆನ್ ಸ್ಟೋಕ್ಸ್ ಮತ್ತು ಅಂಬಟಿ ರಾಯುಡು ಸ್ಥಾನವನ್ನು ತುಂಬಬಲ್ಲ ಆಟಗಾರರು ಬೇಕಾಗಿದ್ದಾರೆ.

IPL 2024 Auction: ಬೆನ್ ಸ್ಟೋಕ್ಸ್ ಬದಲಿಯಾಗಿ ಈ ಇಬ್ಬರು ಆಟಗಾರರ ಮೇಲೆ ಕಣ್ಣಿಟ್ಟದೆ ಸಿಎಸ್​ಕೆ
ಚೆನ್ನೈ ಸೂಪರ್ ಕಿಂಗ್ಸ್
Follow us
ಪೃಥ್ವಿಶಂಕರ
|

Updated on:Dec 03, 2023 | 3:21 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024 ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಒಟ್ಟು 1,166 ಆಟಗಾರರು ಹರಾಜಿನ ಕಣದಲ್ಲಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಗರಿಷ್ಠ 77 ಸ್ಲಾಟ್‌ಗಳನ್ನು ಹೊಂದಿದ್ದು, ಸಾವಿರಕ್ಕೂ ಅಧಿಕ ಆಟಗಾರರಲ್ಲಿ ತಂಡಗಳು ಖರೀದಿಸುವ ಆ 77 ಆಟಗಾರರು ಯಾರು ಎಂಬುದು ಕುತೂಹಲ ಹೆಚ್ಚಿಸಿದೆ. ಎಲ್ಲಾ ತಂಡಗಳಂತೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ಕೂಡ ಮಿನಿ ಹರಾಜಿನಲ್ಲಿ ತನ್ನ ತಂಡವನ್ನು ಬಲಪಡಿಸಲು ಪ್ರಯತ್ನಿಸಲ್ಲಿದೆ. ತಂಡಕ್ಕೆ ಬೆನ್ ಸ್ಟೋಕ್ಸ್ (Ben Stokes) ಮತ್ತು ಅಂಬಟಿ ರಾಯುಡು (Ambati Rayudu) ಸ್ಥಾನವನ್ನು ತುಂಬಬಲ್ಲ ಆಟಗಾರರು ಬೇಕಾಗಿದ್ದಾರೆ. ಇನ್ನು ಮಿನಿ ಹರಾಜಿನಲ್ಲಿ ಸಿಎಸ್​ಕೆ ಯಾವ ಎರಡು ಆಟಗಾರರ ಮೇಲೆ ಕಣ್ಣಿಟ್ಟಿದೆ ಎಂಬುದನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ಆಕಾಶ್ ಚೋಪ್ರಾ ಬಹಿರಂಗಪಡಿಸಿದ್ದು, ಅವರ ಪ್ರಕಾರ ಸಿಎಸ್‌ಕೆ ತಂಡ ಸ್ಟೋಕ್ಸ್ ಬದಲಿಗೆ ನ್ಯೂಜಿಲೆಂಡ್ ಆಲ್‌ರೌಂಡರ್‌ಗಳಾದ ರಚಿನ್ ರವೀಂದ್ರ ಮತ್ತು ಡೇರಿಲ್ ಮಿಚೆಲ್ ಅವರನ್ನು ನೋಡುತ್ತಿದೆ ಎಂದಿದ್ದಾರೆ.

ಆಕಾಶ್ ಚೋಪ್ರಾ ಹೇಳಿದ್ದೇನು?

ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಈ ಬಗ್ಗೆ ಮಾತನಾಡಿದ ಆಕಾಶ್ ಚೋಪ್ರಾ, ಸಿಎಸ್​ಕೆ ತಂಡಕ್ಕೆ ಆಲ್ ರೌಂಡರ್ ಅಗತ್ಯವಿದೆ. ಹೀಗಾಗಿ ಬೆನ್ ಸ್ಟೋಕ್ಸ್​ಗೆ ರಚಿನ್ ರವೀಂದ್ರ ಪರಿಪೂರ್ಣ ಬದಲಿಯಾಗಬಹುದು. ಅಥವಾ ಡೇರಿಲ್ ಮಿಚೆಲ್ ಬರಬಹುದು ಎಂದಿದ್ದಾರೆ. ರವೀಂದ್ರ ಜಡೇಜಾ , ಪ್ರಶಾಂತ್ ಸೋಲಂಕಿ, ಮೊಯಿನ್ ಅಲಿ ಮತ್ತು ಮಿಚೆಲ್ ಸ್ಯಾಂಟ್ನರ್ ಇರುವುದರಿಂದ ಈ ತಂಡಕ್ಕೆ ಸ್ಪಿನ್ನರ್‌ಗಳ ಅಗತ್ಯವಿಲ್ಲ . ಇವರೆಲ್ಲರ ಉಪಸ್ಥಿತಿಯಿಂದ ತಂಡಕ್ಕೆ ಮತ್ತೊಬ್ಬ ಪರಿಣಿತ ಸ್ಪಿನ್ನರ್ ಬೇಕಿಲ್ಲ.

8 ಆಟಗಾರರನ್ನು ತಂಡದಿಂದ ಕೈಬಿಟ್ಟ ಹಾಲಿ ಚಾಂಪಿಯನ್ ಸಿಎಸ್​ಕೆ..!

ಈಗ ನಾವು ಅಂಬಾಟಿ ರಾಯುಡು ಬದಲಿ ಬಗ್ಗೆ ಮಾತನಾಡಿದರೆ, ಮನೀಶ್ ಪಾಂಡೆ ಅಥವಾ ಕರುಣ್ ನಾಯರ್ ಅವರಂತಹ ಯಾರಾದರೂ ಆಟಗಾರರು ಫ್ರಾಂಚೈಸಿಗೆ ಉತ್ತಮ ಆಯ್ಕೆಯಾಗಬಹುದು ಎಂದು ಚೋಪ್ರಾ ಹೇಳಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅಂಬಾಟಿ ರಾಯುಡು ಬದಲಿಗೆ ಭಾರತದ ಮತ್ತೊಬ್ಬ ಬ್ಯಾಟ್ಸ್‌ಮನ್ ಬೇಕಾಗಬಹುದು ಎಂದು ಅವರು ಹೇಳಿದರು. ಎಂಎಸ್ ಧೋನಿ ತಂಡವು ಮನೀಶ್ ಪಾಂಡೆ ಅಥವಾ ಕರುಣ್ ನಾಯರ್​ಗೆ ಬಲೆಬೀಸಬಹುದು ಎಂದಿದ್ದಾರೆ.

ಸಿಎಸ್​ಕೆ ತಂಡದಿಂದ ಸ್ಟೋಕ್ಸ್ ಬಿಡುಗಡೆ

ವಾಸ್ತವವಾಗಿ ಬೆನ್ ಸ್ಟೋಕ್ಸ್ ಅವರು ಕೆಲಸದ ಹೊರೆಯ ಕಾರಣ ನೀಡಿ ಐಪಿಎಲ್ 2024 ರಿಂದ ಹಿಂದೆ ಸರಿದಿದ್ದರು. ಇದಾದ ನಂತರ ಸಿಎಸ್‌ಕೆ ಅವರನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಪ್ರಸ್ತುತ ಚೆನ್ನೈ ತಂಡ: ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ತುಷಾರ್ ದೇಶಪಾಂಡೆ, ಶಿವಂ ದುಬೆ, ರುತುರಾಜ್ ಗಾಯಕ್ವಾಡ್, ರಾಜವರ್ಧನ್ ಹಂಗೇಕರ್, ರವೀಂದ್ರ ಜಡೇಜಾ, ಅಜಯ್ ಮಂಡಲ್, ಮುಖೇಶ್ ಚೌಧರಿ, ಮತಿಶ ಪತಿರಾನ, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.

ಬಿಡುಗಡೆಯಾದ ಆಟಗಾರರ ಪಟ್ಟಿ: ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ಡ್ವೇನ್ ಪ್ರಿಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಸಿಸಂದ ಮಗಲಾ, ಕೈಲ್ ಜೇಮಿಸನ್, ಆಕಾಶ್ ಸಿಂಗ್.

ಚೆನ್ನೈ ಬಳಿ ಉಳಿದಿರುವ ಹಣ: 32.2 ಕೋಟಿ ರೂ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Sun, 3 December 23