ಅತ್ಯಾಚಾರ ಪ್ರಕರಣದಲ್ಲಿ ಲಂಕಾ ಕ್ರಿಕೆಟಿಗನಿಗೆ ಜಾಮೀನು; 1 ಕೋಟಿ ರೂ. ಠೇವಣಿ.. ಹಲವಾರು ಷರತ್ತು..!

Danushka Gunathilaka: ಟಿಂಡರ್ ಅಥವಾ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸದಿರುವುದು ಸೇರಿದಂತೆ ವಿವಿಧ ಷರತ್ತುಗಳನ್ನು ಸಹ ವಿಧಿಸಲಾಗಿದೆ.

ಅತ್ಯಾಚಾರ ಪ್ರಕರಣದಲ್ಲಿ ಲಂಕಾ ಕ್ರಿಕೆಟಿಗನಿಗೆ ಜಾಮೀನು; 1 ಕೋಟಿ ರೂ. ಠೇವಣಿ.. ಹಲವಾರು ಷರತ್ತು..!
Danushka Gunathilaka
Follow us
TV9 Web
| Updated By: ಪೃಥ್ವಿಶಂಕರ

Updated on:Nov 17, 2022 | 4:00 PM

ಕೆಲವು ದಿನಗಳ ಹಿಂದೆ ಅತ್ಯಾಚಾರ ಆರೋಪ ಹೊತ್ತು ಆಸ್ಟ್ರೇಲಿಯದಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕಗೆ (Danushka Gunathilaka) ಅಂತಿಮವಾಗಿ ಜಾಮೀನು ಮಂಜೂರಾಗಿದೆ. ಅತ್ಯಾಚಾರದ ಆರೋಪದ ಮೇಲೆ ಗುಣತಿಲಕ ಅವರನ್ನು ನವೆಂಬರ್ 6 ರ ಮಧ್ಯರಾತ್ರಿಯಂದು ಸಿಡ್ನಿಯ ಪೊಲೀಸರು ಹೋಟೆಲ್‌ನಿಂದ ಬಂಧಿಸಿ, ಜೈಲಿಗಟ್ಟಿದ್ದರು. ಈಗ ಗುಣತಿಲಕ ಶ್ರೀಲಂಕಾ ಕ್ರಿಕೆಟ್ (Sri Lanka Cricket) ಸಂಸ್ಥೆ ನೆರವಿನಿಂದ ಜಾಮೀನು ಪಡೆದಿದ್ದು, ಇದಕ್ಕಾಗಿ 1 ಕೋಟಿ ಠೇವಣಿ ಕೂಡ ಇರಿಸಿಕೊಳ್ಳಲಾಗಿದೆ.

ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತನ್ನ ಕೊನೆಯ ಪಂದ್ಯವನ್ನು ಇಂಗ್ಲೆಂಡ್‌ನೊಂದಿಗೆ ಆಡಿದ್ದು, ಅದರಲ್ಲಿ ಸೋಲನ್ನು ಎದುರಿಸಬೇಕಾಯಿತು. ಆದರೆ, ಗುಣತಿಲಕ ಗಾಯದ ಸಮಸ್ಯೆಯಿಂದ ಈ ಪಂದ್ಯಕ್ಕೂ ಮುನ್ನ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಂತರ ಟೀಮ್ ಮ್ಯಾನೇಜ್ ಮೆಂಟ್ ಸಲಹೆ ಮೇರೆಗೆ ಗುಣತಿಲಕ ಅಲ್ಲಿಯೇ ಉಳಿದಿದ್ದರು. ಧನುಷ್ಕಾ ಗುಣತಿಲಕ ಅವರನ್ನು ಡೇಟಿಂಗ್ ಆಪ್ ಮೂಲಕ ಭೇಟಿಯಾದ 29 ವರ್ಷದ ಮಹಿಳೆಯೊಬ್ಬರು ಅತ್ಯಾಚಾರದ ಆರೋಪ ಹೊರಿಸಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ನೀಡಲು ನಿರಾಕರಿಸಿದ್ದ ನ್ಯಾಯಾಲಯ

ಮಹಿಳೆಯ ಆರೋಪದ ನಂತರ ಧನುಷ್ಕಾ ಗುಣತಿಲಕ ಅವರನ್ನು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ಹೋಟೆಲ್‌ನಿಂದ ಬಂಧಿಸಲಾಯಿತು. ಆತನ ಬಂಧನದ ನಂತರ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಜಾಮೀನು ಇಲ್ಲೇ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಆಗ ಕೋರ್ಟ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.

11 ದಿನ ಜೈಲಿನಲ್ಲಿ ವಾಸ

ಆದರೆ, 11 ದಿನಗಳ ಕಾಲ ಜೈಲುವಾಸ ಅನುಭವಿಸಿದ ಗುಣತಿಲಕ ಈಗ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅವರಿಗೆ ಸಿಡ್ನಿಯ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿದೆ. ಈ ಸುದ್ದಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಕೊಂಚ ನೆಮ್ಮದಿ ನೀಡಲಿದೆ. ಏಕೆಂದರೆ ಆಸ್ಟ್ರೇಲಿಯದ ಕಾನೂನಿನ ಪ್ರಕಾರ ಒಂದು ವೇಳೆ ಆರೋಪ ಸತ್ಯವೆಂದು ಸಾಭೀತಾದರೆ ಅವರಿಗೆ ಜೀವವಾದಿ ಶಿಕ್ಷೆ ಖಚಿತವಾಗುತ್ತಿತ್ತು. ಗುಣತಿಲಕಗೆ ಜಾಮೀನೇನೊ ಸಿಕ್ಕಿದೆ. ಆದರೆ, 1 ಕೋಟಿ ರೂ. ಮೊತ್ತವನ್ನು ಅವರು ಠೇವಣಿ ರೂಪದಲ್ಲಿ ನ್ಯಾಯಾಲಯಕ್ಕೆ ಕಟ್ಟಬೇಕಿದೆ. ಹಾಗೆಯೇ ಟಿಂಡರ್ ಅಥವಾ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‌ಗಳನ್ನು ಬಳಸದಿರುವುದು ಸೇರಿದಂತೆ ವಿವಿಧ ಷರತ್ತುಗಳನ್ನು ಸಹ ವಿಧಿಸಲಾಗಿದೆ.

ಇದನ್ನೂ ಓದಿ: ತಂಡದಿಂದ ಉಚ್ಛಾಟನೆ, ಜಾಮೀನು ನಿರಾಕರಣೆ! ಅತ್ಯಾಚಾರ ಆರೋಪ ಹೊತ್ತಿರುವ ಗುಣತಿಲಕಗೆ ಜೀವಾವಧಿ ಶಿಕ್ಷೆ?

ಸಂತ್ರಸ್ತೆಯ ದೂರಿನಲ್ಲಿ ಏನಿತ್ತು?

ಅತ್ಯಾಚಾರದ ಆರೋಪ ಹೊರಿಸಿದ್ದ ಮಹಿಳೆ ತಾನು ನೀಡಿದ್ದ ದೂರಿನಲ್ಲಿ, ನಾನು ಹಾಗೂ ಶ್ರೀಲಂಕಾ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಟಿಂಡರ್‌ ಆಪ್​ನಲ್ಲಿ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡಿದ್ದೇವು. ಆ ಬಳಿಕ ಇಬ್ಬರು ಡೇಟಿಂಗ್​ಗಾಗಿ ಭೇಟಿಯಾದವು. ಲೈಂಗಿಕ ಕ್ರಿಯೆ ವೇಳೆ ಗುಣತಿಲಕ ಕಾಂಡೋಮ್ ಧರಿಸಲು ನಿರಾಕರಿಸಿದನು. ಹಾಗೆಯೇ ನಾನು ಕಾಂಡೋಮ್ ಧರಿಸುವಂತೆ ಒತ್ತಾಯಿಸಿದಾಗ ಅವರು ನನ್ನ ಕುತ್ತಿಗೆಯನ್ನು ಮೂರು ಬಾರಿ ಭಿಗಿಯಾಗಿ ಹಿಡಿದುಕೊಂಡು ಉಸಿರುಗಟ್ಟಿಸಲು ಪ್ರಯತ್ನಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆಯೂ ವಿವಾದಗಳಲ್ಲಿ ಭಾಗಿ

ಅಂದಹಾಗೆ, ಧನುಷ್ಕಾ ಗುಣತಿಲ್ಕಾ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ ತನ್ನ ಗೆಳೆಯನೊಂದಿಗೆ ಸೇರಿ ನಾರ್ವೆ ದೇಶದ ಮಹಿಳೆಯ ಮೇಲೆ ಅತ್ಯಾಚಾರದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಡಿ ಅವರನ್ನು 6 ಪಂದ್ಯಗಳಿಂದ ಅಮಾನತುಗೊಳಿಸಲಾಗಿತ್ತು. ಈಗ ಆಸ್ಟ್ರೇಲಿಯದಲ್ಲಿ ಅತ್ಯಾಚಾರದ ಆರೋಪದಲ್ಲಿ ಬಂಧನಕ್ಕೊಳಗಾದ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಗುಣತಿಲಕ ಅವರನ್ನು ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿಷೇಧಿಸಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:44 am, Thu, 17 November 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್