David Warner: ವಿದಾಯದೊಂದಿಗೆ ಕಂಬ್ಯಾಕ್ ಸೂಚನೆ ನೀಡಿದ ಡೇವಿಡ್ ವಾರ್ನರ್

| Updated By: ಝಾಹಿರ್ ಯೂಸುಫ್

Updated on: Jan 02, 2024 | 7:17 AM

David Warner: ಆಸ್ಟ್ರೇಲಿಯಾ ಪರ 161 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ 45.01 ರ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳು ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದರು. ಇದೀಗ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ವಾರ್ನರ್ ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ 3ನೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ಗೂ ವಿದಾಯ ಹೇಳಲಿದ್ದಾರೆ.

David Warner: ವಿದಾಯದೊಂದಿಗೆ ಕಂಬ್ಯಾಕ್ ಸೂಚನೆ ನೀಡಿದ ಡೇವಿಡ್ ವಾರ್ನರ್
David Warner
Follow us on

ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner) ಏಕದಿನ ಕ್ರಿಕೆಟ್​​ಗೆ ವಿದಾಯ ಹೇಳಿದ್ದಾರೆ. ಈ ಬಾರಿಯ ಏಕದಿನ ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಕೊನೆಯ ಬಾರಿ ಕಣಕ್ಕಿಳಿದಿದ್ದ ವಾರ್ನರ್ ಇದೀಗ ದಿಢೀರಣೆ ನಿವೃತ್ತಿ ಘೋಷಿಸಿದ್ದಾರೆ. ಈ ನಿವೃತ್ತಿ ಘೋಷಣೆಯೊಂದಿಗೆ ಕಂಬ್ಯಾಕ್ ಮಾಡುವ ಸೂಚನೆಯನ್ನೂ ಕೂಡ ನೀಡಿರುವುದು ವಿಶೇಷ.

ಅಂದರೆ ಮುಂಬರುವ ಚಾಂಪಿಯನ್ಸ್​ ಟ್ರೋಫಿಯಲ್ಲಿ ಕಣಕ್ಕಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ವಾರ್ನರ್. ಚಾಂಪಿಯನ್ಸ್​ ಟ್ರೋಫಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ನನ್ನ ಅವಶ್ಯಕತೆ ಇದ್ದರೆ ನಾನು 2025 ರಲ್ಲಿ ನಿವೃತ್ತಿಯನ್ನು ಹಿಂಪಡೆಯಲು ಸಿದ್ಧನಿದ್ದೇನೆ ಎಂದು ಡೇವಿಡ್ ವಾರ್ನರ್ ತಿಳಿಸಿದ್ದಾರೆ.

ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್​ ಟ್ರೋಫಿಗಾಗಿ ವಾರ್ನರ್ ಅವರನ್ನು ಆಯ್ಕೆಗೆ ಪರಿಗಣಿಸಿದರೆ ಅವರು ಮತ್ತೊಮ್ಮೆ ಯೆಲ್ಲೋ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಅಂತಹದೊಂದು ನಿರ್ಧಾರ ತೆಗೆದುಕೊಳ್ಳುವುದು ಅನುಮಾನ.

ಏಕೆಂದರೆ ವಾರ್ನರ್ ಅವರ ಪ್ರಸ್ತುತ ವಯಸ್ಸು 37 ವರ್ಷಗಳು. ಮುಂದಿನ ವರ್ಷಕ್ಕೆ ಅದು 38 ಆಗಲಿದೆ. ಇತ್ತ ತಂಡದಲ್ಲಿ ಆರಂಭಿಕರಾಗಿ ಟ್ರಾವಿಸ್ ಹೆಡ್ ಹಾಗೂ ಮಿಚೆಲ್ ಮಾರ್ಷ್ ಇದ್ದಾರೆ. ಇವರಲ್ಲದೆ ಕ್ಯಾಮರೋನ್ ಗ್ರೀನ್ ಕೂಡ ಓಪನರ್ ಆಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಮುಂಬರುವ ಚಾಂಪಿಯನ್ಸ್​ ಟ್ರೋಫಿಗಾಗಿ ವಾರ್ನರ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪರಿಗಣಿಸುವುದು ಅನುಮಾನ ಎಂದೇ ಹೇಳಬಹುದು.

ಹೀಗಾಗಿ ಈ ಬಾರಿಯ ವಿಶ್ವಕಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಆಡಿದ ಪಂದ್ಯವೇ ಡೇವಿಡ್ ವಾರ್ನರ್ ಅವರ ಕೊನೆಯ ಏಕದಿನ ಪಂದ್ಯವಾಗಿರಲಿದೆ.

ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!

ಡೇವಿಡ್ ವಾರ್ನರ್ ವೃತ್ತಿ ಜೀವನ:

ಆಸ್ಟ್ರೇಲಿಯಾ ಪರ 161 ಏಕದಿನ ಇನ್ನಿಂಗ್ಸ್‌ಗಳನ್ನು ಆಡಿರುವ ವಾರ್ನರ್ 45.01 ರ ಸರಾಸರಿಯಲ್ಲಿ ಒಟ್ಟು 6,932 ರನ್ ಗಳಿಸಿದ್ದಾರೆ. ಈ ವೇಳೆ 22 ಶತಕಗಳು ಮತ್ತು 33 ಅರ್ಧಶತಕಗಳನ್ನು ಬಾರಿಸಿದ್ದರು. ಇದೀಗ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ವಾರ್ನರ್ ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ ನಡೆಯಲಿರುವ 3ನೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ಗೂ ವಿದಾಯ ಹೇಳಲಿದ್ದಾರೆ.