ICC Schedule: 8 ವರ್ಷಗಳಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ..!

ICC Tournament Schedule: 2029ರ (ಭಾರತ) ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಟೂರ್ನಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಅದರಂತೆ ಮುಂಬರುವ 8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದರ ನಡುವೆ 2025 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕೂಡ ಜರುಗಲಿದೆ.

ICC Schedule: 8 ವರ್ಷಗಳಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ..!
ICC Tournament
Follow us
| Updated By: ಝಾಹಿರ್ ಯೂಸುಫ್

Updated on: Jan 02, 2024 | 7:45 AM

2024 ರಿಂದ 2031 ರವರೆಗೆ ನಡೆಯಲಿರುವ ವಿಶ್ವಕಪ್ (World Cup) ಸೇರಿದಂತೆ ಪ್ರಮುಖ ಟೂರ್ನಿಗಳ ಆತಿಥೇಯ ರಾಷ್ಟ್ರಗಳ ಪಟ್ಟಿಯನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. 2024-2031ರ ಅವಧಿಯಲ್ಲಿ ಒಟ್ಟು 8 ಟೂರ್ನಿಗಳು ನಡೆಯಲಿದ್ದು, ಅದರಲ್ಲಿ ಎರಡು ಏಕದಿನ ವಿಶ್ವಕಪ್, ನಾಲ್ಕು ಟಿ20 ವಿಶ್ವಕಪ್ ಹಾಗೂ ಎರಡು ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ.

ಈ ಟೂರ್ನಿಯನ್ನು ಆಯೋಜಿಸಲು ಐಸಿಸಿಯ 11 ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮೂರು ಸಹಾಯಕ ಸದಸ್ಯ ರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ 2024 ರ ಟಿ20 ವಿಶ್ವಕಪ್ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜನೆಯಾಗಲಿದೆ.

ಹಾಗೆಯೇ 2025ರಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್​ ಟ್ರೋಫಿ ನಡೆಯಲಿದೆ. ಇನ್ನು 2026ರ ಟಿ20 ವಿಶ್ವಕಪ್​ ಅನ್ನು ಶ್ರೀಲಂಕಾ ಹಾಗೂ ಭಾರತ ಜಂಟಿಯಾಗಿ ಆಯೋಜಿಸಲಿದೆ. 2027ರ ಏಕದಿನ ವಿಶ್ವಕಪ್​ಗೆ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾ ಜಂಟಿಯಾಗಿ ಆತಿಥ್ಯವಹಿಸಲಿದೆ.

2028ರ ಟಿ20 ವಿಶ್ವಕಪ್​ ಅನ್ನು ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸಲಿದೆ. 2029ರ ಚಾಂಪಿಯನ್ಸ್​ ಟ್ರೋಫಿ ಭಾರತದಲ್ಲಿ ನಡೆಯಲಿದ್ದು, ಹಾಗೆಯೇ 2030ರ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್-ಐರ್ಲೆಂಡ್-ಸ್ಕಾಟ್ಲೆಂಡ್ ಆತಿಥ್ಯವಹಿಸಲಿದೆ. ಅದೇ ರೀತಿ 2031 ಏಕದಿನ ವಿಶ್ವಕಪ್​ ಅನ್ನು ಭಾರತ ಹಾಗೂ ಬಾಂಗ್ಲಾದೇಶದಲ್ಲಿ ನಡೆಸಲಾಗುತ್ತದೆ. ಈ ಮೂಲಕ ಐಸಿಸಿ ಮುಂದಿನ ಟೂರ್ನಿಗಳನ್ನು ನೆರೆಹೊರೆ ದೇಶಗಳಲ್ಲಿ ಜಂಟಿಯಾಗಿ ಆಯೋಜಿಸಲು ನಿರ್ಧರಿಸಿದೆ.

2029ರ (ಭಾರತ) ಚಾಂಪಿಯನ್ಸ್​ ಟ್ರೋಫಿಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ಟೂರ್ನಿಗಳು ಜಂಟಿಯಾಗಿ ಆಯೋಜನೆಗೊಳ್ಳಲಿರುವುದು ವಿಶೇಷ. ಅದರಂತೆ ಮುಂಬರುವ 8 ವರ್ಷದಲ್ಲಿ 6 ವಿಶ್ವಕಪ್, 2 ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಇದರ ನಡುವೆ 2025 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಕೂಡ ಜರುಗಲಿದೆ.

ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!

ಐಸಿಸಿ ಟೂರ್ನಿ ವೇಳಾಪಟ್ಟಿ:

  • 2024- ಟಿ20 ವಿಶ್ವಕಪ್ (ಅಮೆರಿಕ-ವೆಸ್ಟ್ ಇಂಡೀಸ್)
  • 2025- ಚಾಂಪಿಯನ್ಸ್​ ಟ್ರೋಫಿ (ಪಾಕಿಸ್ತಾನ್)
  • 2026- ಟಿ20 ವಿಶ್ವಕಪ್ (ಭಾರತ-ಶ್ರೀಲಂಕಾ)
  • 2027- ಏಕದಿನ ವಿಶ್ವಕಪ್ (ಸೌತ್ ಆಫ್ರಿಕಾ, ಝಿಂಬಾಬ್ವೆ, ನಮೀಬಿಯಾ)
  • 2028- ಟಿ20 ವಿಶ್ವಕಪ್ (ಆಸ್ಟ್ರೇಲಿಯಾ, ನ್ಯೂಝಿಲೆಂಡ್)
  • 2029- ಚಾಂಪಿಯನ್ಸ್​ ಟ್ರೋಫಿ (ಭಾರತ)
  • 2030- ಟಿ20 ವಿಶ್ವಕಪ್ (ಇಂಗ್ಲೆಂಡ್, ಐರ್ಲೆಂಡ್, ಸ್ಕಾಟ್ಲೆಂಡ್​)
  • 2031- ಏಕದಿನ ವಿಶ್ವಕಪ್ (ಭಾರತ, ಬಾಂಗ್ಲಾದೇಶ್)