ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ಮೈದಾನದಲ್ಲಿನ ವೀರಾವೇಶಕ್ಕೆ ಹೆಸರುವಾಸಿ. ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುವ ವಾರ್ನರ್, ಅದ್ಭುತ ಫೀಲ್ಡರ್ ಎಂಬುದು ಗೊತ್ತಿರುವ ವಿಚಾರ. ಇದೀಗ ತಮ್ಮ 35 ವಯಸ್ಸಿನಲ್ಲಿ ಹಿಡಿದಿರುವ ಸೂಪರ್ ಮ್ಯಾನ್ ಕ್ಯಾಚ್ವೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಂಗಳವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾರ್ನರ್ ಈ ಅದ್ಭುತ ಕ್ಯಾಚ್ ಹಿಡಿಇದ್ದಾರೆ. ಶ್ರೀಲಂಕಾದ ಇನ್ನಿಂಗ್ಸ್‌ನ 16 ನೇ ಓವರ್‌ನಲ್ಲಿ, ಧನಂಜಯ ಡಿ ಸಿಲ್ವಾ ಆಷ್ಟನ್ ಅಗರ್ ಮಿಡ್ ಆನ್‌ನತ್ತ ಬಾರಿಸಿದ್ದರು. ಆದರೆ ಅಲ್ಲೇ ಫೀಲ್ಡಿಂಗ್ನಲ್ಲಿ ವಾರ್ನರ್ ಬಲಕ್ಕೆ ಓಡಿ ಅಧ್ಭುತವಾಗಿ ಜಿಗಿಯುವ ಮೂಲಕ ಎಡಗೈಯಲ್ಲಿ ಚೆಂಡನ್ನು ಬಂಧಿಸಿದರು. ಅಲ್ಲಿಗೆ ಧನಂಜಯ ಡಿಸಿಲ್ವಾ ಇನಿಂಗ್ಸ್ ಅಂತ್ಯವಾಯಿತು.
Brilliant catch by David Warner ♥️#SLvAUS pic.twitter.com/PBC3xV5P6D
ಇದನ್ನೂ ಓದಿ— Umair Khan (@UmairKhWorld) June 14, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಕುಸಾಲ್ ಮೆಂಡಿಸ್ ಅವರ ಅಜೇಯ 86 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿತು. ಈ ಬೃಹತ್ ಮೊತ್ತವನ್ನು ಚೇಸ್ ಮಾಡಲು ಹೊರಟಾಗ ಮಳೆ ಬಂದಿದ್ದರಿಂದ ಆಸ್ಟ್ರೇಲಿಯಾಗೆ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 44 ಓವರ್ಗಳಲ್ಲಿ 282 ರನ್ಗಳ ಟಾರ್ಗೆಟ್ ನೀಡಲಾಯಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರಿಸಿದ್ದರು. 51 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ನೊಂದಿಗೆ 80 ರನ್ ಬಾರಿಸುವ ಮೂಲಕ 42.3 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಆಸ್ಟ್ರೇಲಿಯಾ ತಂಡವು ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಶ್ರೀಲಂಕಾ ವಿರುದ್ದದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.