ಯುವ ಕ್ರಿಕೆಟಿಗ ಅಶುತೋಷ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಒಂದು ವಿಕೆಟ್ನಿಂದ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಸೋಮವಾರ ವಿಶಾಖಪಟ್ಟಣದಲ್ಲಿ ನಡೆದ ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ, ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಅವರ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ನಿಂದಾಗಿ 20 ಓವರ್ಗಳಲ್ಲಿ ಎಂಟು ವಿಕೆಟ್ಗಳ ನಷ್ಟಕ್ಕೆ 209 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ದೆಹಲಿ ತಂಡ 19.3 ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು.
ಅಶುತೋಷ್ ಶರ್ಮಾ ಕೊನೆಗೂ ದೆಹಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಸಿಕ್ಸರ್ ಬಾರಿಸುವ ಮೂಲಕ ಲಕ್ನೋದಿಂದ ಪಂದ್ಯವನ್ನು ಕಸಿದುಕೊಂಡಿದ್ದಾರೆ. ಈ ಪಂದ್ಯವನ್ನು ಡೆಲ್ಲಿ ಒಂದು ವಿಕೆಟ್ನಿಂದ ಗೆದ್ದುಕೊಂಡಿದೆ.
19ನೇ ಓವರ್ನಲ್ಲಿ ಅಶುತೋಷ್ ವರ್ಮಾ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಈಗ 6 ಎಸೆತಗಳಲ್ಲಿ 6 ರನ್ಗಳು ಬೇಕಾಗಿವೆ.
ಅಶುತೋಷ್ ವರ್ಮಾ ಮತ್ತೊಮ್ಮೆ ಪಂದ್ಯಕ್ಕೆ ತಿರುವು ನೀಡಿದ್ದಾರೆ. ರವಿ ಬಿಷ್ಣೋಯ್ ಅವರ ಓವರ್ನಲ್ಲಿ 2 ಸಿಕ್ಸರ್ ಸಹಿತ 17 ರನ್ ಗಳಿಸಿದರು.ಈ ಆಟಗಾರ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ 7ನೇ ವಿಕೆಟ್ ಕಳೆದುಕೊಂಡಿತು, ವಿಪ್ರಜ್ ನಿಗಮ್ 39 ರನ್ ಗಳಿಸಿ ಔಟಾದರು. ದಿಗ್ವೇಶ್ ರಥಿ ವಿಕೆಟ್ ಪಡೆದರು.
ಅಶುತೋಷ್ ಮತ್ತು ವಿಪ್ರರಾಜ್ ನಿಗಮ್ ಇಬ್ಬರೂ ಆಟಗಾರರು ಸ್ಫೋಟಕ ಇನ್ನಿಂಗ್ಸ್ ಆಡುತ್ತಿದ್ದಾರೆ. 19 ಎಸೆತಗಳಲ್ಲಿ 50 ರನ್ಗಳ ಪಾಲುದಾರಿಕೆ ನಿರ್ಮಿಸಿದ್ದಾರೆ.
ದೆಹಲಿಯ ಆರನೇ ವಿಕೆಟ್ ಪತನವಾಯಿತು, ಟ್ರಿಸ್ಟಾನ್ ಸ್ಟಬ್ಸ್ ಬೌಲ್ಡ್ ಆದರು. ಎಂ. ಸಿದ್ಧಾರ್ಥ್ ವಿಕೆಟ್ ಪಡೆದರು
ಡೆಲ್ಲಿ ಕ್ಯಾಪಿಟಲ್ಸ್ 11.5 ಓವರ್ಗಳಲ್ಲಿ 100 ರನ್ ಪೂರೈಸಿತು.
ಸ್ಟಬ್ಸ್ ಮತ್ತು ಅಶುತೋಷ್ ಡೆಲ್ಲಿ ತಂಡಕ್ಕೆ ಕೊನೆಯ ಭರವಸೆಯಾಗಿ ಉಳಿದಿದ್ದಾರೆ. 9 ಓವರ್ಗಳ ಅಂತ್ಯಕ್ಕೆ ದೆಹಲಿ 5 ವಿಕೆಟ್ಗಳಿಗೆ 83 ರನ್ ಗಳಿಸಿದೆ.
ಮತ್ತೊಂದು ವಿಕೆಟ್… ಈ ಬಾರಿ ರವಿ ಬಿಷ್ಣೋಯ್ ವಿಕೆಟ್ ಪಡೆದರು. ಡು ಪ್ಲೆಸಿಸ್ ಕೂಡ ಔಟ್ ಆಗಿದ್ದಾರೆ. ಅವರು 29 ರನ್ ಗಳಿಸಿ ಔಟಾದರು. ಡೆಲ್ಲಿ ತಂಡದ ಅರ್ಧದಷ್ಟು ಜನರು ಕೇವಲ 40 ಎಸೆತಗಳಲ್ಲಿ ಪೆವಿಲಿಯನ್ ಸೇರಿಕೊಂಡಿದ್ದಾರೆ
ಅಕ್ಷರ್ ಪಟೇಲ್ ವಿಕೆಟ್ ಪತನವಾಯಿತು, ದಿಗ್ವೇಜ್ ಬೌಲಿಂಗ್ನಲ್ಲಿ 22 ರನ್ ಗಳಿಸಿದ್ದ ಅಕ್ಷರ್ ಔಟಾದರು.
ಮೊದಲ ಓವರ್ನಲ್ಲಿ ಶಾರ್ದೂಲ್ ಠಾಕೂರ್ ಎರಡು ವಿಕೆಟ್ ಪಡೆದರೂ, ಮುಂದಿನ ಓವರ್ನಲ್ಲಿ 13 ರನ್ಗಳನ್ನು ನೀಡಿದರು.
ಎರಡನೇ ಓವರ್ನಲ್ಲೂ ದೆಹಲಿಗೆ ಯಶಸ್ಸು ಸಿಕ್ಕಿತು. ಎಡಗೈ ಸ್ಪಿನ್ನರ್ ಸಿದ್ಧಾರ್ಥ್, ರಿಜ್ವಿ ಅವರನ್ನು ಔಟ್ ಮಾಡಿದರು. ವಿಕೆಟ್ ಕೀಪರ್ ಪಂತ್ ಕ್ಯಾಚ್ ಹಿಡಿದರು.
ಶಾರ್ದೂಲ್ ಠಾಕೂರ್ ಮೊದಲ ಓವರ್ನಲ್ಲೇ ಡೆಲ್ಲಿಗೆ ಎರಡು ಹೊಡೆತಗಳನ್ನು ನೀಡಿದ್ದಾರೆ. ಜೇಕ್ ಫ್ರೇಸರ್ ನಂತರ ಬಂದ ಅಭಿಷೇಕ್ ಪೊರೆಲ್ (0) ಕೂಡ ಔಟ್ ಆಗಿದ್ದಾರೆ.
ಮೊದಲ ಓವರ್ನಲ್ಲೇ ಡೆಲ್ಲಿಯ ಮೊದಲ ವಿಕೆಟ್ ಪತನವಾಯಿತು. ಶಾರ್ದುಲ್ ಠಾಕೂರ್ ಎಸೆತದಲ್ಲಿ ಜೇಕ್ ಫ್ರೇಸರ್ ಮೆಕ್ಗರ್ಕ್ (1) ಭಾರಿ ಹೊಡೆತಕ್ಕೆ ಕೈಹಾಕಿ ಕ್ಯಾಚ್ ನೀಡಿದರು.
ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 209 ರನ್ ಗಳಿಸಿತು. ತಂಡದ ಪರ ಪೂರನ್ ಅತಿ ಹೆಚ್ಚು 75 ರನ್ ಗಳಿಸಿದರೆ, ಮಾರ್ಷ್ 72 ರನ್ಗಳ ಇನ್ನಿಂಗ್ಸ್ ಆಡಿದರು. ಡೇವಿಡ್ ಮಿಲ್ಲರ್ 27 ರನ್ ಗಳಿಸಿ ಅಜೇಯರಾಗುಳಿದರು.
ಸ್ಟಾರ್ಕ್ ಲಕ್ನೋಗೆ 7ನೇ ಹೊಡೆತ ನೀಡಿದರು. ಶಹಬಾಜ್ ಅಹ್ಮದ್ 9 ರನ್ ಗಳಿಸಿ ಔಟಾದರು. ಸ್ಟಾರ್ಕ್ಗೆ ಇದು ಎರಡನೇ ವಿಕೆಟ್.
ಕುಲ್ದೀಪ್ ಯಾದವ್ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ ಎರಡು ವಿಕೆಟ್ಗಳನ್ನು ತಮ್ಮ ಖಾತೆಯಲ್ಲಿಟ್ಟುಕೊಂಡಿದ್ದಾರೆ. ಅದ್ಭುತ ಬೌಲಿಂಗ್.
ಕುಲ್ದೀಪ್ ಯಾದವ್ ಓವರ್ ನಲ್ಲಿ ಮತ್ತೊಂದು ವಿಕೆಟ್ ಪತನವಾಯಿತು. ಶಾರ್ದೂಲ್ ಠಾಕೂರ್ ರನ್ ಔಟ್ ಆದರು. ಖಾತೆ ತೆರೆಯಲು ಸಾಧ್ಯವಾಗಲಿಲ್ಲ.
ಕುಲ್ದೀಪ್ ಯಾದವ್ ಮತ್ತೊಂದು ಅದ್ಭುತ ಪ್ರದರ್ಶನ ನೀಡಿ ಆಯುಷ್ ಬಡೋನಿಗೆ ಪೆವಿಲಿಯನ್ಗೆ ಹೋಗುವ ದಾರಿ ತೋರಿಸಿದರು.
ಮಿಚೆಲ್ ಸ್ಟಾರ್ಕ್ ಲಕ್ನೋಗೆ ನಾಲ್ಕನೇ ಹೊಡೆತ ನೀಡಿದರು. ಪೂರನ್ 30 ಎಸೆತಗಳಲ್ಲಿ 75 ರನ್ ಗಳಿಸಿ ಔಟಾದರು. 15 ಓವರ್ಗಳ ನಂತರ ಸ್ಕೋರ್ 170/4.
ಲಕ್ನೋ ಸೂಪರ್ಜೈಂಟ್ಸ್ ತಂಡ 27 ಕೋಟಿ ರೂ.ಗೆ ಖರೀದಿಸಿದ ರಿಷಭ್ ಪಂತ್ 6 ಎಸೆತಗಳಲ್ಲಿ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.
ಮಿಚೆಲ್ ಮಾರ್ಷ್ 72 ರನ್ ಗಳಿಸಿ ಔಟಾದರು. ಮುಖೇಶ್ ಕುಮಾರ್ ವಿಕೆಟ್ ಪಡೆದರು. ಪೂರನ್ ಜೊತೆಗೂಡಿ ಅವರು 42 ಎಸೆತಗಳಲ್ಲಿ 87 ರನ್ ಸೇರಿಸಿದರು.
ಲಕ್ನೋ ಸೂಪರ್ಜೈಂಟ್ಸ್ 10 ಓವರ್ಗಳಲ್ಲಿ 117 ರನ್ ಗಳಿಸಿದೆ. ಮಾರ್ಷ್ 64 ರನ್ ಮತ್ತು ಪುರಾನ್ 35 ರನ್ ಗಳಿಸಿ ಆಡುತ್ತಿದ್ದಾರೆ. ಇಬ್ಬರೂ ಸೇರಿ ಒಟ್ಟು 8 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
ವಿಪ್ರಾಜ್ ನಿಗಮ್ ಅವರ ಓವರ್ನಲ್ಲಿ ನಿಕೋಲಸ್ ಪೂರನ್ ಮತ್ತು ಮಿಚೆಲ್ ಮಾರ್ಷ್ ಒಟ್ಟಾಗಿ ನಾಲ್ಕು ಸಿಕ್ಸರ್ಗಳನ್ನು ಬಾರಿಸಿದರು. 7 ಓವರ್ಗಳ ನಂತರ ಲಕ್ನೋ ತಂಡದ ಸ್ಕೋರ್ 89.
ಪವರ್ ಪ್ಲೇನಲ್ಲಿ ಲಕ್ನೋ 64 ರನ್ ಗಳಿಸಿತು. ಮಿಚೆಲ್ ಮಾರ್ಷ್ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ್ದು, ಐಡೆನ್ ಮಾರ್ಕ್ರಾಮ್ ವಿಕೆಟ್ ಪತನವಾಗಿದೆ
ಲೆಗ್ ಸ್ಪಿನ್ನರ್ ವಿಪ್ರಜ್ ನಿಗಮ್ ಲಕ್ನೋ ಸೂಪರ್ಜೈಂಟ್ಸ್ಗೆ ಮೊದಲ ಹೊಡೆತ ನೀಡಿದರು. ಅವರು ಮಾರ್ಕ್ರಾಮ್ ವಿಕೆಟ್ ಪಡೆದರು.
ಸ್ಟಾರ್ಕ್ ತಮ್ಮ ಎರಡನೇ ಓವರ್ನಲ್ಲಿ 21 ರನ್ಗಳನ್ನು ನೀಡಿದರು. ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ಗಳು ಸಿಡಿದವು. ಲಕ್ನೋ ತಂಡವು ಉತ್ತಮ ಆರಂಭವನ್ನು ಪಡೆದುಕೊಂಡಿದೆ.
ಮೊದಲ ಓವರ್ನಲ್ಲಿ ಅಕ್ಷರ್ ಪಟೇಲ್ ಕೇವಲ ಐದು ರನ್ಗಳನ್ನು ಬಿಟ್ಟುಕೊಟ್ಟರು. ಮಾರ್ಕ್ರಾಮ್ ತಮ್ಮ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರು.
ಜ್ಯಾಕ್ ಫ್ರೇಸರ್-ಮಗಾರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್.
ಐಡೆನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ರಿಷಭ್ ಪಂತ್, ಡೇವಿಡ್ ಮಿಲ್ಲರ್, ಪ್ರಿನ್ಸ್ ಯಾದವ್, ದಿಗ್ವೇಶ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್ ಮತ್ತು ರವಿ ಬಿಷ್ಣೋಯ್.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಲಕ್ನೋ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:01 pm, Mon, 24 March 25