AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs PBKS Highlights IPL 2023; ಪ್ರಭ್​ಸಿಮ್ರಾನ್ ದಾಖಲೆಯ ಶತಕ; ಡೆಲ್ಲಿಗೆ 31 ರನ್ ಸೋಲು

Delhi Capitals vs Punjab kings IPL 2023 Highlights in Kannada: ಐಪಿಎಲ್​ನ 59 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 31 ರನ್​ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

DC vs PBKS Highlights IPL 2023; ಪ್ರಭ್​ಸಿಮ್ರಾನ್ ದಾಖಲೆಯ ಶತಕ; ಡೆಲ್ಲಿಗೆ 31 ರನ್ ಸೋಲು
ಡೆಲ್ಲಿ- ಪಂಜಾಬ್ ಮುಖಾಮುಖಿ
ಪೃಥ್ವಿಶಂಕರ
|

Updated on:May 13, 2023 | 11:08 PM

Share

ಐಪಿಎಲ್​ನ 59 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 31 ರನ್​ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉಭಯ ತಂಡಗಳ ಆಟಗಾರರು ಅಮೋಘ ಆಟ ಪ್ರದರ್ಶಿಸಿದರು. 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ರಭ್​ಸಿಮ್ರಾನ್​ರ ಅಬ್ಬರದ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 167 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 168 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.

LIVE NEWS & UPDATES

The liveblog has ended.
  • 13 May 2023 11:05 PM (IST)

    ಡೆಲ್ಲಿಗೆ ಸೋಲು

    ಆರಂಭದಲ್ಲಿ ಸುಲಭವಾಗಿ ಗುರಿ ಬೆನ್ನಟ್ಟುತ್ತಿದ್ದ ಡೆಲ್ಲಿ ಮಧ್ಯಮ ಓವರ್​ಗಳಲ್ಲಿ ಗಣನೀಯವಾಗಿ ವಿಕೆಟ್ ಕಳೆದುಕೊಂಡ ಫಲವಾಗಿ ನಿಗಧಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿ 31 ರನ್​ಗಳಿಂದ ಸೋಲೊಪ್ಪಿಕೊಂಡಿತು.

  • 13 May 2023 10:54 PM (IST)

    17 ಓವರ್ ಅಂತ್ಯ

    ಡೆಲ್ಲಿ ಇನ್ನಿಂಗ್ಸ್​ನ 17 ಓವರ್ ಮುಗಿದಿದ್ದು ತಂಡದ ಗೆಲುವಿಗೆ 18 ಎಸೆತಗಳಲ್ಲಿ 47 ರನ್ ಬೇಕು

  • 13 May 2023 10:53 PM (IST)

    ಅಮನ್ ಖಾನ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ಏಳನೇ ವಿಕೆಟ್ ಪತನಗೊಂಡಿದೆ. ಅಮನ್ ಖಾನ್ ಔಟಾದರು.16ನೇ ಓವರ್​ನ ನಾಲ್ಕನೇ ಎಸೆತದಲ್ಲಿ ಅಮನ್ ಕ್ಯಾಚ್ ನೀಡಿದರು.

    ಅಮನ್ ಖಾನ್ – 16 ರನ್, 18 ಎಸೆತಗಳು 1×4 1×6

  • 13 May 2023 10:36 PM (IST)

    ಡೆಲ್ಲಿ ಶತಕ ಪೂರ್ಣ

    14ನೇ ಓವರ್​ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ಅಮನ್ ಡೆಲ್ಲಿ ಮೊತ್ತವನ್ನು 100ರ ಗಡಿ ದಾಟಿಸಿದರು.

  • 13 May 2023 10:35 PM (IST)

    ಅಮನ್ ಫೋರ್

    ಚಹರ್ ಬೌಲ್ ಮಾಡಿದ 11ನೇ ಓವರ್​ನ ಮೊದಲ ಎಸೆತದಲ್ಲೇ ಅಮನ್ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಬೌಂಡರಿ ಬಾರಿಸಿದರು.

  • 13 May 2023 10:33 PM (IST)

    ಮನೀಶ್ ಪಾಂಡೆ ಔಟ್

    ಡೆಲ್ಲಿಯ ಮತ್ತೊಂದು ವಿಕೆಟ್ ಬಿದ್ದಿದೆ. ಮನೀಶ್ ಪಾಂಡೆ ಔಟಾಗಿದ್ದಾರೆ. ಹರ್‌ಪ್ರೀತ್ 11ನೇ ಓವರ್‌ನ ಮೊದಲ ಎಸೆತದಲ್ಲಿ ಮನೀಷ್ ಬೌಲ್ಡ್ ಆದರು.

  • 13 May 2023 10:33 PM (IST)

    ಅಕ್ಷರ್ ಪಟೇಲ್ ಔಟ್

    ದೆಹಲಿಯ ಐದನೇ ವಿಕೆಟ್ ಪತನಗೊಂಡಿದೆ. ಅಕ್ಷರ್ ಪಟೇಲ್ ಕೂಡ ಔಟಾಗಿದ್ದಾರೆ. 10ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಚಹಾರ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿದರು.

    ಅಕ್ಷರ್ ಪಟೇಲ್ – 1 ರನ್, 2 ಎಸೆತಗಳು

  • 13 May 2023 10:32 PM (IST)

    ವಾರ್ನರ್ ಔಟ್

    ದೆಹಲಿಗೆ ದೊಡ್ಡ ಹೊಡೆತ ಬಿದ್ದಿದೆ. ಡೇವಿಡ್ ವಾರ್ನರ್ ಔಟಾಗಿದ್ದಾರೆ. ಒಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಹರ್‌ಪ್ರೀತ್ ವಾರ್ನರ್ ಅವರನ್ನು ಎಲ್​ಬಿ ಬಲೆಗೆ ಬೀಳಿಸಿದರು.

    ಡೇವಿಡ್ ವಾರ್ನರ್ – 54 ರನ್, 27 ಎಸೆತಗಳು 10×4 1×6

  • 13 May 2023 10:31 PM (IST)

    ರುಸ್ಸೋ ಔಟ್

    ದೆಹಲಿಯ ಮೂರನೇ ವಿಕೆಟ್ ಪತನವಾಯಿತು. ರಿಲೆ ರುಸ್ಸೋ ಅವರನ್ನು ಹರ್‌ಪ್ರೀತ್ ಬ್ರಾರ್ ಔಟ್ ಮಾಡಿದರು.

    ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ರುಸ್ಸೋ ಸಿಕಂದರ್ ರಜಾ ಕೈಗೆ ಕ್ಯಾಚಿತ್ತು ಔಟಾದರು.

    ರಿಲೆ ರುಸ್ಸೋ – 5 ರನ್, 5 ಎಸೆತಗಳು 1×4

  • 13 May 2023 10:07 PM (IST)

    2ನೇ ವಿಕೆಟ್ ಪತನ

    ಡೆಲ್ಲಿ 2ನೇ ವಿಕೆಟ್ ಕಳೆದುಕೊಂಡಿದೆ

    ಸ್ಫೋಟಕ ಬ್ಯಾಟರ್ ಮಿಚೆಲ್ ಮಾರ್ಷ್ ಕೇವಲ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರು

    ಡೆಲ್ಲಿ 75/2

  • 13 May 2023 10:06 PM (IST)

    ವಾರ್ನರ್ ಅರ್ಧಶತಕ

    8ನೇ ಓಬರ್​ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ವಾರ್ನರ್ ತಮ್ಮ ಅರ್ಧಶತಕ ಪೂರೈಸಿದರು.

  • 13 May 2023 10:01 PM (IST)

    ಸಾಲ್ಟ್ ಔಟ್

    ಬ್ರಾರ್ ಬೌಲ್ ಮಾಡಿದ 7ನೇ ಓವರ್​ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಸಾಲ್ಟ್ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.

    ಡೆಲ್ಲಿ 73/1

  • 13 May 2023 09:55 PM (IST)

    ವಾರ್ನರ್ ಸಿಕ್ಸರ್

    ಅರ್ಶ್​ದೀಪ್ ಬೌಲ್ ಮಾಡಿದ 6ನೇ ಓವರ್​ನ 2ನೇ ಎಸೆತವನ್ನು ಬೌಂಡರಿಗಟ್ಟಿದ ವಾರ್ನರ್, 3ನೇ ಎಸೆತವನ್ನು ಮಿಡ್ ವಿಕೆಟ್​ ಕಡೆ ಸಿಕ್ಸರ್​ಗಟ್ಟಿದರು

    ಈ ಓವರ್ನಲ್ಲಿ 12 ರನ್ ಬಂದವು

    6 ಓವರ್ ಅಂತ್ಯಕ್ಕೆ 65/0

  • 13 May 2023 09:53 PM (IST)

    ಡೆಲ್ಲಿ ಅರ್ಧಶತಕ ಪೂರ್ಣ

    5ನೇ ಓವರ್​ನಲ್ಲೇ ಡೆಲ್ಲಿ ಅರ್ಧಶತಕ ಪೂರೈಸಿತು

    ಈ ಓವರ್​ನಲ್ಲಿ ವಾರ್ನರ್ 2 ಬೌಂಡರಿ ಬಾರಿಸಿದರು

    5 ಓವರ್ ಅಂತ್ಯಕ್ಕೆ 53/0

  • 13 May 2023 09:48 PM (IST)

    4ನೇ ಓವರ್​ನಲ್ಲೂ 2 ಬೌಂಡರಿ

    ಬೌಂಡರಿಗಳಲ್ಲೇ ರನ್ ಕಲೆಹಾಕುತ್ತಿರುವ ವಾರ್ನರ್ 4ನೇ ಓವರ್​ನಲ್ಲೂ 2 ಬೌಂಡರಿ ಹೊಡೆದರು.

    ಈ ಓವರ್​ನಲ್ಲಿ 12 ರನ್ ಬಂದವು

    4 ಓವರ್ ಅಂತ್ಯಕ್ಕೆ 41/0

  • 13 May 2023 09:40 PM (IST)

    3 ಬೌಂಡರಿ

    ಬ್ರಾರ್ ಬೌಲ್ ಮಾಡಿದ 3ನೇ ಓವರ್​ನಲ್ಲಿ ವಾರ್ನರ್ 3 ಬೌಂಡರಿ ಬಾರಿಸಿದರು.

    ಈ ಓವರ್​ನಿಂದ 13 ರನ್ ಬಂದವು

    3 ಓವರ್ ಅಂತ್ಯಕ್ಕೆ 29/0

  • 13 May 2023 09:37 PM (IST)

    ಕರನ್​ಗೆ ಬೌಂಡರಿ

    ಕರನ್ ಬೌಲ್ ಮಾಡಿದ 2ನೇ ಓವರ್​ನ 3ನೇ ಎಸೆತವನ್ನು ವಾರ್ನರ್ ಫೈನ್ ಲೆಗ್​ ಮೇಲೆ ಬೌಂಡರಿ ಬಾರಿಸಿದರು.

  • 13 May 2023 09:31 PM (IST)

    ವಾರ್ನರ್ 2 ಬೌಂಡರಿ

    ರಿಷಿ ಬೌಲ್ ಮಾಡಿದ ಮೊದಲ ಓವರ್​ನ ಮೊದಲ ಎರಡು ಎಸೆತಗಳಲ್ಲಿ ವಾರ್ನರ್ 2 ಬೌಂಡರಿ ಬಾರಿಸಿದರು.

  • 13 May 2023 09:13 PM (IST)

    168 ರನ್ ಟಾರ್ಗೆಟ್

    ಪ್ರಭ್​​ಸಿಮ್ರಾನ್ ಚೊಚ್ಚಲ ಶತಕದ ನೆರವಿನಿಂದಾಗಿ ಪಂಜಾಬ್ 29 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿದೆ. 20ನೇ ಓವರ್​ನಲ್ಲಿ ರಜಾ 1 ಸಿಕ್ಸರ್ ಕೂಡ ಬಾರಿಸಿದರು.

  • 13 May 2023 09:02 PM (IST)

    ಶತಕ ಸಿಡಿಸಿದ ಪ್ರಭ್​​ಸಿಮ್ರಾನ್ ಔಟ್

    18ನೇ ಓವರ್​ನಲ್ಲಿ ಶತಕ ಸಿಡಿಸಿದ ಪ್ರಭ್​​ಸಿಮ್ರಾನ್ 19ನೇ ಓವರ್​ನ 2ನೇ ಎಸೆತದಲ್ಲಿ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಕ್ಯಾಚಿತ್ತು ಔಟಾದರು.

  • 13 May 2023 08:58 PM (IST)

    ಚೊಚ್ಚಲ ಶತಕ ಸಿಡಿಸಿದ ಪ್ರಭ್​​ಸಿಮ್ರಾನ್

    ಖಲೀಲ್ ಬೌಲ್ ಮಾಡಿದ 18ನೇ ಓವರ್​ನ 3 ಮತ್ತು 4ನೇ ಎಸೆತವನ್ನು ಬೌಂಡರಿಗಟ್ಟಿದ ಪ್ರಭ್​ಸಿಮ್ರಾನ್ ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದರು

    ಪ್ರಭ್​ಸಿಮ್ರಾನ್ ಕೇವಲ 61 ಎಸೆತಗಳಲ್ಲಿ ಈ ಶತಕ ಸಿಡಿಸಿದ್ದಾರೆ.

    ಪಂಜಾಬ್ 154/5

  • 13 May 2023 08:53 PM (IST)

    ಬ್ರಾರ್ ಔಟ್

    ಕರನ್ ವಿಕೆಟ್ ಬಳಿಕ ಬಂದಿದ್ದ ಬ್ರಾರ್ ಕೂಡ ಕೇವಲ 2 ರನ್​ಗಳಿಗೆ ವಿಕೆಟ್ ಒಪ್ಪಿಸಿದರು

    ಎಕ್ಸ್​ಟ್ರಾ ಕವರ್ನಲ್ಲಿ ಕ್ಯಾಚಿತ್ತು ಬ್ರಾರ್ ಔಟಾದರು

    ಪಂಜಾಬ್ 141/5

  • 13 May 2023 08:52 PM (IST)

    16 ಓವರ್ ಅಂತ್ಯ

    ಇಶಾಂತ್ ಬೌಲ್ ಮಾಡಿದ 16ನೇ ಓವರ್​ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಪ್ರಭ್​ಸಿಮ್ರಾನ್ ಬೌಂಡರಿ ಬಾರಿಸಿದರು

    ಈ ಓವರ್​ನಲ್ಲಿ 12 ರನ್ ಬಂದವು.

  • 13 May 2023 08:44 PM (IST)

    4ನೇ ವಿಕೆಟ್ ಪತನ

    ಪ್ರವೀಣ್ ದುಬೆ ಬೌಲ್ ಮಾಡಿದ 15ನೇ ಓವರ್​ನಲ್ಲಿ ಪಂಜಾಬ್​ 4ನೇ ವಿಕೆಟ್ ಪತನವಾಗಿದೆ

    ಓವರ್​ನ 4ನೇ ಎಸೆತದಲ್ಲಿ ಕರನ್ ಕ್ಯಾಚಿತ್ತು ಔಟಾದರು.

    ಪಂಜಾಬ್ 117/4

  • 13 May 2023 08:39 PM (IST)

    ಕುಲ್ದೀಪ್​ಗೆ ಸಿಕ್ಸರ್

    ಕುಲ್ದೀಪ್ ಬೌಲ್ ಮಾಡಿದ 13ನೇ ಓವರ್​ನ 3ನೇ ಎಸೆತವನ್ನು ಪ್ರಭ್​ಸಿಮ್ರಾನ್ ಡೀಪ್ ಮಿಡ್ ವಿಕೆಟ್​ನಲ್ಲಿ ಸಿಕ್ಸರ್​ಗಟ್ಟಿದರು.

    ಹಾಗೆಯೇ ಈ ಓವರ್​ನಲ್ಲಿ ಪಂಜಾಬ್ ತಂಡದ ಶತಕ ಕೂಡ ಪೂರ್ಣಗೊಂಡಿತು.

    ಪಂಜಾಬ್ 109/3

  • 13 May 2023 08:31 PM (IST)

    ಪ್ರಭ್​​ಸಿಮ್ರಾನ್ ಅರ್ಧಶತಕ

    13ನೇ ಓವರ್​ನ 3ನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ಪ್ರಭ್​ಸಿಮ್ರಾನ್ ತಮ್ಮ ಅರ್ಧಶತಕ ಪೂರೈಸಿದರು.

    ಇದರೊಂದಿಗೆ ಕರನ್ ಹಾಗೂ ಪ್ರಭ್ಸಿಮ್ರಾನ್ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿತು.

    13 ಓವರ್​ ಅಂತ್ಯಕ್ಕೆ 99/3

  • 13 May 2023 08:27 PM (IST)

    ಪ್ರಭ್​ಸಿಮ್ರಾನ್ ಸಿಕ್ಸ್

    ಮಾರ್ಷ್​ ಬೌಲ್ ಮಾಡಿದ 11ನೇ ಓವರ್​ನ 2ಮತ್ತು 3ನೇ ಎಸೆತದಲ್ಲಿ ಪ್ರಭ್​ಸಿಮ್ರಾನ್ ಸಿಕ್ಸರ್ ಸಿಡಿಸಿದರು

    ಮೊದಲನೇಯದ್ದು ಡೀಪ್ ಸ್ಕ್ವೇರ್​ ಲೆಗ್​ನಲ್ಲಿ ಬಂದರೆ 2ನೇಯದ್ದು ಲಾಂಗ್ ಆನ್​ನಲ್ಲಿ ಬಂತು.

    ಆ ಬಳಿಕ ಬೌಂಡರಿ ಕೂಡ ಬಂತು.

  • 13 May 2023 08:19 PM (IST)

    10 ಓವರ್ ಅಂತ್ಯ

    ಪಂಜಾಬ್ ಇನ್ನಿಂಗ್ಸ್​ನ 10 ಓವರ್​ ಮುಗಿದಿದೆ

    ಇದರಲ್ಲಿ ಪಂಜಾಬ್ 3 ವಿಕೆಟ್ ಕಳೆದುಕೊಂಡು 66 ರನ್ ಬಾರಿಸಿದೆ.

  • 13 May 2023 08:14 PM (IST)

    ಕರನ್ ಫೋರ್

    ಪ್ರವೀಣ್ ದುಬೆ ಬೌಲ್ ಮಾಡಿದ 9ನೇ ಓವರ್​ನ 2ನೇ ಎಸೆತವನ್ನು ಕರನ್ ಎಕ್ಸ್​ಟ್ರಾ ಕವರ್​ನಲ್ಲಿ ಬೌಂಡರಿ ಬಾರಿಸಿದರು.

  • 13 May 2023 08:09 PM (IST)

    ಪಂಜಾಬ್ ಅರ್ಧಶತಕ

    7ನೇ ಓವರ್​ನ 5ನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ಪ್ರಭ್ಸಿಮ್ರಾನ್ ಪಂಜಾಬ್ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.

  • 13 May 2023 08:04 PM (IST)

    ಜಿತೇಶ್ ಶರ್ಮಾ ಔಟ್

    ಜಿತೇಶ್ ಶರ್ಮಾ ಔಟಾಗಿದ್ದಾರೆ. ಇದರೊಂದಿಗೆ ಪಂಜಾಬ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ ಜಿತೇಶ್​ರನ್ನು ಬೌಲ್ಡ್ ಮಾಡಿದರು. ಆರನೇ ಓವರ್​ನ ನಾಲ್ಕನೇ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು.

    ಜಿತೇಶ್ ಶರ್ಮಾ-5 ರನ್, 5 ಎಸೆತಗಳು 1×4

  • 13 May 2023 08:03 PM (IST)

    ಪ್ರಭ್​ಸಿಮ್ರಾನ್ ಸಿಕ್ಸ್

    ಅಕ್ಷರ್ ಬೌಲ್ ಮಾಡಿದ 6ನೇ ಓವರ್​ನ ಮೊದಲ ಎಸೆತದಲ್ಲೇ ಪ್ರಭ್​ಸಿಮ್ರಾನ್ ಬ್ಯಾಕ್​ವರ್ಡ್​ ಪಾಯಿಂಟ್​ನಲ್ಲಿ ಸಿಕ್ಸರ್ ಬಾರಿಸಿದರು.

  • 13 May 2023 07:54 PM (IST)

    ಲಿವಿಂಗ್​ಸ್ಟನ್ ಔಟ್

    5ನೇ ಓವರ್ ಮೊದಲ ಎಸೆತದಲ್ಲಿ ಇಶಾಂತ್ ಶರ್ಮಾ ಲಿವಿಂಗ್​ಸ್ಟನ್ ವಿಕೆಟ್ ಉರುಳಿಸಿದ್ದಾರೆ.

    ಪಂಜಾಬ್ 32/2

  • 13 May 2023 07:47 PM (IST)

    ಪ್ರಭ್​ಸಿಮ್ರಾನ್ ಬೌಂಡರಿ

    ಖಲೀಲ್ ಬೌಲ್ ಮಾಡಿದ 3ನೇ ಓವರ್​ನ 3ನೇ ಎಸೆತದಲ್ಲಿ ಪ್ರಭ್​ಸಿಮ್ರಾನ್ ಶಾರ್ಟ್​ ಥರ್ಡ್​ಮ್ಯಾನ್​ನಲ್ಲಿ ಬೌಂಡರಿ ಬಾರಿಸಿದರು

    ಹಾಗೆಯೇ 5ನೇ ಎಸೆತದಲ್ಲೂ ಮತ್ತೊಂದು ಬೌಂಡರಿ ಬಂತು.

    ಪಂಜಾಬ್ 23/1

  • 13 May 2023 07:41 PM (IST)

    ಧವನ್ ಔಟ್

    ನಾಯಕ ಧವನ್ 2ನೇ ಓವರ್​ನ ಎರಡನೇ ಎಸೆತದಲ್ಲಿ ಔಟಾಗಿದ್ದಾರೆ.

    ಇಶಾಂತ್ ಬೌಲ್ ಮಾಡಿದ ಈ ಎಸೆತದಲ್ಲಿ ಧವನ್ ಡೀಪ್ ಸ್ಕ್ವೇರ್ ಲೆಗ್​ನಲ್ಲಿ ಕ್ಯಾಚಿತ್ತು ಔಟಾದರು.

  • 13 May 2023 07:38 PM (IST)

    ಪಂದ್ಯ ಆರಂಭ

    ಪಂಜಾಬ್ ಮತ್ತು ದೆಹಲಿ ನಡುವಿನ ಪಂದ್ಯ ಆರಂಭವಾಗಿದೆ. ಪಂಜಾಬ್ ಪರ ಇನಿಂಗ್ಸ್ ಆರಂಭಿಸಲು ನಾಯಕ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಬಂದಿದ್ದಾರೆ. ದೆಹಲಿ ಪರ ಖಲೀಲ್ ಅಹ್ಮದ್ ಮೊದಲ ಓವರ್ ಎಸೆಯುತ್ತಿದ್ದಾರೆ.

  • 13 May 2023 07:19 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್

  • 13 May 2023 07:18 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್

  • 13 May 2023 07:14 PM (IST)

    ಲಕ್ನೋಗೆ 7 ವಿಕೆಟ್ ಜಯ

    ಪೂರನ್ ಬಂದ ಬಳಿಕ ಲಕ್ನೋ ಇನ್ನಿಂಗ್ಸ್​ನ ಗತಿಯೇ ಬದಲಾಯಿತು.

    ಅಂತಿಮವಾಗಿ 20ನೇ ಓವರ್​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮಂಕಾಡ್ ಲಕ್ನೋಗೆ ಗೆಲುವಿನ ಹಾರ ತೋಡಿಸಿದರು.

  • 13 May 2023 07:04 PM (IST)

    ಟಾಸ್ ಗೆದ್ದ ಡೆಲ್ಲಿ

    ಟಾಸ್ ಗೆದ್ದ ಡೆಲ್ಲಿ ನಾಯಕ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

Published On - May 13,2023 7:03 PM

ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ