KKR vs SRH Highlights, IPL 2024: ಗೆಲ್ಲುವ ಪಂದ್ಯ ಕೈಚೆಲ್ಲಿದ ಹೈದರಾಬಾದ್
Kolkata Knight Riders vs Sunrisers Hyderabad Highlights in Kannada: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್ 2024) 17 ನೇ ಸೀಸನ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ಆರಂಭ ಪಡೆದುಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17 ನೇ ಸೀಸನ್‌ನ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 4 ರನ್‌ಗಳಿಂದ ಸೋಲಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders vs Sunrisers Hyderabad) ಗೆಲುವಿನ ಆರಂಭ ಪಡೆದುಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತು. ಉತ್ತರವಾಗಿ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಗಿ 4 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಹೈದರಾಬಾದ್ ಪರ ಏಕಾಂಗಿ ಹೋರಾಟ ನಡೆಸಿದ ಹೆನ್ರಿಚ್ ಕ್ಲಾಸೆನ್ ಪಂದ್ಯದ ಹೀರೋ ಎನಿಸಿಕೊಂಡರು.
209 ರನ್‌ಗಳ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ಉತ್ತಮ ಆರಂಭ ಪಡೆದಿತ್ತು. ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಮೊದಲ ವಿಕೆಟ್‌ಗೆ 60 ರನ್ ಸೇರಿಸಿದರು. ಹರ್ಷಿತ್ ರಾಣಾ ಎಸೆತದಲ್ಲಿ ಮಯಾಂಕ್ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 32 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ತಂಡದ ಮೊತ್ತ 71 ರನ್ಗಳಿರುವಾಗ ಅಭಿಷೇಕ್ ಶರ್ಮಾ ರೂಪದಲ್ಲಿ ಎರಡನೇ ವಿಕೆಟ್ ಪತನವಾಯಿತು
ಕುಸಿದ ಮಧ್ಯಮ ಕ್ರಮಾಂಕ
ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಾಮ್ ನಡುವೆ ಮೂರನೇ ವಿಕೆಟ್‌ಗೆ 36 ರನ್‌ಗಳ ಜೊತೆಯಾಟವಿತ್ತು. ವರುಣ್ ಚಕ್ರವರ್ತಿ 12ನೇ ಓವರ್ ನಲ್ಲಿ ಮಾರ್ಕ್ರಾಮ್ ವಿಕೆಟ್ ಪಡೆಯುವ ಈ ಜೊತೆಯಾಟವನ್ನೂ ಮುರಿದರು. ಮುಂದಿನ ಓವರ್‌ನಲ್ಲಿ ಸುನಿಲ್ ನರೈನ್ ರಾಹುಲ್ ತ್ರಿಪಾಠಿ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ತ್ರಿಪಾಠಿ 20 ಎಸೆತಗಳಲ್ಲಿ 1 ಸಿಕ್ಸರ್ ನೆರವಿನಿಂದ 20 ರನ್ ಗಳಿಸಿದರು. 17ನೇ ಓವರ್‌ನಲ್ಲಿ ಹೈದರಾಬಾದ್ ತಂಡದ 5ನೇ ವಿಕೆಟ್ ಅಬ್ದುಲ್ ಸಮದ್ ರೂಪದಲ್ಲಿ ಪತನವಾಯಿತು.
ಶಹಬಾಜ್- ಕ್ಲಾಸೆನ್ ಹೋರಾಟ ವ್ಯರ್ಥ
ಶಹಬಾಜ್ ಅಹ್ಮದ್ ಮತ್ತು ಹೆನ್ರಿಚ್ ಕ್ಲಾಸೆನ್ ಆರನೇ ವಿಕೆಟ್‌ಗೆ 58 ರನ್‌ಗಳ ಜೊತೆಯಾಟ ನೀಡಿದರು. ಕೊನೆಯ ಓವರ್‌ನಲ್ಲಿ ಅಹ್ಮದ್ ಸಿಕ್ಸರ್ ಹೊಡೆಯುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಪಂದ್ಯ ಹೈದರಾಬಾದ್ ಕೈಯಿಂದ ಜಾರಿತು. ಅದೇ ಓವರ್‌ನಲ್ಲಿ ವಿಕೆಟ್‌ಕೀಪರ್ ಹೆನ್ರಿಚ್ ಕ್ಲಾಸೆನ್ ಕೂಡ ತಮ್ಮ ವಿಕೆಟ್ ಕಳೆದುಕೊಂಡರು. ಹೈದರಾಬಾದ್ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದ ಕ್ಲಾಸೆನ್ 29 ಎಸೆತಗಳಲ್ಲಿ 63 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೋಲ್ಕತ್ತಾ ಪರ ಹರ್ಷಿತ್ ರಾಣಾ 3, ಆಂಡ್ರೆ ರಸೆಲ್ 2 ಮತ್ತು ವರುಣ್ ಚಕ್ರವರ್ತಿ, ಸುನಿಲ್ ನರೈನ್ ತಲಾ 1 ವಿಕೆಟ್ ಪಡೆದರು.
208 ರನ್ ಬಾರಿಸಿದ್ದ ಕೆಕೆಆರ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 208 ರನ್ ಗಳಿಸಿತ್ತು. ತಂಡದ ಪರ ಆಂಡ್ರೆ ರಸೆಲ್ 25 ಎಸೆತಗಳಲ್ಲಿ 64 ರನ್ ಗಳಿಸಿ ಅಜೇಯರಾಗಿ ಉಳಿದರು. ಇವರಲ್ಲದೆ ಫಿಲಿಪ್ ಸಾಲ್ಟ್ (54) ಕೂಡ ಅರ್ಧಶತಕ ಗಳಿಸಿದರು. ರಮಣದೀಪ್ ಸಿಂಗ್ 35 ರನ್ ಮತ್ತು ರಿಂಕು ಸಿಂಗ್ 23 ರನ್‌ಗಳ ಕೊಡುಗೆ ನೀಡಿದರು. ಹೈದರಾಬಾದ್ ಪರ ಟಿ ನಟರಾಜನ್ 3 ಮತ್ತು ಮಯಾಂಕ್ ಮಾರ್ಕಾಂಡೆ 2 ವಿಕೆಟ್ ಪಡೆದರು.
LIVE NEWS & UPDATES
-
ಕೆಕೆಆರ್ಗೆ 4 ರನ್ ಜಯ
ಐಪಿಎಲ್ 2024 ರ ಮೂರನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಲ್ಕು ರನ್‌ಗಳ ಜಯ ಸಾಧಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಪ್ಯಾಟ್ ಕಮ್ಮಿನ್ಸ್ ತಂಡ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಟೂರ್ನಿಯಲ್ಲಿ ಕೋಲ್ಕತ್ತಾ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ. ಇದೀಗ ಮಾರ್ಚ್ 29 ರಂದು ಬೆಂಗಳೂರಿನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
-
ಒಂದು ಎಸೆತದಲ್ಲಿ 5 ರನ್
ಕೆಕೆಆರ್ ಮತ್ತು ಎಸ್‌ಆರ್‌ಎಚ್ ನಡುವಿನ ಪಂದ್ಯ ರೋಚಕ ಹಂತ ತಲುಪಿದೆ. ಹೈದರಾಬಾದ್‌ಗೆ ಗೆಲುವಿಗೆ ಒಂದು ಎಸೆತದಲ್ಲಿ 5 ರನ್‌ಗಳ ಅಗತ್ಯವಿದೆ.
-
-
ಸಮದ್ ಔಟ್
ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ದೊಡ್ಡ ಹೊಡೆತ ನೀಡಿದೆ. ಅಬ್ದುಲ್ ಸಮದ್ ಅವರನ್ನು ಆಂಡ್ರೆ ರಸೆಲ್ ಬಲಿ ಪಡೆದಿದ್ದಾರೆ. 17 ಓವರ್‌ಗಳ ನಂತರ ಕೆಕೆಆರ್ ಸ್ಕೋರ್ 149/5
-
ರಾಹುಲ್ ತ್ರಿಪಾಠಿ ಔಟ್
111 ರನ್‌ಗಳಿದ್ದಾಗ ಹೈದರಾಬಾದ್‌ನ ನಾಲ್ಕನೇ ವಿಕೆಟ್ ಪತನವಾಗಿದೆ. ಸುನಿಲ್ ನರೈನ್ ಅವರು ರಾಹುಲ್ ತ್ರಿಪಾಠಿ ಅವರನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ಸದ್ಯ ಹೆನ್ರಿಚ್ ಕ್ಲಾಸೆನ್ ಮತ್ತು ಅಬ್ದುಲ್ ಸಮದ್ ಕ್ರೀಸ್‌ನಲ್ಲಿದ್ದಾರೆ. ಹೈದರಾಬಾದ್‌ಗೆ 42 ಎಸೆತಗಳಲ್ಲಿ 98 ರನ್‌ಗಳ ಅಗತ್ಯವಿದೆ.
-
ಮಾರ್ಕ್ರಾಮ್ ಔಟ್
ಹೈದರಾಬಾದ್‌ನ ಬಿಗ್ ವಿಕೆಟ್ ಪತನವಾಗಿದೆ. ಏಡೆನ್ ಮಾರ್ಕ್ರಾಮ್ 13 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. ಸದ್ಯ ಹೈದರಾಬಾದ್‌ಗೆ 48 ಎಸೆತಗಳಲ್ಲಿ 101 ರನ್‌ಗಳ ಅಗತ್ಯವಿದೆ.
-
-
10 ಓವರ್ ಮುಕ್ತಾಯ
ಹೈದರಾಬಾದ್ ಇನ್ನಿಂಗ್ಸ್‌ನ 10 ಓವರ್‌ಗಳು ಮುಗಿದಿವೆ. ತಂಡ 10 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 99 ರನ್ ಗಳಿಸಿದೆ. ಮಾರ್ಕ್ರಾಮ್ ಮತ್ತು ರಾಹುಲ್ ತ್ರಿಪಾಠಿ ಸದ್ಯ ಕ್ರೀಸ್‌ನಲ್ಲಿದ್ದಾರೆ.
-
ರಸೆಲ್ಗೆ ವಿಕೆಟ್
ಬ್ಯಾಟ್‌ನಿಂದ ವಿಧ್ವಂಸಕತೆಯನ್ನು ಸೃಷ್ಟಿಸಿದ್ದ ಆಂಡ್ರೆ ರಸೆಲ್ ಬೌಲಿಂಗ್ನಲ್ಲೂ ಕಮಾಲ್ ಮಾಡಿದ್ದಾರೆ. ತಮ್ಮ ಖೋಟಾದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ರಸೆಲ್, ಅಭಿಷೇಕ್ ಶರ್ಮಾ ಅವರನ್ನು ಔಟ್ ಮಾಡಿದರು. ಸದ್ಯ ರಾಹುಲ್ ತ್ರಿಪಾಠಿ ಮತ್ತು ಏಡನ್ ಮಾರ್ಕ್ರಾಮ್ ಕ್ರೀಸ್‌ನಲ್ಲಿದ್ದಾರೆ. ಎಂಟು ಓವರ್‌ಗಳ ನಂತರ ತಂಡದ ಸ್ಕೋರ್ 77/2.
-
ಮೊದಲ ವಿಕೆಟ್
ಮೊದಲ ವಿಕೆಟ್‌ಗೆ 60 ರನ್‌ಗಳ ಜೊತೆಯಾಟ ನಡೆಸಿದ ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಬೇರ್ಪಟ್ಟಿದೆ. ಕೋಲ್ಕತ್ತಾ ವಿರುದ್ಧ ಮಯಾಂಕ್ 21 ಎಸೆತಗಳಲ್ಲಿ 31 ರನ್ ಗಳಿಸಿ ಔಟಾದರು. ಸದ್ಯ ಅಭಿಷೇಕ್ ಮತ್ತು ರಾಹುಲ್ ತ್ರಿಪಾಠಿ ಕ್ರೀಸ್‌ನಲ್ಲಿದ್ದಾರೆ.
-
ಮಯಾಂಕ್-ಅಭಿಷೇಕ್ ಅರ್ಧಶತಕದ ಜೊತೆಯಾಟ
ಹೈದರಾಬಾದ್‌ನ ಇಬ್ಬರೂ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬಲಿಷ್ಠ ಫಾರ್ಮ್‌ನಲ್ಲಿದ್ದಾರೆ. ಇವರಿಬ್ಬರೂ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ. ಐದು ಓವರ್‌ಗಳ ನಂತರ ತಂಡದ ಸ್ಕೋರ್ 58 ರನ್‌ಗಳಿಗೆ ತಲುಪಿದೆ. ಮಯಾಂಕ್ ಅಗರ್ವಾಲ್ 19 ಎಸೆತಗಳಲ್ಲಿ 32 ರನ್ ಹಾಗೂ ಅಭಿಷೇಕ್ ಶರ್ಮಾ 12 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
-
ಹೈದರಾಬಾದ್ ಇನ್ನಿಂಗ್ಸ್ ಆರಂಭ
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 209 ರನ್‌ಗಳ ಗುರಿ ಬೆನ್ನತ್ತಲು ಸನ್ ರೈಸರ್ಸ್ ಹೈದರಾಬಾದ್ ಸಜ್ಜಾಗಿದೆ. ಮಯಾಂಕ್ ಅಗರ್ವಾಲ್ ಮತ್ತು ಅಭಿಷೇಕ್ ಶರ್ಮಾ ಬ್ಯಾಟಿಂಗ್ ಆರಂಭಿಸಿದ್ದಾರೆ. ಇಬ್ಬರೂ ಉತ್ತಮ ಫಾರ್ಮ್‌ನಲ್ಲಿರುವಂತೆ ತೋರುತ್ತಿದೆ. ಮೊದಲ ಓವರ್‌ನಲ್ಲಿ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 12 ರನ್ ಗಳಿಸಿತ್ತು.
-
208 ರನ್ ಟಾರ್ಗೆಟ್
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಗಳಿಸಿದೆ. ಒಂದು ಬಾರಿ ತಂಡ 119 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ರಸೆಲ್ ಅದ್ಭುತ ಇನ್ನಿಂಗ್ಸ್ ಆಡಿ ತಂಡವನ್ನು 200ರ ಗಡಿ ದಾಟಿಸಿದರು. ಈ ಪಂದ್ಯವನ್ನು ಗೆಲ್ಲಲು ಹೈದರಾಬಾದ್‌ಗೆ ಈಗ 120 ಎಸೆತಗಳಲ್ಲಿ 209 ರನ್ ಅಗತ್ಯವಿದೆ.
-
200ರ ಗಡಿ ದಾಟಿದ ಕೆಕೆಆರ್
ಹೈದರಾಬಾದ್ ವಿರುದ್ಧ 19ನೇ ಓವರ್‌ನಲ್ಲಿ ಕೆಕೆಆರ್ 200 ರನ್ ಗಡಿ ದಾಟಿದೆ. ಆ್ಯಂಡ್ರೆ ರಸೆಲ್ ಮತ್ತು ರಿಂಕು ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಗ ಕೆಕೆಆರ್ ಕೊನೆಯ ಓವರ್‌ನಲ್ಲಿ ದೊಡ್ಡ ಸ್ಕೋರ್‌ಗಾಗಿ ಎದುರು ನೋಡುತ್ತಿದೆ.
-
ರಸೆಲ್ ಫಿಫ್ಟಿ
ಆಂಡ್ರೆ ರಸೆಲ್, ರಿಂಕು ಸಿಂಗ್ ಅವರೊಂದಿಗೆ ಅದ್ಭುತ ಪಾಲುದಾರಿಕೆ ಮಾಡಿದಲ್ಲದೆ, ಕೇವಲ 20 ಎಸೆತಗಳಲ್ಲಿ 50 ರನ್ ಗಳಿಸಿದ್ದಾರೆ. ಕೆಕೆಆರ್ ತಂಡ ದೊಡ್ಡ ಮೊತ್ತದತ್ತ ಸಾಗುತ್ತಿದೆ.
-
ಕೊನೆಯ 4 ಓವರ್ ಬಾಕಿ
ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನ ಕೊನೆಯ 4 ಓವರ್‌ಗಳು ಉಳಿದಿವೆ. ತಂಡ 16 ಓವರ್‌ಗಳಲ್ಲಿ 6 ವಿಕೆಟ್‌ಗೆ 141 ರನ್ ಗಳಿಸಿದೆ. ಇದೇ ವೇಳೆ ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ಕ್ರೀಸ್‌ನಲ್ಲಿದ್ದಾರೆ.
-
ಫಿಲಿಪ್ ಸಾಲ್ಟ್ ಅರ್ಧಶತಕ
ಕೋಲ್ಕತ್ತಾ ಪರ ಅರ್ಧಶತಕ ಸಿಡಿಸಿದ ಫಿಲಿಪ್ ಸಾಲ್ಟ್ ಔಟಾಗಿದ್ದಾರೆ. 14ನೇ ಓವರ್‌ನ ಐದನೇ ಎಸೆತದಲ್ಲಿ ಮಯಾಂಕ್ ಮಾರ್ಕಂಡೇ ಎಸೆತದಲ್ಲಿ ಸಾಲ್ಟ್ ಔಟಾದರು. ಸಾಲ್ಟ್ 40 ಎಸೆತಗಳಲ್ಲಿ 54 ರನ್‌ಗಳ ಇನ್ನಿಂಗ್ಸ್ ಆಡಿದರು.
-
ರಮಣದೀಪ್ ಸಿಂಗ್ ಔಟ್
ರಮಣದೀಪ್ ಸಿಂಗ್ ರೂಪದಲ್ಲಿ ಕೋಲ್ಕತ್ತಾದ ವಿಕೆಟ್ ಪತನವಾಗಿದೆ. 13ನೇ ಓವರ್‌ನ ಮೊದಲ ಎಸೆತದಲ್ಲಿ ಮಯಾಂಕ್ ಮಾರ್ಕಂಡೇಯ ಎಸೆತದಲ್ಲಿ ರಮಣದೀಪ್, ಪ್ಯಾಟ್ ಕಮ್ಮಿನ್ಸ್‌ಗೆ ಕ್ಯಾಚ್ ನೀಡಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಈ ಬ್ಯಾಟ್ಸ್‌ಮನ್ 17 ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ನೆರವಿನಿಂದ 35 ರನ್ ಗಳಿಸುವಲ್ಲಿ ಯಶಸ್ವಿಯಾದರು. ರಿಂಕು ಸಿಂಗ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದಾರೆ. 13 ಓವರ್‌ಗಳ ನಂತರ ತಂಡದ ಸ್ಕೋರ್ 113/5.
-
ನಾಲ್ಕನೇ ವಿಕೆಟ್
ಕೋಲ್ಕತ್ತಾ 51 ರನ್ ಕಲೆಹಾಕುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದೆ. ಮಾಜಿ ನಾಯಕ ನಿತೀಶ್ ರಾಣಾ ಒಂಬತ್ತು ರನ್ ಗಳಿಸಿ ಔಟಾದರು.
-
ಶೂನ್ಯಕ್ಕೆ ಶ್ರೇಯಸ್ ಔಟ್
ಕೋಲ್ಕತ್ತಾ ನೈಟ್ ರೈಡರ್ಸ್‌ನ ಅಗ್ರ ಕ್ರಮಾಂಕವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರನ್ ಕಲೆಹಾಕಲು ಹೋರಾಡುತ್ತಿದೆ. ನಾಲ್ಕನೇ ಓವರ್‌ನಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿದೆ. ಟಿ ನಟರಾಜನ್ ಮೂರನೇ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಬಲಿಪಶು ಮಾಡಿದರೆ, ಐದನೇ ಎಸೆತದಲ್ಲಿ ಶ್ರೇಯಸ್ ಅಯ್ಯರ್ ವಿಕೆಟ್ ಪಡೆದರು. ಅಯ್ಯರ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ಸದ್ಯ ಫಿಲಿಪ್ ಸಾಲ್ಟ್ 23 ರನ್ ಹಾಗೂ ನಿತೀಶ್ ರಾಣಾ 7 ರನ್ ಗಳಿಸಿ ಅಜೇಯರಾಗಿ ಆಡುತ್ತಿದ್ದಾರೆ.
-
ವೆಂಕಟೇಶ್ ಅಯ್ಯರ್ ಔಟ್
ಕೋಲ್ಕತ್ತಾದ ಎರಡನೇ ವಿಕೆಟ್ ಪತನ. ಐದು ಎಸೆತಗಳಲ್ಲಿ ಏಳು ರನ್ ಗಳಿಸಿ ವೆಂಕಟೇಶ್ ಅಯ್ಯರ್ ಔಟಾದರು.
-
ನರೈನ್ ಔಟ್
ಸುನಿಲ್ ನರೈನ್ ರೂಪದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಹೊಡೆತ ಅನುಭವಿಸಿದೆ. ಎರಡು ರನ್ ಗಳಿಸುವಷ್ಟರಲ್ಲಿ ಅವರು ರನೌಟ್ ಆದರು. ಸದ್ಯ ಕ್ರೀಸ್‌ನಲ್ಲಿ ಫಿಲಿಪ್ ಸಾಲ್ಟ್ ಮತ್ತು ವೆಂಕಟೇಶ್ ಅಯ್ಯರ್ ಇದ್ದಾರೆ. ಎರಡು ಓವರ್‌ಗಳ ನಂತರ ತಂಡದ ಸ್ಕೋರ್ 23/1.
-
ಕೆಕೆಆರ್ ಇನ್ನಿಂಗ್ಸ್ ಆರಂಭ
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ಮಾಡಲು ಸಿದ್ಧವಾಗಿದೆ. ಸುನಿಲ್ ನರೈನ್ ಮತ್ತು ಫಿಲಿಪ್ ಸಾಲ್ಟ್ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೊದಲ ಓವರ್‌ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಮೂರು ರನ್ ಗಳಿಸಲಾಯಿತು.
-
ಸೋತ ಡೆಲ್ಲಿ
ಐಪಿಎಲ್ 2024 ರ ಎರಡನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಉತ್ತರವಾಗಿ ಪಂಜಾಬ್ 19.2 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
-
ಸನ್‌ರೈಸರ್ಸ್ ಹೈದರಾಬಾದ್
ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಯಾನ್ಸನ್, ಪ್ಯಾಟ್ ಕಮಿನ್ಸ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.
-
ಕೋಲ್ಕತ್ತಾ ನೈಟ್ ರೈಡರ್ಸ್
ಫಿಲಿಪ್ ಸಾಲ್ಟ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ.
-
ಟಾಸ್ ಗೆದ್ದ ಹೈದರಾಬಾದ್
ಐಪಿಎಲ್ 2024ರ ಮೂರನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಟಾಸ್ ಗೆದ್ದಿದ್ದಾರೆ. ಈ ಪಂದ್ಯದಲ್ಲಿ ಕೆಕೆಆರ್ ತಂಡ ಮೊದಲು ಬ್ಯಾಟ್ ಮಾಡಲಿದೆ.
Published On - Mar 23,2024 7:04 PM
