Deepak Hooda: ರವಿಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದ​​ ಕಡೆ ದೀಪಕ್ ಹೂಡ ಸ್ಫೋಟಕ ಸಿಕ್ಸ್: ದಂಗಾದ ಇಡೀ ಸ್ಟೇಡಿಯಂ

| Updated By: Vinay Bhat

Updated on: Jul 08, 2022 | 10:12 AM

ENG vs IND T20I: ಗುರುವಾರ ರಾತ್ರಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲೂ ದೀಪಕ್ ಹೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ 5ನೇ ಓವರ್​ನ ಮೊಯೀನ್ ಅಲಿ ಅವರ 3ನೇ ಎಸೆತದಲ್ಲಿ ಸಿಡಿಸಿದ ಸಿಕ್ಸ್​​ಗೆ ಇಡೀ ಸ್ಟೇಡಿಯಂ ಒಂದು ಕ್ಷಣ ದಂಗಾಯಿತು.

Deepak Hooda: ರವಿಶಾಸ್ತ್ರಿ ಕಾಮೆಂಟರಿ ಮಾಡುತ್ತಿದ್ದ​​ ಕಡೆ ದೀಪಕ್ ಹೂಡ ಸ್ಫೋಟಕ ಸಿಕ್ಸ್: ದಂಗಾದ ಇಡೀ ಸ್ಟೇಡಿಯಂ
Deepak Hooda Six ENG vs IND T20I
Follow us on

ಸಾಕಷ್ಟು ಸಮಯ ಕಾದ ಬಳಿಕ ದೀಪಕ್ ಹೂಡ (Deepak Hooda) ಅವರಿಗೆ ಇದೀಗ ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅವಕಾಶ ಸಿಕ್ಕಿದ್ದು ಟೀಮ್ ಇಂಡಿಯಾ ಪರ ಪ್ರತಿ ಪಂದ್ಯದಲ್ಲಿ ಅಬ್ಬರಿಸುತ್ತಿದ್ದಾರೆ. ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಹಾಗೂ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿ ಇಂಗ್ಲೆಂಡ್ (IND vs ENG) ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿರುವ ಇವರು ಇಲ್ಲೂ ಅದೇ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಸೌಥ್‌ಹ್ಯಾಮ್ಟನ್‌ನ ರೋಸ್‌ ಬೌಲ್‌ ಮೈದಾನದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲೂ ಹೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 50 ರನ್​ಗಳ ಅಮೋಘ ಗೆಲುವು ಕಂಡಿತು. ಹಾರ್ದಿಕ್ ಪಾಂಡ್ಯ (Hardik Pandya) ಅರ್ಧಶತಕ ಸಿಡಿಸಿ ಮಿಂಚಿದರೆ, ಹೂಡ ಕೇವಲ 17 ಎಸೆತಗಳಲ್ಲಿ 3 ಫೋರ್ ಹಾಗೂ 2 ಸಿಕ್ಸರ್ ಸಿಡಿಸಿ 33 ರನ್ ಚಚ್ಚಿದರು.

ಕ್ರೀಸ್​ಗೆ ಇಳಿದ ಕೂಡಲೇ ಹೂಡ ಸ್ಫೋಟಕ ಆಟಕ್ಕೆ ಮುಂದಾದರು. ಅದರಲ್ಲೂ 5ನೇ ಓವರ್​ನ ಮೊಯೀನ್ ಅಲಿ ಅವರ 3ನೇ ಎಸೆತದಲ್ಲಿ ಸಿಡಿಸಿದ ಸಿಕ್ಸ್​​ಗೆ ಇಡೀ ಸ್ಟೇಡಿಯಂ ಒಂದು ಕ್ಷಣ ದಂಗಾಯಿತು. ಯಾಕೆಂದರೆ ಹೂಡ ಹೊಡೆದ ರಭಸಕ್ಕೆ ಚೆಂಡು ಕಾಮೆಂಟರಿ ಬಾಕ್ಸ್​ ಪಕ್ಕದಲ್ಲೇ ಬಿತ್ತು. ಅಲ್ಲಿ ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ ಇದನ್ನ ಕಂಡು ಅಚ್ಚರಿಗೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
IND vs ENG: ಹಾರ್ದಿಕ್ ಆಲ್ರೌಂಡ್ ಪ್ರದರ್ಶನಕ್ಕೆ ಬೆಚ್ಚಿಬಿದ್ದ ಇಂಗ್ಲೆಂಡ್: ಭಾರತಕ್ಕೆ 50 ರನ್​ಗಳ ಅಮೋಘ ಜಯ
Wimbledon 2022: ಜರ್ಮನಿಯ ಮರಿಯಾರನ್ನು ಮಣಿಸಿ ಚೊಚ್ಚಲ ಗ್ರ್ಯಾಂಡ್ ​ಸ್ಲ್ಯಾಮ್ ಫೈನಲ್ ಪ್ರವೇಶಿಸಿದ ಓನ್ಸ್ ಜಬೇರ್..!
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ನಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ; ಕೋಚ್ ದ್ರಾವಿಡ್‌ಗೆ ಹೆಚ್ಚಿದ ಆತಂಕ
IND vs ENG: ಇಂಗ್ಲೆಂಡ ತಂಡವನ್ನು ಕಾಡುತ್ತಿವೆ ಕ್ಯಾಪ್ಟನ್ ರೋಹಿತ್ ಶರ್ಮಾ ದಾಖಲೆಗಳು..!

Rafael Nadal: ರಾಫೆಲ್ ನಡಾಲ್​ನಿಂದ ಶಾಕಿಂಗ್ ನಿರ್ಧಾರ: ವಿಂಬಲ್ಡನ್ ಸೆಮಿ ಫೈನಲ್​ನಿಂದ ಹಿಂದೆ ಸರಿದ ಸ್ಪ್ಯಾನಿಷ್ ಸ್ಟಾರ್

 

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬಿರುಸಿನ ಆರಂಭ ಪಡೆದಿದ್ದ ರೋಹಿತ್‌ ಶರ್ಮಾ ಆಟ ಹೆಚ್ಚುಹೊತ್ತು ನಡೆಯಲಿಲ್ಲ. ಮೊಯೀನ್‌ ಅಲಿ ಬೌಲಿಂಗ್‌ನಲ್ಲಿ 24 ರನ್ ಗಳಿಸಿದ್ದಾಗ ಬಟ್ಲರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಮ್ಮ ಮುಂದಿನ ಓವರ್‌ನಲ್ಲಿ ಅಲಿ, 8 ರನ್ ಗಳಿಸಿದ್ದ ಇಶಾನ್‌ ವಿಕೆಟ್‌ ಕೂಡ ಪಡೆದರು. ನಂತರ ಕಣಕ್ಕಿಳಿದ ದೀಪಕ್‌ ಹೂಡ (33) ಹಾಗೂ ಸೂರ್ಯಕುಮಾರ್‌ (39) ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದರು.

 

ಆದರೆ, 5ನೇ ಕ್ರಮಾಂಕದಲ್ಲಿ ಬಂದ ಹಾರ್ದಿಕ್‌ ಪಾಂಡ್ಯ 51 ರನ್‌ (33 ಬಾಲ್‌, 6 ಬೌಂಡರಿ, 1 ಸಿಕ್ಸ್‌) ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಮಧ್ಯಮ ಕ್ರಮಾಂಕದಲ್ಲಿ(17), ದಿನೇಶ್‌ ಕಾರ್ತಿಕ್‌(11), ಹರ್ಷಲ್‌ ಪಟೇಲ್‌(3) ಅಲ್ಪ ಮೊತ್ತದ ರನ್‌ಗಳಿಸಿದರು. ಅಂತಿಮವಾಗಿ ಭಾರತ 8 ವಿಕೆಟ್‌ಗೆ 198 ರನ್‌ಗಳಿಸಿತು. ಇಂಗ್ಲೆಂಡ್ ಪರ ಮೊಯೀನ್‌ ಅಲಿ ಹಾಗೂ ಕ್ರಿಸ್‌ ಜೋರ್ಡನ್‌ ತಲಾ 2 ವಿಕೆಟ್‌ ಪಡೆದರೆ. ಟಾಪ್ಲೆ, ಮಿಲ್ಸ್‌ ಹಾಗೂ ಪಾರ್ಕಿನ್ಸನ್‌ ತಲಾ 1 ವಿಕೆಟ್‌ ಪಡೆದರು.

ದೊಡ್ಡ ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ವೈಫಲ್ಯ ಅನುಭವಿಸಿತು. 50 ರನ್​ಗು ಮೊದಲೇ 4 ಮುಖ್ಯ ವಿಕೆಟ್ ಕಳೆದುಕೊಂಡಿತು. ಹಾರ್ದಿಕ್ ಹಾಗೂ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ಆರಂಭಿಕರ ಮೇಲೆ ದಾಳಿ ಮಾಡಿದರು. ನಾಯಕ ಜೋಸ್ ಬಟ್ಲರ್ ಹಾಗೂ ಲಿಯಾಮ್ ಲಿವಿಂಗ್​ಸ್ಟೋನ್ ಸೊನ್ನೆ ಸುತ್ತಿದರೆ, ಜೇಸನ್ ರಾಯ್ 4 ಮತ್ತು ಡೇವಿಡ್ ಮಲನ್ 21 ರನ್​ಗೆ ಔಟಾದರು. ಈ ವೇಳೆ ಜೊತೆಯಾದ ಹ್ಯಾರಿ ಬ್ರೋಕ್‌(28) ಹಾಗೂ ಮೊಯಿನ್‌ ಅಲಿ(33) 5ನೇ ವಿಕೆಟ್‌ಗೆ 61 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಹಾರ್ದಿಕ್‌ ಪಾಂಡ್ಯ(4/33) ಬೌಲಿಂಗ್‌ನಲ್ಲೂ ಕಮಾಲ್‌ ಮಾಡಿ ಪಂದ್ಯಶ್ರೇಷ್ಠ ಬಾಜಿಕೊಂಡರು.

Rohit Sharma: ಈವರೆಗೆ ಯಾವೋಬ್ಬ ಕ್ರಿಕೆಟಿಗ ಮಾಡಿಲ್ಲ: ವಿಶ್ವ ದಾಖಲೆ ನಿರ್ಮಿಸಿದ ರೋಹಿತ್ ಶರ್ಮಾ

Published On - 10:12 am, Fri, 8 July 22