ಇದೆಲ್ಲಾ ಒಂದು ಸ್ಕೋರಾ? 11 ವರ್ಷಗಳ ಹಿಂದೆ RCB ಪರ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ವೈರಲ್

Deepika Padukone: ಯುಎಇನಲ್ಲಿ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಕೇವಲ 92 ರನ್​ಗಳಿಗೆ ಆಲೌಟ್ ಆಯಿತು.

ಇದೆಲ್ಲಾ ಒಂದು ಸ್ಕೋರಾ? 11 ವರ್ಷಗಳ ಹಿಂದೆ RCB ಪರ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ವೈರಲ್
Deepika Padukone
Follow us
TV9 Web
| Updated By: ಝಾಹಿರ್ ಯೂಸುಫ್

Updated on: Sep 21, 2021 | 5:49 PM

ಅದು 2010, ಮಾರ್ಚ್​ 18… ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಆರ್​ಸಿಬಿ ನಾಯಕ ಅನಿಲ್ ಕುಂಬ್ಳೆ (Anil Kumble) ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಕೇವಲ 92 ರನ್​ಗಳಿಗೆ ಆಲೌಟ್​ ಆಯಿತು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ರಾಯಭಾರಿಯಾಗಿದ್ದ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ (Deepika Padukone) ಆರ್​ಆರ್ ತಂಡದ ಬ್ಯಾಟಿಂಗ್​ ಅನ್ನು ವ್ಯಂಗ್ಯವಾಡಿ ಟ್ವಿಟರ್​ನಲ್ಲಿ ಪೋಸ್ಟ್ ಹಾಕಿದ್ದರು.

ಆ ಪೋಸ್ಟ್ ಹೇಗಿತ್ತು ಅಂದ್ರೆ…”92 !! ಇದೆಲ್ಲಾ ಒಂದು ಸ್ಕೋರಾ? ಎಲ್ಲಾ ರೀತಿಯಲ್ಲೂ ಆರ್‌ಸಿಬಿ ಹುಡುಗರು ಅದ್ಭುತವಾಗಿ ಆಡುತ್ತಿದ್ದಾರೆ… ಪ್ರತಿ ಸೆಕೆಂಡ್ ಅನ್ನು ಲೈವ್ ಆಗಿ ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. 11 ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಮಾಡಿದ್ದ ಈ ಟ್ವೀಟ್ ಇದೀಗ ವೈರಲ್ ಆಗಿದೆ. ವೈರಲ್ ಆಗಲು ಬಹುಮುಖ್ಯ ಕಾರಣ ಐಪಿಎಲ್​ನ ದ್ವಿತಿಯಾರ್ಧದಲ್ಲಿ ಆರ್​ಸಿಬಿ ತಂಡ ಕೇವಲ 92 ರನ್​ಗಳಿಗೆ ಆಲೌಟ್ ಆಗಿರುವುದು.

ಯುಎಇನಲ್ಲಿ ನಡೆದ ಐಪಿಎಲ್​ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಕೊಲ್ಕತ್ತಾ ನೈಟ್​ ರೈಡರ್ಸ್​ ವಿರುದ್ದ ಕೇವಲ 92 ರನ್​ಗಳಿಗೆ ಆಲೌಟ್ ಆಯಿತು. ಈ ಸುಲಭ ಟಾರ್ಗೆಟ್​ ಅನ್ನು ಕೆಕೆಆರ್ ಕೇವಲ 10 ಓವರ್​ನಲ್ಲಿ ಮುಟ್ಟಿತು. ಈ ಹೀನಾಯ ಸೋಲಿನ ಬೆನ್ನಲ್ಲೇ 11 ವರ್ಷಗಳ ಹಿಂದಿನ ಟ್ವೀಟ್ ಮೂಲಕ ನೆಟ್ಟಿಗರು ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡುತ್ತಿದ್ದಾರೆ.

ಯಾವುದು ಬದಲಾಗಿಲ್ಲ. ಇಲ್ಲಿ ತಂಡ ಮಾತ್ರ ಬದಲಾಗಿದೆ. ಬೇಕಿದ್ರೆ ನೀವು ಮತ್ತೊಮ್ಮೆ ನಿಮ್ಮ ಟ್ವೀಟ್​ ಅನ್ನು ರಿಟ್ವೀಟ್ ಮಾಡಬಹುದು ಎಂದು ವ್ಯಕ್ತಿಯೊಬ್ಬರು ದೀಪಿಕಾರನ್ನು ಕಾಲೆಳೆದಿದ್ದಾರೆ. ಇನ್ನು ಮತ್ತೊಬ್ಬರು 11 ವರ್ಷಗಳ ಬಳಿಕ ಕರ್ಮ ಮರುಕಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು ಸೆಲೆಬ್ರಿಟಿಗಳು ದುಡ್ಡಿಗಾಗಿ ಟ್ವೀಟ್ ಮಾಡುವಾಗ ಸ್ವಲ್ಪ ಎಚ್ಚರವಹಿಸಿ. ಇಲ್ಲದಿದ್ದರೆ ವರ್ಷಗಳ ಬಳಿಕ ಅದು ನಿಮಗೆ ರಿಟನ್ ಹೊಡೆಯುತ್ತೆ ಎಂಬುದಕ್ಕೆ ದೀಪಿಕಾ ಟ್ವೀಟ್ ಸಾಕ್ಷಿ ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ 11 ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದಂತು ಸುಳ್ಳಲ್ಲ.

ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!

ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ

ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್​ಗಳ ಪಟ್ಟಿ ಇಲ್ಲಿದೆ

ಇದನ್ನೂ ಓದಿ: IPL 2021: ಪ್ಲೇ ಆಫ್​ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್

(Deepika Padukone’s Vintage Tweet Goes Viral After RCB Get Bundled Out for 92)

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ