
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ಬಹಿತೇಕ ತಂಡಗಳು 10 ಪಂದ್ಯಗಳನ್ನು ಆಡಿದೆ. ಈ ತಂಡಗಳಿಗೆ ಇನ್ನುಳಿದಿರುವುದು ಕೇವಲ 4 ಮ್ಯಾಚ್ಗಳು ಮಾತ್ರ. ಈ ತಂಡಗಳು ಕೊನೆಯ ನಾಲ್ಕು ಪಂದ್ಯಗಳ ಮೂಲಕ ಪ್ಲೇಆಫ್ಗೇರುವ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿವೆ. ಇದರ ನಡುವೆ ಸಿಎಸ್‌ಕೆ ವಿರುದ್ಧ ಸೋತು ಅಕ್ಷರ್ ಪಟೇಲ್ ನೀಡಿದ ಹೇಳಿಕೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಕ್ಷರ್ ಪಟೇಲ್ ಹೇಳಿದ್ದೇನು?
ಸಿಎಸ್‌ಕೆ ವಿರುದ್ಧದ ಪಂದ್ಯದ ನಂತರ ಮಾತನಾಡಿದ ಅಕ್ಷರ್ ಪಟೇಲ್, “ನಮಗೆ ಇನ್ನು 5 ಪಂದ್ಯಗಳು ಬಾಕಿ ಇವೆ, ನಾವು ಪ್ಲೇಆಫ್ ತಲುಪಲು ಪ್ರತಿಯೊಂದು ಪಂದ್ಯವನ್ನೂ ಗೆಲ್ಲಲೇಬೇಕಿದೆ. ಅದರಂತೆ ಅಂತಿಮ 5 ಮ್ಯಾಚ್ಗಳ ಮೂಲಕ ಪ್ಲೇಆಫ್ಗೇರುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಆದರೆ, ವಾಸ್ತವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈಗಾಗಲೇ 10 ಪಂದ್ಯಗಳನ್ನು ಆಡಿದ್ದು, ಲೀಗ್ ಹಂತದಲ್ಲಿ ಇನ್ನು ಕೇವಲ 4 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಆದರೆ ಈ ವಿಷಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ಗೆ ತಿಳಿದಿಲ್ಲ.
ಅಕ್ಷರ್ ಪಟೇಲ್ ಈಗಲೂ 5 ಪಂದ್ಯಗಳ ಲೆಕ್ಕಾಚಾರದಲ್ಲೇ ಉಳಿದಿದ್ದಾರೆ. ಡಿಸಿ ತಂಡದ ನಾಯಕನ ಈ ‘ಲೆಕ್ಕಾಚಾರದ ಎಡವಟ್ಟು’ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಒಟ್ಟು 14 ಪಂದ್ಯಗಳಲ್ಲಿ 10 ಪಂದ್ಯಗಳು ಮುಗಿದಿರುವುದರಿಂದ, ಅಕ್ಷರ್ ಪಟೇಲ್ ತಂಡದ ಸ್ಥಿತಿಯ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಒಟ್ಟಿನಲ್ಲಿ ಗೆದ್ದ ಹಾಗೂ ಸೋತ ಪಂದ್ಯಗಳ ಲೆಕ್ಕವೇ ಗೊತ್ತಿಲ್ಲದ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ಲೇಆಫ್ಗೆ ಹೇಗೆ ಮುನ್ನಡೆಸಲಿದ್ದಾರೆ ಎಂದು ಡಿಸಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 10 ಪಂದ್ಯಗಳಲ್ಲಿ 4 ಗೆಲುವು ಮತ್ತು 6 ಸೋಲುಗಳೊಂದಿಗೆ 8 ಅಂಕಗಳನ್ನು ಹೊಂದಿದೆ. ತಂಡಕ್ಕೆ ಇನ್ನೂ 4 ಪಂದ್ಯಗಳಿದ್ದು, ಈ ಮ್ಯಾಚ್ಗಳ ಮೂಲಕ ಪ್ಲೇಆಫ್ಗೇರಬಹುದು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಆಫ್ ಹಾದಿ ಈ ಕೆಳಗಿನಂತಿದೆ…
ಇದನ್ನೂ ಓದಿ: TMC ವಿರುದ್ಧ ಗಂಭೀರ ಆರೋಪ ಮಾಡಿ ಪಕ್ಷ ತೊರೆದ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ!
ಈ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಅಕ್ಷರ್ ಪಟೇಲ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇಆಫ್ಗೇರಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
Published On - 7:57 am, Wed, 6 May 26