IPL 2025: ಐಪಿಎಲ್ಗೆ ಎಂಟ್ರಿಕೊಟ್ಟ ಶತ್ರು ದೇಶದ ಆಟಗಾರ; 6 ಕೋಟಿ ರೂ. ವೇತನ..!
Delhi Capitals Sign Mustafizur Rahman: ಐಪಿಎಲ್ 2025 ರ ದ್ವಿತೀಯಾರ್ಧದಲ್ಲಿ ಆಟಗಾರರ ಅಲಭ್ಯತೆಯಿಂದಾಗಿ ದೆಹಲಿ ಕ್ಯಾಪಿಟಲ್ಸ್ ತಂಡ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಫಿಜುರ್ ರೆಹಮಾನ್ ಅವರನ್ನು 6 ಕೋಟಿ ರೂಪಾಯಿಗಳಿಗೆ ತಂಡಕ್ಕೆ ಸೇರಿಸಿಕೊಂಡಿದೆ. ಜೇಕ್ ಫ್ರೇಸರ್ ಮೆಕ್‌ಗುರ್ಕ್ ಅವರ ಬದಲಿ ಆಗಿ ರೆಹಮಾನ್ ಸೇರ್ಪಡೆಯಾಗಿದೆ. ಭಾರತ-ಬಾಂಗ್ಲಾ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲಿ ಈ ಆಯ್ಕೆ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ.

2025 ರ ಐಪಿಎಲ್ನ (IPL 2025) ದ್ವಿತೀಯಾರ್ಧ ಮೇ 17 ರಿಂದ ಮತ್ತೆ ಪ್ರಾರಂಭವಾಗುತ್ತಿದೆ. ಆದರೆ ಈಗಾಗಲೇ ತಮ್ಮ ದೇಶಕ್ಕೆ ಮರಳಿರುವ ಅನೇಕ ವಿದೇಶಿ ಆಟಗಾರರು ಮತ್ತೆ ಐಪಿಎಲ್ ಆಡಲು ಭಾರತಕ್ಕೆ ಬರುತ್ತಿಲ್ಲ ಎಂಬುದು ಎಲ್ಲಾ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿದೆ. ಇದೇ ಕಾರಣಕ್ಕೆ ಈಗ ಹಲವು ತಂಡಗಳಲ್ಲಿ ಬದಲಾವಣೆಗಳಾಗಲಿವೆ. ಅದರಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್‌ಗುರ್ಕ್ (Jake Fraser-McGurk) ಬದಲಿಗೆ ಬಾಂಗ್ಲಾದೇಶದ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ( Mustafizur Rahman) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಾಸ್ತವವಾಗಿ ಮುಸ್ತಾಫಿಜುರ್ ರೆಹಮಾನ್ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಅವರನ್ನು ಯಾರು ಖರೀದಿಸಿರಲಿಲ್ಲ. ಆದರೀಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 6 ಕೋಟಿ ರೂಪಾಯಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಭಾರತಕ್ಕೆ ಹೊಸ ಶತ್ರು ಬಾಂಗ್ಲಾದೇಶ
ಮುಸ್ತಾಫಿಜುರ್ ರೆಹಮಾನ್ ಬಾಂಗ್ಲಾದೇಶದ ಆಟಗಾರನಾಗಿರುವುದರಿಂದ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿಸಿಕೊಳ್ಳುವುದು ದೊಡ್ಡ ವಿವಾದಕ್ಕೆ ಕಾರಣವಾಗಬಹುದು. ವಾಸ್ತವವಾಗಿ ಕಳೆದ ಕೆಲವು ತಿಂಗಳುಗಳಿಂದ ಬಾಂಗ್ಲಾದೇಶ ಮತ್ತು ಭಾರತ ನಡುವಿನ ಸಂಬಂಧಗಳು ಗಣನೀಯವಾಗಿ ಹದಗೆಟ್ಟಿವೆ. ಶೇಖ್ ಹಸೀನಾ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ, ಮೊಹಮ್ಮದ್ ಯೂನಿಸ್ ಖಾನ್ ಬಾಂಗ್ಲಾದೇಶದ ಚುಕ್ಕಾಣಿ ಹಿಡಿದಿದ್ದಾರೆ. ಅವರು ಅನೇಕ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದರ ಜೊತೆಗೆ ಅವರ ಆಡಳಿತದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ. ಹೀಗಾಗಿ ಉಭಯ ದೇಶಗಳ ನಡುವೆ ಸಂಬಂಧ ಅಳಸಿದೆ. ಹೀಗಾಗಿ ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಭಾರತದಲ್ಲಿ ಐಪಿಎಲ್ ಆಡುವುದು ವಿವಾದಕ್ಕೆ ಕಾರಣವಾಗಬಹುದು. ಈಗಾಗಲೇ ಅಭಿಮಾನಿಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತುಂಬಾ ಟ್ರೋಲ್ ಮಾಡುತ್ತಿದ್ದಾರೆ.
Mustafizur Rahman is back in 💙❤️ after two years!
He replaces Jake Fraser-McGurk who is unavailable for the rest of the season. pic.twitter.com/gwJ1KHyTCH
— Delhi Capitals (@DelhiCapitals) May 14, 2025
ಬದಲಿಯಾಗಿ ಬಂದ ಮುಸ್ತಾಫಿಜುರ್
ಮೇಲೆ ಹೇಳಿದಂತೆ ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಜೇಕ್ ಫ್ರೇಸರ್ ಮೆಕ್‌ಗುರ್ಕ್ ಭಾರತಕ್ಕೆ ಮರಳಲು ನಿರಾಕರಿಸಿದ್ದಾರೆ. ಹೀಗಾಗಿ ಡೆಲ್ಲಿ ತಂಡವು ಅವರ ಸ್ಥಾನದಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಆದಾಗ್ಯೂ ಈ ಸೀಸನ್ನಲ್ಲಿ ಮೆಕ್‌ಗುರ್ಕ್ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಆಡಿದ 6 ಪಂದ್ಯಗಳಲ್ಲಿ ಕೇವಲ 9.17 ಸರಾಸರಿಯಲ್ಲಿ ಕೇವಲ 55 ರನ್ ಗಳಿಸಿದ್ದರು.
IPL 2025: ತಾತ್ಕಾಲಿಕ ಬದಲಾವಣೆ; BCCI ನಿರ್ಧಾರದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟ 7 ತಂಡಗಳು
ಮತ್ತೊಂದೆಡೆ, ನಾವು ಮುಸ್ತಾಫಿಜುರ್ ರೆಹಮಾನ್ ಬಗ್ಗೆ ಮಾತನಾಡಿದರೆ ಈ ಆಟಗಾರನಿಗೆ ಐಪಿಎಲ್‌ನಲ್ಲಿ 57 ಪಂದ್ಯಗಳ ಅನುಭವವಿದ್ದು, ಇದರಲ್ಲಿ ಅವರು 61 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಡೆಲ್ಲಿ ತಂಡದ ಪರ ಆಡುತ್ತಿರುವ ಮಿಚೆಲ್ ಸ್ಟಾರ್ಕ್ ಕೂಡ ಮತ್ತೆ ಭಾರತಕ್ಕೆ ಮರಳುವುದು ಅನುಮಾನವಾಗಿರುವ ಕಾರಣ ಮುಸ್ತಾಫಿಜುರ್ ರೆಹಮಾನ್ ಆಗಮನ ತಂಡಕ್ಕೆ ಬಲ ತಂದಿದೆ. ಸ್ಟಾರ್ಕ್‌ಗೆ ಪರ್ಯಾಯವಾಗಿ ರೆಹಮಾನ್ ಅವರನ್ನು ಆಡಿಸುವ ಸಾಧ್ಯತೆ ಇದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:36 pm, Wed, 14 May 25
