ENG vs IND: ಇಂಗ್ಲೆಂಡ್ ಪ್ರವಾಸಕ್ಕೆ 2 ವಿಭಿನ್ನ ತಂಡಗಳ ಆಯ್ಕೆಗೆ ಬಿಸಿಸಿಐ ನಿರ್ಧಾರ
India's England Tour 2025: 2025ರ ಐಪಿಎಲ್ ನಂತರ ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಭಿಮನ್ಯು ಈಶ್ವರನ್ ಮುಂತಾದ ಆಟಗಾರರನ್ನು ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಎರಡು ಪಂದ್ಯಗಳಿಗೂ ವಿಭಿನ್ನ ತಂಡಗಳನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಮೇ 30 ರಿಂದ ಪಂದ್ಯಗಳು ಆರಂಭವಾಗಲಿವೆ.

2025 ರ ಐಪಿಎಲ್ (IPL 2025) ಮುಗಿದ ನಂತರ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ (India’s England Tour 2025) ಮಾಡಲಿದ್ದು, ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಗೂ ಮುನ್ನ ಭಾರತ ಎ ತಂಡ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಪಂದ್ಯಗಳ ಸರಣಿಯನ್ನು ಆಡಲಿದೆ. ಎರಡು ಅನಧಿಕೃತ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಶೀಘ್ರದಲ್ಲೇ ಆಯ್ಕೆ ಮಾಡಬಹುದು. 14 ಸದಸ್ಯರ ಭಾರತ ಎ ತಂಡವನ್ನು ಅಜಿತ್ ಅಗರ್ಕರ್ ಈಗಾಗಲೇ ಆಯ್ಕೆ ಮಾಡಿದ್ದಾರೆ ಎಂಬ ವರದಿಗಳಿವೆ. ಆದರೆ ಎರಡು ಪಂದ್ಯಗಳಿಗೆ ಎರಡು ವಿಭಿನ್ನ ತಂಡಗಳನ್ನು ಆಯ್ಕೆ ಮಾಡಲಾಗುವುದು ಎಂಬ ಸುದ್ದಿ ಹೊರಬಿದ್ದಿದೆ. ಮೇ 30 ರಿಂದ ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ತಮ್ಮ ಮೊದಲ ಪಂದ್ಯವನ್ನು ಆಡಲಿವೆ. ಮೊದಲ ಪಂದ್ಯದಲ್ಲಿ ಯಾವ ಆಟಗಾರರು ಸ್ಥಾನ ಪಡೆಯಲಿದ್ದಾರೆ ಎಂಬುದರ ವಿವರ ಇಲ್ಲಿದೆ.
ಭಾರತ ಎ ಜೊತೆ ಜೈಸ್ವಾಲ್, ಕಿಶನ್
2025 ರ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಕಳಪೆ ಪ್ರದರ್ಶನ ನೀಡಿದ್ದು, ಈಗಾಗಲೇ ಪಂದ್ಯಾವಳಿಯಿಂದ ಹೊರಬಿದ್ದಿದೆ. ಆದ್ದರಿಂದ ರಾಜಸ್ಥಾನ್ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಮೊದಲ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸಲಾಗುವುದು. ಅವರಲ್ಲದೆ, ಇಶಾನ್ ಕಿಶನ್ ಕೂಡ ಭಾರತ ಎ ಜೊತೆ ಇಂಗ್ಲೆಂಡ್‌ಗೆ ಹೋಗಲಿದ್ದಾರೆ. ಧ್ರುವ್ ಜುರೆಲ್ ಮತ್ತು ಇಶಾನ್ ಕಿಶನ್ ಇಬ್ಬರೂ ಈ ತಂಡದಲ್ಲಿರುತ್ತಾರೆ.
ಠಾಕೂರ್ ವಾಪಸ್, ಈಶ್ವರನ್ ಮೇಲೆ ಕಣ್ಣು
ಶಾರ್ದೂಲ್ ಠಾಕೂರ್ ಟೀಂ ಇಂಡಿಯಾಗೆ ಮರಳುವುದು ಖಚಿತ ಎನ್ನಲಾಗುತ್ತಿದ್ದು, ಅದಕ್ಕಾಗಿಯೇ ಅವರನ್ನು ಭಾರತ ಎ ಜೊತೆ ಇಂಗ್ಲೆಂಡ್‌ಗೆ ಕಳುಹಿಸಲಾಗುತ್ತಿದೆ. ಇವರ ಜೊತೆಗೆ ಬಂಗಾಳದ ಆರಂಭಿಕ ಆಟಗಾರರಾದ ಅಭಿಮನ್ಯು ಈಶ್ವರನ್ ಮತ್ತು ನಿತೀಶ್ ರೆಡ್ಡಿ ಕೂಡ ಭಾರತ ಎ ತಂಡಕ್ಕೆ ಆಯ್ಕೆಯಾಗುವುದು ಖಚಿತ. ಹರಿಯಾಣದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಕೂಡ ಇಂಗ್ಲೆಂಡ್‌ಗೆ ಹೋಗಬಹುದು ಎಂಬ ಸುದ್ದಿ ಇದೆ. ಇವರಲ್ಲದೆ, ಕರುಣ್ ನಾಯರ್ ಸಹ ಇಂಗ್ಲೆಂಡ್‌ಗೆ ಹೋಗಲಿದ್ದಾರೆ. ಅಚ್ಚರಿಯ ವಿಷಯವೆಂದರೆ ಸರ್ಫರಾಜ್ ಖಾನ್ ಭಾರತ ಎ ಜೊತೆ ಇಂಗ್ಲೆಂಡ್‌ಗೆ ಹೋಗುವುದಿಲ್ಲ, ಆದರೆ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಬಹುದು. ಭಾರತ ಎ ತಂಡದ ಎರಡನೇ ಪಂದ್ಯಕ್ಕೆ ಶುಭ್ಮನ್ ಗಿಲ್, ಪ್ರಸಿದ್ಧ್ ಕೃಷ್ಣ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್ ಕೂಡ ತಂಡವನ್ನು ಸೇರಿಕೊಳ್ಳಲಿದ್ದಾರೆ.
IPL 2025: ಬರುವುದಿಲ್ಲ; ಡೆಲ್ಲಿ ತಂಡಕ್ಕೆ ಕೈಕೊಟ್ಟ ಇಬ್ಬರು ಆಸ್ಟ್ರೇಲಿಯಾ ಆಟಗಾರರು
ಭಾರತ ಎ ಸಂಭಾವ್ಯ ತಂಡ: ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್, ಕರುಣ್ ನಾಯರ್, ನಿತೀಶ್ ಕುಮಾರ್ ರೆಡ್ಡಿ, ಅಭಿಮನ್ಯು ಈಶ್ವರನ್, ಧ್ರುವ್ ಜುರೆಲ್, ಶಾರ್ದೂಲ್ ಠಾಕೂರ್, ತನುಷ್ ಕೋಟ್ಯಾನ್, ಮುಖೇಶ್ ಕುಮಾರ್, ಆಕಾಶ್ ದೀಪ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್ ಮತ್ತು ಮಾನವ್ ಸುತಾರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
