ICC rankings: ಟೆಸ್ಟ್ ಕ್ರಿಕೆಟ್ನಲ್ಲಿ ವಿಶ್ವದಾಖಲೆ ಸೃಷ್ಟಿಸಿದ ರವೀಂದ್ರ ಜಡೇಜಾ
Ravindra Jadeja Creates History: ರವೀಂದ್ರ ಜಡೇಜಾ ಐಸಿಸಿ ಟೆಸ್ಟ್ ಆಲ್-ರೌಂಡರ್ ಶ್ರೇಯಾಂಕದಲ್ಲಿ 1152 ದಿನಗಳ ಕಾಲ ನಂಬರ್ ಒನ್ ಸ್ಥಾನದಲ್ಲಿ ಉಳಿದು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಮಾರ್ಚ್ 9, 2022 ರಿಂದ ಈ ಸ್ಥಾನದಲ್ಲಿರುವ ಜಡೇಜಾ 400 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಜಡೇಜಾ ಹೊರತುಪಡಿಸಿ ಟಾಪ್ 10 ರಲ್ಲಿ ಭಾರತದ ಬೇರೆ ಯಾವುದೇ ಆಲ್‌ರೌಂಡರ್ ಇಲ್ಲ. ಅವರ ನಂತರ, ಅಕ್ಷರ್ ಪಟೇಲ್ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.

ಒಂದೆಡೆ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೆ, ಮತ್ತೊಂದೆಡೆ ರವೀಂದ್ರ ಜಡೇಜಾ (Ravindra Jadeja) ಟೆಸ್ಟ್ ಕ್ರಿಕೆಟ್ನಲ್ಲಿ ಇತ್ತೀಚೆಗೆ ಯಾವ ಪಂದ್ಯವನ್ನು ಆಡದಿದ್ದರೂ ಇತಿಹಾಸ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟ್ನ ದೀರ್ಘ ಸ್ವರೂಪದಲ್ಲಿ ವಿಶ್ವ ದಾಖಲೆ ಸೃಷ್ಟಿಸಿರುವ ರವೀಂದ್ರ ಜಡೇಜಾ ಟೆಸ್ಟ್ ಆಲ್‌ರೌಂಡರ್‌ಗಳ ರ್ಯಾಂಕಿಂಗ್ನಲ್ಲಿ (Test all-rounder ranking) ಅತ್ಯಧಿಕ ದಿನಗಳವರೆಗೆ ಅಗ್ರಸ್ಥಾನದಲ್ಲಿ ಉಳಿಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಜಡೇಜಾ ಮತ್ತೆ ನಂಬರ್ ಒನ್
ವಾಸ್ತವವಾಗಿ ಐಸಿಸಿ ಇಂದು ಟೆಸ್ಟ್ ಆಲ್‌ರೌಂಡರ್‌ಗಳ ಹೊಸ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ರವೀಂದ್ರ ಜಡೇಜಾ 400 ರೇಟಿಂಗ್ ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಈ ಮೂಲಕ ಜಡೇಜಾ ಐಸಿಸಿ ಟೆಸ್ಟ್ ಆಲ್‌ರೌಂಡರ್ ವಿಭಾಗದಲ್ಲಿ ಅತಿ ಹೆಚ್ಚು ದಿನಗಳ ಕಾಲ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿರುವ ಆಟಗಾರನೆಂಬ ವಿಶ್ವದಾಖಲೆ ಸೃಷ್ಟಿಸಿದ್ದಾರೆ.
1152 ದಿನಗಳಿಂದ ನಂ.1
ರವೀಂದ್ರ ಜಡೇಜಾ ಮಾರ್ಚ್ 9, 2022 ರಂದು ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಟೆಸ್ಟ್ ಆಲ್‌ರೌಂಡರ್ ಸ್ಥಾನವನ್ನು ಅಲಂಕರಿಸಿದ್ದರು. ಅಂದಿನಿಂದ 38 ತಿಂಗಳುಗಳು ಕಳೆದಿವೆ, ರವೀಂದ್ರ ಜಡೇಜಾ ನಿರಂತರವಾಗಿ 1152 ದಿನಗಳ ಕಾಲ ನಂಬರ್ ಒನ್ ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. 2022 ರಲ್ಲಿ ವಿಶ್ವದ ನಂಬರ್ ಒನ್ ಟೆಸ್ಟ್ ಆಲ್‌ರೌಂಡರ್ ಸ್ಥಾನಕ್ಕೇರುವ ಮೊದಲು ಜಡೇಜಾ ಆಗಸ್ಟ್ 2017 ರಲ್ಲಿ ಒಂದು ವಾರ ನಂಬರ್ ಒನ್ ಟೆಸ್ಟ್ ಆಲ್‌ರೌಂಡರ್ ಆಗಿದ್ದರು.
ಜಡೇಜಾಗೆ ಮಿರಾಜ್ ಪೈಪೋಟಿ
ಇತ್ತೀಚಿನ ಟೆಸ್ಟ್ ಆಲ್‌ರೌಂಡರ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಳ್ಳಲು, ರವೀಂದ್ರ ಜಡೇಜಾ 327 ರೇಟಿಂಗ್ ಅಂಕಗಳನ್ನು ಹೊಂದಿರುವ ಬಾಂಗ್ಲಾದೇಶದ ಮೆಹದಿ ಹಸನ್ ಮಿರಾಜ್ ಅವರೊಂದಿಗೆ ನೇರ ಪೈಪೋಟಿಯಲ್ಲಿದ್ದರು. ಹೊಸ ಶ್ರೇಯಾಂಕದಲ್ಲಿ, ಮೆಹದಿ ಹಸನ್, ಮಾರ್ಕೊ ಜಾನ್ಸನ್ ಅವರನ್ನು ಹಿಂದಿಕ್ಕಿ 2 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಾರ್ಕೊ ಯಾನ್ಸನ್ ಒಂದು ಸ್ಥಾನ ಕುಸಿದು 3 ನೇ ಸ್ಥಾನಕ್ಕೆ ಬಂದಿದ್ದು ಅವರು 294 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿದ್ದಾರೆ.
Ravindra Jadeja: 4 ಪದಗಳ ಉತ್ತರ; ನಿವೃತ್ತಿ ವದಂತಿಯ ಬಗ್ಗೆ ಮೌನ ಮುರಿದ ರವೀಂದ್ರ ಜಡೇಜಾ
ಇನ್ನು ಈ ಪಟ್ಟಿಯಲ್ಲಿ ಆಸೀಸ್ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ನಾಲ್ಕನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 5 ನೇ ಸ್ಥಾನದಲ್ಲಿದ್ದಾರೆ. ಜಡೇಜಾ ಹೊರತುಪಡಿಸಿ ಟಾಪ್ 10 ರಲ್ಲಿ ಭಾರತದ ಬೇರೆ ಯಾವುದೇ ಆಲ್‌ರೌಂಡರ್ ಇಲ್ಲ. ಅವರ ನಂತರ, ಅಕ್ಷರ್ ಪಟೇಲ್ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
