WPL 2023, DC vs MI FINAL, Highlights: ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ

DC vs MI FINAL, WPL 2023: ಬ್ರಬನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ.

WPL 2023, DC vs MI FINAL, Highlights: ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ
ಫೈನಲ್ ಕದನ

Updated on: Mar 26, 2023 | 11:12 PM

ಬ್ರಬನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ.ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ, ಮುಂಬೈ ಇಂಡಿಯನ್ಸ್ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

LIVE NEWS & UPDATES

The liveblog has ended.
  • 26 Mar 2023 10:48 PM (IST)

    6 ಎಸೆತಗಳಲ್ಲಿ 5 ರನ್ ಅಗತ್ಯ

    ಪಂದ್ಯ ರೋಚಕ ಘಟ್ಟ ತಲುಪಿದ್ದು, ಈ ಓವರ್‌ನಲ್ಲಿ 2 ಅದ್ಭುತ ಬೌಂಡರಿ ಬಂದವು. ಮುಂಬೈ ಪರ ಎಮಿಲಿಯಾ ಕೆರ್ 13 ರನ್ ಹಾಗೂ ಸಿವರ್ ಬ್ರಂಟ್ 54 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 6 ಎಸೆತಗಳಲ್ಲಿ 5 ರನ್ ಅಗತ್ಯವಿದೆ.

  • 26 Mar 2023 10:41 PM (IST)

    12 ಎಸೆತಗಳಲ್ಲಿ 21 ರನ್

    ಮುಂಬೈ ಪರ ಎಮಿಲಿಯಾ ಕೆರ್ 1 ರನ್ ಹಾಗೂ ಸಿವರ್ ಬ್ರಂಟ್ 45 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 12 ಎಸೆತಗಳಲ್ಲಿ 21 ರನ್ ಅಗತ್ಯವಿದೆ.

  • 26 Mar 2023 10:41 PM (IST)

    17 ಓವರ್‌ ಆಟ ಅಂತ್ಯ

    ಮುಂಬೈ ಪರ ಎಮಿಲಿಯಾ ಕೆರ್ 1 ರನ್ ಹಾಗೂ ಸಿವರ್ ಬ್ರಂಟ್ 45 ರನ್ ಗಳಿಸಿ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಗೆಲುವಿಗೆ 18 ಎಸೆತಗಳಲ್ಲಿ 26 ರನ್ ಅಗತ್ಯವಿದೆ.

  • 26 Mar 2023 10:40 PM (IST)

    ಮೂರನೇ ವಿಕೆಟ್ ಪತನ

    ಮುಂಬೈ ಇಂಡಿಯನ್ಸ್ ಮೂರನೇ ವಿಕೆಟ್ ಪತನಗೊಂಡಿತು, ನಾಯಕಿ ಹರ್ಮನ್‌ಪ್ರೀತ್ ಕೌರ್ 37 ರನ್‌ಗಳಿಗೆ ರನೌಟ್ ಆದರು.

  • 26 Mar 2023 10:28 PM (IST)

    15 ಓವರ್‌ಗಳ ಆಟ ಅಂತ್ಯ

    ಈ ಓವರ್‌ನ ಮೊದಲ ಎಸೆತದಲ್ಲಿ ಅಮೋಘ ಬೌಂಡರಿ ಬಂದಿತು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 36 ರನ್ ಮತ್ತು ಸಿವರ್ ಬ್ರಂಟ್ 28 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 10:28 PM (IST)

    14 ಓವರ್‌ಗಳ ನಂತರ ಮುಂಬೈ ಸ್ಕೋರ್ 81/2

    ಈ ಓವರ್‌ನಲ್ಲಿ ಮುಂಬೈ 5 ರನ್ ಗಳಿಸಿತು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 31 ರನ್ ಮತ್ತು ಸಿವರ್ ಬ್ರಂಟ್ 27 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 10:28 PM (IST)

    ಕೌರ್ ಬೌಂಡರಿ

    ಈ ಓವರ್‌ನಲ್ಲಿ ನಾಯಕಿ ಕೌರ್ ಅದ್ಭುತ ಬೌಂಡರಿ ಬಾರಿಸಿದರು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 28 ರನ್ ಮತ್ತು ಸಿವರ್ ಬ್ರಂಟ್ 26 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 10:12 PM (IST)

    2 ಬೌಂಡರಿ

    ಈ ಓವರ್‌ನಲ್ಲಿ 2 ಬೌಂಡರಿಗಳು ಬಂದವು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 22 ಮತ್ತು ಸಿವರ್ ಬ್ರಂಟ್ 23 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 10:06 PM (IST)

    10 ಓವರ್‌ ಆಟ ಅಂತ್ಯ

    ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 16 ರನ್ ಮತ್ತು ಸಿವರ್ ಬ್ರಂಟ್ 16 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಮುಂಬೈ ಗೆಲುವಿಗೆ 60 ಎಸೆತಗಳಲ್ಲಿ 80 ರನ್ ಬೇಕಿದೆ.

  • 26 Mar 2023 10:04 PM (IST)

    ಕೌರ್ ಬೌಂಡರಿ

    ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮೋಘ ಬೌಂಡರಿ ಬಾರಿಸಿದರು. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 11 ರನ್ ಮತ್ತು ಸಿವರ್ ಬ್ರಂಟ್ 15 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 10:03 PM (IST)

    8 ಓವರ್‌ಗಳ ನಂತರ ಮುಂಬೈ ಸ್ಕೋರ್ 36/2

    ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 4 ಮತ್ತು ಸಿವರ್ ಬ್ರಂಟ್ 13 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 09:46 PM (IST)

    ಪವರ್ ಪ್ಲೇ ಅಂತ್ಯ

    ಜೊನಾಸನ್ ಅವರ ಓವರ್‌ನಲ್ಲಿ 1 ರನ್ ಕೂಡ ಬರಲಿಲ್ಲ. ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 2 ರನ್ ಮತ್ತು ಸಿವರ್ ಬ್ರಂಟ್ 4 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 09:45 PM (IST)

    4 ಓವರ್‌ ಅಂತ್ಯ, 24/2

    ಮುಂಬೈ ಪರ ಹರ್ಮನ್‌ಪ್ರೀತ್ ಕೌರ್ 1 ರನ್ ಮತ್ತು ಸಿವರ್ ಬ್ರಂಟ್ 2 ರನ್‌ಗಳೊಂದಿಗೆ ಆಡುತ್ತಿದ್ದಾರೆ.

  • 26 Mar 2023 09:44 PM (IST)

    ಮ್ಯಾಥ್ಯೂಸ್ ಔಟ್

    ಮುಂಬೈ ಇಂಡಿಯನ್ಸ್‌ನ ಎರಡನೇ ವಿಕೆಟ್ ಪತನಗೊಂಡಿತು, ಡೆಲ್ಲಿ ಬೌಲರ್ ಜೊನಾಸನ್ ಅವರ ಓವರ್‌ನಲ್ಲಿ ಮ್ಯಾಥ್ಯೂಸ್ 14 ರನ್‌ಗಳಿಗೆ ಕ್ಯಾಚಿತ್ತು ನಿರ್ಗಮಿಸಿದರು.

  • 26 Mar 2023 09:44 PM (IST)

    3 ಓವರ್‌ಗಳ ನಂತರ ಮುಂಬೈ ಸ್ಕೋರ್ 22/1

    ಈ ಓವರ್‌ನಲ್ಲಿ ಫೋರ್ ಬಂತು. ಮುಂಬೈ ಪರ ಮ್ಯಾಥ್ಯೂಸ್ 13 ರನ್ ಹಾಗೂ ಸಿವರ್ ಬ್ರಂಟ್ 2 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 09:44 PM (IST)

    ಮೊದಲ ವಿಕೆಟ್ ಪತನ

    ಮುಂಬೈ ಇಂಡಿಯನ್ಸ್‌ನ ಮೊದಲ ವಿಕೆಟ್ ಪತನ, ರಾಧಾ ಯಾದವ್ ಅವರ ಓವರ್‌ನಲ್ಲಿ ಯಾಸ್ತಿಕಾ ಭಾಟಿಯಾ 4 ರನ್‌ಗಳಿಗೆ ಕ್ಯಾಚಿತ್ತು ಔಟಾದರು.

  • 26 Mar 2023 09:43 PM (IST)

    ಮೊದಲ ಓವರ್‌ ಅಂತ್ಯ

    ಮೊದಲ ಓವರ್‌ನಲ್ಲಿ 2 ಬೌಂಡರಿ ಬಂದವು. ಮುಂಬೈ ಪರ ಮ್ಯಾಥ್ಯೂಸ್ 8 ಹಾಗೂ ಯಾಸ್ತಿಕಾ 0 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 09:15 PM (IST)

    ಡೆಲ್ಲಿ ಇನ್ನಿಂಗ್ಸ್ ಅಂತ್ಯ

    ಅಂತಿಮ ಓವರ್‌ನಲ್ಲಿ 2 ಸಿಕ್ಸರ್‌ ಬಂದವು. ಅಂತಿಮವಾಗಿ ಡೆಲ್ಲಿ ಪರ ರಾಧಾ 27 ರನ್ ಹಾಗೂ ಶಿಖಾ ಪಾಂಡೆ 27 ರನ್ ಗಳಿಸಿ ಅಜೇಯರಾಗಿ ಮರಳಿದರು.

  • 26 Mar 2023 09:14 PM (IST)

    19 ಓವರ್‌ ಅಂತ್ಯ

    ವಾಂಗ್‌ ಅವರ ಓವರ್‌ನಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್‌ ಬಂತು. ಡೆಲ್ಲಿ ಪರ ರಾಧಾ 12 ರನ್ ಹಾಗೂ ಶಿಖಾ ಪಾಂಡೆ 26 ರನ್ ಗಳಿಸಿ ಆಡುತ್ತಿದ್ದಾರೆ.19 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 115/9.

  • 26 Mar 2023 09:13 PM (IST)

    18 ಓವರ್‌ಗಳ ನಂತರ ದೆಹಲಿ ಸ್ಕೋರ್ 95/9

    ರಾಧಾ 7 ರನ್ ಮತ್ತು ಶಿಖಾ ಪಾಂಡೆ 11 ರನ್‌ಗಳಿಸಿ ಆಡುತ್ತಿದ್ದಾರೆ.18 ಓವರ್‌ಗಳ ನಂತರ ದೆಹಲಿಯ ಸ್ಕೋರ್ 95/9.

  • 26 Mar 2023 08:54 PM (IST)

    ಒಂಬತ್ತನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್‌ನ ಒಂಬತ್ತನೇ ವಿಕೆಟ್ ಪತನ. ತಾನಿಯಾ ಭಾಟಿಯಾ 0 ರನ್‌ಗಳಿಗೆ ಔಟಾದರು.

  • 26 Mar 2023 08:53 PM (IST)

    ಎಂಟನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್‌ನ ಎಂಟನೇ ವಿಕೆಟ್ ಪತನವಾಯಿತು, ಮಿನು 1 ರನ್‌ಗೆ ಸ್ಟಂಪ್‌ಔಟ್ ಆದರು.

  • 26 Mar 2023 08:53 PM (IST)

    15 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 79/7

    ಡೆಲ್ಲಿ ಪರ ಶಿಖಾ 3 ರನ್ ಮತ್ತು ಮಿನು ಮಣಿ 1 ರನ್ ಗಳಿಸಿ ಆಡುತ್ತಿದ್ದಾರೆ.15 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 79/7.

  • 26 Mar 2023 08:39 PM (IST)

    7ನೇ ವಿಕೆಟ್

    ಡೆಲ್ಲಿ ಕ್ಯಾಪಿಟಲ್ಸ್‌ನ ಏಳನೇ ವಿಕೆಟ್ ಪತನ, ಜೊನಾಸನ್ 2 ರನ್‌ಗಳಿಗೆ ಕ್ಯಾಚಿತ್ತು ಔಟಾಗಿದ್ದಾರೆ.

  • 26 Mar 2023 08:39 PM (IST)

    ಆರನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್‌ನ ಆರನೇ ವಿಕೆಟ್ ಪತನ, ಅರುಧಂತಿ ರೆಡ್ಡಿ 0 ರನ್‌ಗೆ ಕ್ಯಾಚಿತ್ತು ಔಟಾದರು

  • 26 Mar 2023 08:35 PM (IST)

    ಮೆಗ್ ಲ್ಯಾನಿಂಗ್ ಔಟ್

    ಡೆಲ್ಲಿ ಕ್ಯಾಪಿಟಲ್ಸ್ ಐದನೇ ವಿಕೆಟ್ ಪತನಗೊಂಡಿತು, ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಗಳಿಸಿ ರನೌಟ್ ಆದರು.

  • 26 Mar 2023 08:27 PM (IST)

    4ನೇ ವಿಕೆಟ್ ಪತನ

    ಈ ಓವರ್‌ನಲ್ಲಿ ಮಾರಿಜಾನ್ ಕೆಪ್ 18 ರನ್ ಗಳಿಸಿ ಔಟಾದರು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಹಾಗೂ ಜೋನಾಸನ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 08:21 PM (IST)

    10 ಓವರ್‌ಗಳ ಆಟ ಅಂತ್ಯ

    ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 35 ರನ್ ಮತ್ತು ಮರಿಜಾನ್ ಕೇಪ್ 14 ರನ್ ಗಳಿಸಿ ಆಡುತ್ತಿದ್ದಾರೆ.10 ಓವರ್‌ಗಳ ನಂತರ ಡೆಲ್ಲಿ ಸ್ಕೋರ್ 68/3.

  • 26 Mar 2023 08:12 PM (IST)

    ಡೆಲ್ಲಿ ಅರ್ಧಶತಕ

    ಮುಂಬೈ ಬೌಲರ್ ವಾಂಗ್ ಅವರ ಓವರ್‌ನಲ್ಲಿ ಡೆಲ್ಲಿ 5 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 27 ರನ್ ಹಾಗೂ ಮರಿಜನ್ ಕಾಪ್ 6 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 08:04 PM (IST)

    6ನೇ ಓವರ್‌ನಲ್ಲಿ 1 ರನ್

    ಮುಂಬೈ ಬೌಲರ್ ಸೈಕಾ ಇಶಾಕ್ ಅವರ ಓವರ್‌ನಲ್ಲಿ ಡೆಲ್ಲಿ 1 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 17 ರನ್ ಹಾಗೂ ಮರಿಜಾನ್ ಕಪ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 08:03 PM (IST)

    5 ಓವರ್‌ ಆಟ ಅಂತ್ಯ

    ಮುಂಬೈ ಬೌಲರ್ ವಾಂಗ್ ಅವರ ಓವರ್‌ನಲ್ಲಿ ಡೆಲ್ಲಿ 3 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 16 ರನ್ ಹಾಗೂ ಮರಿಜಾನ್ ಕಪ್ 1 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 07:59 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಮೂರನೇ ವಿಕೆಟ್ ಪತನ

    ಡೆಲ್ಲಿ ಕ್ಯಾಪಿಟಲ್ಸ್‌ನ ಮೂರನೇ ವಿಕೆಟ್ ಪತನವಾಗಿದೆ. ವಾಂಗ್ ಅವರ ಫುಲ್ ಟಾಸ್‌ ಎಸೆತದಲ್ಲಿ 9 ರನ್ ಗಳಿಸಿದ್ದ ಜೆಮಿಮಾ ಕ್ಯಾಚಿತ್ತು ಔಟಾಗಿದ್ದಾರೆ.

  • 26 Mar 2023 07:58 PM (IST)

    3 ಓವರ್‌ಗಳ ನಂತರ 29/2

    ಈ ಓವರ್‌ನಲ್ಲಿ 3 ಬೌಂಡರಿಗಳು ಕಂಡವು.ಮುಂಬೈ ಬೌಲರ್ ಸಿವರ್ ಬ್ರಂಟ್ ಅವರ ಓವರ್‌ನಲ್ಲಿ ಡೆಲ್ಲಿ 13 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 10 ರನ್ ಹಾಗೂ ಜೆಮಿಮಾ 8 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 07:49 PM (IST)

    ಎರಡನೇ ವಿಕೆಟ್ ಪತನ

    ವಾಂಗ್ ಒಂದೇ ಓವರ್​ನಲ್ಲಿ ಮತ್ತೊಂದು ವಿಕೆಟ್ ಪತನವಾಗಿದೆ. ಆಲಿಸ್ ಕ್ಯಾಪ್ಸಿ ಶೂನ್ಯಕ್ಕೆ ಕ್ಯಾಚಿತ್ತು ಔಟಾದರು.

  • 26 Mar 2023 07:48 PM (IST)

    ಶಫಾಲಿ ಔಟ್

    ಹಿಂದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದ ಮುಂಬೈ ಬೌಲರ್ ವಾಂಗ್, ಡೆಲ್ಲಿ ಕ್ಯಾಪಿಟಲ್ಸ್‌ನ ಮೊದಲ ವಿಕೆಟ್ ಉರುಳಿಸಿದ್ದಾರೆ. ಶೆಫಾಲಿ ವರ್ಮಾ 11 ರನ್‌ಗಳಿಗೆ ಕ್ಯಾಚಿತ್ತು ಔಟಾದರು.

  • 26 Mar 2023 07:35 PM (IST)

    ಮೊದಲ ಓವರ್‌ನ ನಂತರ ಡೆಲ್ಲಿ ಸ್ಕೋರ್ 2/0

    ಮುಂಬೈ ಪರ ಮೊದಲ ಓವರ್ ಎಸೆದ ಸಿವರ್ ಬ್ರಂಟ್ ಅವರ ಓವರ್‌ನಲ್ಲಿ ಡೆಲ್ಲಿ 2 ರನ್ ಗಳಿಸಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 1 ರನ್ ಹಾಗೂ ಶೆಫಾಲಿ ವರ್ಮಾ 1 ರನ್ ಗಳಿಸಿ ಆಡುತ್ತಿದ್ದಾರೆ.

  • 26 Mar 2023 07:34 PM (IST)

    ಉಭಯ ತಂಡಗಳು

  • 26 Mar 2023 07:23 PM (IST)

    ಮುಂಬೈ ಇಂಡಿಯನ್ಸ್

    ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹೇಲಿ ಮ್ಯಾಥ್ಯೂಸ್, ನೇಟ್ ಸಿವರ್-ಬ್ರಂಟ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಕೆರ್, ಪೂಜಾ ವಸ್ತ್ರಾಕರ್, ಇಸ್ಸಿ ವಾಂಗ್, ಅಮನ್ಜೋತ್ ಕೌರ್, ಹುಮೈರಾ ಕಾಜಿ, ಜಿಂತಮಣಿ ಕಲಿತಾ, ಸೈಕಾ ಇಶಾಕ್

  • 26 Mar 2023 07:22 PM (IST)

    ಡೆಲ್ಲಿ ಕ್ಯಾಪಿಟಲ್ಸ್

    ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಮೇರಿಜಾನ್ ಕೇಪ್, ಎಲಿಸ್ ಕ್ಯಾಪ್ಸಿ, ಜೆಸ್ ಜೊನಾಸನ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಶಿಖಾ ಪಾಂಡೆ, ಮಿನು ಮಣಿ

  • 26 Mar 2023 07:04 PM (IST)

    ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

    ಅಂತಿಮ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಂದ್ಯ 7.30ಕ್ಕೆ ಆರಂಭವಾಗಲಿದೆ.

  • 26 Mar 2023 07:02 PM (IST)

    ಶೀಘ್ರದಲ್ಲೇ ಟಾಸ್

    ಮಹಿಳೆಯರ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದ ಟಾಸ್ ಸಂಜೆ 7 ಗಂಟೆಗೆ ನಡೆಯುವ ಸಾಧ್ಯತೆಯಿದೆ.

Published On - 6:59 pm, Sun, 26 March 23

Follow Us