DC vs MI WPL Final: ಚೊಚ್ಚಲ ಡಬ್ಲ್ಯುಪಿಎಲ್ ಕಿರೀಟ ತೊಟ್ಟ ಹರ್ಮನ್‌ಪ್ರೀತ್ ಪಡೆ..!

DC vs MI WPL Final: ಬ್ರಬನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ.

DC vs MI WPL Final: ಚೊಚ್ಚಲ ಡಬ್ಲ್ಯುಪಿಎಲ್ ಕಿರೀಟ ತೊಟ್ಟ ಹರ್ಮನ್‌ಪ್ರೀತ್ ಪಡೆ..!
ಚಾಂಪಿಯನ್ ಮುಂಬೈ
Follow us
ಪೃಥ್ವಿಶಂಕರ
|

Updated on:Mar 26, 2023 | 11:30 PM

ಮಹಿಳೆಯರ ಪ್ರೀಮಿಯರ್ ಲೀಗ್‌ನ (Women’s Premier League) ಮೊದಲ ಸೀಸನ್‌ನ ಮೊದಲ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಅಂತಿಮವಾಗಿ ಉತ್ತರ ಸಿಕ್ಕಿದೆ. ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ( Mumbai Indians) ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 7 ವಿಕೆಟ್​ಗಳಿಂದ ಮಣಿಸುವುದರೊಂದಿಗೆ ಪ್ರಶಸ್ತಿ ಎತ್ತಿಹಿಡಿದಿದೆ. ಡೆಲ್ಲಿ ತಂಡವನ್ನು ಮಣಿಸುವುದರೊಂದಿಗೆ ಇನ್ನೊಂದು ವಿನೂತನ ದಾಖಲೆಯನ್ನು ಬರೆದಿರುವ ಮುಂಬೈ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur), ಡೆಲ್ಲಿ ತಂಡದ ನಾಯಕಿ ಮೆಗ್ ಲ್ಯಾನಿಂಗ್ ವಿರುದ್ಧ ಮೊದಲ ಬಾರಿಗೆ ಫೈನಲ್‌ನಲ್ಲಿ ಜಯಗಳಿಸುವ ಮೂಲಕ ತನ್ನ ಸೋಲಿನ ಸರಮಾಲೆಯಿಂದ ಹೊರಬಂದಿದ್ದಾರೆ. ವಾಸ್ತವವಾಗಿ ಮೆಗ್ ಲ್ಯಾನಿಂಗ್ (Meg Lanning) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುತ್ತಾರೆ. ಅವರ ನಾಯಕತ್ವದಲ್ಲಿ ಆಸೀಸ್ ತಂಡ ಹಲವು ಬಾರಿ ಟೀಂ ಇಂಡಿಯಾ ಮಹಿಳಾ ತಂಡವನ್ನು ಸೋಲಸಿ ಪ್ರಶಸ್ತಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ, ಮುಂಬೈ ಇಂಡಿಯನ್ಸ್ ಬೌಲರ್‌ಗಳ ಅದ್ಭುತ ಪ್ರದರ್ಶನದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ಟಾಸ್‌ ಗೆದ್ದು ಪಂದ್ಯ ಸೋತ ಡೆಲ್ಲಿ

ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಹಿಂದೆ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬಿಗ್ ಸ್ಕೋರ್ ಮಾಡಿತ್ತು. ಹಾಗಾಗಿಯೇ ಡೆಲ್ಲಿ ನಾಯಕಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇದಕ್ಕೆ ಪೂರಕವಾಗಿ ಎರಡನೇ ಓವರ್‌ನಲ್ಲಿ ಇಸ್ಸಿ ವಾಂಗ್‌ ಅವರ ಮೊದಲ ಎರಡು ಎಸೆತಗಳಲ್ಲಿ ಶೆಫಾಲಿ ವರ್ಮಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಅಬ್ಬರಿಸುವ ಸೂಚನೆ ನೀಡಿದರು.

WI vs SA: 43 ಎಸೆತಗಳಲ್ಲಿ ಸುನಾಮಿ ಬ್ಯಾಟಿಂಗ್; ಆಫ್ರಿಕಾ ಪರ ಚೊಚ್ಚಲ ಟಿ20 ಶತಕ ಸಿಡಿಸಿದ ಡಿಕಾಕ್!

ಫುಲ್ ಟಾಸ್ ಬಾಲ್‌ಗಳಿಗೆ 3 ವಿಕೆಟ್

ಆದರೆ ಆ ನಂತರ ಡೆಲ್ಲಿ ತಂಡದ ಬ್ಯಾಟಿಂಗ್ ಲಯ ತಪ್ಪಿತು. ಅದು ಎಷ್ಟರಮಟ್ಟಿಗೆ ಎಂದರೆ ವಾಂಗ್ (3/42) ಒಂದೇ ಓವರ್‌ನಲ್ಲಿ ಎಸೆದ ಎರಡು ಫುಲ್ ಟಾಸ್ ಬಾಲ್‌ಗಳಿಗೆ ಡೆಲ್ಲಿ ತಂಡದ 2 ವಿಕೆಟ್​ಗಳು ಉರುಳಿದವು. ಮೊದಲು ಶೆಫಾಲಿ ವರ್ಮಾ ಕ್ಯಾಚ್ ನೀಡಿ ಔಟಾದರೆ, ಆ ನಂತರ ಬಂದ ಆಲಿಸ್ ಕ್ಯಾಪ್ಸಿ ಖಾತೆ ತೆರೆಯದೆ ಹಿಂತಿರುಗಿದರು.

ಈ ಎರಡು ವಿಕೆಟ್ ಸಾಲದೆಂಬಂತೆ ವಾಂಗ್ ಪಡೆದ ಮೂರನೇ ವಿಕೆಟ್ ಕೂಡ ಫುಲ್ ಟಾಸ್​ಗೆ ಬಲಿಯಾಯಿತು. ಆ ನಂತರ ನಾಯಕಿ ಲ್ಯಾನಿಂಗ್ (35) ಡೆಲ್ಲಿ ಇನ್ನಿಂಗ್ಸ್ ನಿಭಾಯಿಸಲು ಯತ್ನಿಸಿದರಾದರೂ 12ನೇ ಓವರ್‌ನಲ್ಲಿ ರನ್ ಔಟ್ ಆಗುವುದರೊಂದಿಗೆ ಡೆಲ್ಲಿ ತಂಡಕ್ಕೆ ಮತ್ತೊಂದು ಆಘಾತ ನೀಡಿದರು. ಹೀಗಾಗಿ ಡೆಲ್ಲಿ 16ನೇ ಓವರ್‌ನಲ್ಲಿ 9ನೇ ವಿಕೆಟ್ ಕಳೆದುಕೊಂಡು ಕೇವಲ 79 ರನ್ ಗಳಿಸಿತ್ತು.

ಹೀಗಾಗಿ ಈ ಪಂದ್ಯದಲ್ಲಿ ಡೆಲ್ಲಿ ಸೋಲು ಖಚಿತ ಎನಿಸಲಾರಂಭಿಸಿತು. ಆದರೆ ಅಂತಿಮ ಹಂತದಲ್ಲಿ ರಾಧಾ ಯಾದವ್ (27 ರನ್, 12 ಎಸೆತ) ಮತ್ತು ಶಿಖಾ ಪಾಂಡೆ (27 ರನ್, 17 ಎಸೆತ) 4 ಓವರ್‌ಗಳಲ್ಲಿ 52 ರನ್ ಗಳಿಸಿ ತಂಡವನ್ನು ಗೌರವನ್ವಿತ ಮೊತ್ತಕ್ಕೆ ಕೊಂಡೊಯ್ದರು. ಈ ಪೈಕಿ ಕೊನೆಯ ಎರಡು ಓವರ್‌ಗಳಲ್ಲಿ 36 ರನ್‌ಗಳು ಬಂದವು. ಇನ್ನು ಮುಂಬೈ ಪರ ಹ್ಯಾಲಿ ಮ್ಯಾಥ್ಯೂಸ್‌ 4 ಓವರ್‌ಗಳಲ್ಲಿ 2 ಮೇಡನ್‌ ಓವರ್ ಬೌಲಿಂಗ್‌ ಮಾಡಿ ಕೇವಲ 5 ರನ್‌ ನೀಡಿ 3 ವಿಕೆಟ್‌ ಉರುಳಿಸಿದರು.

ಮುಂಬೈ ಆರಂಭವೂ ಉತ್ತಮವಾಗಿರಲಿಲ್ಲ

ಇಡೀ ಟೂರ್ನಿಯಲ್ಲಿ ಮುಂಬೈ ಪರ ಉತ್ತಮ ಓಪನಿಂಗ್ ನೀಡಿದ ಹ್ಯಾಲಿ ಮ್ಯಾಥ್ಯೂಸ್ ಮತ್ತು ಯಾಸ್ತಿಕಾ ಭಾಟಿಯಾ ಜೋಡಿಗೆ ಈ ಬಾರಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಲ್ಕನೇ ಓವರ್‌ನಲ್ಲಿ ಇಬ್ಬರೂ ಕೇವಲ 23 ರನ್​ಗಳಿಗೆ ಪೆವಿಲಿಯನ್‌ ಸೇರಿಕೊಂಡರು. ಹೀಗಾಗಿ ಪವರ್‌ಪ್ಲೇಯಲ್ಲಿ ಮುಂಬೈ ಖಾತೆಗೆ ಬಂದಿದ್ದು ಕೇವಲ 28 ರನ್. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ನೇಟ್ ಸೀವರ್-ಬ್ರಂಟ್ ಇನ್ನಿಂಗ್ಸ್ ಕೈಗೆತ್ತಿಕೊಂಡರು.

ಸೀಸನ್ ಉದ್ದಕ್ಕೂ ಮುಂಬೈ ತಂಡದ ಮಧ್ಯಮ ಕ್ರಮಾಂಕದ ಜೀವಾಳವಾಗಿದ್ದ ಈ ಇಬ್ಬರು ಬ್ಯಾಟರ್​ಗಳು ಅತ್ಯುತ್ತಮ ಜೊತೆಯಾಟವನ್ನು ಕಟ್ಟಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಇವರಿಬ್ಬರ ನಡುವೆ 72 ರನ್​ಗಳ ಜೊತೆಯಾಟ ನಡೆದಿದ್ದೇ ಡೆಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣವಾಯಿತು.

ಸಿವರ್-ಬ್ರಂಟ್ ಅರ್ಧಶತಕ

ಆದರೆ ಹರ್ಮನ್‌ಪ್ರೀತ್ ಕೌರ್ (37) ರನ್ ಕದಿಯಲು ಯತ್ನಿಸಿ ರನೌಟ್ ಆದರು. ಆದರೆ, ಇದಾದ ಬಳಿಕವೂ ದೃತಿಗೇಡದ ಸಿವರ್-ಬ್ರಂಟ್ ಕ್ರೀಸ್‌ನಲ್ಲಿ ಭದ್ರವಾಗಿ ಬೇರೂರಿ ಅರ್ಧಶತಕ ಪೂರೈಸಿದರು. 19ನೇ ಓವರ್‌ನಲ್ಲಿ ಅಮೆಲಿಯಾ ಕೆರ್ (ಅಜೇಯ 14) ಮತ್ತು ಸಿವರ್-ಬ್ರಂಟ್ (ಅಜೇಯ 60, 55 ಎಸೆತ) ಜೆಸ್ ಜಾನ್ಸನ್ ಅವರ ಓವರ್‌ನಲ್ಲಿ 3 ಬೌಂಡರಿ ಸೇರಿದಂತೆ 16 ರನ್ ಗಳಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. 20ನೇ ಓವರ್​ನ ಮೂರನೇ ಎಸೆತದಲ್ಲಿ ಸಿವರ್ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:03 pm, Sun, 26 March 23

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ