SA vs WI: ಬರೋಬ್ಬರಿ 517 ರನ್​: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೌತ್ ಆಫ್ರಿಕಾ

South Africa vs West Indies, 2nd T20I: 259 ರನ್​ಗಳ ಅಸಾಧಾರಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ತೂಫಾನ್ ಆರಂಭ ಒದಗಿಸಿದರು.

| Updated By: ಝಾಹಿರ್ ಯೂಸುಫ್

Updated on: Mar 26, 2023 | 10:08 PM

ಸೆಂಚುರಿಯನ್​ನ ಸೂಪರ್​ಸ್ಪೋರ್ಟ್ ಪಾರ್ಕ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಸೌತ್ ಆಫ್ರಿಕಾ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೊತ್ತವನ್ನು ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಸೌತ್ ಆಫ್ರಿಕಾ ತಂಡ ನಿರ್ಮಿಸಿದೆ.

1 / 7
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಾನ್ಸನ್ ಚಾರ್ಲ್ಸ್​ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

2 / 7
ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಚಾರ್ಲ್ಸ್​ ಸೌತ್ ಆಫ್ರಿಕಾ ಬೌಲರ್​ಗಳ ಬೆಂಡೆತ್ತಿದರು. ಪರಿಣಾಮ ಕೇವಲ 39 ಎಸೆತಗಳಲ್ಲಿ ಜಾನ್ಸನ್ ಚಾರ್ಲ್ಸ್ ಬ್ಯಾಟ್​ನಿಂದ ಶತಕ ಮೂಡಿಬಂತು. ಅಲ್ಲದೆ 46 ಎಸೆತಗಳಲ್ಲಿ 11 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ನೊಂದಿಗೆ 118 ರನ್​ ಚಚ್ಚಿದರು. ಈ ಸ್ಪೋಟಕ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 258 ರನ್​ ಕಲೆಹಾಕಿತು.

3 / 7
259 ರನ್​ಗಳ ಅಸಾಧಾರಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ತೂಫಾನ್ ಆರಂಭ ಒದಗಿಸಿದರು. ಬೃಹತ್ ಮೊತ್ತವನ್ನೇ ಟಾರ್ಗೆಟ್ ಮಾಡಿ ಬ್ಯಾಟ್ ಬೀಸಿದ ಡಿಕಾಕ್ ಸಿಕ್ಸ್-ಫೋರ್​ಗಳ ಸುರಿಮಳೆಗೈದರು. ಅಲ್ಲದೆ ಕೇವಲ 43 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ನೊಂದಿಗೆ ಶತಕ ಪೂರೈಸಿದರು. ಶತಕದ ಬೆನ್ನಲ್ಲೇ ಡಿಕಾಕ್ ಔಟ್ ಆಗಿ ಹೊರನಡೆದರು.

4 / 7
ಅಷ್ಟರಲ್ಲಾಗಲೇ ಸೌತ್ ಆಫ್ರಿಕಾ ತಂಡದ ಮೊತ್ತವು 10 ಓವರ್​ಗಳಲ್ಲಿ 150 ರ ಗಡಿದಾಟಿತ್ತು. ಇನ್ನು ರೀಝ ಹೆಂಡ್ರಿಕ್ಸ್ 28 ಎಸೆತಗಳಲ್ಲಿ 68 ರನ್​ ಚಚ್ಚಿದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ಐಡೆನ್ ಮಾರ್ಕ್ರಾಮ್ 21 ಎಸೆತಗಳಲ್ಲಿ ಅಜೇಯ 38 ರನ್​ ಬಾರಿಸಿದರು. ಪರಿಣಾಮ 18.5 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 259 ರನ್​ಗಳ ಗುರಿ ಮುಟ್ಟುವ ಮೂಲಕ ಹೊಸ ಇತಿಹಾಸ ನಿರ್ಮಿಸಿತು.

5 / 7
ಇದು ಟಿ20 ಕ್ರಿಕೆಟ್​ನಲ್ಲಿ ತಂಡವೊಂದು ಚೇಸ್ ಮಾಡಿದ ಅತ್ಯಧಿಕ ರನ್​ಗಳ ಗುರಿಯಾಗಿದೆ. ಇದಕ್ಕೂ ಮುನ್ನ 2022 ರಲ್ಲಿ ಸರ್ಬಿಯಾ ವಿರುದ್ಧ ಬಲ್ಗೆರಿಯಾ 246 ರನ್​ಗಳನ್ನು ಚೇಸ್ ಮಾಡಿ ಗೆದ್ದಿರುವುದು ದಾಖಲೆಯಾಗಿತ್ತು. ಇದೀಗ ಬರೋಬ್ಬರಿ 259 ರನ್​ಗಳ ಟಾರ್ಗೆಟ್ ಬೆನ್ನತ್ತಿ ಸೌತ್ ಆಫ್ರಿಕಾ ತಂಡವು ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

6 / 7
ಇನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಮೂಡಿಬಂದ ಅತ್ಯಧಿಕ ರನ್​ಗಳ ದಾಖಲೆ ಕೂಡ ಈ ಪಂದ್ಯದ ಪಾಲಾಗಿದೆ. ಇದಕ್ಕೂ ಮುನ್ನ ಭಾರತ (244) ಹಾಗೂ ವೆಸ್ಟ್ ಇಂಡೀಸ್ (245) ನಡುವಣ ಪಂದ್ಯದಲ್ಲಿ 489 ರನ್ ಮೂಡಿಬಂದಿತ್ತು. ಇದೀಗ ಬರೋಬ್ಬರಿ 517 ರನ್​ ಕಲೆಹಾಕುವ ಮೂಲಕ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟಿ20 ಕ್ರಿಕೆಟ್​ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

7 / 7
Follow us
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್

ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್