AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಸ್ವಾತಂತ್ರ್ಯ ದಿನದಂದು ಐತಿಹಾಸಿಕ ಶತಕ ಬಾರಿಸಿದ ದೇವದತ್ ಪಡಿಕ್ಕಲ್

Devdutt Padikkal's Maiden Test Century: ಭಾರತ-ಶ್ರೀಲಂಕಾ ಗಾಲಾ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದಾರೆ. ಸಾಯಿ ಸುದರ್ಶನ್ ಗಾಯದಿಂದ ಹೊರಗುಳಿದ ಕಾರಣ ಆಡುವ ಅವಕಾಶ ಪಡೆದ ಪಡಿಕ್ಕಲ್, ಈ ಸದವಕಾಶವನ್ನು ಸದುಪಯೋಗಪಡಿಸಿಕೊಂಡರು. ಯಶಸ್ವಿ ಜೈಸ್ವಾಲ್ ವಿಕೆಟ್ ಬಳಿಕ ಬ್ಯಾಟಿಂಗ್‌ಗೆ ಬಂದ ಅವರು, 134 ಎಸೆತಗಳಲ್ಲಿ ಶತಕ ಪೂರೈಸಿ, ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ಅದ್ಭುತ ಆರಂಭ ನೀಡಿದ್ದಾರೆ.

IND vs SL: ಸ್ವಾತಂತ್ರ್ಯ ದಿನದಂದು ಐತಿಹಾಸಿಕ ಶತಕ ಬಾರಿಸಿದ ದೇವದತ್ ಪಡಿಕ್ಕಲ್
Devdutt Padikkal
ಪೃಥ್ವಿಶಂಕರ
|

Updated on:Aug 15, 2026 | 5:11 PM

Share

ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವೆ ಗಾಲೆಯಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ (Devdutt Padikkal) ತಮ್ಮ ಟೆಸ್ಟ್ ವೃತ್ತಿಜೀವನದ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.ಇದರೊಂದಿಗೆ ಸ್ವಾತಂತ್ರ್ಯ ದಿನದಂದು ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್​ಮನ್ ಎಂಬ ದಾಖಲೆ ಪಡಿಕ್ಕಲ್ ಪಾಲಾಗಿದೆ. ಸಾಯಿ ಸುದರ್ಶನ್ ಗಾಯದಿಂದ ಸರಣಿಯಿಂದ ಹೊರಗುಳಿದ ಕಾರಣ ಆಡುವ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶ ಪಡೆದುಕೊಂಡಿರುವ ಪಡಿಕ್ಕಲ್ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಬಂದ ಪಡಿಕ್ಕಲ್ ಮೊದಲ ದಿನದಾಟದ ಎರಡನೇ ಸೆಷನ್​ನಲ್ಲಿ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕವೂ ತಾಳ್ಮೆಯ ಆಟ ಮುಂದುವರೆಸಿದ ಪಡಿಕ್ಕಲ್ 134 ಎಸೆತಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಪೂರೈಸಿದರು.

3ನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ

ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯದಂದು ಪಡಿಕ್ಕಲ್ ಶತಕ ಬಾರಿಸಿರುವುದು ಇನ್ನಷ್ಟು ವಿಶೇಷವಾಗಿದೆ. ಅಲ್ಲದೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದು ಶತಕದ ಇನ್ನಿಂಗ್ಸ್ ಆಡುವ ಮೂಲಕ ಪಡಿಕ್ಕಲ್ ಬಹಳ ದಿನಗಳಿಂದ ಟೀಂ ಇಂಡಿಯಾವನ್ನು ಕಾಡುತ್ತಿದ್ದ ಮೂರನೇ ಕ್ರಮಾಂಕದ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ಬರೋಬ್ಬರಿ 2 ವರ್ಷಗಳ ನಂತರ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಪಡೆದಿರುವ ಪಡಿಕ್ಕಲ್, 19 ಟೆಸ್ಟ್ ಪಂದ್ಯಗಳ ಬಳಿಕ ಭಾರತದ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಶತಕ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

2ನೇ ಎಡಗೈ ಬ್ಯಾಟ್ಸ್​ಮನ್

21 ನೇ ಶತಮಾನದಲ್ಲಿ ಭಾರತ ಪರ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ ಎರಡನೇ ಎಡಗೈ ಬ್ಯಾಟ್ಸ್‌ಮನ್ ಪಡಿಕ್ಕಲ್. ಈ ಹಿಂದೆ ಮಾಜಿ ನಾಯಕ ಸೌರವ್ ಗಂಗೂಲಿ 2002 ರಲ್ಲಿ ದೆಹಲಿಯಲ್ಲಿ ಜಿಂಬಾಬ್ವೆ ವಿರುದ್ಧ 136 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದರು. ಇದರರ್ಥ ಬರೋಬ್ಬರಿ 24 ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಭಾರತೀಯ ಎಡಗೈ ಬ್ಯಾಟ್ಸ್‌ಮನ್ ಒಬ್ಬರು 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಟೆಸ್ಟ್ ಶತಕ ಬಾರಿಸಿದ್ದಾರೆ.

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ

ಸಿಕ್ಕ ಅವಕಾಶ ಬಾಚಿಕೊಂಡ ಪಡಿಕ್ಕಲ್

ಗಾಯದ ಕಾರಣದಿಂದಾಗಿ ಸಾಯಿ ಸುದರ್ಶನ್ ಸರಣಿಯಿಂದ ಹೊರಗುಳಿದ ನಂತರ ಪಡಿಕ್ಕಲ್ ಅವರಿಗೆ ಈ ಅವಕಾಶ ಸಿಕ್ಕಿತು. ಟೆಸ್ಟ್ ಪಂದ್ಯಕ್ಕೂ ಮುನ್ನ, ಶ್ರೀಲಂಕಾ ಕ್ರಿಕೆಟ್ XI ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಪಡಿಕ್ಕಲ್ ಅದ್ಭುತ ಶತಕ ಬಾರಿಸಿದ್ದರು. ಇದರಿಂದಾಗಿ ತಂಡದ ಆಡಳಿತ ಮಂಡಳಿಯು ಅವರಿಗೆ ಮೂರನೇ ಕ್ರಮಾಂಕದ ನಿರ್ಣಾಯಕ ಜವಾಬ್ದಾರಿಯನ್ನು ವಹಿಸಿತು. ಅದರಂತೆ ಮ್ಯಾನೇಜ್​ಮೆಂಟ್​ ನೀಡಿದ ಜವಾಬ್ದಾರಿಯನ್ನು ಪಡಿಕ್ಕಲ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ, ದೇವದತ್ ಪಡಿಕ್ಕಲ್ ಟೀಂ ಇಂಡಿಯಾ ಪರ ಎರಡು ಟೆಸ್ಟ್ ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 90 ರನ್ ಗಳಿಸಿದ್ದರು, ಇದರಲ್ಲಿ ಒಂದು ಅರ್ಧಶತಕವೂ ಸೇರಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Sat, 15 August 26

Follow Us