AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ

*India vs SL Test Day 1: ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ದಿನದ 2ನೇ ಸೆಷನ್ ಅಂತ್ಯಕ್ಕೆ 1 ವಿಕೆಟ್‌ಗೆ 197 ರನ್ ಗಳಿಸಿದೆ. ಕನ್ನಡಿಗರಾದ ಕೆಎಲ್ ರಾಹುಲ್ (77*) ಹಾಗೂ ದೇವದತ್ ಪಡಿಕ್ಕಲ್ (84*) ಅರ್ಧಶತಕ ಗಳಿಸಿ ಶತಕದತ್ತ ಸಾಗಿದ್ದಾರೆ. ಯಶಸ್ವಿ ಜೈಸ್ವಾಲ್ ನಿರ್ಗಮಿಸಿದರೂ, ಈ ಜೋಡಿ ತಂಡವನ್ನು ಬಲಪಡಿಸಿದೆ.

IND vs SL: ಪಡಿಕ್ಕಲ್- ರಾಹುಲ್ ಅರ್ಧಶತಕ; 2ನೇ ಸೆಷನ್​ ಮುಕ್ತಾಯ
Rahul, Padikkal
ಪೃಥ್ವಿಶಂಕರ
|

Updated on:Aug 15, 2026 | 4:25 PM

Share

ಶ್ರೀಲಂಕಾದ ಗಾಲೆಯಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ (India vs Sri Lanka) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ, ಮೊದಲ ದಿನದಾಟದ ಎರಡನೇ ಸೆಷನ್ ಅಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 197 ರನ್ ಕಲೆಹಾಕಿದೆ. ತಂಡದ ಪರ ಇಬ್ಬರು ಕನ್ನಡಿಗರಾದ ಕೆಎಲ್ ರಾಹುಲ್ (KL Rahul) ಹಾಗೂ ದೇವದತ್ ಪಡಿಕ್ಕಲ್ (Devdutt Padikkal) ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದು, ಶತಕದತ್ತ ದಾಪುಗಾಲಿಡುತ್ತಿದ್ದಾರೆ. ಮೊದಲ ಸೆಷನ್​​ನಲ್ಲಿ ಯಶಸ್ವಿ ಜೈಸ್ವಾಲ್ ರೂಪದಲ್ಲಿ ಟೀಂ ಇಂಡಿಯಾ ಮೊದಲ ವಿಕೆಟ್ ಕಳೆದುಕೊಂಡಿತು. ಅದಾದ ಬಳಿಕ ಜೊತೆಯಾಗಿರುವ ರಾಹುಲ್ ಹಾಗೂ ಪಡಿಕ್ಕಲ್ ತಂಡವನ್ನು 200 ರನ್​ಗಳ ಸನಿಹಕ್ಕೆ ತಂದಿದ್ದಾರೆ. ಚಹಾ ವಿರಾಮದ ವೇಳೆಗೆ ರಾಹುಲ್ 77 ರನ್ ಹಾಗೂ ಪಡಿಕ್ಕಲ್ 84 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದಾರೆ.

ರನೌಟ್​ಗೆ ಬಲಿಯಾದ ಜೈಸ್ವಾಲ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭವೇ ಸಿಕ್ಕಿತು. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್​ಗೆ 47 ರನ್​ಗಳ ಜೊತೆಯಾಟ ನೀಡಿದರು. ಆದಾಗ್ಯೂ ಜೈಸ್ವಾಲ್ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ರನೌಟ್​ಗೆ ಬಲಿಯಾಗಬೇಕಾಯಿತು. ಔಟಾಗುವುದಕ್ಕೂ ಮುನ್ನ ಉತ್ತಮ ಫಾರ್ಮ್​ನಲ್ಲಿದ್ದ ಜೈಸ್ವಾಲ್ 37 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ 32 ರನ್ ಗಳಿಸಿದ್ದರು.

ರಾಹುಲ್- ಪಡಿಕ್ಕಲ್ ಅರ್ಧಶತಕ

ಜೈಸ್ವಾಲ್ ವಿಕೆಟ್ ಬಳಿಕ ಬಂದ ದೇವದತ್ ಪಡಿಕ್ಕಲ್ ತಮ್ಮ ಅದ್ಭುತ ಫಾರ್ಮ್​ ಅನ್ನು ಮುಂದುವರೆಸಿದರು. ಅಭ್ಯಾಸ ಪಂದ್ಯದಲ್ಲಿ ಅಜೇಯ 144 ರನ್ ಬಾರಿಸಿದ್ದ ಪಡಿಕ್ಕಲ್, ಮೊದಲ ಟೆಸ್ಟ್​ನ ಎರಡನೇ ಸೆಷನ್​ನಲ್ಲಿ 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದು ಟೆಸ್ಟ್​ನಲ್ಲಿ ಪಡಿಕ್ಕಲ್ ಅವರ ಎರಡನೇ ಅರ್ಧಶತಕವಾಗಿದೆ. ಇದಕ್ಕೂ ಮೊದಲು ಪಡಿಕ್ಕಲ್ 29 ತಿಂಗಳ ಹಿಂದೆ ಅಂದರೆ ಮಾರ್ಚ್ 2024 ರಲ್ಲಿ ಇಂಗ್ಲೆಂಡ್ ವಿರುದ್ಧ 65 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಇತ್ತ ಕೆಎಲ್ ರಾಹುಲ್ ಕೂಡ127 ಎಸೆತಗಳಲ್ಲಿ 50 ರನ್​ಗಳ ಗಡಿ ದಾಟಿದರು. ಇವರಿಬ್ಬರು ಪ್ರಸ್ತುತ ಎರಡನೇ ವಿಕೆಟ್​ಗೆ 150 ರನ್​ಗಳ ಜೊತೆಯಾಟ ನಿರ್ಮಿಸಿದ್ದಾರೆ.

IND vs SL: ಗಾಲೆಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಿದ ಟೀಂ ಇಂಡಿಯಾ

ಭಾರತದ 600ನೇ ಟೆಸ್ಟ್

ಇದು ಟೀಂ ಇಂಡಿಯಾದ 600ನೇ ಟೆಸ್ಟ್ ಪಂದ್ಯವಾಗಿದೆ. ಈ ಮೂಲಕ ಈ ಐತಿಹಾಸಿಕ ಸಾಧನೆ ಮಾಡಿದ ಮೂರನೇ ದೇಶ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಾತ್ರ ಮೊದಲೆರಡು ಸ್ಥಾನಗಳಲ್ಲಿವೆ. ಇನ್ನು ಈ ವಿಶೇಷ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸುವುದರ ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್​ನಲ್ಲಿ ಉಳಿಯಲು ಯತ್ನಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Sat, 15 August 26

Follow Us
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ನಾನು ಮಾತಾಡಲ್ಲ ಅಂದ್ರೆ ಸೈಲೆಂಟ್ ಆಗಿದ್ದೀನಿ ಅಂತಾ ಅರ್ಥ ಅಲ್ಲ ಎಂದ ಸಿದ್ದು
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
6ನೇ ತರಗತಿಯಿಂದ AI ಶಿಕ್ಷಣ, AI ವಿಶ್ವವಿದ್ಯಾಲಯ: ಸಿಎಂ ಮಹತ್ವದ ಘೋಷಣೆ
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಡಿಕೆ ಶಿವಕುಮಾರ ಏನಂದ್ರು?
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ಈದ್ಗಾ ಮೈದಾನದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಚಿವ ಜಮೀರ್ ಭಾಗಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ವಾಹನ ಸವಾರರೇ ಇಂದು ಸಂಜೆ ಈ ರಸ್ತೆಯಲ್ಲಿ ಹೋಗಬೇಡಿ
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು
ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಶ್ರೀಶ್ರೀ ರವಿಶಂಕರ್ ಗುರೂಜಿ ಮಾತು
ಇಂಧನ ಹಾಗೂ ಮೂಲಸೌಕರ್ಯ ವಲಯದಲ್ಲಿ ದಾಖಲೆ ಪ್ರಗತಿ
ಇಂಧನ ಹಾಗೂ ಮೂಲಸೌಕರ್ಯ ವಲಯದಲ್ಲಿ ದಾಖಲೆ ಪ್ರಗತಿ
ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು; ಪ್ರಧಾನಿ ಮೋದಿ ವಾಗ್ದಾಳಿ
ವೈಚಾರಿಕ ನಕ್ಸಲರನ್ನು ಗುರುತಿಸಿ, ಬಹಿಷ್ಕರಿಸಬೇಕು; ಪ್ರಧಾನಿ ಮೋದಿ ವಾಗ್ದಾಳಿ