MS Dhoni: ನಿವೃತ್ತಿ ಯಾವಾಗ? ಕೊನೆಗೂ ಮೌನ ಮುರಿದ ಮಹೇಂದ್ರ ಸಿಂಗ್ ಧೋನಿ

TV9 Digital Desk

| Edited By: Zahir Yusuf

Updated on: Oct 06, 2021 | 4:20 PM

IPL 2021: ಈ ಮೂಲಕ ಈ ಸಲ ನಿವೃತ್ತಿ ಹೊಂದುವ ಯಾವುದೇ ಇರಾದೆಯಿಲ್ಲ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಸ್ಪಷ್ಟಪಡಿಸಿದ್ದಾರೆ.

MS Dhoni: ನಿವೃತ್ತಿ ಯಾವಾಗ? ಕೊನೆಗೂ ಮೌನ ಮುರಿದ ಮಹೇಂದ್ರ ಸಿಂಗ್ ಧೋನಿ
ಧೋನಿ ದೆಹಲಿಯನ್ನು ಸೋಲಿಸಿದ ನಂತರ ಐಪಿಎಲ್‌ನ 10 ಫೈನಲ್‌ಗಳನ್ನು ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ತಂಡ 9 ನೇ ಬಾರಿಗೆ ಫೈನಲ್​ಗೇರಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 (IPL 2021) ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ನಿವೃತ್ತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಅದರಲ್ಲೂ ಈ ಬಾರಿ ಟೂರ್ನಿ ಆರಂಭಕ್ಕೂ ಮುನ್ನ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೀಗ ತಮ್ಮ ನಿವೃತ್ತಿ ಬಗ್ಗೆ ಖುದ್ದು ಮಹೇಂದ್ರ ಸಿಂಗ್ ಧೋನಿ ಸ್ಪಷ್ಟತೆ ನೀಡಿದ್ದಾರೆ.

‘ಇಂಡಿಯಾ ಸಿಮೆಂಟ್ಸ್’ ನ 75 ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ ಧೋನಿ, ತಮ್ಮ ನಿವೃತ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದರು. ನಿವೃತ್ತಿ ವಿಷಯವನ್ನು ಪ್ರಸ್ತಾಪಿಸಿದ ಧೋನಿ, ಸಿಎಸ್​ಕೆಗಾಗಿ ನಾನು ಇನ್ನೂ ಕೂಡ ಆಡಬಹುದು. ಹೀಗಾಗಿ ನನ್ನ ವಿದಾಯದ ಪಂದ್ಯವನ್ನು ನೀವು ಕೂಡ ಬಂದು ನೋಡಬಹುದು ಎಂದಿದ್ದಾರೆ.

ನನ್ನ ಕೊನೆಯ ಪಂದ್ಯವು ಚೆನ್ನೈನಲ್ಲಿ ನಡೆಯಬಹುದು. ಅದುವೇ ವಿದಾಯ ಪಂದ್ಯವಾಗಿರಲಿದೆ. ಹಾಗಾಗಿ ನನಗೆ ಬೀಳ್ಕೊಡಲು ನಿಮಗೂ ಅವಕಾಶ ಸಿಗಲಿದೆ. ನಾನು ಚೆನ್ನೈನಲ್ಲಿ ಕೊನೆಯ ಪಂದ್ಯ ಆಡಲು ಬಯಸಿದ್ದೇನೆ. ಇದೇ ವೇಳೆ ಅಭಿಮಾನಿಗಳನ್ನು ಭೇಟಿ ಮಾಡಲು ಅವಕಾಶ ಕೂಡ ಸಿಗಲಿದೆ ಎಂದು ಧೋನಿ ತಿಳಿಸಿದ್ದಾರೆ.

ಈ ಮೂಲಕ ಈ ಸಲ ನಿವೃತ್ತಿ ಹೊಂದುವ ಯಾವುದೇ ಇರಾದೆಯಿಲ್ಲ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಚೆನ್ನೈನಲ್ಲಿ ಕೊನೆಯ ಐಪಿಎಲ್ ಪಂದ್ಯವಾಡುವ ಮೂಲಕ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದಾರೆ. ಇದರೊಂದಿಗೆ ಧೋನಿ ಮುಂದಿನ ಸೀಸನ್​ ಐಪಿಎಲ್​ನಲ್ಲೂ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಅದರಂತೆ ಐಪಿಎಲ್ ಸೀಸನ್​ 15ಗಾಗಿ ಸಿಎಸ್​ಕೆ ತಂಡವು ಧೋನಿಯನ್ನು ತಂಡದಲ್ಲೇ ಉಳಿಸಿಕೊಳ್ಳಲಿದೆ. ಒಂದು ವೇಳೆ ಧೋನಿ 2022 ರಲ್ಲಿ ನಿವೃತ್ತಿ ಬಯಸಿದರೆ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್​ಡಿ ಐಪಿಎಲ್​ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ.

ಇದನ್ನೂ ಓದಿ:  IPL 2021: ಮುಂದಿನ 2 ಪಂದ್ಯಗಳನ್ನು RCB ಗೆಲ್ಲಲೇಬೇಕು, ಏಕೆಂದರೆ…

ಇದನ್ನೂ ಓದಿ: David Warner: SRH ತಂಡದಲ್ಲಿಲ್ಲ ಸ್ಥಾನ: ಪ್ರೇಕ್ಷಕನಾಗಿ ಕಾಣಿಸಿಕೊಂಡ ಡೇವಿಡ್ ವಾರ್ನರ್

ಇದನ್ನೂ ಓದಿ: IPL 2021: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಲಿದ್ದಾರೆ ಹರ್ಷಲ್ ಪಟೇಲ್

(Dhoni set to play IPL 2022, will play his ‘farewell game’ in Chennai)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada