Dinesh Karthik: ಆಡಿದ ಎರಡು ಬಾಲ್​ನಲ್ಲಿ ಸಿಕ್ಸ್, ಫೋರ್: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಏನಂದ್ರು ಗೊತ್ತೇ?

| Updated By: Vinay Bhat

Updated on: Sep 24, 2022 | 9:27 AM

India vs Australia 2nd T20: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ (Dinesh Karthik) 2 ಎಸೆತದಲ್ಲಿ ಫೋರ್, ಸಿಕ್ಸರ್ ಬಾರಿಸಿ ಟೀಮ್ ಇಂಡಿಯಾಕ್ಕೆ ಗೆಲುವು ತಂದುಕೊಟ್ಟರು. ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು ಏನು ಹೇಳಿದ್ರು ಕೇಳಿ.

Dinesh Karthik: ಆಡಿದ ಎರಡು ಬಾಲ್​ನಲ್ಲಿ ಸಿಕ್ಸ್, ಫೋರ್: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಏನಂದ್ರು ಗೊತ್ತೇ?
Dinesh Karthik IND vs AUS 2nd T20I
Follow us on

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ (India vs Australia) ಸರಣಿಯನ್ನು ಇನ್ನೂ ಜೀವಂತರವಾಗಿರಿಸಿದ್ದು ಅಂತಿಮ ನಿರ್ಣಾಯಕ ಕದನ ರೋಚಕತೆ ಸೃಷ್ಟಿಸಿದೆ. ನಾಗ್ಪುರದಲ್ಲಿ ನಡೆದ ದ್ವಿತೀಯ ಪಂದ್ಯ ತಡವಾಗಿ ಆರಂಭಗೊಂಡು 8 ಓವರ್​ಗಳ ರಣ ರೋಚಕ ಕಾದಾಟ ನಡೆಯಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ (ಅಜೇಯ 43) ಹಾಗೂ ನಾಯಕ ಫಿಂಚ್ (31) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 90 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಭಾರತ ಕೂಡ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸ್ಫೋಟಕ ಆಟವಾಡಿತು. ರೋಹಿತ್ ಶರ್ಮಾ (Rohit Sharma) ಅಜೇಯ 46 ರನ್ ಚಚ್ಚಿದರೆ, ದಿನೇಶ್ ಕಾರ್ತಿಕ್ (Dinesh Karthik) 2 ಎಸೆತದಲ್ಲಿ ಫೋರ್, ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟರು.

ಪಂದ್ಯ ಮುಗಿದ ಬಳಿಕ ಮಾತನಾಡಿದ ಕಾರ್ತಿಕ್ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನನಗೆ ಎರಡು ಬಾಲ್ ಆಡಲು ಸಿಕ್ಕಿತಷ್ಟೆ. ನಾನು ನನ್ನ ಬೆಸ್ಟ್ ಅನ್ನು ಅಲ್ಲಿ ನೀಡಬೇಕಿತ್ತು. ಅದನ್ನು ಪ್ರಯತ್ನಿಸಿದೆ. ಹೊಸ ಚೆಂಡಿನಲ್ಲಿ ವಿಶ್ವದ ಶ್ರೇಷ್ಠ ಬೌಲರ್​ಗಳ ಎದುರು ಆ ಸಂದರ್ಭ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ರೋಹಿತ್ ಶರ್ಮಾ ಇದನ್ನು ಅರಿತು ಚೆನ್ನಾಗಿ ಆಡಿದರು. ನಾನು ಬ್ಯಾಟಿಂಗ್​ಗೆ ಬಂದಾಗ ಬೌಲರ್ ಏನು ಮಾಡುತ್ತಾರೆ ಎಂದು ರೋಹಿತ್ ನನಗೆ ಹೇಳಿದರು. ನಾನು ನನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆ. ಗೆಲುವಿನ ಹೊಡೆತ ಹೊಡೆದಿರುವುದಕ್ಕೆ ಖುಷಿ ಇದೆ, ಎಂದು ಹೇಳಿದ್ದಾರೆ.

ಮಾತು ಮುಂದುವರೆಸಿದ ಕಾರ್ತಿಕ್, “ನಾನು ಈ ರೀತಿಯ ಸಂದರ್ಭದಲ್ಲಿ ಆಡಲು ಅನೇಕ ಸಮಯದಿಂದ ಅಭ್ಯಾಸ ನಡೆಸುತ್ತಿದ್ದೇನೆ. ಇದನ್ನು ಆರ್​ಸಿಬಿ ತಂಡದಲ್ಲಿ ಇದ್ದಾಗಲೂ ಮಾಡಿದ್ದೇನೆ. ಈಗ ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡಲು ಖುಷಿ ಆಗುತ್ತಿದೆ. ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ಕೂಡ ನಾನು ಯಾವರೀತಿ ಬ್ಯಾಟಿಂಗ್ ಮಾಡಬೇಕು, ಯಾವ ಶಾಟ್ ಹೊಡೆಯಬೇಕು ಎಂದು ಸಲಹೆ ನೀಡುತ್ತಾರೆ, ಎಂಬುದು ಕಾರ್ತಿಕ್ ಹೇಳಿಕೆ.

ಇದನ್ನೂ ಓದಿ
Rohit Sharma: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ: ಹಿಟ್​ಮ್ಯಾನ್ ಮುಡಿಗೆ ವಿಶೇಷ ದಾಖಲೆ
IND vs AUS: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌; ನಿರ್ಣಾಯಕ ಪಂದ್ಯದಲ್ಲಿ ಆಸೀಸ್ ಮಣಿಸಿದ ಭಾರತ..!
Ind vs Aus Playing XI: 48 ಎಸೆತಗಳ ಪಂದ್ಯ.. ಟಾಸ್ ಗೆದ್ದ ಭಾರತ; ಉಭಯ ತಂಡಗಳ ಪ್ಲೇಯಿಂಗ್ XI
ಪಾಕ್ ಎದುರು ಸೋತು ಯಾವ ತಂಡವೂ ಮಾಡದ ಮುಜುಗರದ ದಾಖಲೆಗೆ ಸಾಕ್ಷಿಯಾದ ಇಂಗ್ಲೆಂಡ್

ಇದೇವೇಳೆ ಮೊದಲ ಟಿ20 ಯಲ್ಲಿ ಕಾರ್ತಿಕ್ ಬ್ಯಾಟಿಂಗ್​ಗೆ ಬರಬೇಕಾದ ಜಾಗದಲ್ಲಿ ಅಕ್ಷರ್ ಪಟೇಲ್ ಕಣಕ್ಕಿಳಿದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಕಾರ್ತಿಕ್, “ನಾವು ಕೆಲ ಪ್ರಯೋಗವನ್ನು ನಡೆಸಲು ಮುಂದಾದೆವು. ಆ ಸಂದರ್ಭ ಇನ್ನೂ ಕೆಲ ಓವರ್​ಗಳು ಬಾಕಿಯಿದ್ದವು. ಹೀಗಾಗಿ ಅಕ್ಷರ್ ಪಟೇಲ್ ಸ್ಪಿನ್ನರ್​ಗಳನ್ನು ಅಟ್ಯಾಕ್ ಮಾಡಲಿ ಎಂಬ ಕಾರಣಕ್ಕೆ ಅವರನ್ನು ಕಳುಹಿಸಲು ಮ್ಯಾನೇಜ್ಮೆಂಟ್ ನಿರ್ಧಾರ ಮಾಡಿತು. ಅದು ಆ ಘಳಿಗೆಗೆ ಸರಿಯಾಗಿತ್ತು. ಯಾಕೆಂದರೆ ಅವರು ಎಡಗೈ ಬ್ಯಾಟರ್, ಲೆಗ್ ಸ್ಪಿನ್ನರ್ ಬೌಲಿಂಗ್ ಮಾಡಿದಾಗ ಹೊಡೆಯಲು ಸುಲಭವಾಗುತ್ತದೆ. ಈರೀತಿಯ ಪ್ರಯೋಗ ಪಂದ್ಯದ ಸ್ಥಿತಿಗೆ ತಕ್ಕಂತೆ ನಡೆಯುತ್ತಿರುತ್ತದೆ, ಎಂದು ಹೇಳಿದರು.

ಸೋತ ತಂಡದ ನಾಯಕ ಆ್ಯರೋನ್ ಫಿಂಚ್ ಮಾತನಾಡಿ, “ನಾವು 5 ಓವರ್​ಗಳ ಪಂದ್ಯ ಆಗಬಹುದು ಎಂದು ಅದಕ್ಕೆ ಯೋಜನೆ ರೂಪಿಸಿದ್ದೆವು. ಆದರೆ, ಓವರ್ ಕೊಂಚ ಹೆಚ್ಚಾಯಿತು. ರೋಹಿತ್ ಶರ್ಮಾ ಆಟ ಅದ್ಭುತವಾಗಿತ್ತು. ಅಕ್ಷರ್ ಪಟೇಲ್ ಮಾಡಿದ ಎರಡು ಓವರ್ ನಮ್ಮ ಯೋಜನೆಯನ್ನು ಬದಲಾಯಿಸಿತು. ಮ್ಯಾಥ್ಯೂ ವೇಡ್ ನಮ್ಮ ಪರ ಪಂದ್ಯವನ್ನು ಉತ್ತಮ ಫಿನಿಶ್ ಮಾಡಿದರು. ಆಡಂ ಝಂಪಾ ಬೌಲಿಂಗ್ ಕೂಡ ಅತ್ಯುತ್ತಮವಾಗಿತ್ತು, ಎಂದು ಫಿಂಚ್ ಹೇಳಿದ್ದಾರೆ.

Published On - 9:26 am, Sat, 24 September 22