IND vs AUS: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌; ನಿರ್ಣಾಯಕ ಪಂದ್ಯದಲ್ಲಿ ಆಸೀಸ್ ಮಣಿಸಿದ ಭಾರತ..!

IND vs AUS: ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ಅದ್ಭುತ ಪುನರಾಗಮನ ಮಾಡಿ 1-1 ರಲ್ಲಿ ಸಮಬಲ ಸಾಧಿಸಿದೆ.

IND vs AUS: ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌; ನಿರ್ಣಾಯಕ ಪಂದ್ಯದಲ್ಲಿ ಆಸೀಸ್ ಮಣಿಸಿದ ಭಾರತ..!
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on:Sep 24, 2022 | 6:40 PM

ನಾಗ್ಪುರದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ ಅದ್ಭುತ ಪುನರಾಗಮನ ಮಾಡುವುದರೊಂದಿಗೆ ಸರಣಿಯಲ್ಲಿ 1-1 ರಲ್ಲಿ ಸಮಬಲ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯವನ್ನು ಸೋತ ನಂತರ ಭಾರತ ಸರಣಿಯಲ್ಲಿ ಭರ್ಜರಿ ಪುನರಾಗಮನ ಮಾಡಿದೆ. ಒದ್ದೆ ಮೈದಾನದಿಂದಾಗಿ ನಾಗ್ಪುರದ ಅಭಿಮಾನಿಗಳು ಪಂದ್ಯ ಆರಂಭಕ್ಕೆ ಎರಡೂವರೆ ಗಂಟೆ ಹೆಚ್ಚುವರಿಯಾಗಿ ಕಾಯಬೇಕಾಯಿತು.ಆದರೆ ಅದರ ನಂತರ ನಡೆದ ಪಂದ್ಯ ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವನ್ನೇ ನೀಡಿತು. ಕೇವಲ 8 ಓವರ್‌ಗಳ ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‌ನಿಂದ 46 ರನ್ ಗಳಿಸಿ ಟೀಂ ಇಂಡಿಯಾಗೆ ಈ ಅದ್ಭುತ ಜಯ ತಂದುಕೊಟ್ಟರು.

ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್‌

8 ಓವರ್​ಗಳಲ್ಲಿ 91 ರನ್​ಗಳ ಕಠಿಣ ಗುರಿ ಪಡೆದಿದ್ದ ಟೀಂ ಇಂಡಿಯಾಕ್ಕೆ ಅಬ್ಬರದ ಆರಂಭದ ಅವಶ್ಯಕತೆ ಇತ್ತು. ಹಿಂದಿನ ಹಲವು ಪಂದ್ಯಗಳಂತೆ, ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲೂ ಅವಶ್ಯಕ ಆರಂಭ ನೀಡಿದರು. ಮೊದಲ ಓವರ್‌ ಎಸೆದ ಜೋಶ್ ಹ್ಯಾಜಲ್‌ವುಡ್​ಗೆ ರೋಹಿತ್ ಸತತ 2 ಸಿಕ್ಸರ್‌ಗಳನ್ನು ಬಾರಿಸಿದರೆ, ಕೆಎಲ್ ರಾಹುಲ್ ಕೂಡ ಅದೇ ಓವರ್‌ನ ಕೊನೆಯ ಎಸೆತವನ್ನು 6 ರನ್‌ಗಳಿಗೆ ಕಳುಹಿಸಿದರು. ಹೀಗಾಗಿ ಮೊದಲ ಓವರ್‌ನಿಂದ ಭಾರತದ ಖಾತೆಗೆ 20 ರನ್ ಬಂದವು. ಎರಡು ಮತ್ತು ಮೂರನೇ ಓವರ್‌ಗಳಲ್ಲಿ ರೋಹಿತ್ ತಲಾ ಒಂದು ಸಿಕ್ಸರ್ ಬಾರಿಸಿದರು.

ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ತಿಂದ ಸ್ಪಿನ್ನರ್ ಆಡಮ್ ಝಂಪಾ, ಅದೇ ಓವರ್​ನಲ್ಲಿ ಕೆಎಲ್ ರಾಹುಲ್ ಅವರನ್ನು ಬೌಲ್ಡ್ ಮಾಡಿದರು. ಹೀಗಾಗಿ ಭಾರತ 3 ಓವರ್‌ ಅಂತ್ಯಕ್ಕೆ 40 ರನ್ ಗಳಿಸಿತು. ರಾಹುಲ್ ವಿಕೆಟ್ ಬಳಿಕ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ ಕೂಡ ಎರಡು ಉತ್ತಮ ಬೌಂಡರಿಗಳನ್ನು ಬಾರಿಸಿ ಝಂಪಾಗೆ ಬಲಿಯಾದರು. ಕೊಹ್ಲಿ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತದಲ್ಲಿಯೇ ಪೆವಿಲಿಯನ್​ಗೆ ಮರಳಿದರು.

ಹಾರ್ದಿಕ್ ಪಾಂಡ್ಯ ಕೂಡ ಈ ಪಂದ್ಯದಲ್ಲಿ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ರೋಹಿತ್ ಶರ್ಮಾ (46 ರನ್, 20 ಎಸೆತ, 4 ಬೌಂಡರಿ, 4 ಸಿಕ್ಸರ್) 7ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಭಾರತದ ಹಾದಿಯನ್ನು ಸ್ವಲ್ಪ ಸುಲಭಗೊಳಿಸಿದರು. ಕೊನೆಯ ಓವರ್‌ನಲ್ಲಿ ಟೀಂ ಇಂಡಿಯಾಗೆ 9 ರನ್ ಅಗತ್ಯವಿದ್ದು, ಅದೇ ಸಮಯದಲ್ಲಿ ಕ್ರೀಸ್‌ಗೆ ಬಂದ ದಿನೇಶ್ ಕಾರ್ತಿಕ್ ತಮ್ಮ ಫಿನಿಶರ್ ಶೈಲಿಯನ್ನು ಮೈದಾನದಲ್ಲಿ ತೋರಿಸಿದರು. ಕಾರ್ತಿಕ್ ಕೇವಲ 2 ಎಸೆತಗಳನ್ನು ಆಡಿ ಒಂದು ಸಿಕ್ಸರ್ ಹಾಗೂ 1 ಬೌಂಡರಿ ಸೇರಿದಂತೆ 10 ರನ್​ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಉತ್ತಮ ಪ್ರಾರಂಭ ನೀಡಿದ ಫಿಂಚ್

ನಾಗ್ಪುರದಲ್ಲಿ ಎರಡೂವರೆ ಗಂಟೆ ತಡವಾಗಿ ಆರಂಭವಾದ ಪಂದ್ಯವನ್ನು ಕೇವಲ 8 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಭಾರತ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್​ಗೆ ಇಳಿದ ಆಸೀಸ್ ನಾಯಕ ಆ್ಯರನ್ ಫಿಂಚ್ ಮೊದಲ ಓವರ್‌ನಲ್ಲಿಯೇ ಎರಡು ಬೌಂಡರಿಗಳನ್ನು ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಆದಾಗ್ಯೂ, ಭಾರತ ಎರಡನೇ ಓವರ್‌ನಲ್ಲಿ ಎರಡು ಯಶಸ್ಸನ್ನು ಗಳಿಸಿತು. ಮೊದಲು ಕ್ಯಾಮರೂನ್ ಗ್ರೀನ್ ರನೌಟ್ ಆದರೆ, ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಕ್ಲೀನ್ ಬೌಲ್ಡ್ ಆದರು.

ಆದಾಗ್ಯೂ, ಫಿಂಚ್ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಆದರೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಹಿಂತಿರುಗಿದ್ದ ಜಸ್ಪ್ರೀತ್ ಬುಮ್ರಾ ಮೊದಲ 5 ಎಸೆತಗಳಲ್ಲಿ 2 ಬೌಂಡರಿಗಳನ್ನು ನೀಡಿದರು. ಆದರೆ ಕೊನೆಯ ಎಸೆತದಲ್ಲಿ ಬಿರುಗಾಳಿಯ ಯಾರ್ಕರ್‌ಗೆ ಫಿಂಚ್‌ ಬೌಲ್ಡ್ ಆದರು.

ಮತ್ತೆ ಅಬ್ಬರಿಸಿದ ವೇಡ್

ಆದರೆ, ಫಿಂಚ್ ವಿಕೆಟ್ ಬಳಿಕ ಆಸೀಸ್ ರನ್ ಗಳಿಸುವ​ ವೇಗವೇ ಬದಲಾಯಿತು. ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ಪಂದ್ಯ ಮುಗಿಸಿದ್ದ ಮ್ಯಾಥ್ಯೂ ವೇಡ್ ಮತ್ತೆ ಅದೇ ರೀತಿಯ ಬ್ಯಾಟಿಂಗ್ ಮಾಡಿದರು. ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೇವಲ 20 ಎಸೆತಗಳಲ್ಲಿ 43 ರನ್ ಗಳಿಸಿದರು. ಕೊನೆಯ ಓವರ್‌ ಎಸೆದ ಹರ್ಷಲ್ ಪಟೇಲ್ ಓವರ್​ನಲ್ಲಿ, ವೇಡ್ 3 ಸಿಕ್ಸರ್‌ ಸಿಡಿಸಿದರು. ಅಕ್ಷರ್ ಪಟೇಲ್ ಮತ್ತೊಮ್ಮೆ ಭಾರತದ ಕಡೆಯಿಂದ ಅತ್ಯಂತ ಪರಿಣಾಮಕಾರಿ ಬೌಲಿಂಗ್ ಮಾಡಿ ಪ್ರಮುಖ 2 ವಿಕೆಟ್ ಪಡೆದರು.

Published On - 11:14 pm, Fri, 23 September 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್