AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್ ಎದುರು ಸೋತು ಯಾವ ತಂಡವೂ ಮಾಡದ ಮುಜುಗರದ ದಾಖಲೆಗೆ ಸಾಕ್ಷಿಯಾದ ಇಂಗ್ಲೆಂಡ್

PAK vs ENG: ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿಯ ದಾಖಲೆಯ ಜೊತೆಯಾಟವನ್ನು ಮುರಿಯಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ಇಂಗ್ಲೆಂಡ್ ಹೆಸರಿನಲ್ಲಿ ಬೇಡದ ಹಾಗೂ ಮುಜುಗರದ ದಾಖಲೆಯೊಂದು ದಾಖಲಾಗಿದೆ.

ಪಾಕ್ ಎದುರು ಸೋತು ಯಾವ ತಂಡವೂ ಮಾಡದ ಮುಜುಗರದ ದಾಖಲೆಗೆ ಸಾಕ್ಷಿಯಾದ ಇಂಗ್ಲೆಂಡ್
ಇಂಗ್ಲೆಂಡ್ ತಂಡ
ಪೃಥ್ವಿಶಂಕರ
|

Updated on:Sep 23, 2022 | 8:02 PM

Share

ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿತ್ತು. 199 ರನ್‌ಗಳ ಬೆಟ್ಟದಂತಹ ಗುರಿ ನೀಡಿದ್ದರೂ ಇಂಗ್ಲೆಂಡ್ ತಂಡ (England team) 10 ವಿಕೆಟ್‌ಗಳಿಂದ ಸೋಲನುಭವಿಸಬೇಕಾಯಿತು. ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ (Babar Azam and Mohammad Rizwan) ಜೋಡಿಯ ದಾಖಲೆಯ ಜೊತೆಯಾಟವನ್ನು ಮುರಿಯಲು ಇಂಗ್ಲೆಂಡ್ ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಸೋಲಿನೊಂದಿಗೆ ಇಂಗ್ಲೆಂಡ್ ಹೆಸರಿನಲ್ಲಿ ಬೇಡದ ಹಾಗೂ ಮುಜುಗರದ ದಾಖಲೆಯೊಂದು ದಾಖಲಾಗಿದೆ.

ಟೆಸ್ಟ್​ನಲ್ಲೂ 10 ವಿಕೆಟ್ ಸೋಲು

ಈ ಒಂದು ವರ್ಷದಲ್ಲಿ ಇಂಗ್ಲೆಂಡ್ ತಂಡ ಕಂಡಿರುವ ಅವಮಾನಕರ ಸೋಲು ಬೇರೆ ಯಾವ ತಂಡಕ್ಕೂ ಆಗಿಲ್ಲ. ಏಕದಿನ, ಟಿ20 ಮತ್ತು ಟೆಸ್ಟ್‌ನ ಮೂರು ಮಾದರಿಗಳಲ್ಲಿ ಒಂದು ವರ್ಷದಲ್ಲಿ 10 ವಿಕೆಟ್‌ಗಳಿಂದ ಸೋತ ಮೊದಲ ತಂಡ ಇಂಗ್ಲೆಂಡ್. ಈ ವರ್ಷದ ಆರಂಭದಲ್ಲಿ, ವೆಸ್ಟ್ ಇಂಡೀಸ್ ತನ್ನ ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ಸೇಂಟ್ ಜಾರ್ಜ್‌ನಲ್ಲಿ ನಡೆದ ಮೂರು ಟೆಸ್ಟ್‌ಗಳ ಸರಣಿಯ ಕೊನೆಯ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ 28 ​​ರನ್‌ಗಳ ಟಾರ್ಗೆಟ್ ಸಿಕ್ಕಿದ್ದು, ಅದನ್ನು 4.5 ಓವರ್‌ಗಳಲ್ಲಿ ವಿಂಡಿಸ್ ಸಾಧಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 204 ರನ್ ಗಳಿಸಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಆಲೌಟ್ ಆಗಿತ್ತು. ವೆಸ್ಟ್ ಇಂಡೀಸ್ ಮೊದಲ ಇನಿಂಗ್ಸ್​ನಲ್ಲಿ 297 ರನ್ ಗಳಿಸಿ 93 ರನ್ ಮುನ್ನಡೆ ಸಾಧಿಸಿತು.

10 ವಿಕೆಟ್‌ಗಳಿಂದ ಸೋಲಿಸಿದ್ದ ಭಾರತ

ಇದಾದ ಬಳಿಕ ಜುಲೈನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಓವಲ್‌ನಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ತಂಡ ಜಸ್ಪ್ರೀತ್ ಬುಮ್ರಾ ಅವರ ನಿಖರ ಬೌಲಿಂಗ್‌ನ ಮುಂದೆ ಕೇವಲ 110 ರನ್‌ಗಳಿಗೆ ಆಲೌಟಾಯಿತು. ಉತ್ತರವಾಗಿ ನಾಯಕ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ 18.4 ಓವರ್‌ಗಳಲ್ಲಿ ಈ ಗುರಿಯನ್ನು ಸಾಧಿಸಿದರು.

ಟಿ20ಯಲ್ಲಿ ಧೂಳಿಪಟ ಮಾಡಿದ ಪಾಕಿಸ್ತಾನ

ಏಳು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದ ಮೊಯಿನ್ ಅಲಿ, 23 ಎಸೆತಗಳಲ್ಲಿ ಅಜೇಯ 55 ರನ್‌ ಬಾರಿಸಿದರು. ಈ ಇನ್ನಿಂಗ್ಸ್ ಆದಾರದ ಮೇಲೆ ಆಂಗ್ಲ ತಂಡ ಐದು ವಿಕೆಟ್‌ಗೆ 199 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕ್ ತಂಡ ಯಾವುದೇ ತೊಂದರೆ ಇಲ್ಲದೆ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಬಾಬರ್ ಅಜಮ್ ಶತಕದೊಂದಿಗೆ ಫಾರ್ಮ್‌ಗೆ ಮರಳಿದರೆ, ಮೊಹಮ್ಮದ್ ರಿಜ್ವಾನ್ ಅಜೇಯ 88 ರನ್ ಗಳಿಸಿದರು. ಬಾಬರ್ 66 ಎಸೆತಗಳಲ್ಲಿ ಅಜೇಯ 110 ರನ್ ಗಳಿಸಿದರು. ಈ ಇಬ್ಬರ ಅಬ್ಬರದ ಇನ್ನಿಂಗ್ಸ್​ನಿಂದಾಗಿ ಪಾಕಿಸ್ತಾನ ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟವಿಲ್ಲದೆ 203 ರನ್ ಗಳಿಸಿತು. ಈ ಮೂಲಕ ಇಂಗ್ಲೆಂಡ್ ತಂಡ 10 ವಿಕೆಟ್​ಗಳಿಂದ ಮುಜುಗರದ ಸೋಲನುಭವಿಸಿತು.

Published On - 8:02 pm, Fri, 23 September 22

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?