Viral Video: ಬುಮ್ರಾ ಯಾರ್ಕರ್ಗೆ ಕ್ಲೀನ್ ಬೌಲ್ಡ್ ಆದ ಫಿಂಚ್ ಮಾಡಿದ್ದೇನು? ಇಲ್ಲಿದೆ ವಿಡಿಯೋ
Aaron Finch - Jasprit Bumrah: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 8 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿತ್ತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (46) ಭರ್ಜರಿ ಬ್ಯಾಟಿಂಗ್ ಮಾಡಿದರು.
India vs Australia 2nd T20: ನಾಗ್ಪುರದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ ಮಳೆಬಾಧಿತ ಈ ಪಂದ್ಯವನ್ನು 8 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡರು. ಅದರಂತೆ ಆಸ್ಟ್ರೇಲಿಯಾ ಪರ ಆರೋನ್ ಫಿಂಚ್ ಹಾಗೂ ಕ್ಯಾಮರೋನ್ ಗ್ರೀನ್ ಇನಿಂಗ್ಸ್ ಆರಂಭಿಸಿದ್ದರು. ಆರಂಭದಿಂದಲೇ ಅಬ್ಬರಿಸಲಾರಂಭಿಸಿದ ಫಿಂಚ್ ಅನ್ನು ನಿಯಂತ್ರಿಸಲು ಟೀಮ್ ಇಂಡಿಯಾ ಬೌಲರ್ಗಳು ಹರಸಾಹಸ ಪಡಬೇಕಾಯಿತು.
ಈ ಹಂತದಲ್ಲಿ ಹಿಟ್ಮ್ಯಾನ್ ಜಸ್ಪ್ರೀತ್ ಬುಮ್ರಾಗೆ ಬೌಲಿಂಗ್ ನೀಡಿದರು. ಐದನೇ ಓವರ್ನಲ್ಲಿ ದಾಳಿಗಿಳಿದ ಬುಮ್ರಾ ಅವರ ಮೊದಲ ಎಸೆತ ವೈಡ್ ಆಗಿತ್ತು. ಎರಡನೇ ಎಸೆತದಲ್ಲಿ ಫಿಂಚ್ ಬೌಂಡರಿ ಬಾರಿಸಿದರು. 15 ಎಸೆತಗಳಲ್ಲಿ 31 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಆರೋನ್ ಫಿಂಚ್ ವಿಕೆಟ್ ಟೀಮ್ ಇಂಡಿಯಾ ಪಾಲಿಗೆ ಮಹತ್ವದ್ದಾಗಿತ್ತು. ಹೀಗಾಗಿಯೇ ರೋಹಿತ್ ಶರ್ಮಾ ಬುಮ್ರಾ ಅವರನ್ನು ದಾಳಿಗಿಳಿಸಿದ್ದರು.
ನಾಯಕನ ಈ ನಿರೀಕ್ಷೆಯನ್ನು ಬುಮ್ರಾ ಹುಸಿಗೊಳಿಸಲಲಿಲ್ಲ. ತಮ್ಮ ಮೊದಲ ಓವರ್ನ ಕೊನೆಯ ಎಸೆತದಲ್ಲಿ ಅದ್ಭುತ ಯಾರ್ಕರ್ ಮೂಲಕ ಫಿಂಚ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಆಸ್ಟ್ರೇಲಿಯಾ ನಾಯಕ ಕಣ್ಣು ಮಿಟುಕಿಸುವಷ್ಟರಲ್ಲಿ ಚೆಂಡು ವಿಕೆಟ್ ಅನ್ನು ಉರುಳಿಸಿತ್ತು. ಈ ಅದ್ಭುತ ಯಾರ್ಕರ್ಗೆ ಆರೋನ್ ಫಿಂಚ್ ಕೂಡ ಪ್ರಭಾವಿತರಾಗಿದ್ದು ವಿಶೇಷ.
ಅಂದರೆ ಕ್ಲೀನ್ ಬೌಲ್ಡ್ ಆದ ಬೆನ್ನಲ್ಲೇ ಆರೋನ್ ಫಿಂಚ್ ಬ್ಯಾಟ್ ಹಿಡಿದು ಚಪ್ಪಾಳೆ ತಟ್ಟುವ ಮೂಲಕ ಬುಮ್ರಾ ಅವರ ಯಾರ್ಕರ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇದೀಗ ಆಸ್ಟ್ರೇಲಿಯಾ ನಾಯಕನ ಈ ಕ್ರೀಡಾಸ್ಪೂರ್ತಿಯ ನಡೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಈ ಆರೋನ್ ಫಿಂಚ್ ನಡೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
Aaron Finch applauding #JaspritBumrah pic.twitter.com/DHky72zm1T
— Aakash Srivastava (@Cursedbuoy) September 23, 2022
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ನಿಗದಿತ 8 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 90 ರನ್ ಕಲೆಹಾಕಿತ್ತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ (46) ಭರ್ಜರಿ ಬ್ಯಾಟಿಂಗ್ ಮಾಡಿದರು. ಅಲ್ಲದೆ ಟೀಮ್ ಇಂಡಿಯಾ 7.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 92 ರನ್ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯು 1-1 ಅಂತರದಿಂದ ಸಮಬಲಗೊಂಡಿದೆ. ಈ ಸರಣಿಯ ಕೊನೆಯ ಪಂದ್ಯವು ಹೈದಾರಾಬಾದ್ನಲ್ಲಿ ಭಾನುವಾರ ನಡೆಯಲಿದೆ.