AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್​ರನ್ನು ಹಾಡಿಹೊಗಳಿದ ರೋಹಿತ್ ಶರ್ಮಾ: ಏನಂದ್ರು ಕೇಳಿ

India vs Australia: ಭಾರತ- ಆಸ್ಟ್ರೇಲಿಯಾ ಎರಡನೇ ಟಿ20 ಪಂದ್ಯ ಮುಗಿದ ಬಳಿಕ ಕೂಡ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

Rohit Sharma: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್​ರನ್ನು ಹಾಡಿಹೊಗಳಿದ ರೋಹಿತ್ ಶರ್ಮಾ: ಏನಂದ್ರು ಕೇಳಿ
Rohit Sharma post-match presentation
TV9 Web
| Edited By: |

Updated on: Sep 24, 2022 | 11:52 AM

Share

ಬಹುನಿರೀಕ್ಷಿತ ಟಿ20ವಿಶ್ವಕಪ್​ಗೂ (ICC T2o World Cup) ಮುನ್ನ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಟಿ20 ಸರಣಿಯೇ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಅದರಲ್ಲೂ ಶುಕ್ರವಾರ ನಾಗ್ಪುರದಲ್ಲಿ ನಡೆದ 8 ಓವರ್​ಗಳ ಎರಡನೇ ಟಿ20 ಪಂದ್ಯ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮ್ಯಾಥ್ಯೂ ವೇಡ್ ಅವರ ಅಜೇಯ 43 ರನ್ ಹಾಗೂ ನಾಯಕ ಆರೋನ್ ಫಿಂಚ್ 31 ಕೊಡುಗೆ ನೀಡಿದ ಪರಿಣಾಮ 90 ರನ್ ಕಲೆಹಾಕಿತು. ಟಾರ್ಗೆಟ್ ಬೆನ್ನಟ್ಟಿದ ಭಾರತದ ಬ್ಯಾಟರ್​ಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ನಾಯಕ ರೋಹಿತ್ ಶರ್ಮಾ (Rohit Sharma) ಅಜೇಯ 46 ರನ್ ಚಚ್ಚಿದರೆ, ದಿನೇಶ್ ಕಾರ್ತಿಕ್ 2 ಎಸೆತದಲ್ಲಿ ಫೋರ್, ಸಿಕ್ಸರ್ ಬಾರಿಸಿ ಗೆಲುವು ತಂದುಕೊಟ್ಟರು. ಈ ಜೋಡಿ ಭಾರತ ಜಯದಲ್ಲಿ ಮುಖ್ಯ ಪಾತ್ರವಹಿಸಿತು.

ಮೊದಲ ಟಿ20ಯಲ್ಲಿ ಖುಷಿಗೆ ತಮಾಷೆಯಲ್ಲಿ ಕಾರ್ತಿಕ್ ಅವರ ಕುತ್ತಿಗೆ ಹಿಡಿದಿದ್ದ ರೋಹಿತ್ ಎರಡನೇ ಟಿ20ಯಲ್ಲಿ ಗೆದ್ದ ತಕ್ಷಣ ಓಡಿ ಬಂದು ನಗುತ್ತಾ ತಬ್ಬಿಕೊಂಡರು. ಈ ಎರಡೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಪಂದ್ಯ ಮುಗಿದ ಬಳಿಕ ಕೂಡ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ.

ಇದನ್ನೂ ಓದಿ
Image
Viral Video: ಬುಮ್ರಾ ಯಾರ್ಕರ್​ಗೆ ಕ್ಲೀನ್ ಬೌಲ್ಡ್​ ಆದ ಫಿಂಚ್ ಮಾಡಿದ್ದೇನು? ಇಲ್ಲಿದೆ ವಿಡಿಯೋ
Image
Rohit Sharma: ಮೊನ್ನೆ ಕಾರ್ತಿಕ್​ ಕುತ್ತಿಗೆ ಹಿಡಿದಿದ್ದ ರೋಹಿತ್ 2ನೇ ಟಿ20ಯಲ್ಲಿ ಗೆದ್ದಾಗ ಏನು ಮಾಡಿದ್ರು ನೋಡಿ
Image
Dinesh Karthik: ಆಡಿದ ಎರಡು ಬಾಲ್​ನಲ್ಲಿ ಸಿಕ್ಸ್, ಫೋರ್: ಪಂದ್ಯ ಮುಗಿದ ಬಳಿಕ ದಿನೇಶ್ ಕಾರ್ತಿಕ್ ಏನಂದ್ರು ಗೊತ್ತೇ?
Image
Rohit Sharma: ಟಿ20 ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ: ಹಿಟ್​ಮ್ಯಾನ್ ಮುಡಿಗೆ ವಿಶೇಷ ದಾಖಲೆ

”ದಿನೇಶ್ ಕಾರ್ತಿಕ್ ಪಂದ್ಯವನ್ನು ಫಿನಿಶ್ ಮಾಡಿದ್ದು ಅದ್ಭುತವಾಗಿತ್ತು. ನಾವು ಮೊದಲು ಕಾರ್ತಿಕ್ ಬದಲು ರಿಷಭ್‌ ಪಂತ್‌ ಅವರನ್ನು ಆ ಸ್ಥಾನದಲ್ಲಿ ಕಣಕ್ಕಿಳಿಸುವ ಬಗ್ಗೆ ಯೋಚಿಸಿದ್ದೆವು. ಆದರೆ, ಡೇನಿಯಲ್‌ ಸ್ಯಾಮ್ಸ್‌ ಆಫ್ ಕಟರ್‌ಗಳನ್ನು ಪದೇಪದೇ ಹಾಕುತ್ತಿದ್ದ ಕಾರಣದಿಂದ ದಿನೇಶ್‌ ಕಾರ್ತಿಕ್‌ ಇದು ಸೂಕ್ತ ಎಂದು ನಮಗೆ ಅನಿಸಿತ್ತು. ಹೀಗಾಗಿ ಕಾರ್ತಿಕ್​ರನ್ನು ಕಳುಹಿಸಲಾಯಿತು. ನಾವು ಅಂದುಕೊಂಡಂತೆ ದಿನೇಶ್‌ ಕಾರ್ತಿಕ್ ಬ್ಯಾಟ್‌ ಮಾಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ,” ಎಂದು ರೋಹಿತ್‌ ಶರ್ಮಾ ಹೇಳಿದ್ದಾರೆ.

2 ಓವರ್ ಬೌಲಿಂಗ್ ಮಾಡಿ ಕೇವಲ 13 ರನ್ ನೀಡಿ 2 ವಿಕೆಟ್ ಪಡೆದ ಅಕ್ಷರ್ ಪಟೇಲ್ ಬೌಲಿಂಗ್ ಬಗ್ಗೆ ಮಾತನಾಡಿದ ರೋಹಿತ್, “ಯಾವುದೇ ಸನ್ನಿವೇಶದಲ್ಲಿ ಅಕ್ಷರ್‌ ಪಟೇಲ್‌ ಬೌಲಿಂಗ್ ಮಾಡಬಲ್ಲರು. ಪರಿಸ್ಥಿತಿಗೆ ತಕ್ಕಂತೆ ಅವರು ಅಚ್ಚುಕಟ್ಟಾಗಿ ಬೌಲಿಂಗ್ ಮಾಡುತ್ತಾರೆ. ಪವರ್‌ ಪ್ಲೇನಲ್ಲಿ ಬೌಲ್‌ ಮಾಡಿಸಿದರೆ, ವೇಗಿಗಳನ್ನು ಮಧ್ಯಮ ಓವರ್‌ಗಳಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಅಕ್ಷರ್ ಬೌಲಿಂಗ್‌ ಜೊತೆಗೆ ಚೆನ್ನಾಗಿ ಬ್ಯಾಟ್‌ ಮಾಡುವುದನ್ನೂ ನಾನು ನೋಡಬೇಕಿದೆ,” ಎಂದು ರೋಹಿತ್ ಹೇಳಿದ್ದಾರೆ.

ಇನ್ನು ತನ್ನ ಸ್ಫೋಟಕ ಬ್ಯಾಟಿಂಗ್ ಬಗ್ಗೆ ಸ್ವತಃ ರೋಹಿತ್ ಅವರೇ ಅಚ್ಚರಿಗೊಂಡಿದ್ದಾರೆ. ”ನನಗೆ ನನ್ನ ಬ್ಯಾಟಿಂಗ್‌ನಿಂದ ಸ್ವಲ್ಪ ಅಚ್ಚರಿಯಾಗಿರುವುದು ನಿಜ. ಈ ರೀತಿಯ ಸ್ಪೋಟಕ ಬ್ಯಾಟ್‌ ಮಾಡುತ್ತೇನೆಂದು ನನಗೆ ಗೊತ್ತಿರಲಿಲ್ಲ. ಏಕೆಂದರೆ ಕಳೆದ 8 ರಿಂದ 9 ತಿಂಗಳು ನಾನು ಈ ರೀತಿ ಆಡಿರಲಿಲ್ಲ. ಗೆದ್ದರೂ ಈ ಪಂದ್ಯದಿಂದ ಅನೇಖ ವಿಚಾರಗಳಲ್ಲಿ ಕಲಿತಿದ್ದೇಔಎ. ನಾವು ಹೇಗೆ ಬೌಲ್‌ ಮಾಡಿದ್ದೇವೆಂಬ ಬಗ್ಗೆ ನಾನು ಹೆಚ್ಚು ಏನನ್ನೂ ಹೇಳುವುದಿಲ್ಲ. ಕೆಲ ನಿರ್ಣಾಯಕ ವಿಕೆಟ್‌ಗಳನ್ನು ನಾವು ಪಡೆದಿದ್ದೇವೆ,” ಎಂಬುದು ರೋಹಿತ್ ಮಾತು.

ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ