Rohit Sharma: ಮೊನ್ನೆ ಕಾರ್ತಿಕ್ ಕುತ್ತಿಗೆ ಹಿಡಿದಿದ್ದ ರೋಹಿತ್ 2ನೇ ಟಿ20ಯಲ್ಲಿ ಗೆದ್ದಾಗ ಏನು ಮಾಡಿದ್ರು ನೋಡಿ
Dinesh Karthik, IND vs AUS: ಡೆನಿಯಲ್ ಸ್ಯಾಮ್ಸ್ ಅವರ ಮೊದಲ ಎಸೆತದಲ್ಲೇ ದಿನೇಶ್ ಕಾರ್ತಿಕ್ ಚೆಂಡನ್ನು ಸಿಕ್ಸರ್ಗೆ ಅಟ್ಟಿ ಗೆಲುವು ಖಚಿತ ಪಡಿಸಿದರು. ಎರಡನೇ ಎಸೆತದಲ್ಲಿ ಫೋರ್ ಬಾರಿಸಿ ಗೆಲುವಿಗೆ ಕಾರಣರಾದರು. ಈ ಸಂದರ್ಭ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.
ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20ಯ ಎಂಟು ಓವರ್ಗಳ ಪಂದ್ಯದಲ್ಲಿ ಭಾರತ (India vs Australia) ರೋಚಕ ಜಯ ಸಾಧಿಸಿ ಸರಣಿ ಸಮಬಲ ಸಾಧಿಸಿದೆ. ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ಬೌಲಿಂಗ್ನಲ್ಲಿ ಮಿಂಚಿದರೆ, ನಾಯಕ ರೋಹಿತ್ ಶರ್ಮಾ (Rohit Sharma) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ದಿನೇಶ್ ಕಾರ್ತಿಕ್ (Dinesh Karthik) ಒಂದು ಫೋರ್, ಸಿಕ್ಸರ್ ಸಿಡಿಸಿ ಪಂದ್ಯವನ್ನು ಫಿನಿಶ್ ಮಾಡಿದರು. ಕೊನೆಯ ಓವರ್ನಲ್ಲಿ ಭಾರತಕ್ಕೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಹಿಂದಿನ ಓವರ್ನ ಅಂತಿಮ ಎಸೆತದಲ್ಲಿ ಹಾರ್ದಿಕ್ ಪಾಂಡ್ಯ ಔಟಾದ ಕಾರಣ ಕಾರ್ತಿಕ್ ಕ್ರೀಸ್ಗೆ ಬಂದು ಸ್ಟ್ರೈಕ್ನಲ್ಲಿದ್ದರು. ಡೆನಿಯಲ್ ಸ್ಯಾಮ್ಸ್ ಅವರ ಮೊದಲ ಎಸೆತದಲ್ಲೇ ಕಾರ್ತಿಕ್ ಚೆಂಡನ್ನು ಸಿಕ್ಸರ್ಗೆ ಅಟ್ಟಿ ಗೆಲುವು ಖಚಿತ ಪಡಿಸಿದರು. ಎರಡನೇ ಎಸೆತದಲ್ಲಿ ಫೋರ್ ಬಾರಿಸಿ ಗೆಲುವಿಗೆ ಕಾರಣರಾದರು. ಈ ಸಂದರ್ಭ ರೋಹಿತ್ ಶರ್ಮಾ ಏನು ಮಾಡಿದರು ನೋಡಿ.
ದಿನೇಶ್ ಕಾರ್ತಿಕ್ ತಾನು ಎದುರಿಸಿದ ಮೊದಲ ಎರಡು ಎಸೆದಲ್ಲಿ ಸಿಕ್ಸ್, ಫೋರ್ ಬಾರಿಸಿ ಗೆಲುವು ತಂದುಕೊಟ್ಟ ಸಂದರ್ಭ ನಾನ್ ಸ್ಟ್ರೈಕರ್ನಲ್ಲಿದ್ದ ರೋಹಿತ್ ಶರ್ಮಾ ಅವರು ಕಾರ್ತಿಕ್ ಬಳಿ ಓಡಿ ಬಂದು ನಗುತ್ತಾ ಖುಷಿಯಲ್ಲಿ ತಬ್ಬಿಕೊಂಡರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಯಾಕೆಂದರೆ ಹಿಂದಿನ ಮೊದಲ ಟಿ20 ಯಲ್ಲಿ ರೋಹಿತ್ ಹಾಗೂ ಕಾರ್ತಿಕ್ ನಡುವಣ ವಿಡಿಯೋ ಕೂಡ ವೈರಲ್ ಆಗಿತ್ತು.
Captain @ImRo45‘s reaction ☺️
Crowd’s joy ?@DineshKarthik‘s grin ?
? Relive the mood as #TeamIndia sealed a series-levelling win in Nagpur ? #INDvAUS | @mastercardindia
Scorecard ▶️ https://t.co/LyNJTtl5L3 pic.twitter.com/bkiJmUCSeu
— BCCI (@BCCI) September 23, 2022
ಹಿಂದಿನ ಪಂದ್ಯದಲ್ಲಿ ಏನಾಗಿತ್ತು?:
ಆಸ್ಟ್ರೇಲಿಯಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಡಿಆರ್ಎಸ್ ಮನವಿ ವಿಫಲವಾಗಿದ್ದಕ್ಕೆ ರೋಹಿತ್ ಸಿಟ್ಟಾಗಿ ವಿಕೆಟ್ ಕೀಪರ್ ಆಗಿದ್ದ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಡಿದ ಘಟನೆ ನಡೆದಿತ್ತು. ಆದರೆ ಇದೆಲ್ಲಾ ರೋಹಿತ್ ಮಾಡಿದ್ದು ತಮಾಷೆಯಾಗಿ. ಮೊದಲು ಚಹಲ್ ಬೌಲಿಂಗ್ ನಲ್ಲಿ ಸ್ಟೀವ್ ಸ್ಮಿತ್ ಪ್ಯಾಡ್ಗೆ ತಗುಲಿದ ಬಾಲ್ ಸ್ಟಂಪ್ ಹಾದು ಹೋಗುತ್ತಿತ್ತು. ಆದರೆ ವಿಕೆಟ್ ಕೀಪರ್ ಆಗಲೀ ಬೌಲರ್ ಆಗಲೀ ಅಪೀಲ್ ಮಾಡಿಲ್ಲ.
ಬಳಿಕ ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಪ್ಯಾಡ್ಗೆ ಬಾಲ್ ಬಡಿದಿತ್ತು. ಆದರೆ ಕಾರ್ತಿಕ್ಗೆ ಇದು ಖಚಿತವಿರಲಿಲ್ಲ. ಹೀಗಾಗಿ ರೋಹಿತ್ ಡಿಆರ್ಎಸ್ಗೆ ಮನವಿ ಮಾಡಿದರು. ಬಳಿಕ ಕಾರ್ತಿಕ್ ತಮಾಷೆಯಾಗಿ ಬೈದು ಅವರ ಕುತ್ತಿಗೆ ಹಿಡಿದು ರೋಹಿತ್ ಸಿಟ್ಟು ತೀರಿಸಿಕೊಂಡರು. ಇದೀಗ ಮೊನ್ನೆ ಕುತ್ತಿಗೆ ಹಿಡಿದಿದ್ದ ರೋಹಿತ್ ಇಂದು ತಬ್ಬಿಕೊಂಡು ಸಂಭ್ರಮಿಸುತ್ತಿರುವ ವಿಡಿಯೋ ಎರಡೂ ಹೊಂದಾಣಿಕೆ ಮಾಡಿ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ಕಾರ್ತಿಕ್, ”ನನಗೆ ಎರಡು ಬಾಲ್ ಆಡಲು ಸಿಕ್ಕಿತಷ್ಟೆ. ನಾನು ನನ್ನ ಬೆಸ್ಟ್ ಅನ್ನು ಅಲ್ಲಿ ನೀಡಬೇಕಿತ್ತು. ಅದನ್ನು ಪ್ರಯತ್ನಿಸಿದೆ. ಹೊಸ ಚೆಂಡಿನಲ್ಲಿ ವಿಶ್ವದ ಶ್ರೇಷ್ಠ ಬೌಲರ್ಗಳ ಎದುರು ಆ ಸಂದರ್ಭ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ನಾನು ಬ್ಯಾಟಿಂಗ್ಗೆ ಬಂದಾಗ ಬೌಲರ್ ಏನು ಮಾಡುತ್ತಾರೆ ಎಂದು ರೋಹಿತ್ ನನಗೆ ಹೇಳಿದರು. ನಾನು ನನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದೆ. ನಾನು ಈ ರೀತಿಯ ಸಂದರ್ಭದಲ್ಲಿ ಆಡಲು ಅನೇಕ ಸಮಯದಿಂದ ಅಭ್ಯಾಸ ನಡೆಸುತ್ತಿದ್ದೇನೆ. ಇದನ್ನು ಆರ್ಸಿಬಿ ತಂಡದಲ್ಲಿ ಇದ್ದಾಗಲೂ ಮಾಡಿದ್ದೇನೆ. ಈಗ ರಾಷ್ಟ್ರೀಯ ತಂಡಕ್ಕೆ ಕೊಡುಗೆ ನೀಡಲು ಖುಷಿ ಆಗುತ್ತಿದೆ,” ಎಂದು ಹೇಳಿದ್ದಾರೆ.
Published On - 10:44 am, Sat, 24 September 22