Dinesh Karthik: ಹಿಟ್ಮ್ಯಾನ್ ಮುಂದೆ ಮೋಡಿ ಮಾಡಿದ DK: ಟಿ20 ವಿಶ್ವಕಪ್ನಲ್ಲಿ ಚಾನ್ಸ್ ಖಚಿತ..!
Dinesh Karthik: ಸಿಕ್ಕ 2 ಎಸೆತಗಳಲ್ಲಿ ತಾನೆಂತಹ ಫಿನಿಶರ್ ಎಂಬುದನ್ನು ದಿನೇಶ್ ಕಾರ್ತಿಕ್ ಸಾಬೀತುಪಡಿಸಿದ್ದಾರೆ. ಕೊನೆಯ ಓವರ್ನಲ್ಲಿ 9 ರನ್ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾವನ್ನು ನಿರಾಯಾಸವಾಗಿ ಗುರಿ ತಲುಪಿಸಿದರು.
2018 ರಲ್ಲಿ ನಡೆದ ತ್ರಿಕೋನಾ ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಸಿಕ್ಸ್ ಸಿಡಿಸುವ ಮೂಲಕ ದಿನೇಶ್ ಕಾರ್ತಿಕ್ (Dinesh Karthik) ಭಾರತ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಅಂದು ಟೀಮ್ ಇಂಡಿಯಾದ (Team India) ಹಂಗಾಮಿ ನಾಯಕರಾಗಿದ್ದ ರೋಹಿತ್ ಶರ್ಮಾ (Rohit Sharma) ಹೇಳಿದ ಒಂದು ಮಾತಿದೆ, ನಾನು ಫಿನಿಶಿಂಗ್ ವಿಷಯದಲ್ಲಿ ದಿನೇಶ್ ಕಾರ್ತಿಕ್ ಅವರ ಸಾಮರ್ಥ್ಯವನ್ನು ಎಂದಿಗೂ ನಂಬುತ್ತೇನೆ. ಈ ಶ್ಲಾಘನೆಯ ಮಾತುಗಳಿಗೆ ಇದೀಗ 4 ವರ್ಷಗಳಾಗಿವೆ. ಆದರೆ ಈಗಲೂ ರೋಹಿತ್ ಶರ್ಮಾ ತನ್ನ ಸಹ ಆಟಗಾರನ ಮೇಲೆ ನಂಬಿಕೆ ಇರಿಸಿಕೊಂಡಿದ್ದಾರೆ. ಆ ನಂಬಿಕೆಯನ್ನು ದಿನೇಶ್ ಕಾರ್ತಿಕ್ ಅಲಿಯಾಸ್ ಡಿಕೆ ಮತ್ತೊಮ್ಮೆ ಉಳಿಸಿಕೊಂಡಿದ್ದಾರೆ.
ಹೌದು, ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಇಬ್ಬರು ವಿಕೆಟ್ ಕೀಪರ್ಗಳು ತಂಡದಲ್ಲಿ ಸ್ಥಾನ ಪಡೆದಿದ್ದರು. ಒಂದು ಕಡೆ ಎಡಗೈ ದಾಂಡಿಗ ರಿಷಭ್ ಪಂತ್ ಇದ್ದರೆ, ಮತ್ತೊಂದು ದಿನೇಶ್ ಕಾರ್ತಿಕ್ ಇದ್ದರು. ವಿಶೇಷ ಎಂದರೆ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಇವರಿಬ್ಬರ ನಡುವೆ ಪೈಪೋಟಿ ಇದೆ. ಇದೇ ಕಾರಣದಿಂದಾಗಿ ಇದೀಗ ಇಬ್ಬರಲ್ಲಿ ಯಾರು ಬೆಸ್ಟ್ ಎಂಬ ಪ್ರಯೋಗಕ್ಕೆ ಟೀಮ್ ಇಂಡಿಯಾ ಮುಂದಾಗಿದೆ.
ಇದೀಗ ಸಿಕ್ಕ 2 ಎಸೆತಗಳಲ್ಲಿ ತಾನೆಂತಹ ಫಿನಿಶರ್ ಎಂಬುದನ್ನು ದಿನೇಶ್ ಕಾರ್ತಿಕ್ ಸಾಬೀತುಪಡಿಸಿದ್ದಾರೆ. ಕೊನೆಯ ಓವರ್ನಲ್ಲಿ 9 ರನ್ಗಳ ಟಾರ್ಗೆಟ್ ಪಡೆದಿದ್ದ ಟೀಮ್ ಇಂಡಿಯಾವನ್ನು ನಿರಾಯಾಸವಾಗಿ ಗುರಿ ತಲುಪಿಸಿದರು. ಅನುಭವಿ ವೇಗಿ ಡೇನಿಯಲ್ ಸ್ಯಾಮ್ಸ್ನ ಎಸೆದ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದರೆ, 2ನೇ ಎಸೆತದಲ್ಲಿ ಫೋರ್ ಬಾರಿಸಿದರು.
ಇತ್ತ ಡಿಕೆಯ ಭರ್ಜರಿ ಫಿನಿಶಿಂಗ್ ಕಂಡು ಖುದ್ದು ರೋಹಿತ್ ಶರ್ಮಾ ದಂಗಾದರು. ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್ ಅವರನ್ನು ತಬ್ಬಿಕೊಳ್ಳುವ ಮೂಲಕ ಸಂಭ್ರಮಿಸಿದರು. ಈ ಒಂದು ಸಂಭ್ರಮವೇ ಇದೀಗ ಡಿಕೆಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ನಲ್ಲಿ ಖಾಯಂ ಸ್ಥಾನ ಒದಗಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏಕೆಂದರೆ ಟಿ20 ಕ್ರಿಕೆಟ್ನಲ್ಲಿ ಫಿನಿಶರ್ಗಳ ಪಾತ್ರ ಬಹಳ ಮುಖ್ಯ. ಇತ್ತ ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಹಲವು ಬ್ಯಾಟ್ಸ್ಮನ್ಗಳಿದ್ದರೂ ಫಿನಿಶರ್ ಪಾತ್ರವನ್ನು ತಾನು ನಿಭಾಯಿಸಬಲ್ಲೆ ಎಂಬುದನ್ನು ದಿನೇಶ್ ಕಾರ್ತಿಕ್ ನಿರೂಪಿಸಿದ್ದಾರೆ. ಹೀಗಾಗಿ ರಿಷಭ್ ಪಂತ್ಗಿಂತ ಡಿಕೆಗೆ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗುವುದು ಖಚಿತ ಎನ್ನಬಹುದು.
ಏಕೆಂದರೆ ನಾಯಕ ರೋಹಿತ್ ಶರ್ಮಾ ಇರಿಸಿದ್ದ ನಂಬಿಕೆಯನ್ನು ದಿನೇಶ್ ಕಾರ್ತಿಕ್ ಉಳಿಸಿಕೊಂಡಿದ್ದಾರೆ. ಈ ಮೂಲಕ 7ನೇ ಕ್ರಮಾಂಕದಲ್ಲಿ ನಾನೇ ಸೂಕ್ತ ಎಂಬ ಸಂದೇಶವನ್ನು ಕೂಡ ನೀಡಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆಯುವುದು ಖಚಿತ ಎಂದೇ ಹೇಳಬಹುದು.
ಇತ್ತ ಎಡಗೈ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್ ಕೂಡ ಮಿಂಚುತ್ತಿದ್ದು, ಹೀಗಾಗಿ ರಿಷಭ್ ಪಂತ್ಗೆ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುವುದು ಅನುಮಾನ. ಅತ್ತ ರೋಹಿತ್ ಶರ್ಮಾಗೂ ದಿನೇಶ್ ಕಾರ್ತಿಕ್ ಅವರ ಫಿನಿಶಿಂಗ್ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆಯಿದೆ. ಅದಕ್ಕೆ ಸಾಕ್ಷಿಯೇ 2018 ರಲ್ಲಿ ನೀಡಿರುವ ಆ ಹೇಳಿಕೆ. ಇದೀಗ ಅದೇ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿದ್ದಾರೆ. ಹೀಗಾಗಿ ಟಿ20 ವಿಶ್ವಕಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಡಿಕೆಗೆ ಸ್ಥಾನ ಖಚಿತ ಎನ್ನಬಹುದು.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.