Dinesh Karthik: ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ನೋಡಿ

IND vs SA 4th T20: ಭಾರತ ತಂಡ, ದಿನೇಶ್ ಕಾರ್ತಿಕ್ (55 ರನ್) ಹಾಗೂ ಹಾರ್ದಿಕ್ ಪಾಂಡ್ಯ (46 ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 169 ರನ್ ಪೇರಿಸಿತು. ಕಾರ್ತಿಕ್ (Dinesh Karthik) ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಈ ಸಂದರ್ಭ ಮಾತನಾಡಿದ ಅವರು ಏನು ಹೇಳಿದರು ನೋಡಿ.

Dinesh Karthik: ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು ನೋಡಿ
Dinesh Karthik post match presentation IND vs SA
Follow us
TV9 Web
| Updated By: Vinay Bhat

Updated on:Jun 18, 2022 | 9:22 AM

ರಾಜ್​ಕೋಟ್​​ನ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ (IND vs SA) ತಂಡ ಗೆಲ್ಲುವ ಮೂಲಕ ಸರಣಿಯನ್ನು 2-2 ಅಂತರದಿಂದ ಸಮಬಲ ಸಾಧಿಸಿದೆ. ಟೀಮ್ ಇಂಡಿಯಾ ಓಪನರ್ಸ್​ ಹಾಗೂ ಮಧ್ಯಮ ಕ್ರಮಾಂಕ ಕೈಕೊಟ್ಟರೂ ತಂಡವನ್ನು ಮೇಲೆತ್ತಿದ ದಿನೇಶ್ ಕಾರ್ತಿಕ್ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಭಾರತ ತಂಡ, ದಿನೇಶ್ ಕಾರ್ತಿಕ್ (55 ರನ್) ಹಾಗೂ ಹಾರ್ದಿಕ್ ಪಾಂಡ್ಯ (46 ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್‌ಗೆ 169 ರನ್ ಪೇರಿಸಿತು. ಬಳಿಕ ಯುವ ವೇಗಿ ಆವೇಶ್ ಖಾನ್ (18ಕ್ಕೆ 4) ಹಾಗೂ ಚಹಲ್ (21ಕ್ಕೆ 2) ಮಾರಕ ದಾಳಿಗೆ ನಲುಗಿದ ಆಫ್ರಿಕಾ 87 ರನ್‌ಗಳಿಗೆ ಸರ್ವಪತನ ಕಂಡಿತು. ದಿನೇಶ್ ಕಾರ್ತಿಕ್ (Dinesh Karthik) ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು. ಈ ಸಂದರ್ಭ ಮಾತನಾಡಿದ ಅವರು ಏನು ಹೇಳಿದರು ನೋಡಿ.

“ಈ ಗೆಲುವಿನಿಂದ ತುಂಬಾ ಸಂಸತವಾಗಿದೆ. ಕಳೆದ ಪಂದ್ಯದಲ್ಲಿ ನಾವು ಅಂದುಕೊಂಡಂತೆ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ಆದರೆ, ನಾನು ನನ್ನ ಸಾಮರ್ಥ್ಯವನ್ನು ಇಂದು ತೋರಿಸಿದೆ. ನನ್ನ ಪ್ರಕಾರ ಡಿಕೆ ಈಗ ತುಂಬಾ ಚೆನ್ನಾಗಿ ಯೋಚನೆ ಮಾಡುತ್ತಾನೆ. ಸಂದರ್ಭವನ್ನು ಅರ್ಥಹಿಸಿಕೊಂಡು ಅಭ್ಯಾಸ ನಡೆಸುತ್ತಾನೆ. ಈ ಎಲ್ಲ ಕ್ರೆಡಿಟ್ ನನ್ನ ಕೋಚ್​ಗೆ ಸಲ್ಲಬೇಕು. ಆಫ್ರಿಕಾ ಬೌಲರ್​​ಗಳು ವಿವಿಧ ಪ್ರಯೋಗದ ಮೂಲಕ ಕಠಿಣವಾಗಿ ಬೌಲಿಂಗ್ ಮಾಡಿದರು. ಈ ಪಿಚ್​ನಲ್ಲಿ ಬ್ಯಾಟ್ ಮಾಡಲು ತುಂಬಾ ಕಷ್ಟವಾಯಿತು. ಬೌಂಡರಿ ಬಾರಿಸಲು ತುಂಬಾ ಬಲವಾಗಿ ಹೊಡೆಯಬೇಕಾಗಿತ್ತು,” ಎಂದು ಹೇಳಿದ್ದಾರೆ.

Dinesh Karthik: ತಿಂಗಳ ಹಿಂದೆ ಆರ್​​ಸಿಬಿ ಪರ ಈಗ ಭಾರತಕ್ಕೆ: ಕ್ರಿಕೆಟ್ ಲೋಕದಲ್ಲಿ ದಿನೇಶ್ ಕಾರ್ತಿಕ್ ನೂತನ ದಾಖಲೆ

ಇದನ್ನೂ ಓದಿ
Image
ENG vs NED: 498 ರನ್, 3 ಶತಕ, 26 ಸಿಕ್ಸರ್! ನೆದರ್ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ನಿರ್ಮಿಸಿದ 5 ವಿಶ್ವ ದಾಖಲೆಗಳಿವು
Image
IND vs SA: ಸಿಂಗಲ್​ಗೆ ಒಲ್ಲೆ ಎಂದ ಪಾಂಡ್ಯ; 26 ಎಸೆತಗಳಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ಉತ್ತರ ಕೊಟ್ಟ ಕಾರ್ತಿಕ್
Image
IND vs SA: ಕಾರ್ತಿಕ್- ಹಾರ್ದಿಕ್ ಅಬ್ಬರ.. ಅವೇಶ್- ಹರ್ಷಲ್ ಮಾರಕ ದಾಳಿ; ಭಾರತಕ್ಕೆ 82 ರನ್ ಜಯ
Image
ಅಬ್ಬರ ಸಿಡಿಲಬ್ಬರ: ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಇಂಗ್ಲೆಂಡ್

ಮಾತು ಮುಂದುವರೆಸಿದ ಅವರು, “ನಾನು ಕ್ರೀಸ್​ಗೆ ಬಂದಾಗ ಹಾರ್ದಿಕ್ ನನ್ನ ಬಳಿ ಬಂದು ನಿನ್ನ ಸಮಯವನ್ನು ನೀವು ತೆಗೆದುಕೊ ಎಂದರು. ಇಂತಹ ಪಿಚ್​ನಲ್ಲಿ ಓರ್ವ ಬ್ಯಾಟರ್​ ನಿಂತು ಆಡುವುದು ಬಹಳ ಮುಖ್ಯ. ಬೆಂಗಳೂರು ನನ್ನ ತವರಿನ ಮೈದಾನ. ನಾನು ಅಲ್ಲಿ ಆರ್​ಸಿಬಿ ಪರವಾಗಿ ಆಡಿಲ್ಲ ನಿಜ. ಆದರೆ, ಅನೇಕ ಪಂದ್ಯಗಳಲ್ಲಿ ಕಣಕ್ಕಿಳಿದ್ದೇನೆ. ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮೂರನೇ ಮತ್ತು ನಾಲ್ಕನೇ ಪಂದ್ಯದಲ್ಲಿದ್ದ ಒತ್ತಡವನ್ನು ನಾವು ಎಂಜಾಯ್ ಮಾಡಿದ್ದೇವೆ. ಎಲ್ಲ ಕ್ರೆಡಿಟ್ ರಾಹುಲ್ ದ್ರಾವಿಡ್​ಗೆ ಸಲ್ಲಬೇಕು,” ಎಂಬುದು ಕಾರ್ತಿಕ್ ಮಾತು.

ಇನ್ನು ನಾಯಕ ರಿಷಭ್ ಪಂತ್ ಮಾತನಾಡಿ, “ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ, ಅದರ ಫಲಿತಾಂಶವೇ ಈ ಗೆಲುವು. ಹಾರ್ದಿಕ್ ಆಟ ಅತ್ಯುತ್ತಮವಾಗಿತ್ತು. ಕಾರ್ತಿಕ್ ಕೂಡ ಪಾಸಿಟಿವ್ ಆಗಿ ಅದ್ಭುತದಿಂದ ಆಡಿದ್ದಾರೆ. ನಾನು ಇನ್ನೂ ಕೆಲ ವಿಚಾರಗಳಲ್ಲಿ ಸರಿಪಡಿಸಬೇಕಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಮುಂದಿನ ಪಂದ್ಯ ಹೇಗಿರುತ್ತದೆ ಎಂಬುದನ್ನು ನೋಡಬೇಕು. ನಾವು ಶೇ. 100 ರಷ್ಟು ಪ್ರಯತ್ನ ಮಾಡುತ್ತೇವೆ,” ಎಂದು ಹೇಳಿದ್ದಾರೆ.

4 ಓವರ್ ಬೌಲಿಂಗ್ ಮಾಡಿ 18 ರನ್ ನೀಡಿ 4 ವಿಕೆಟ್ ಕಿತ್ತ ಆವೇಶ್ ಖಾನ್ ಮಾತನಾಡಿ, “ಇವತ್ತು ನನ್ನ ತಂದೆಯ ಹುಟ್ಟುಹಬ್ಬ. ನನ್ನ ಈ ಪ್ರದರ್ಶನವನ್ನು ಅವರಿಗೆ ಅರ್ಪಿಸುತ್ತೇನೆ. ಎರಡೂ ಕಡೆಯ ವಿಕೆಟ್ ಕೂಡ ಚೆನ್ನಾಗಿತ್ತು. ನಾನು ಬೌನ್ಸರ್ ಮತ್ತು ಒಳ್ಳೆಯ ಲೆಂತ್ ಎಸೆಯುವ ಬಗ್ಗೆ ಹೆಚ್ಚಿನ ಗಮನ ನೀಡಿದೆ. ಬೌಲಿಂಗ್ ಮಾಡುವಾಗ ರಿಷಭ್ ಪಂತ್ ಕೆಲ ಉತ್ತಮ ಸಲಹೆಯನ್ನ ನೀಡಿದರು. ಕಳೆದ ಪಂದ್ಯಕ್ಕಿಂತಲೂ ಇಂದಿನ ಪಂದ್ಯದಲ್ಲಿ ಉತ್ತಮ ಕಮ್​ಬ್ಯಾಕ್ ಮಾಡಿದ್ದೇವೆ,” ಎಂದು ಹೇಳಿದರು.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:21 am, Sat, 18 June 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ