Dinesh Karthik: ಬರೀ RCB ಆಟಗಾರರನ್ನ ಮಾತ್ರ ಆಯ್ಕೆ ಮಾಡಿದ್ದೀರಿ: ಆಸ್ಟ್ರೇಲಿಯಾ ತಂಡದ ಕಾಲೆಳೆದ DK
Dinesh Karthik: ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಸಹ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಅವರನ್ನು ಎದುರಿಸಲಿದ್ದಾರೆ.
ಟೀಮ್ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (Dinesh Karthik) ಮಾಡಿರುವ ಟ್ವೀಟ್ವೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವೈರಲ್ ಆಗಲು ಕಾರಣ ಡಿಕೆ ಆಸ್ಟ್ರೇಲಿಯಾ ತಂಡವನ್ನು ಕಾಲೆಳೆದಿರುವುದು. ಅಂದರೆ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಟಿ20 ವಿಶ್ವಕಪ್ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಜೆರ್ಸಿಯ ಫೋಟೋಶೂಟ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಹ್ಯಾಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಕಾಣಿಸಿಕೊಂಡಿದ್ದರು.ಇದನ್ನೇ ಪ್ರಸ್ತಾಪಿಸಿರುವ ದಿನೇಶ್ ಕಾರ್ತಿಕ್, ಕೇವಲ ಆರ್ಸಿಬಿ ಆಟಗಾರರನ್ನು ಮಾತ್ರವಲ್ಲ, ಇತರ ಫ್ರಾಂಚೈಸಿಗಳ ಆಟಗಾರರನ್ನು ಆಯ್ಕೆ ಮಾಡಬೇಕು ಎಂಬಾರ್ಥದಲ್ಲಿ ಕಿಚಾಯಿಸಿದ್ದಾರೆ.
ಅಂದರೆ ಇಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಪ್ರಸ್ತುತ ಆರ್ಸಿಬಿ ತಂಡದ ಸದಸ್ಯರು. ಇನ್ನು ಮಿಚೆಲ್ ಸ್ಟಾರ್ಕ್ ಕೊನೆಯ ಬಾರಿ ಐಪಿಎಲ್ ಆಡಿದ್ದು ಆರ್ಸಿಬಿ ಪರ. ಹೀಗಾಗಿಯೇ ದಿನೇಶ್ ಕಾರ್ತಿಕ್ ಆರ್ಸಿಬಿ ಆಟಗಾರರನ್ನು ಮಾತ್ರ ಆಯ್ಕೆ ಮಾಡಿದ್ದೀರಿ. ಇನ್ನಿತರ ಫ್ರಾಂಚೈಸಿಗಳಲ್ಲಿರುವ ಆಟಗಾರರನ್ನು ಕೂಡ ಆಯ್ಕೆ ಮಾಡಿ ಎಂದು ಟ್ವಿಟರ್ ಮೂಲಕ ಕಾಲೆಳೆದಿದ್ದಾರೆ.
ಇದೀಗ ದಿನೇಶ್ ಕಾರ್ತಿಕ್ ಅವರ ಈ ಟ್ವೀಟ್ನೊಂದಿಗೆ ಗ್ಲೆನ್ ಮ್ಯಾಕ್ಸ್ವೆಲ್, ಜೋಶ್ ಹ್ಯಾಝಲ್ವುಡ್ ಹಾಗೂ ಮಿಚೆಲ್ ಸ್ಟಾರ್ಕ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಅನೇಕರು ಡಿಕೆಯ ಹಾಸ್ಯಪ್ರಜ್ಞೆಗೆ ಮೆಚ್ಚುಗೆಗಳನ್ನು ಸೂಚಿಸಿದ್ದಾರೆ.
ವಿಶೇಷ ಎಂದರೆ ಈ ಬಾರಿಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ದಿನೇಶ್ ಕಾರ್ತಿಕ್ ಆರ್ಸಿಬಿ ತಂಡದ ಸಹ ಆಟಗಾರರಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಅವರನ್ನು ಎದುರಿಸಲಿದ್ದಾರೆ. ಅದರಲ್ಲೂ ಡೆತ್ ಓವರ್ಗಳಲ್ಲಿ ಹ್ಯಾಝಲ್ವುಡ್ ಟು ಡಿಕೆ ಕದನವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.