ಅಂತಿಮ ಟೆಸ್ಟ್ ಗೆದ್ದು 19 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಾ ಆಂಗ್ಲರ ಪಡೆ?
IND vs ENG: ಈಗಾಗಲೇ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಮ್ಯಾಂಚೆಸ್ಟರ್‌ನಲ್ಲಿ ಗೆದ್ದು, 19 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ.

ಭಾರತ ಇಂಗ್ಲೆಂಡ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಓವಲ್ ಟೆಸ್ಟ್ನಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 157 ರನ್ಗಳಿಂದ ಸೋಲಿಸಿತು. ಗೆಲುವಿಗೆ ಅಗತ್ಯವಿರುವ 368 ರನ್ ಚೇಸ್ ಮಾಡುವಲ್ಲಿ ಆಂಗ್ಲ ಪಡೆ ವಿಫಲವಾಯಿತು. ಇಂಗ್ಲೀಷ್ ತಂಡವನ್ನು ಪಂದ್ಯದ ಕೊನೆಯ ದಿನ 210 ರನ್ಗಳಿಗೆ ಆಲ್ ಮಾಡಿದ ಭಾರತ ಸರಣಿಯಲ್ಲ ಮುನ್ನಡೆ ಸಾಧಿಸಿದೆ. ಜಸ್‌ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ಭಾರತದ ಪರ ಅದ್ಭುತ ಬೌಲಿಂಗ್ ಮಾಡಿದರು ಮತ್ತು ಸರಣಿಯಲ್ಲಿ ಎರಡನೇ ಟೆಸ್ಟ್ ಅನ್ನು ಗೆಲ್ಲಲು ಸಹಾಯ ಮಾಡಿದರು. ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಈ ಮೂಲಕ 50 ವರ್ಷಗಳ ನಂತರ ಭಾರತ ಓವಲ್ ಟೆಸ್ಟ್ ಗೆದ್ದಿದೆ. ಈ ಕಾರಣದಿಂದಾಗಿ, ಭಾರತ ಈಗ ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದಾರೆ. ಕೊನೆಯ ಪಂದ್ಯವು ಸೆಪ್ಟೆಂಬರ್ 10 ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. 35 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ನಡೆದ ಸರಣಿಯಲ್ಲಿ ಭಾರತ ಎರಡು ಟೆಸ್ಟ್‌ಗಳನ್ನು ಗೆದ್ದಿದೆ. 1986 ರಲ್ಲಿ ಕಪಿಲ್ ದೇವ್ ನಾಯಕನಾಗಿದ್ದಾಗ ಕೊನೆಯ ಬಾರಿಗೆ ಎರಡು ಟೆಸ್ಟ್ ಗೆದ್ದಿತ್ತು.
ಆದರೆ 4ನೇ ಟೆಸ್ಟ್ ಸೋಲಿನಿಂದ ಕಂಗೆಟ್ಟಿರುವ ರೂಟ್ ಬಳಗ ಕೊನೆಯ ಟೆಸ್ಟ್ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ಶತಾಯಗತಾಯ ಯತ್ನಿಸಲಿದೆ. ಈಗಾಗಲೇ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ತಂಡ ಮ್ಯಾಂಚೆಸ್ಟರ್‌ನಲ್ಲಿ ಗೆದ್ದು, 19 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡಲು ಪ್ರಯತ್ನಿಸುತ್ತಿದೆ. ಅಷ್ಟಕ್ಕೂ 19 ವರ್ಷಗಳ ಹಿಂದೆ ನಡೆದ ಸರಣಿಯ ಪಲಿತಾಂಶ ಏನಾಗಿತ್ತು?
ಸೌರವ್ ಗಂಗೂಲಿ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ 2002 ರ ಆಗಸ್ಟ್ ತಿಂಗಳಲ್ಲಿ ಅಂದಿನ ಟೀಂ ಇಂಡಿಯಾ ಸೌರವ್ ಗಂಗೂಲಿ ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿತ್ತು. ಈ ವೇಳೆ 4 ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯನ್ನು ಆಯೋಜನೆ ಮಾಡಲಾಗಿತ್ತು. ಮೊದಲ ಪಂದ್ಯವನ್ನು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಆಡಲಾಯಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 487 ಮತ್ತು 2ನೇ ಇನ್ನಿಂಗ್ಸ್ನಲ್ಲಿ 301 ರನ್ ಕಲೆ ಹಾಕಿತ್ತು. ಇದಕ್ಕೆ ಉತ್ತರವಾಗಿ ಭಾರತ 221 ಮತ್ತು 397 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇನ್ನೂ ನಾಂಟಿಗ್ಯ್ಹಾಮ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಲೀಡ್ಸ್ನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 628 ರನ್ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಪಂದ್ಯದಲ್ಲಿ ಭಾರತದ 3 ಬ್ಯಾಟ್ಸ್‌ಮನ್ ಶತಕ ಗಳಿಸಿದ್ದರು. ರಾಹುಲ್ ದ್ರಾವಿಡ್ 148 ರನ್ ಗಳಿಸಿದ್ದರೆ, ಸಚಿನ್ 193 ರನ್ ಗಳಿಸಿದ್ದರು. ಜೊತೆಗೆ ನಾಯಕ ಗಂಗೂಲಿ 128 ರನ್ ಗಳಿಸಿದ್ದರು. ಇದಕ್ಕೆ ಪ್ರತಿಫಲವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ನಲ್ಲಿ 273 ರನ್ಗಳಿಸಿದರೆ, 2ನೇ ಇನ್ನಿಂಗ್ಸ್ನಲ್ಲಿ 309ರನ್ ಗಳಿಸಿ ಭಾರತದ ವಿರುದ್ಧ ಇನ್ನಿಂಗ್ಸ್ ಸೋಲು ಅನುಭವಿಸಿತ್ತು. ಇನ್ನೂ ಓವಲ್ನಲ್ಲಿ ನಡೆದಿದ್ದ ಅಂತಿಮ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡಿತ್ತು. ಈ ಮೂಲಕ ಭಾರತ 2002ರಲ್ಲಿ ಆಂಗ್ಲರ ನೆಲದಲ್ಲಿ ಮೊದಲ ಬಾರಿಗೆ ಸರಣಿಯಲ್ಲಿ ಸಮಬಲ ಸಾಧಿಸಿತ್ತು.
