India vs England: ಇಂಗ್ಲೆಂಡ್ ಜೊತೆ ಪಾಕಿಸ್ತಾನವನ್ನೂ ಬಗ್ಗು ಬಡಿದ ಭಾರತ: ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅಗ್ರಸ್ಥಾನ

India vs England: ಇಂಗ್ಲೆಂಡ್ ಜೊತೆ ಪಾಕಿಸ್ತಾನವನ್ನೂ ಬಗ್ಗು ಬಡಿದ ಭಾರತ: ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅಗ್ರಸ್ಥಾನ
ಲೀಡ್ಸ್ ಟೆಸ್ಟ್ (ಭಾರತ vs ಇಂಗ್ಲೆಂಡ್, 4 ನೇ ಟೆಸ್ಟ್) ಹೀನಾಯ ಸೋಲಿನ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್​ ವಿರುದ್ದ ಪುಟಿದೇಳಿದೆ. ಓವಲ್ ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯವನ್ನು 157 ರನ್​ಗಳಿಂದ ಜಯಿಸುವ ಮೂಲಕ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ತೆರೆದಿಟ್ಟಿದೆ. ಅದರಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್ ಹಿನ್ನಡೆ ಅನುಭವಿಸಿದ್ದ, ಭಾರತ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.

WTC Points Table: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​ನ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ 14 ಪಾಯಿಂಟ್ ಸಂಪಾದಿಸಿದ್ದು ಪಾಕಿಸ್ತಾನವನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

TV9kannada Web Team

| Edited By: Vinay Bhat

Sep 07, 2021 | 8:28 AM

ಇಂಗ್ಲೆಂಡ್ (England) ವಿರುದ್ಧದ ನಾಲ್ಕನೇ ಟೆಸ್ಟ್ (4th Test)​ ಪಂದ್ಯವನ್ನು ಭರ್ಜರಿ ಆಗಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ (Team India) ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ (ICC World Test Championship) ಮತ್ತೆ ಅಗ್ರಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಮೊದಲ ಸ್ಥಾನದಲ್ಲಿದ್ದ ಪಾಕಿಸ್ತಾನ (Pakistan) ಎರಡನೇ ಸ್ಥಾನಕ್ಕೆ ಕುಸಿದಿದ್ದು, ವೆಸ್ಟ್ ಇಂಡೀಸ್ ಮೂರನೇ ಸ್ಥಾನದಲ್ಲಿದೆ. ಸೋಲಿನೊಂದಿಗೆ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಲಂಡನ್​ನ ಓವಲ್ ಕ್ರೀಡಾಂಗಣದಲ್ಲಿ ದಾಖಲೆ ಬರೆದ ಕೊಹ್ಲಿ (Virat Kohli) ಪಡೆ 157 ರನ್​ಗಳ ಭರ್ಜರಿ ಜಯ ಸಾಧಿಸಿತು. 50 ವರ್ಷಗಳ ಬಳಿಕ ಓವಲ್ (Oval) ಕ್ರೀಡಾಂಗಣದಲ್ಲಿ ಭಾರತಕ್ಕೆ ಒಲಿದ ಟೆಸ್ಟ್ ಗೆಲುವು ಇದಾಗಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಈ ಗೆಲುವಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ ಕೊಹ್ಲಿ ಪಡೆ 14 ಪಾಯಿಂಟ್ ಸಂಪಾದಿಸಿದ್ದು ಪಾಕಿಸ್ತಾನವನ್ನ ಹಿಂದಿಕ್ಕಿ ಟಾಪ್​ ನಲ್ಲಿದೆ. ಭಾರತದ ಗೆಲುವಿನ ಸರಾಸರಿ 54.17 ರಷ್ಟಿದ್ದು, ಒಟ್ಟು 26 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ 12 ಅಂಕ, ವೆಸ್ಟ್​ ಇಂಡೀಸ್ 12 ಮತ್ತು ಇಂಗ್ಲೆಂಡ್ 14 ಪಾಯಿಂಟ್​ನೊಂದಿಗೆ ಕೊನೇಯ ಸ್ಥಾನದಲ್ಲಿದೆ.

ಇದು ಈ ಆವೃತ್ತಿಯ ಐಸಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಚೊಚ್ಚಲ ಸರಣಿಯಾಗಿದೆ. ಪ್ರತಿ ತಂಡವು ಚಾಂಪಿಯನ್‌ಶಿಪ್‌ನಲ್ಲಿ 6-6 ಟೆಸ್ಟ್ ಸರಣಿಗಳನ್ನು ಆಡಬೇಕು, ಇದರಲ್ಲಿ 3 ಸ್ವದೇಶದಲ್ಲಿ ಮತ್ತು 3 ವಿದೇಶದಲ್ಲಿ ಆಡಲಾಗುತ್ತದೆ. ಸಾಗರೋತ್ತರ ಸರಣಿಯ ಸಂದರ್ಭದಲ್ಲಿ, ಟೀಮ್ ಇಂಡಿಯಾಕ್ಕೆ ಕಠಿಣ ಸವಾಲು ಇಂಗ್ಲೆಂಡ್​ನಂದೇ ಆಗಿದ್ದು, ಸದ್ಯ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಉಳಿದಿರುವ ಕೊನೇಯ ಟೆಸ್ಟ್​ನಲ್ಲಿ ಗೆದ್ದು ಬೀಗಿದರೆ ಕೊಹ್ಲಿ ಸರಣಿಯನ್ನು ವಶಪಡಿಸಿಕೊಂಡ ವಿಶೇಷ ಸಾಧನೆ ಮಾಡಲಿದೆ.

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್‌ಗಳ ಮಾರಕ ದಾಳಿ ನೆರವಿನಿಂದ ಪ್ರವಾಸಿ ಭಾರತ ತಂಡ ಆತಿಥೇಯ ಇಂಗ್ಲೆಂಡ್ ಎದುರು 157 ರನ್‌ಗಳಿಂದ ಭರ್ಜರಿ ಜಯ ದಾಖಲಿಸಿತು. ಭಾರತ ನೀಡಿದ ಬೃಹತ್ 368 ರನ್ ಗೆಲುವಿನ ಗುರಿ ಪ್ರತಿಯಾಗಿ ವಿಕೆಟ್ ನಷ್ಟವಿಲ್ಲದೆ 77 ರನ್‌ಗಳಿಂದ 5ನೇ ಹಾಗೂ ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಉಮೇಶ್ ಯಾದವ್ (76ಕ್ಕೆ 3), ಜಸ್‌ಪ್ರೀತ್ ಬುಮ್ರಾ (67ಕ್ಕೆ 2) ಹಾಗೂ ರವೀಂದ್ರ ಜಡೇಜಾ (36ಕ್ಕೆ 2) ಮಾರಕ ದಾಳಿಗೆ ನಲುಗಿ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಸರ್ವಪತನ ಕಂಡಿತು.

ಭಾರತ ಮೊದಲ ಇನಿಂಗ್ಸ್ 191 ರನ್‌ಗಳಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 290 ರನ್ ಪೇರಿಸಿ 99 ರನ್ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ 466 ರನ್ ಕಲೆಹಾಕಿತ್ತು. ಅಂತಿಮ ಐದನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 10 ರಿಂದ ಆರಂಭವಾಗಲಿದ್ದು, ಮ್ಯಾಂಚೆಸ್ಟರ್​ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿದೆ.

India vs England: ಭಾರತದ ದಾಖಲೆಯ ಗೆಲುವಿಗೆ ಇಂಗ್ಲೆಂಡ್ ನಾಯಕ ರೂಟ್ ನೀಡಿದ ಕಾರಣವೇನು ಕೇಳಿ

ಅಂತಿಮ ಟೆಸ್ಟ್​ ಗೆದ್ದು 19 ವರ್ಷಗಳ ಹಿಂದಿನ ಇತಿಹಾಸವನ್ನು ಮರುಕಳಿಸುವಂತೆ ಮಾಡುತ್ತಾ ಆಂಗ್ಲರ ಪಡೆ?

(WTC Points Table Virat Kohli Team India stand top of ICC World Test Championship point table Pakistan second place)

Follow us on

Related Stories

Most Read Stories

Click on your DTH Provider to Add TV9 Kannada